ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಭಾರತದಲ್ಲಿನ ಅತೀ ಪ್ರಮುಖವಾದ ರೈಲ್ವೆ ವ್ಯವಸ್ಥೆಯಾಗಿದ್ದು, ಇದು ರಿಟೈರಿಂಗ್ ರೂಮ್ಸ್‌ಗಳ ವ್ಯವಸ್ಥೆಯನ್ನು ಮಾಡುತ್ತದೆ. ರಿಟೈರಿಂಗ್ ರೂಮ್ಸ್‌ಗಳೆಂಬುವುದು ಹೊಸತೇನಲ್ಲ ಭಾರತೀಯ ರೈಲ್ವೆಯಲ್ಲಿ ಹಳೆಯ ವೈಶಿಷ್ಟ್ಯಗಳಲ್ಲಿ ಇದು ಕೂಡಾ ಒಂದಾಗಿದೆ. ಈ ರಿಟೈರಿಂಗ್ ರೂಮ್ಸ್‌ಗಳನ್ನು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನೀಡಲಾಗುತ್ತದೆ.
ಪ್ರಯಾಣಿಕರು ತಮ್ಮ ರೈಲ್ವೆ ಪ್ರಯಾಣಕ್ಕೂ ಮುಂಚಿತವಾಗಿ ಅಥವಾ ರೈಲ್ವೆ ಪ್ರಯಾಣದ ನಂತರದ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಮತ್ತು ಪ್ರಯಾಣಕ್ಕಾಗಿ ಸಿದ್ಧರಾಗಲು ಭಾರತದ ರೈಲ್ವೆ ನಿಲ್ದಾಣಗಳಲ್ಲಿ ಇರುವ ಕೊಠಡಿಗಳನ್ನು ರಿಟೈರಿಂಗ್ ರೂಮ್ಸ್‌ಗಳೆಂದು ಕರೆಯಲಾಗುತ್ತದೆ. ಈ ರಿಟೈರಿಂಗ್ ರೂಮ್‌ಗಳು ಎಸಿ ಮತ್ತು ನಾನ್-ಎಸಿ ಸೇರಿದಂತೆ ಸಿಂಗಲ್, ಡಬಲ್ ಮತ್ತು ಡಾರ್ಮ್ ರೂಮ್‌ಗಳು ಲಭ್ಯವಿದೆ.

ರಿಟೈರಿಂಗ್ ರೂಮ್ಸ್‌ಗಳನ್ನು ನಾವು ಪಡೆಯಬೇಕಾದರೆ ಮೊದಲು ಕನ್ಫರ್ಮ್ ಆದ ಟಿಕೆಟ್ ಅನ್ನು ಹೊಂದಿರುವುದು ಅತೀ ಮುಖ್ಯವಾಗಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನಾವು ಈ ರೂಮ್ಸ್‌ಗಳನ್ನು ಬುಕ್ ಮಾಡಬಹುದಾಗಿದೆ. ನಾವು ರೈಲಿನಲ್ಲಿ ಹೊರಡುವ ನಿಲ್ದಾಣ ಅಥವಾ ತಲುಪುವ ಕೇಂದ್ರಗಳಲ್ಲಿ ಮಾತ್ರ ರಿಟೈರಿಂಗ್ ರೂಮ್‌ಗಳ ಸೇವೆ ಪಡೆಯಬಹುದಾಗಿದೆ. ಐಆರ್‌ಸಿಟಿಸಿಯ ರಿಟೈರಿಂಗ್ ರೂಮ್‌ಗಳ ಸೌಲಭ್ಯವನ್ನು ಹೇಗೆ ಕಾಯ್ದಿರಿಸುವುದು ಎಂಬುದರ ಕುರಿತು ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ಮುಂದೆ ಓದಿ....
ರಿಟೈರಿಂಗ್ ರೂಮ್ಸ್ ಬುಕ್ ಮಾಡುವುದು ಹೇಗೆ?
ಹಂತ 1: ಐಆರ್‌ಸಿಟಿಸಿಯ ಟೂರಿಸಂ ವೆಬ್‌ಸೈಟ್‌ಗೆ ಭೇಟಿ ನೀಡಿ, ಮೆನ್ ಮೆನ್ಯೂ ಐಕಾನ್‌ನಿಂದ ರಿಟೈರಿಂಗ್ ರೂಮ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 2: ನಿಮ್ಮ ಐಆರ್‌ಸಿಟಿಸಿ ಖಾತೆಗೆ ಲಾಗಿನ್ ಆಗಿ
ಹಂತ 3: ನಿಮ್ಮ ಪಿಎನ್‌ಆರ್ ಸಂಖ್ಯೆಯನ್ನು ನಮೂದಿಸಿ search ಕ್ಲಿಕ್ ಮಾಡಿ
ಹಂತ 4: ನೀವು ಎಲ್ಲಿ ತಂಗಲು ಬಯಸುತ್ತೀರಿ ಆ ನಿಲ್ದಾಣವನ್ನು ಆಯ್ಕೆ ಮಾಡಿ, ಅಲ್ಲಿರುವ ಆಯ್ಕೆ ಇತರೆ ಆಯ್ಕೆ ಮಾಡಿ (Book on Source ಅಥವಾ Book on destination)
ಹಂತ 5: check-in ಅಥವಾ check-out ದಿನಾಂಕ, ಬೆಡ್, ಎಸಿ ಅಥವಾ ನಾನ್ ಎಸಿ ರೂಮ್, ಇತರೆ ಮಾಹಿತಿಯನ್ನು ಆಯ್ಕೆ ಮಾಡಿ.
ಹಂತ 6: Check Availability ಮೇಲೆ ಕ್ಲಿಕ್ ಮಾಡಿ.
ಹಂತ 7: ರೂಮ್ ನಂಬರ್ ಅವಧಿ, ಐಡಿ ಕಾರ್ಡ್ ಆಯ್ಕೆ ಮಾಡಿಕೊಳ್ಳಿ.
ಹಂತ 8: ಪಾವತಿ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.
ಐಆರ್‌ಸಿಟಿಸಿ ರಿಟೈರಿಂಗ್ ರೂಮ್ಸ್‌ಗೆ ಎಷ್ಟು ಶುಲ್ಕ?
ಸ್ಲಾಟ್‌ಗಳ ಸಂಯೋಜನೆಯಲ್ಲಿ (12+24,24+12 ಮತ್ತು 24+24) 24 ಗಂಟೆಗಳಿಗೂ ಹೆಚ್ಚು ಅವಧಿಗೆ ಒಂದೇ ವಹಿವಾಟಿನಲ್ಲಿ ಕೊಠಡಿಯನ್ನು ಬುಕ್ ಮಾಡಲಾಗುತ್ತಿದ್ದರೆ, ಎರಡನೇ ಸ್ಲಾಟ್ ಮೊದಲ ಸ್ಲಾಟ್‌ನ ಬುಕಿಂಗ್‌ನ ವಿಸ್ತರಣೆಯನ್ನು ಊಹಿಸಲಾಗುತ್ತದೆ, ಎರಡನೇ ಸ್ಲಾಟ್‌ಗೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕ ವಿಧಿಸಲಾಗುತ್ತದೆ.
ಸುಮಾರು 24 ಗಂಟೆಗಳ ಅವಧಿಗೆ ರಿಟೈರಿಂಗ್ ರೂಮ್‌ಗೆ 20 ರೂಪಾಯಿ ಸೇವಾ ಶುಲ್ಕ ವಿಧಿಸಲಾಗುತ್ತದೆ. 24 ಗಂಟೆಗಳ ಅವಧಿಗೆ ಬೆಡ್‌ಗಳಿಗಾಗಿ 10 ರೂಪಾಯಿ ವಿಧಿಸಲಾಗುತ್ತದೆ. ಇನ್ನು 24 ಗಂಟೆಯಿಂದ 48 ಗಂಟೆಗಳ ಅವಧಿಗೆ ರಿಟೈರಿಂಗ್ ರೂಮ್‌ನಲ್ಲಿ ಸೇವಾ ಶುಲ್ಕವಾಗಿ 40 ರೂಪಾಯಿ ಮತ್ತು ಬೆಡ್‌ಗಾಗಿ 20 ರೂಪಾಯಿ ವಿಧಿಸಲಾಗುತ್ತದೆ ಎಂದು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಶುಲ್ಕದ ಸಂಪೂರ್ಣ ಮಾಹಿತಿ ಇಲ್ಲಿದೆ.
ಐಆರ್‌ಸಿಟಿಸಿ ರಿಟೈರಿಂಗ್ ರೂಮ್ಸ್ ರದ್ದತಿ ಪ್ರಕ್ರಿಯೆ ಏನು?
ಬುಕ್ ಮಾಡಿದ 48 ಗಂಟೆಗಳವರೆಗೆ ರಿಟೈರಿಂಗ್ ರೂಮ್ಸ್‌ಗಳನ್ನು ರದ್ದು ಮಾಡುವ ಅವಕಾಶ ನೀಡಲಾಗುತ್ತದೆ. 48 ಗಂಟೆ ಅಥವಾ ಅದಕ್ಕೂ ಮುನ್ನ ಬುಕ್ಕಿಂಗ್ ರದ್ದು ಮಾಡಿದರೆ ಶೇಕಡ 10ರಷ್ಟು ಶುಲ್ಕ ಕಡಿತ ಮಾಡಿ ಮರುಪಾವತಿಸಲಾಗುತ್ತದೆ. ರೂಮ್ ಸೇವೆ ಪಡೆಯಲಿದ್ದ ದಿನವೇ ಬುಕ್ಕಿಂಗ್ ರದ್ದು ಮಾಡಿದರೆ ಶೇಕಡ 50ರಷ್ಟು ಮೊತ್ತ ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ. ರಿಟೈರಿಂಗ್ ರೂಮ್‌ನಲ್ಲಿದ್ದು ಬುಕ್ಕಿಂಗ್ ರದ್ದುಗೊಳಿಸಿದರೆ ಶೇಕಡ 100ರಷ್ಟು ಕಡಿತಗೊಳಿಸಲಾಗುತ್ತದೆ, ಯಾವುದೇ ಮರುಪಾವತಿ ಇರಲಾರದು.
ರಿಟೈರಿಂಗ್ ರೂಮ್ ಬುಕ್ ಮಾಡುವುದಕ್ಕೂ ಮುನ್ನ ನಿಯಮ ನೋಡಿ
* ಪ್ರಯಾಣಿಕರು 2 ದಿನಗಳಿಗಿಂತ ಹೆಚ್ಚು ದಿನ ರಿಟೈರಿಂಗ್ ರೂಮ್‌ನಲ್ಲಿ ಇರುವಂತಿಲ್ಲ.
* ವೇಟಿಂಗ್ ಲೀಸ್ಟ್‌ನಲ್ಲಿರುವಾಗ ರಿಟೈರಿಂಗ್ ರೂಮ್ ಬುಕ್ ಮಾಡಲು ಅವಕಾಶವಿಲ್ಲ.
* ನೀವು ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರೆ ಆನ್‌ಲೈನ್‌ನಲ್ಲಿ ರದ್ದು ಮಾಡಬೇಕು, ಆಫ್‌ಲೈನ್‌ನಲ್ಲಿ ಬುಕ್ ಮಾಡಿದರೆ ಆಫ್‌ಲೈನ್‌ನಲ್ಲಿ ರದ್ದು ಮಾಡಬೇಕಾಗುತ್ತದೆ.
* ರೈಲು ರದ್ದುಗೊಂಡರೆ, ರದ್ದತಿ ನಿಯಮಗಳ ಪ್ರಕಾರ ಪ್ರಯಾಣಿಕರು ರಿಟೈರಿಂಗ್ ರೂಮ್ ಬುಕ್ಕಿಂಗ್ ಮೊತ್ತ ಮರುಪಾವತಿಯನ್ನು ಪಡೆಯುತ್ತಾರೆ.
* ಲಭ್ಯವಿರುವ ಕೊಠಡಿಗಳು ಮತ್ತು ವಸತಿ ನಿಲಯಗಳಿಗೆ ಕನಿಷ್ಠ ಅನುಮತಿಸಲಾದ ಮೀಸಲಾತಿ ಅವಧಿಯು 1 ಗಂಟೆ ಮತ್ತು ಗರಿಷ್ಠ ಮೀಸಲಾತಿ ಅವಧಿಯು 48 ಗಂಟೆಗಳು ಆಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications