ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ (Fugitive Economic Offenders Act) ಆರೋಪಿಗಳಾಗಿರುವವರ ಬಗ್ಗೆ ಕೇಂದ್ರ ಸರ್ಕಾರವು ಇತ್ತೀಚೆಗೆ ಮಾಹಿತಿಯನ್ನು ನೀಡಿದೆ. ಹಾಗೆಯೇ ಈ ಆರ್ಥಿಕ ಅಪರಾಧಿಗಳಿಂದ ಸುಮಾರು 15,113 ಕೋಟಿ ರೂಪಾಯಿ ವಸೂಲಿ ಮಾಡಿ, ಅದನ್ನು ಬ್ಯಾಂಕ್‌ಗಳಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರವು ಹೇಳಿಕೊಂಡಿದೆ.
ವಿಜಯ್ ಮಲ್ಯ, ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಎಂಬ ಹತ್ತು ಮಂದಿಯನ್ನು ಎಫ್‌ಇಒಗಳು ಎಂದು ಘೋಷಣೆ ಮಾಡಲಾಗಿದೆ. ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್ ಬಗ್ಗೆ ಇಲ್ಲಿದೆ ವಿವರ, ಮುಂದೆ ಓದಿ.....

ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್ ಯಾರು?
ಸ್ಟರ್ಲಿಂಗ್ ಬಯೋಟೆಕ್ ಮತ್ತು ಸಂದೇಸರಾ ಗ್ರೂಪ್ ಒಳಗೊಂಡ 8,100 ಕೋಟಿ ರೂಪಾಯಿ ಬ್ಯಾಂಕ್ ವಂಚನೆಯಲ್ಲಿ ಪರಾರಿಯಾದ ಉದ್ಯಮಿ ಹಿತೇಶ್ ನರೇಂದ್ರಭಾಯ್ ಪಟೇಲ್ ಆಗಿದ್ದಾರೆ. ಹಿತೇಶ್ ಪಟೇಲ್ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ವಂಚಿಸಲು ಬೇನಾಮಿ ಸಂಸ್ಥೆಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಉದ್ಯಮಿ ಹಿತೇಶ್ ನರೇಂದ್ರಭಾಯ್ ಪಟೇಲ್‌ರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಸಂದೇಸರಾ ಸಮೂಹದ ಪ್ರವರ್ತಕರು, ನಿತಿನ್ ಮತ್ತು ಚೇತನ್ ಸಂದೇಸರ ಅವರು ಇಂತಹ ಹಲವಾರು ಸಂಸ್ಥೆಗಳ ನಿರ್ದೇಶಕರು ಮತ್ತು ಷೇರುದಾರರನ್ನಾಗಿ ಮಾಡಿದರು. ಇಂಟರ್‌ಪೋಲ್‌ನ ನೋಟಿಸ್ ಆಧರಿಸಿ ಹಿತೇಶ್‌ನನ್ನು ಅಲ್ಬೇನಿಯಾದಲ್ಲಿ ಬಂಧಿಸಲಾಗಿತ್ತು.
ಈ ಬೇನಾಮಿ ಕಂಪನಿಗಳನ್ನು ಮ್ಯಾನಿಪ್ಯುಲೇಟ್ ಮಾಡುವ ವ್ಯಾಪಾರಕ್ಕಾಗಿ ಬಳಸಲಾಗುತ್ತಿತ್ತು. ಪ್ರಮುಖ ಕಂಪನಿಯ ವಹಿವಾಟು ಮತ್ತು ಲಾಭವನ್ನು ಹೆಚ್ಚಿಸಲು ಬ್ಯಾಂಕ್ ಸಾಲಗಳ ಮೂಲಕ ಪಡೆದ ಹಣವನ್ನು ಲಾಂಡರಿಂಗ್ ಮಾಡಲಾಗಿತ್ತು ಎಂಬ ಆರೋಪವಿದೆ. ಹಾಗೆಯೇ ಈ ಸಂಸ್ಥೆಯ ಮನಿ ಲಾಂಡರಿಂಗ್ ಅನ್ನು ಮರೆಮಾಚುವ ನಿಟ್ಟಿನಲ್ಲಿ ಹಲವಾರು ಘಟಕಗಳನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ.
2020ರಲ್ಲಿ ಆರ್ಥಿಕ ಅಪರಾಧಿಗಳೆಂದು ಘೋಷಣೆ
ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ ಮತ್ತು ಹಿತೇಶ್ ಕುಮಾರ್ ನರೇಂದ್ರಭಾಯ್ ಪಟೇಲ್ ಅವರನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿಗಳೆಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರನ್ನು ಒಳಗೊಂಡ ದೆಹಲಿ ನ್ಯಾಯಾಲಯ 2020ರ ಸೆಪ್ಟೆಂಬರ್ 28ರಂದು ಘೋಷಿಸಿದೆ. ಜಾರಿ ನಿರ್ದೇಶನಾಲಯದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
100 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣ ವರ್ಗಾವಣೆಯ ಅಪರಾಧಕ್ಕಾಗಿ ಮನಿ ಲಾಂಡರಿಂಗ್ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಪ್ರತಿವಾದಿಗಳ ವಿರುದ್ಧ 2018 ರಲ್ಲಿ ನ್ಯಾಯಾಲಯವು ಮುಕ್ತ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಹೇಳಿದ್ದಾರೆ.


Click it and Unblock the Notifications