ಸಣ್ಣ ಸಣ್ಣ ಆಲೋಚನೆಯೊಂದು ಹುಟ್ಟಿ ನಂತರ ಅದನ್ನೇ ದೊಡ್ಡ ವ್ಯಾಪಾರ ಸಾಮ್ರಾಜ್ಯವಾಗಿ ಪರಿವರ್ತಿಸಿದ ಹಲವಾರು ಯಶಸ್ವಿ ಉದ್ಯಮಿಗಳ ಉದಾಹರಣೆಗಳು ಭಾರತದಲ್ಲಿದೆ. ಈ ಲೇಖನದಲ್ಲಿ, 2010ರಲ್ಲಿ ಪ್ರವಾಸಕ್ಕಾಗಿ ಭಾರತಕ್ಕೆ ಭೇಟಿ ನೀಡಿದ, ಆದರೆ ಬಳಿಕ ಯಶಸ್ವಿಯಾಗಿ ಕ್ವಿಕ್- ಸರ್ವಿಸ್ ರೆಸ್ಟೋರೆಂಟ್ ನಿರ್ಮಿಸಿದ ಓರ್ವ ವ್ಯಕ್ತಿಯ ಕುರಿತು ಹೇಳುತ್ತೇವೆ. ಹೌದು ಅವರೇ ಅಮೇರಿಕನ್ ಉದ್ಯಮಿಯಾಗಿರುವ ಬರ್ಟ್ ಮುಲ್ಲರ್.
ಬರ್ಟ್ ಮುಲ್ಲರ್ ಅವರು ಧರಮ್ ಖಾಲ್ಸಾ ಮತ್ತು ಗೇಲನ್ ಡ್ರೇಪರ್ ಎಂಬ ಇಬ್ಬರು ಅಮೇರಿಕನ್ ಸ್ನೇಹಿತರ ಜತೆ ಸೇರಿ "ಕ್ಯಾಲಿಫೋರ್ನಿಯಾ ಬರ್ರಿಟೊ" ರೆಸ್ಟೋರೆಂಟ್ ಅನ್ನು ಭಾರತದಲ್ಲಿ ಸ್ಥಾಪಿಸಿದರು. ಇದು ಇಂದು 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಹರಡಿ ನಿಂತಿದೆ. ಇಷ್ಟು ಮಾತ್ರವಲ್ಲದೇ ಇಂದು ಕ್ಯಾಲಿಫೋರ್ನಿಯಾ ಬರ್ರಿಟೊ ವಾರ್ಷಿಕವಾಗಿ 110+ ಕೋಟಿ ರೂಪಾಯಿ ಗಳಿಸುತ್ತಿದೆ. ಕ್ಯಾಲಿಫೋರ್ನಿಯಾ ಬರ್ರಿಟೊ ಪ್ರಮುಖವಾಗಿ ಬೆಂಗಳೂರಿನಲ್ಲಿ ನೆಲೆಯೂರಿದೆ.

ಬರ್ಟ್ ಮುಲ್ಲರ್ ಅವರು 2011 ರಿಂದ ಬರ್ರಿಟೊ ರೆಸ್ಟೊರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಇದಕ್ಕೂ ಮೊದಲು, ಅವರು ಯುಎಸ್‌ನ Moe's ಸೌತ್‌ವೆಸ್ಟ್ ಗ್ರಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬರ್ಟ್ ಮುಲ್ಲರ್ ಅವರು ಅಮೇರಿಕಾದಲ್ಲಿರುವ ಕಾಲೇಜು ಆಫ್ ವಿಲಿಯಂ & ಮೇರಿ ಕಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ತಮ್ಮ ವ್ಯಾಪಾರ ಆರಂಭಿಸಲು ಮೂವರೂ 15,000 ಯುಎಸ್ ಡಾಲರ್ ಹೂಡಿಕೆ ಮಾಡಿದ್ದು, ಇದರೊಂದಿಗೆ ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಹೆಚ್ಚುವರಿ 250,000 ಯುಎಸ್ ಡಾಲರ್ ಸಂಗ್ರಹಿಸಿದರು. ಅವರು ಹೂಡಿಕೆಗಾಗಿ Tumblr ಬ್ಲಾಗ್ ಅನ್ನು ಬಳಸಿದ್ದು, ಇದರಲ್ಲಿಅವರ ಉದ್ದಿಮೆಯ ಪ್ರಾರಂಭದ ವಿಚಾರಗಳು ದಾಖಲಾಗಿದೆ.
2010 ರಲ್ಲಿ ಬರ್ಟ್ ಮುಲ್ಲರ್ ಮೊದಲ ಬಾರಿ ಪ್ರವಾಸದ ನಿಮಿತ್ತ ಭಾರತಕ್ಕೆ ಭೇಟಿ ನೀಡಿದಾಗ, ಈ ಮೂವರು ಗುರುಗ್ರಾಮ್‌ನಲ್ಲಿ ತಮ್ಮ ಮೊತ್ತ ಮೊದಲ ರೆಸ್ಟೋರೆಂಟ್ ಪ್ರಾರಂಭಿಸಬೇಕೆಂದು ಯೋಚಿಸಿದ್ದರು. ಆದರೆ, ಅಲ್ಲಿಗಿಂತಲೂ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಕೈಗೆಟಕುವ ದರದಲ್ಲಿ ಇರುವುದನ್ನು ಅರಿತುಕೊಂಡು ಕೊನೆಯದಾಗಿ ಅವರು ಬೆಂಗಳೂರನ್ನು ಆಯ್ಕೆ ಮಾಡಿಕೊಂಡರು.
ಬರ್ರಿಟೋನಲ್ಲಿ ಮೊದಲ ಆರು ತಿಂಗಳ ಸ್ವತಃ ಮುಲ್ಲರ್ ಮತ್ತು ಡ್ರೇಪರ್ ಸರ್ವಿಸ್ ಕೌಂಟರ್ ಹಿಂದೆ ನಿಂತುಕೊಂಡು ಕೆಲಸ ಮಾಡುತ್ತಿದ್ದರು. ಮೇ ತಿಂಗಳಲ್ಲಿ, ಕ್ಯಾಲಿಫೋರ್ನಿಯಾ ಬರ್ರಿಟೊ ಚೆನ್ನೈಗೆ ವಿಸ್ತರಿಸಿದಾಗ ಸಂಭ್ರಮಾಚರಣೆ ಮಾಡಿದರು. ಕೆಲವು ಔಟ್‌ಲೆಟ್ ಅವರು ಹಾಕಿಕೊಂಡಿದ್ದ ಗುರಿಗಿಂತಲೂ ದಾಟಿ ಬೆಳೆದು ನಿಂತಿದೆ. ಇವರು ಬೆಂಗಳೂರು, ಎನ್‌ಸಿಆರ್, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಔಟ್‌ಲೆಟ್‌ಗಳನ್ನು ಹೊಂದಿದ್ದಾರೆ.


Click it and Unblock the Notifications