ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಈಗ ಟ್ವಿಟ್ಟರ್‌ನ ಲೋಗೋವನ್ನೇ ಎಲಾನ್ ಮಸ್ಕ್ ಬದಲಾವಣೆ ಮಾಡಿದ್ದಾರೆ. ಹೌದು, ಈಗ ಟ್ವಿಟ್ಟರ್ ಲೋಗೋದಲ್ಲಿ ಹಕ್ಕಿ ಇಲ್ಲ, ಬದಲಾಗಿ ನಮಗೆ ಕಾಣುವುದು ನಾಯಿ (Doge logo). ಇನ್ನು ಈ ಲೋಗೋ ಬದಲಾವಣೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ. ಹಲವಾರು ಮೀಮ್ಸ್‌ಗಳು ಹರಿದಾಡುತ್ತಿದೆ. ಅದು ಕೂಡಾ ಈ ಲೋಗೋ ಒಂದು ಡಿಜಿಟಲ್ ಕರೆನ್ಸಿ (ಕ್ರಿಪ್ಟೋಕರೆನ್ಸಿ) ಲೋಗೋವಾಗಿದೆ.
ಈ ಹಿಂದೆ ಟ್ವಿಟ್ಟರ್ ಲೋಗೋ ಬ್ಲ್ಯೂಬರ್ಡ್ ಆಗಿತ್ತು. ನಮಗೆ ಬರಿ ಲೋಗೋ ಕಂಡರೆ ಸಾಕು ಅದು ಟ್ವಿಟ್ಟರ್ ಎಂಬುವುದು ಅಚ್ಚಳಿಯದೆ ಮನಸಿನಲ್ಲಿ ಉಳಿದುಕೊಂಡಿರುವ ವಿಚಾರವಾಗಿದೆ. ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ಹೊಸದಾಗಿ ಬದಲಾವಣೆ ಮಾಡಿರುವ ಈ ಲೋಗೋ ಮಸ್ಕತ್‌ನ ಡಿಜಿಟಲ್ ಕರೆನ್ಸಿ ಶಿಬಾ ಇನುವಿನ ಲೋಗೋವಾಗಿದೆ. ನಾವು ಊಹೆ ಮಾಡಿದಂತೆ #TwitterLogo ಟಾಪ್ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳಲ್ಲಿ ಒಂದಾಗಿದೆ. ರಾತ್ರಿ ವೇಳೆ ಮಾಡಲಾದ ಈ ಲೋಗೋ ಬದಲಾವಣೆಯ ಬಗ್ಗೆ ಬಳಕೆದಾರರು ಮೀಮ್ಸ್‌ಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದು ಕೂಡಾ ನಾಯಿಯ ಚಿತ್ರವಾಗಿ ಲೋಗೋ ಬದಲಾವಣೆಯು ಹಾಸ್ಯ ಮೀಮ್ಸ್‌ಗಳನ್ನು ಸೃಷ್ಟಿಸಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಟ್ವಿಟ್ಟರ್‌ನಲ್ಲಿ ಕಂಡ ಮೀಮ್ಸ್‌ಗಳಿವು ನೋಡಿ
ಎಲಾನ್ ಮಸ್ಕ್ ಟ್ವಿಟ್ಟರ್ ಲೋಗೋವನ್ನು ಬದಲಾವಣೆ ಮಾಡಿದ ಮೇಲೆ ಹಲವಾರು ಮೀಮ್ಸ್‌ಗಳು ಹರಿದಾಡುತ್ತಿದೆ. ಕೆಲವರು ಸಂತಸ ವ್ಯಕ್ತಪಡಿಸಿದರೆ, ಕೆಲವರು ಹಾಸ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ಟರ್ ಲೋಗೋ ಬದಲಾವಣೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಈ ಹಿಂದೆ ಟ್ವಿಟ್ಟರ್ ಲೋಗೋ ಹಾಗೂ ಫೇಸ್‌ಬುಕ್ ಲೋಗೋ ನಾನು ಬೆಸ್ಟ್ ಲೋಗೋ, ನಾನು ಬೆಸ್ಟ್ ಲೋಗೋ ಎಂದು ಜಗಳವಾಡುತ್ತಿತ್ತು, ಆದರೆ ಈಗ ನಾಯಿಯೊಂದು ಬಂದು ಎರಡನ್ನು ಓಡಿಸಿದೆ ಎಂಬಂತೆ ನೆಟ್ಟಿಗರು ಮೀಮ್ಸ್ ಹಂಚಿಕೊಂಡಿದ್ದಾರೆ. ಇನ್ನು ಹಕ್ಕಿಯ ಲೋಗೋದಲ್ಲಿ ಬಣ್ಣ ಬದಲಾವಣೆ ಮಾಡಿ ನಾಯಿಯ ಮುಖವನ್ನು ಇಟ್ಟು ಟ್ವಿಟ್ಟರ್ ಲೋಗೋ ಬದಲಾಗಿದೆ ಎಂದು ಕೂಡಾ ಮೀಮ್ಸ್ ಹಂಚಿಕೊಳ್ಳಲಾಗುತ್ತಿದೆ.
ಇನ್ನೊಂದು ಮೀಮ್ಸ್‌ನಲ್ಲಿ ಟ್ವಿಟ್ಟರ್‌ನ ಈಗಿನ ಲೋಗೋವಾದ ನಾಯಿ ಮುಖವಿರುವ ವ್ಯಕ್ತಿ ಹಾಗೂ ಟ್ವಿಟ್ಟರ್‌ನ ಈ ಹಿಂದಿನ ಲೋಗೋವಾದ ಹಕ್ಕಿ ಮುಖವಿರುವ ವ್ಯಕ್ತಿ ನಿಂತಿರುತ್ತಾರೆ. ನಾಯಿ ಮುಖವಿರುವ ವ್ಯಕ್ತಿಯು ಹಕ್ಕಿ ಮುಖವಿರುವ ವ್ಯಕ್ತಿಯನ್ನು ನೀರಿಗೆ ತಳ್ಳಿದಂತೆ ಮೀಮ್ಸ್ ಮಾಡಲಾಗಿದೆ. ಇನ್ನು ಹಲವಾರು ಮಂದಿ ತಮ್ಮ ಪ್ರೊಫೈಲ್‌ನಲ್ಲಿ ಕಾಣುವ ಲೋಗೋದ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇನ್ನೊಂದು ಚಿತ್ರದಲ್ಲಿ ಅತೀ ದೊಡ್ಡ ಅಗ್ನಿ ಅವಘಡ ನಡೆದು ಆ ಬೆಂಕಿ ಸುಳಿಯಲ್ಲಿ ಎಲ್ಲ ಸಾಮಾಜಿಕ ಜಾಲತಾಣಗಳು ಸಿಲುಕಿರುವಾಗ ಟ್ವಿಟ್ಟರ್ ಮಾತ್ರ ತನ್ನ ಹಳೆಯ ಲೋಗೋವನ್ನು ಅಲ್ಲೆ ಬಿಟ್ಟು ಹೊಸ ಲೋಗೋ ಮೂಲಕ ಬೆಂಕಿಯಿಂದ ಹೊರ ನಡೆದು ಬಂದಂತೆ ತೋರಿಸಲಾಗಿದೆ.
ಇನ್ನು ಎಲಾನ್ ಮಸ್ಕ್ ಲೋಗೋ ಬದಲಾವಣೆ ಮಾಡುವ ಮೂಲಕ ತನ್ನ ಸಾಕು ಪ್ರಾಣಿಗಳಾದ ಶಿಬಾ ಇನು, ಫ್ಲೋಕಿಗೆ ಗೌರವ ಸಲ್ಲಿಸಿದ್ದಾರೆ ಎಂದು ಹಲವಾರು ನೆಟ್ಟಿಗರು ಹೇಳಿದ್ದಾರೆ. "ಫ್ಲೋಕಿ ಸ್ವಲ್ಪ ಫನ್ ಮಾಡಲು ಬಯಸಿದಂತೆ ಕಾಣುತ್ತದೆ," ಎಂದು ಕ್ರಿಪ್ಟೋಕರೆನ್ಸಿ ಫ್ಲೋಕಿ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಇನ್ನು ಟ್ವಿಟ್ಟರ್ ಲೋಗೋ ಬದಲಾಗುತ್ತಿದ್ದಂತೆ ಕ್ರಿಪ್ಟೊಕರೆನ್ಸಿ ಡಾಗಿಕಾಯಿನ್ ಶೇಕಡ 30ರಷ್ಟು ಏರಿಕೆಯಾಗಿದೆ. ಈ ಡಿಜಿಟಲ್ ಕರೆನ್ಸಿ ಹೆಸರು ಶಿಬಾ ಇನು ಆಗಿದೆ.


Click it and Unblock the Notifications