ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ (Fugitive Economic Offenders Act) ಆರೋಪಿಗಳಾಗಿರುವವರಿಂದ 15,113 ಕೋಟಿ ರೂಪಾಯಿಗಳನ್ನು ಸರ್ಕಾರ ವಸೂಲಿ ಮಾಡಲಾಗಿದೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರವು ತಿಳಿಸಿದೆ. ಈ ಪಟ್ಟಿಯಲ್ಲಿ ಸುಮಾರು 10 ಮಂದಿ ಪ್ರಮುಖ ಆರೋಪಿಗಳನ್ನು ಸರ್ಕಾರ ಗುರುತಿಸಿದೆ.
ವಿಜಯ್ ಮಲ್ಯ, ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಎಂಬ ಹತ್ತು ಮಂದಿಯನ್ನು ಎಫ್‌ಇಒಗಳು ಎಂದು ಘೋಷಣೆ ಮಾಡಲಾಗಿದೆ. ಈ ಪೈಕಿ ಹಜ್ರಾ ಇಕ್ಬಾಲ್ ಮೆಮನ್ ಯಾರು, ಏನು ಆರೋಪ ಎಂಬ ಬಗ್ಗೆ ತಿಳಿಯೋಣ

ಹಜ್ರಾ ಇಕ್ಬಾಲ್ ಮೆಮನ್ ಭಾರತದಲ್ಲಿ ಅತೀ ಹೆಚ್ಚು ವಾಂಟೆಂಡ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಹಜ್ರಾ ಇಕ್ಬಾಲ್ ಭಾರತದಲ್ಲಿ ವಂಚನೆಯನ್ನು ಮಾಡಿ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳಾಗಿದ್ದಾರೆ. ಹಾಗೆಯೇ ಕೋರ್ಟ್ ಕೂಡಾ ಇವರನ್ನು ಭಾರತದಿಂದ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಗುರುತಿಸಿದೆ.
ಹಜ್ರಾ ಇಕ್ಬಾಲ್ ಮೆಮನ್ ಯಾರು ತಿಳಿಯಿರಿ
ಗ್ಯಾಂಗ್ ಸ್ಟಾರ್ ಇಕ್ಬಾಲ್ ಮಿರ್ಚಿಯ ಪತ್ನಿ ಹಜ್ರಾ ಇಕ್ಬಾಲ್ ಮೆಮನ್. ಇನ್ನು ಇಕ್ಬಾಲ್ ಮಿರ್ಚಿ 2013ರ ಆಗಸ್ಟ್ 14ರಂದು ಸಾವನ್ನಪ್ಪಿದ್ದಾರೆ. ಇಕ್ಬಾಲ್ ಮಿರ್ಚಿಯ ಪತ್ನಿ ಹಜ್ರಾ ಇಕ್ಬಾಲ್ ಮೆಮನ್, ಪುತ್ರರಾದ ಆಸಿಫ್ ಮೆಮನ್ ಹಾಗೂ ಜುನೈದ್ ಮೆಮನ್‌ರನ್ನು ಕೂಡಾ 2021ರಲ್ಲಿ ಭಾರತದಿಂದ ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಘೋಷಣೆ ಮಾಡಲಾಗಿದೆ.
ಈ ಮೂವರ ಮೇಲೆಯೂ ಮನಿಲಾಂಡರಿಂಗ್ ಆರೋಪವಿದೆ. ಮುಂಬೈನಲ್ಲಿ ಹಲವಾರು ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್‌ಗಳನ್ನು ಖರೀದಿ ಮಾಡಲು ಅಕ್ರಮವಾಗಿ ಪಡೆದ ಹಣವನ್ನು ಬಳಕೆ ಮಾಡಲಾಗಿರುವ ಆರೋಪವನ್ನು ತಾಯಿ ಹಾಗೂ ಇಬ್ಬರು ಪುತ್ರರು ಹೊಂದಿದ್ದಾರೆ. 2021ರಲ್ಲಿ ಜಾರಿ ನಿರ್ದೇಶನಾಲಯ (ಇಡಿ) 800 ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.
ನೀರವ್ ಮೋದಿ, ವಿಜಯ್ ಮಲ್ಯ ಸೇರಿದಂತೆ ಹಲವಾರು ಆರ್ಥಿಕ ಅಪರಾಧಿಗಳು ನಿರ್ದಿಷ್ಟವಾಗಿ ಒಂದು ದೇಶದಲ್ಲಿ ಇದ್ದಾರೆ ಎಂಬ ಮಾಹಿತಿಯಾದರೂ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಈ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಆದರೆ ಹಜ್ರಾ ಇಕ್ಬಾಲ್ ಮೆಮನ್ ಮತ್ತು ಕುಟುಂಬ ವಿದೇಶದಲ್ಲಿದೆ ಎಂಬ ಮಾಹಿತಿಯಿದ್ದರೂ ಯಾವ ದೇಶದಲ್ಲಿದ್ದಾರೆ ಎಂಬ ಬಗ್ಗೆ ಖಚಿತವಾದ ಮಾಹಿತಿಯಿಲ್ಲ.
ಹಜ್ರಾ ಪತಿ ಇಕ್ಬಾಲ್ ಮಿರ್ಚಿ ಯಾರು?
ಸಾಮಾನ್ಯವಾಗಿ ಇಕ್ಬಾಲ್ ಮಿರ್ಚಿ ಎಂದೇ ಕರೆಯಲಾಗುವ ಹಜ್ರಾ ಇಕ್ಬಾಲ್ ಮೆಮನ್ ಪತಿ ಮೊಹಮ್ಮದ್ ಇಕ್ಬಾಲ್ ಮೆಮನ್ ಭಾರತದ ಗ್ಯಾಂಗ್ ಸ್ಟಾರ್ ಆಗಿದ್ದು 2013ರಲ್ಲೇ ನಿಧನ ಹೊಂದಿದ್ದಾರೆ. ಇಕ್ಬಾಲ್ ಮಿರ್ಚಿ ಭಾರತದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ದಾವುದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ. ಹಾಗೆಯೇ ಡ್ರಗ್ಸ್ ದಂದೆಯನ್ನು ನಡೆಸುತ್ತಿದ್ದ.
1990ರಲ್ಲಿ ಭಾರತದಲ್ಲಿ ಡ್ರಗ್ಸ್ ಸರಬರಾಜಿನಲ್ಲಿ ದೊಡ್ಡ ಕೈ ಎನಿಸಿಕೊಂಡಿದ್ದ ಇಕ್ಬಾಲ್ ಮಿರ್ಚಿ 1993ರ ಬಾಂಬೆ ಬಾಂಬ್ ದಾಳಿ ಪ್ರಕರಣದಲ್ಲಿಯೂ ಆರೋಪಿ. ಮೆಮನ್ಸ್ ಕುಟುಂಬವು ಮಿರ್ಚಿ ಎಂಬ ಬ್ರ್ಯಾಂಡ್ ಹೆಸರಿನ ಮೂಲಕ ಕೆಂಪು ಮೆಣಸಿನ ಪುಡಿ ಮಾರಾಟ ಮಾಡುತ್ತಿದ್ದ ಸಂಸ್ಥೆ. ಆದರೆ ಈ ಮೂಲಕವೇ ಭಾರತದಲ್ಲಿ ಡ್ರಗ್ಸ್ ದಂಧೆ ನಡೆಸಿದೆ.


Click it and Unblock the Notifications