ಭಾರತದಲ್ಲಿ ಕೇಂದ್ರ ಸರ್ಕಾರವು 2016ರಲ್ಲಿ ನೋಟು ಅಮಾನ್ಯೀಕರಣ ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾತ್ರೋರಾತ್ರಿ 500 ರೂಪಾಯಿ ಹಾಗೂ 1000 ರೂಪಾಯಿಯ ನೋಟನ್ನು ಬ್ಯಾನ್ ಮಾಡುವ ಘೋಷಣೆ ಮಾಡಿದ್ದಾರೆ. ಆದರೆ ಈ ಒಂದು ನಿರ್ಧಾರ ದೇಶದಲ್ಲಿ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ಅದಕ್ಕೆ ಮುಖ್ಯ ಕಾರಣ ಸರಿಯಾಗಿ ಸಿದ್ಧತೆ ನಡೆಸದೆ ಘೋಷಣೆ ಮಾಡಿರುವುದು ಆಗಿದೆ.
ಇನ್ನು ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2017ರಲ್ಲಿ ಜಾರಿಗೆ ಬಂದ 2000 ರೂಪಾಯಿಯ ನೋಟನ್ನು ಚಲಾವಣೆಯಿಂದ ಹಿಂಪಡೆದಿದೆ. ಹೌದು, ಕೇಂದ್ರ ಬ್ಯಾಂಕ್ 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡುವುದಕ್ಕೆ ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಿದೆ. ಈ ಎಲ್ಲ ಬೆಳವಣಿಗೆಯು ಈಗ ವಿವಾದವನ್ನು ಸೃಷ್ಟಿ ಮಾಡಿದೆ.

2000 ರೂಪಾಯಿ ನೋಟನ್ನು ಮುದ್ರಣ ಮಾಡಿದಾಗ 500, 1000 ರೂಪಾಯಿ ನೋಟನ್ನು ಹಿಂಪಡೆದು ಅಷ್ಟು ಹೆಚ್ಚಿನ ಪ್ರಮಾಣದ ನೋಟನ್ನು ಯಾಕಾಗಿ ಮುದ್ರಣ ಮಾಡಲಾಗಿದೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ದೇಶದಲ್ಲಿ ಹೆಚ್ಚಿನ ಪ್ರಮಾಣದ ನೋಟನ್ನು ಮೊದಲ ಬಾರಿಗೆ ಮುದ್ರಣ ಮಾಡಲಾಗಿದೆಯೇ?
ಇಲ್ಲ, 2000 ರೂಪಾಯಿಯ ನೋಟು ಅಧಿಕ ಪ್ರಮಾಣದ ನೋಟು ಏನಲ್ಲ?, ಅದಕ್ಕೂ ಮುನ್ನ ಭಾರತದಲ್ಲಿ 5000 ರೂಪಾಯಿ ಮತ್ತು 10000 ರೂಪಾಯಿಯ ನೋಟನ್ನು ಕೂಡಾ ಆರಂಭ ಮಾಡಲಾಗಿತ್ತು. ಬಳಿಕ ಅದನ್ನು ಹಿಂಪಡೆಯಲಾಗಿತ್ತು. ಈ ಎರಡು ನೋಟುಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ದೇಶದಲ್ಲಿ ಅತೀ ಹೆಚ್ಚಿನ ಮೌಲ್ಯದ ನೋಟು
ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದ ನೋಟು 10000 ರೂಪಾಯಿಯ ನೋಟು ಆಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಟಿಸಿದ ಅಧಿಕ ಮೌಲ್ಯದ ನೋಟು 10000 ರೂಪಾಯಿಯ ನೋಟು ಆಗಿದೆ. ಆರ್‌ಬಿಐ ಮೊದಲ ಬಾರಿಗೆ 1938ರಲ್ಲಿ 10,000 ರೂಪಾಯಿಯ ನೋಟನ್ನು ಮುದ್ರಣ ಮಾಡಲಾಗಿದೆ. 1946ರಲ್ಲಿ ಈ ನೋಟನ್ನು ಅಪನಗದೀಕರಣ ಮಾಡಲಾಗಿದೆ. ಆದರೆ 1954ರಲ್ಲಿ ಈ ನೋಟನ್ನು ಮತ್ತೆ ಆರಂಭ ಮಾಡಲಾಗಿದೆ. ಅಂತಿಮವಾಗಿ 1978ರಲ್ಲಿ ನೋಟನ್ನು ಅಪನಗದೀಕರಣ ಮಾಡಲಾಗಿದೆ.
10000 ರೂಪಾಯಿ ನೋಟು ಮತ್ತೆ ಆರಂಭದ ಯೋಜನೆ?
ಈ ಹಿಂದೆ ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ 5000 ರೂಪಾಯಿ ಮತ್ತು 10000 ರೂಪಾಯಿಯ ನೋಟನ್ನು ಮತ್ತೆ ಆರಂಭ ಮಾಡುವ ಸಲಹೆಯನ್ನು ನೀಡಿದ್ದರು. 2014ರ ಅಕ್ಟೋಬರ್‌ನಲ್ಲಿ ಕೇಂದ್ರ ಬ್ಯಾಂಕ್ ಶಿಫಾರಸನ್ನು ಮಾಡಿದೆ ಎಂದು ವರದಿಯಾಗಿದೆ. ಹಣದುಬ್ಬರದಿಂದ 1,000 ರೂಪಾಯಿ ನೋಟಿನ ಮೌಲ್ಯ ಕುಸಿಯುತ್ತಿದೆ ಎಂಬ ಕಾರಣದಿಂದಾಗಿ ಮತ್ತೆ 5, 10 ಸಾವಿರದ ನೋಟನ್ನು ಮತ್ತೆ ಆರಂಭಿಸುವ ಶಿಫಾರಸು ಮಾಡಲಾಗಿದೆ.
ಸಾಮಾನ್ಯ ಜನರ ಮೇಲೆ ಇದರ ಪ್ರಭಾವವೇನು?
ಸೆಪ್ಟೆಂಬರ್ 30, 2023ಕ್ಕೂ ಮುನ್ನವೇ 2000 ರೂಪಾಯಿಯ ನೋಟನ್ನು ಬದಲಾಯಿಸಿಕೊಳ್ಳಲು ಆರ್‌ಬಿಐ ಜನರಿಗೆ ಅವಕಾಶ ನೀಡಿದೆ. ಹಾಗೆಯೇ ಇದಕ್ಕೆ 4 ತಿಂಗಳ ಅವಕಾಶವನ್ನು ಕೂಡಾ ನೀಡಲಾಗಿದೆ. ಇನ್ನು ಈ 2000 ರೂಪಾಯಿ ನೋಟನ್ನು ಆರ್‌ಬಿಐ ಹಿಂಪಡೆಯುವ ನಿರ್ಧಾರವು ಸಾಮಾನ್ಯ ಜನರ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅದಕ್ಕೆ ಮುಖ್ಯ ಕಾರಣ ಹಣವನ್ನು ವಿನಿಮಯ ಮಾಡಿಕೊಳ್ಳಲು ಸಾಕಷ್ಟು ಸಮಯವಕಾಶ ನೀಡಲಾಗಿರುವುದು ಆಗಿದೆ.
ಕೃಷ್ಣಮೂರ್ತಿ ಸುಬ್ರಮಣಿಯನ್ (ಮಾಜಿ ಮುಖ್ಯ ಆರ್ಥಿಕ ಸಲಹೆಗಾರ) ಆರ್‌ಬಿಐ 2000 ರೂಪಾಯಿ ನೋಟು ಚಲಾವಣೆ ರದ್ದುಗೊಳಿಸಿದ ಬಗ್ಗೆ ಮಾತನಾಡಿದ್ದಾರೆ. ಈ ಕ್ರಮವು ಸಮಾಜದ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
"2000 ರೂಪಾಯಿಯ ನೋಟಿನ ಬಳಕೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಪ್ರಸ್ತುತ ನಡೆಸಲಾಗುತ್ತಿಲ್ಲ. ಶೇಕಡ 10ರಷ್ಟು ಮಾತ್ರ ವಹಿವಾಟನ್ನು 2000 ರೂಪಾಯಿ ನೋಟಿನ ಮೂಲಕ ಮಾಡಲಾಗುತ್ತಿದೆ. ಸಾಮಾನ್ಯ ಜನರು ಹೆಚ್ಚಾಗಿ ಡಿಜಿಟಲ್ ವಹಿವಾಟನ್ನು ನಡೆಸುತ್ತಿದ್ದಾರೆ," ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ತಿಳಿಸಿದ್ದಾರೆ.


Click it and Unblock the Notifications