ಆರ್ಥಿಕ ಅಪರಾಧಿಗಳ ಕಾಯ್ದೆಯಡಿ (Fugitive Economic Offenders Act) ಆರ್ಥಿಕ ಅಪರಾಧಿಗಳೆಂದು ಘೋಷಿತರಾಗಿರುವ ದೇಶದಿಂದ ಪರಾರಿಯಾಗಿರುವ ಆರೋಪಿಗಳಿಂದ 15,113 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ನೀಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಈ ಲೇಖನದಲ್ಲಿ ನಾವು ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ರಾಮಚಂದ್ರನ್ ವಿಶ್ವನಾಥನ್ ಬಗ್ಗೆ ವಿವರವನ್ನು ನೀಡಿದ್ದೇವೆ. ಭಾರತೀಯ ಮೂಲದ ಉದ್ಯಮಿ ರಾಮಚಂದ್ರನ್ ವಿಶ್ವನಾಥನ್‌ರನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಜೂನ್‌ನಲ್ಲಿ ಘೋಷಣೆ ಮಾಡಲಾಗಿದೆ. ರಾಮಚಂದ್ರನ್ ವಿಶ್ವನಾಥನ್ ಯಾರು, ಏನು ಆರ್ಥಿಕ ಅಪರಾಧ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ರಾಮಚಂದ್ರನ್ ವಿಶ್ವನಾಥನ್ ಯಾರು?
ಭಾರತ ಮೂಲದ ಯುಎಸ್ ಪ್ರಜೆಯಾದ ರಾಮಚಂದ್ರನ್ ವಿಶ್ವನಾಥನ್ ದೇವಾಸ್ ಮಲ್ಟಿಮೀಡಿಯಾದ ಸಂಸ್ಥಾಪಕ ಮತ್ತು 2018 ರ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಆರೋಪಕ್ಕೆ ಒಳಗಾದ ಒಂಬತ್ತು ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ರಾಮಚಂದ್ರನ್ ಈಗ ಓಮ್ನಿಸ್ಪೇಸ್ ಎಲ್‌ಎಲ್‌ಸಿಯ ಅಧ್ಯಕ್ಷರಾಗಿದ್ದಾರೆ. ಓಮ್ನಿಸ್ಪೇಸ್ ಎಲ್‌ಎಲ್‌ಸಿಯು ಯುಎಸ್‌ನಲ್ಲಿ ಸಾಟೆಲೈಂಟ್ ಕಮ್ಯೂನಿಕೇಷನ್ಸ್ ಸ್ಟಾರ್ಟ್‌ಅಪ್ ಆಗಿದೆ. ಇದು 5ಜಿ ಸಂಬಂಧಿತ ಕಾರ್ಯವನ್ನು ನಿರ್ವಹಣೆ ಮಾಡುತ್ತದೆ.
ಏನಿದು ದೇವಾಸ್ ಮಲ್ಟಿಮೀಡಿಯಾ ಪ್ರಕರಣ?
ಉಪಗ್ರಹ ಆಧಾರಿತ ಮಲ್ಟಿಮೀಡಿಯಾ ಸೇವೆಗಳನ್ನು ಒದಗಿಸುವ ದೇವಾಸ್ ಅನ್ನು 2004 ರಲ್ಲಿ ಸ್ಥಾಪಿಸಲಾಗಿದೆ. ಶೀಘ್ರದಲ್ಲೇ ಅನೇಕ ಒಪ್ಪಂದಗಳಿಗೆ ಸಹಿ ಹಾಕಿತು. ಆದರೆ 2ಜಿ ಹಗರಣ ಮುನ್ನೆಲೆಗೆ ಬರುತ್ತಿದ್ದಂತೆ ವಿಶ್ವನಾಥನ್ ವಿರುದ್ಧ ಹೊಸ ಆರೋಪಗಳು ಕೇಳಿ ಬಂದಿವೆ. 2005 ರಲ್ಲಿ ಇಸ್ರೋ ಜೊತೆಗಿನ ಒಪ್ಪಂದದ ನಂತರ ಈ ಪ್ರಕರಣದ ಒಂಬತ್ತು ಆರೋಪಿಗಳು ಸ್ಟಾರ್ಟ್‌ಅಪ್‌ನ 579 ಕೋಟಿ ರೂಪಾಯಿಯನ್ನು ವಿದೇಶಿ ನೇರ ಹೂಡಿಕೆಯ ಶೇಕಡ 85ರಷ್ಟನ್ನು ಯುಎಸ್‌ಗೆ ವರ್ಗಾಯಿಸಿದ್ದಾರೆ ಎಂದು ಇಡಿ ಆರೋಪಿಸಿದೆ.
ಈ ಹಿನ್ನೆಲೆ ಉಪಗ್ರಹ ಒಪ್ಪಂದವನ್ನು ಅಂತಿಮವಾಗಿ 2011 ರಲ್ಲಿ ರದ್ದುಗೊಳಿಸಲಾಗಿದೆ. ಇಡಿ ಚಾರ್ಜ್‌ಶೀಟ್ ಅನ್ನು 2018 ರಲ್ಲಿ ಸಲ್ಲಿಸಲಾಗಿದೆ. ರದ್ದತಿಯ ನಂತರ, ದೇವಾಸ್ ಮತ್ತು ಅದರ ವಿದೇಶಿ ಹೂಡಿಕೆದಾರರು ತಾವು ಉಂಟಾದ ನಷ್ಟಗಳಿಗೆ ಪರಿಹಾರವನ್ನು ಪಡೆಯಲು ಇಂಟರ್ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ಟ್ರಿಬ್ಯೂನಲ್ ಅನ್ನು ಸಂಪರ್ಕಿಸಿದ್ದರು. ವಿಫಲವಾದ ಒಪ್ಪಂದದ ಮೇಲೆ ಮೂರು ಮಧ್ಯಸ್ಥಿಕೆ ನ್ಯಾಯಮಂಡಳಿಗಳಿಂದ ಅವರಿಗೆ ಒಂದು ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಪರಿಹಾರವನ್ನು ನೀಡುವ ನಿರ್ಧಾರಕ್ಕೆ ಬರಲಾಗಿತ್ತು.
ಅದಾದ ಬಳಿಕ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ದೇವಾಸ್ ಅನ್ನು ವಂಚನೆಗಾಗಿ ರಚನೆ ಮಾಡಲಾಗಿದೆ ಎಂದು ಪ್ರತಿಪಾದಿಸಿದ್ದು ಮೇ 2021 ರಲ್ಲಿ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಿತು. ಈ ಆದೇಶವನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್ ಒಂದು ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಪರಿಹಾರದ ಆದೇಶವನ್ನು ರದ್ದುಗೊಳಿಸಿದೆ.
ಬೆಂಗಳೂರು ವಿಶೇಷ ನ್ಯಾಯಾಲಯ ಹೇಳಿದ್ದೇನು?
ಬೆಂಗಳೂರು ವಿಶೇಷ ನ್ಯಾಯಾಲಯ ಜುಲೈನಲ್ಲಿ ರಾಮಚಂದ್ರನ್ ವಿಶ್ವನಾಥನ್‌ರನ್ನು ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದೆ. "ರಾಮಚಂದ್ರನ್ ವಿಶ್ವನಾಥನ್ ತಮ್ಮ ಕಂಪನಿ ದೇವಾಸ್ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ ವಂಚನೆಯಿಂದ ಅಧಿಕ ಆದಾಯವನ್ನು ಗಳಿಸುವ ಸಂಪೂರ್ಣ ಯೋಜನೆಯ ಮಾಸ್ಟರ್‌ಮೈಂಡ್ ಆಗಿದ್ದರು. ಬಳಿಕ ಅದನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ," ಎಂದು ಬೆಂಗಳೂರು ವಿಶೇಷ ನ್ಯಾಯಾಲಯ ಹೇಳಿದೆ.
ರಾಮಚಂದ್ರನ್ ವಿಶ್ವನಾಥನ್ ತನ್ನ ಪ್ರಕ್ರಿಯೆಗಳಿಗೆ ಸಹಕರಿಸುತ್ತಿಲ್ಲ ಎಂದು ಸಂಸ್ಥೆ ಆರೋಪಿಸಿದೆ. ಹಾಗೆಯೇ ರಾಮಚಂದ್ರನ್ ವಿಶ್ವನಾಥನ್‌ರನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಬೆಂಗಳೂರು ಕೋರ್ಟ್ ಘೋಷಿಸಿದ್ದು ಅದೇ ಕಾಯ್ದೆಯಡಿಯಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications