ರಾಜೀವ್ ಸಬರ್ವಾಲ್ ಅವರು ಟಾಟಾ ಕ್ಯಾಪಿಟಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ ಆಗಿದ್ದಾರೆ. 2018 ರ ಜನವರಿಂದ ಅವರು ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಸಬರ್ವಾಲ್ ಅವರು ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 28 ವರ್ಷಗಳ ಅನುಭವ ಹೊಂದಿದ್ದಾರೆ. ಟಾಟಾ ಕ್ಯಾಪಿಟಲ್, ಟಾಟಾ ಗ್ರೂಪ್‌ನ ಜನಪ್ರಿಯ ಹಣಕಾಸು ವ್ಯವಹಾರ ಸೇವೆಯಾಗಿದೆ.
ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಕಂಪನಿಯು ಭಾರತೀಯ ಯುವ ಕ್ರಿಕೆಟರ್ ಶುಭಮನ್ ಗಿಲ್ ಅವರನ್ನು ತನ್ನ ಅಧಿಕೃತ ರಾಯಭಾರಿಯನ್ನಾಗಿ ನೇಮಕಗೊಳಿಸಿದೆ. ಸಬರ್ವಾಲ್ ಅವರು ದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯಿಂದ ಮೆಕ್ಯಾನಿಲ್ ಎಂಜಿನಿಯರಿಂಗ್(ಬಿ-ಟೆಕ್)ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.

ಸಬರ್ವಾಲ್ ಅವರು ಲಕ್ನೋದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಟಾಟಾ ಕ್ಯಾಪಿಟಲ್ ಕಂಪನಿಗೆ ಸೇರುವ ಮೊದಲು ಅವರು ಬಿಲ್ಡಿಂಗ್ ಹಾಗೂ ಹಣಕಾಸು ಸೇವೆ ಒದಗಿಸುವ ಟ್ರೂ ನಾರ್ತ್ ಮ್ಯಾನೇಜರ್ಸ್ ಎಲ್‌ಎಲ್‌ಪಿ ಕಂಪನಿಯಲ್ಲಿ ಪಾಲುದಾರರಾಗಿದ್ದರು.
ಸಬರ್ವಾಲ್ ಅವರು ದೇಶದ ರಿಟೇಲ್ ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಹಾಗೂ ಹೌಸಿಂಗ್ ಫೈನಾನ್ಸ್ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಸಬರ್ವಾಲ್ ಅವರು ಈ ಹಿಂದೆ ಐಸಿಐಸಿಐ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ರಿಟೇಲ್ ಬ್ಯಾಂಕಿಂಗ್, ರೂರಲ್ ಬ್ಯಾಂಕಿಂಗ್, ಹಣಕಾಸು ಶಿಕ್ಷಣ, ಆರ್ಥಿಕ ಸೇರ್ಪಡೆ ಬಿಸಿನೆಸ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಟೆಕ್ನಾಲಜಿ ಸೇರಿದಂತೆ ಹಲವಾರು ವ್ಯವಹಾರದ ಜವಾಬ್ದಾರಿಯನ್ನುನಿರ್ವಹಿಸಿದ್ದರು. ಅಲ್ಲದೆ ಅವರು ನಾರ್ತ್ ಮ್ಯಾನೇಜರ್ಸ್ ಎಲ್‌ಎಸ್‌ಪಿ, ಸಿಕ್ವೊಯಾ ಕ್ಯಾಪಿಟಲ್, ಗೋದ್ರೇಜ್ ಗ್ರೂಪ್, ಎಸ್‌ಆರ್‌ಎಫ್ ಫೈನಾನ್ಸ್, ಜಿಇ ಕ್ಯಾಪಿಟಲ್ ಹಾಗೂ ಟೈಮ್ಸ್ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸಬರ್ವಾಲ್ ಅವರು ಐಸಿಐಸಿಐ ಹೋಮ್ ಫೈನಾನ್ಸ್ ಕಂಪನಿ ಲಿಮಿಟೆಡ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜತೆಗೆ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ಮಂಡಳಿಯಲ್ಲಿಯೂ ಇದ್ದರು.
ಅವರು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹಾಗೂ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್‌ನ ಹಲವಾರು ಸಮಿತಿಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಟಾಟಾ ಕ್ಯಾಪಿಟಲ್ ಹಾಗೂ ತನ್ನ ಅಂಗ ಸಂಸ್ಥೆಗಳ ಮೂಲಕ ಕಮರ್ಷಿಯಲ್ ಫೈನಾನ್ಸ್, ಕನ್ಸೂಮರ್ ಲೋನ್ಸ್ ಸೇರಿದಂತೆ ಹಣಕಾಸು ಸೇವಾ ಕ್ಷೇತ್ರಕ್ಕೆ ಸಂಬಂಧಿಸಿ ನಾನಾ ರೀತಿಯ ಪ್ರಾಡೆಕ್ಟ್- ಸರ್ವೀಸ್‌ಗಳನ್ನು ಪರಿಚಯಿಸಲಾಗಿದೆ.


Click it and Unblock the Notifications