ದೇಶದ ಅತ್ಯಂತ ಯಶಸ್ವಿ ಆನ್‌ಲೈನ್ ಡೇಟಾ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಹಿಂದೆ ಪತಿ-ಪತ್ನಿ ಜೋಡಿಯೊಂದು ಇದ್ದು, ಈ ಪ್ಲಾಟ್‌ಫಾರ್ಮ್ ಗೆ ರತನ್ ಟಾಟಾ, ನಂದನ್ ನಿಲೇಕಣಿಯಂತಹ ಉದ್ಯಮಿಗಳು ಹೂಡಿಕೆ ಮಾಡಿದ್ದಾರೆ.
ನೇಹಾ ಸಿಂಗ್ ಮತ್ತು ಅವರ ಪತಿ ಅಭಿಷೇಕ್ ಗೋಯಲ್ ಅವರು ಆನ್‌ಲೈನ್ ಡೇಟಾ ಟ್ರ್ಯಾಕಿಂಗ್ ಮೂಲಕ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ Tracxn ನ ಸಂಸ್ಥಾಪಕರಾಗಿದ್ದು, ಇದು ಕಂಪನಿಗಳ ಕುರಿತು ಸಮಗ್ರ ಜಾಗತಿಕ ಡೇಟಾವನ್ನು ಒದಗಿಸುವಲ್ಲಿ ಪರಿಣತಿ ಹೊಂದಿದೆ.

Tracxn ಅನ್ನು ಪತಿ ಪತ್ನಿಯಾಗಿರುವ ನೇಹಾ ಮತ್ತು ಅಭಿಷೇಕ್ ಅವರು 2013 ರಲ್ಲಿ ಸ್ಥಾಪಿಸಿದ್ದು, ಇದು ಕ್ಲೌಡ್ ಆಧಾರಿತ ಮಾರುಕಟ್ಟೆ ಸಂಶೋಧನಾ ವೇದಿಕೆಯಾಗಿದೆ. ವೆಂಚರ್ ಕ್ಯಾಪಿಟಲ್, ಪ್ರೈವೇಟ್ ಈಕ್ವಿಟಿ ಕಾರ್ಪೊರೇಟ್ ಅಭಿವೃದ್ಧಿ ಸಂಸ್ಥೆಗಳು ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ವಿಶ್ಲೇಷಿಸಲು ಸಹಾಯ ಮಾಡುತ್ತದೆ.
ಐಐಟಿ ಬಾಂಬೆಯಲ್ಲಿ ಅಧ್ಯಯನ ಮಾಡಿದ ನೇಹಾ ಸಿಂಗ್ ಟಾಪರ್ ಆಗಿದ್ದರು. ಲೆಲ್ಯಾಂಡ್ ಸ್ಟ್ಯಾನ್‌ಫೋರ್ಡ್ ಬ್ಯುಸಿನೆಸ್ ವಿಶ್ವವಿದ್ಯಾಲಯದಲ್ಲೂ ಅಧ್ಯಯನ ಮಾಡಿದ್ದಾರೆ. ಅತ್ಯಂತ್ಯ ಚಾಣಕ್ಷರಾಗಿದ್ದ ನೇಹಾ ಅವರು ವೆಂಚರ್ ಕ್ಯಾಪಿಟಲ್ ಸಂಸ್ಥೆಯಲ್ಲಿ ಅಧಿಕ ವೇತನ ಉದ್ಯೋಗವನ್ನು ಪಡೆದರು. ವೃತ್ತಿಯಲ್ಲಿದ್ದರೂ ಅವರ ಸೆಳೆದ ಉದ್ಯಮಶೀಲತೆಯ ಕಡೆಗೆ ಇದ್ದ ಕಾರಣ ಸ್ವಂತ ಕಂಪನಿಯನ್ನು ಹುಟ್ಟುಹಾಕಬೇಕೆಂದು ನಿರ್ಧರಿಸಿದರು.
Tracxn ನ ಸ್ಥಾಪಿಲು ಹುಟ್ಟಿದ ಯೋಚನೆಗಳು ಅಭಿಷೇಕ್ ಗೋಯಲ್ ಮತ್ತು ಅವರ ಪತ್ನಿ ನೇಹಾ ಇಬ್ಬರೂ ತಮ್ಮ ದೊಡ್ಡ ಸಂಬಳದ ಉದ್ಯೋಗ ತೊರೆಯುವಂತೆ ಮತ್ತು ಆ ಯೋಚನೆಗಳನ್ನು ವಾಸ್ತವಕ್ಕೆ ಬದಲಿಸುವಂತೆ ಪ್ರೇರೇಪಿಸಿತು. ಪ್ರಾರಂಭಿಸಿದ ಪ್ರಥಮ ವರ್ಷದಲ್ಲಿ ಕಂಪನಿಗೆ ಯಾವುದೇ ಆದಾಯವಿರದ ಕಾರಣ ನೇಹಾ ಮತ್ತು ಅಭಿಷೇಕ್ ಅವರಿಗೆ ತಮ್ಮ ಕಂಪನಿಯಿಂದ ಸಂಬಳ ಪಡೆಯುವುದು ಸಾಧ್ಯವಾಗಲಿಲ್ಲ.
ನೇಹಾ ಮತ್ತುಅಭಿಷೇಕ್ ತಮ್ಮ ಕಂಪನಿಯೂ ಏರುಗತಿಯಲ್ಲಿ ಸಾಗಬಹುದೆಂಬ ಭರವಸೆ ಕಂಡಾಗ, ದೇಶದ ದೊಡ್ಡ ಉದ್ಯಮಿಯೊಬ್ಬರು ಅವರ ಸಂಸ್ಥೆಯ ಕೈ ಹಿಡಿದರು. ಅವರೇ ರತನ್ ಟಾಟಾ. Tracxn ನಲ್ಲಿದ್ದ ಸಾಮರ್ಥ್ಯ ಕಂಡುಕೊಂಡ ಟಾಟಾ ಬಹಿರಂಗಪಡಿಸದ ಮೊತ್ತವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿ ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು.
ರತನ್ ಟಾಟಾ ಮಾತ್ರವಲ್ಲ, ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್, ದೆಹಲಿಯ ಸಾಹಿಲ್ ಬರುವಾ, ಮೋಹನ್‌ದಾಸ್ ಪೈ ಮತ್ತು ನಂದನ್ ನಿಲೇಕಣಿ ಹೀಗೆ ದೊಡ್ದ ದೊಡ್ಡ ಉದ್ಯಮಿಗಳು ಕೂಡಾ ಇವರ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. 2022 ರಲ್ಲಿ, Tracxn USD 10 ಮಿಲಿಯನ್‌ಗಿಂತಲೂ (83 ಕೋಟಿ ರೂಪಾಯಿಗಿಂತ ಹೆಚ್ಚು) ಹೆಚ್ಚಿನ ಆದಾಯ ಗಳಿಸಿದ ಬಗ್ಗೆ ವರದಿ ಮಾಡಿದ್ದು, ಕಂಪನಿಯ ಮೌಲ್ಯ 100 ಕೋಟಿ ರೂಪಾಯಿ ದಾಟಿದೆ.
ದಂಪತಿಗಳ ನಿಖರವಾದ ನಿವ್ವಳ ಮೌಲ್ಯ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ನೇಹಾ ಸಿಂಗ್ ಮತ್ತು ಅಭಿಷೇಕ್ ಗೋಯಲ್ ಒಟ್ಟು 26 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ.


Click it and Unblock the Notifications