ಭಾರತದಲ್ಲಿ ಅತೀ ಜನಪ್ರಿಯವಾಗಿರುವ ಜೋಡಿಗಳ ವಿಚಾರಕ್ಕೆ ಬಂದಾಗ ನಮ್ಮ ಬಾಯಲ್ಲಿ ಬರುವ ಮೊದಲ ಹೆಸರು ಯಾವುದು ಹೇಳಿ?. ಅನುಷ್ಕಾ, ಕೊಹ್ಲಿ ಅಲ್ಲವೇ?. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರಸ್ತುತ ಭಾರತದಲ್ಲಿರುವ ಅತೀ ಪವರ್‌ಫುಲ್ ಹಾಗೂ ಜನಪ್ರಿಯ ದಂಪತಿಗಳಾಗಿದ್ದಾರೆ. ಮನರಂಜನಾ ಕ್ಷೇತ್ರ, ಕ್ರೀಡೆ ಮಾತ್ರವಲ್ಲದೆ ಇತರೆ ಹಲವಾರು ಕ್ಷೇತ್ರಗಳಲ್ಲಿಯೂ ಈ ದಂಪತಿಯು ಕಾಣಿಸಿಕೊಳ್ಳುತ್ತಾರೆ.
ತಮ್ಮ ತಮ್ಮ ಫೀಲ್ಡ್‌ನಲ್ಲಿ ಹೆಸರುವಾಸಿಯಾಗಿರುವ ವಿರಾಟ್ ಅನುಷ್ಕಾ ದಂಪತಿಯು ಅಧಿಕ ಸಂಭಾವನೆಯನ್ನು ಪಡೆಯುವ ಸೆಲೆಬ್ರೆಟಿಗಳು ಕೂಡಾ ಹೌದು. ಈ ದಂಪತಿಯು ಗ್ಲಾಮರ್ ಲೋಕದಲ್ಲಿ ಹೆಸರು ಮಾಡಿರುವುದು ಮಾತ್ರವಲ್ಲ ಉತ್ತಮ ಹೂಡಿಕೆದಾರರು, ವ್ಯಾಪಾರಿಗಳು ಕೂಡಾ ಹೌದು. ಈ ದಂಪತಿಯ ನಿವ್ವಳ ಆದಾಯ, ವ್ಯಾಪಾರ, ಹೂಡಿಕೆ, ಮನೆಗಳು, ಕಾರುಗಳು, ಬ್ರ್ಯಾಂಡ್‌ಗಳು, ಶುಲ್ಕ, ದುಬಾರಿ ವೆಚ್ಚಗಳ ಮಾಹಿತಿ ಇಲ್ಲಿದೆ ಮುಂದೆ ಓದಿ...

ವಿರಾಟ್- ಅನುಷ್ಕಾ ನಿವ್ವಳ ಆದಾಯ
ಇತ್ತೀಚಿನ ವರದಿಯ ಪ್ರಕಾರ ಭಾರತದ ಅತೀ ಜನಪ್ರಿಯ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿಯ ನಿವ್ವಳ ಆದಾಯವು 1,050 ಕೋಟಿ ರೂಪಾಯಿ ಆಗಿದೆ. ಆದರೆ ಅನುಷ್ಕಾ ಶರ್ಮಾರ ನಿವ್ವಳ ಆದಾಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ವರದಿಯೊಂದರ ಪ್ರಕಾರ ಅನುಷ್ಕಾರ ನಿವ್ವಳ ಆದಾಯವು 250-300 ಕೋಟಿ ರೂಪಾಯಿ ಆಗಿದೆ. ಒಟ್ಟಾಗಿ ಇಬ್ಬರ ನಿವ್ವಳ ಆದಾಯವು 1,300 ಕೋಟಿ ರೂಪಾಯಿ ಆಗಿದೆ.
ಕೊಹ್ಲಿ- ಶರ್ಮಾರ ವ್ಯಾಪಾರ ಹೂಡಿಕೆಗಳು
ಹೂಡಿಕೆ ವಿಚಾರಕ್ಕೆ ಬಂದಾಗ ವಿರಾಟ್ ಕೊಹ್ಲಿ ಹಲವಾರು ವ್ಯಾಪಾರ, ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಎಂಪಿಎಲ್, ಸ್ಪೋರ್ಟ್ಸ್ ಕಾನ್ವೊ, ಯುನಿವರ್ಸಲ್ ಸ್ಪೋರ್ಟ್ಸ್‌ಬಿಜ್ ಸೇರಿದಂತೆ ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ವಿರಾಟ್ ಕೊಹ್ಲಿ ಹೂಡಿಕೆ ಮಾಡಿದ್ದಾರೆ. ಒನ್8, Wrogn ಮತ್ತು ಸ್ಟೆಪಥ್ಲಾನ್ ಎಂಬ ಕ್ಲೋಥಿಂಗ್ ಬ್ರ್ಯಾಂಡ್‌ಗಳನ್ನು ಹೊಂದಿದ್ದಾರೆ. ಒನ್8 ಕಮ್ಯೂನ್ ಮತ್ತು ನ್ಯೂವಾ ಎಂಬ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಎಫ್‌ಸಿ ಗೋವಾ ಫುಟ್‌ಬಾಲ್ ಕ್ಲಬ್ ಹಾಗೂ ಟೆನ್ನಿಲ್ ಮತ್ತು ಪ್ರೋ-ವ್ರೆಸ್ಲಿಂಗ್ ತಂಡವನ್ನು ಹೊಂದಿದ್ದಾರೆ.
ಅನುಷ್ಕಾ ಶರ್ಮಾ ಆರ್ಗನಿಕ್ ಫುಡ್ ಸಂಸ್ಥೆಯಾದ ಸ್ಲರ್ಪ್ ಫಾರ್ಮ್‌ಗೆ ಹೂಡಿಕೆ ಮಾಡಿದ್ದಾರೆ. ಹಾಗೆಯೇ ಕ್ಲೋಥಿಂಗ್ ಸಂಸ್ಥೆ ನುಶ್ ನಡೆಸುತ್ತಿದ್ದಾರೆ. ಕ್ಲೀನ್ ಸ್ಲೇಟ್ ಫಿಲ್ಮ್ಜ್ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿದ್ದಾರೆ. ಇನ್ನು ದಂಪತಿಯು ಬ್ರ್ಯಾಂಡ್ ಬ್ಲ್ಯೂ ಟ್ರೈಬ್‌ನ ಹೂಡಿಕೆದಾರರು ಹಾಗೂ ಅಂಬಾಸಿಡರ್ ಆಗಿದ್ದಾರೆ. ಡಿಜಿಟ್‌ಗೆ ಹೂಡಿಕೆಯನ್ನು ದಂಪತಿ ಮಾಡಿದ್ದಾರೆ.
ವಿರಾಟ್ - ಅನುಷ್ಕಾ ಪ್ರಚಾರ ಮಾಡುವ ಬ್ರ್ಯಾಂಡ್‌ಗಳು
ವಿರಾಟ್ ಕೊಹ್ಲಿ ವಿವೋ, ಸ್ಟಾರ್ ಸ್ಪೋರ್ಟ್ಸ್, ಪೂಮಾ, ಎಂಆರ್‌ಎಫ್, ಡಿಜಿಟ್ ಇನ್ಶುರೆನ್ಸ್, ಸಿಂಥಾಲ್, ಎಚ್‌ಎಸ್‌ಬಿಸಿ, ಉಬರ್ ಸೇರಿದಂತೆ ಒಟ್ಟಾಗಿ 26 ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುತ್ತಾರೆ. ಸುಮಾರು 40 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ಅನುಷ್ಕಾ ಶರ್ಮಾ ಪೂಮಾ, ಮಿಂತ್ರಾ, ಕ್ಲಿಯರ್, ಲಕ್ಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇನ್ನು ಹಲವಾರು ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿದ್ದಾರೆ.
ಕೊಹ್ಲಿ- ಅನುಷ್ಕಾರ ವೇತನ, ಶುಲ್ಕ
ವರದಿಯ ಪ್ರಕಾರ ವಿರಾಟ್ ಕೊಹ್ಲಿ ಒಂದು ಜಾಹೀರಾತಿಗೆ ಅಥವಾ ಅಂಬಾಸಿಡರ್ ಆಗಿರುವುದಕ್ಕೆ ಪ್ರತಿ ವರ್ಷಕ್ಕೆ 7.50-10 ಕೋಟಿ ರೂಪಾಯಿ ಶುಲ್ಕ ವಿಧಿಸುತ್ತಾರೆ. ಇನ್‌ಸ್ಟಾಗ್ರಾಂ ಪೋಸ್ಟ್‌ಗಾಗಿ ಸುಮಾರು 8.9 ಕೋಟಿ ರೂಪಾಯಿ ಪಡೆಯುತ್ತಾರೆ. ಟ್ವಿಟ್ಟರ್ ಪೋಸ್ಟ್‌ನಲ್ಲಿ ಯಾವುದೇ ಪ್ರಚಾರ ಮಾಡುವುದಕ್ಕೆ 2.5 ಕೋಟಿ ರೂಪಾಯಿ ಪಡೆಯುತ್ತಾರೆ.
ಇನ್ನು ಕ್ರಿಕೆಟರ್ ಆಗಿರುವ ವಿರಾಟ್ ಕೊಹ್ಲಿ "A+" ಗ್ರೇಡ್ ಕಾಂಟ್ರಾಕ್ಟ್ ಅಡಿಯಲ್ಲಿ ಬಿಸಿಸಿಐ ವಾರ್ಷಿಕವಾಗಿ 7 ಕೋಟಿ ರೂಪಾಯಿ ಪಡೆಯುತ್ತಾರೆ. ಟೆಸ್ಟ್ ಮ್ಯಾಚ್‌ಗಾಗಿ 15 ಲಕ್ಷ ರೂಪಾಯಿ, ಒಡಿಐಗೆ 6 ಲಕ್ಷ ರೂಪಾಯಿ, ಟಿ20 ಮ್ಯಾಚ್‌ಗೆ 3 ಲಕ್ಷ ರೂಪಾಯಿ ಪಡೆಯುತ್ತಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಾರ್ಷಿಕವಾಗಿ ಆರ್‌ಸಿಬಿ ತಂಡದಿಂದ ಸುಮಾರು 15 ಕೋಟಿ ರೂಪಾಯಿವರೆಗೆ ಪಡೆಯುತ್ತಾರೆ.
ಅನುಷ್ಕಾ ಶರ್ಮಾ ಪ್ರತಿ ಸಿನಿಮಾಕ್ಕೆ 7 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಾರೆ. 5-10 ಕೋಟಿ ರೂಪಾಯಿ ಜಾಹೀರಾತಿನಿಂದ ಪಡೆಯುತ್ತಾರೆ. ಇತ್ತೀಚಿನ ಪಟ್ಟಿಯ ಪ್ರಕಾರ ವಾರ್ಷಿಕ 45 ಕೋಟಿ ರೂಪಾಯಿಗಿಂತ ಅಧಿಕ ಸಂಭಾವನೆಯೊಂದಿಗೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಕೊಹ್ಲಿ, ಅನುಷ್ಕಾರ ಮನೆ, ಆಸ್ತಿ
ದಂಪತಿ ಮುಂಬೈನಲ್ಲಿ 34 ಕೋಟಿ ರೂಪಾಯಿ ಮೌಲ್ಯದ ಮನೆ ಮತ್ತು ಗುರ್ಗಾಂವ್‌ನಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಮನೆ ಹೊಂದಿದ್ದಾರೆ. ಅಲಿಬಾಗ್‌ನಲ್ಲಿ 19 ಕೋಟಿ ರೂಪಾಯಿಗಳ ಫಾರ್ಮ್‌ಹೌಸ್ ಖರೀದಿಸಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್‌ರ ಹಿಂದಿನ ಮನೆ ಸೇರಿದಂತೆ ಇತರ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಅದು ಈಗ ಉನ್ನತ ದರ್ಜೆಯ ರೆಸ್ಟೋರೆಂಟ್ ಆಗಿದೆ.
ವಿರಾಟ್- ಅನುಷ್ಕಾರ ಕಾರು, ಇತರೆ ಸಂಪತ್ತು
ವರದಿ ಪ್ರಕಾರ ವಿರಾಟ್- ಅನುಷ್ಕಾ ದಂಪತಿ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಆಡಿ R8, ಆಡಿ A8 L, ಆಡಿ Q8, ಆಡಿ Q7, ಆಡಿ RS 5, ಆಡಿ S5, ರೇಂಜ್ ರೋವರ್ ವೋಗ್, ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಮತ್ತು ಬೆಂಟ್ಲಿ ಕಾಂಟಿನೆಂಟಲ್ GT ಅನ್ನು ಹೊಂದಿದ್ದಾರೆ.


Click it and Unblock the Notifications