World Cup: ವಿಶ್ವಕಪ್ ಎಫೆಕ್ಟ್, ವಿಮಾನ ಟಿಕೆಟ್ ದರ ಒಂದಲ್ಲ ಎರಡಲ್ಲ ಆರು ಪಟ್ಟು ಜಿಗಿತ!

ವಿಶ್ವಕಪ್ ಫಿನಾಲೆಗೆ ಭಾರತ ತಂಡ ಎಂಟ್ರಿ ಪಡೆದಿದೆ. ಒಟ್ಟಾಗಿ ಐದು ಬಾರಿ ವಿಶ್ವಕಪ್ ವಿಜೇತರಾದ ಆಸ್ಟ್ರೇಲಿಯಾದೊಂದಿಗೆ ಭಾರತದ ಕ್ರಿಕೆಟ್ ತಂಡ ಆಡಲಿದೆ. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023 ರ ವಿಶ್ವಕಪ್ ಫಿನಾಲೆ ನಡೆಯಲಿದೆ. ಈ ನಡುವೆ ವಿಮಾನ ಟಿಕೆಟ್ ದರವು ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ.

ಹೈದರಾಬಾದ್‌ನಿಂದ ಅಹಮದಾಬಾದ್‌ಗೆ ವಿಮಾನ ದರಗಳು ಏರಿವೆ. ಈಗಾಗಲೇ ನಾಳೆ ನಡೆಯುವ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ನಗರಕ್ಕೆ ಆಗಮಿಸಲು ಪ್ರಾರಂಭಿಸಿದ್ದಾರೆ. ಬೇಡಿಕೆ ಹೆಚ್ಚಳವಾಗುತ್ತಾ ಸಾಗಿದ್ದಂತೆ ವಿಮಾನ ನಿರ್ವಾಹಕರು ವಿಮಾನದ ಟಿಕೆಟ್ ದರವನ್ನು ಅಹಮದಾಬಾದ್‌ನಲ್ಲಿ ಏರಿಕೆ ಮಾಡಿದ್ದಾರೆ.

 ವಿಶ್ವಕಪ್ ಎಫೆಕ್ಟ್, ವಿಮಾನ ಟಿಕೆಟ್ ದರ ಆರು ಪಟ್ಟು ಜಿಗಿತ!

ಈ ಹಿಂದೆ ಹೈದರಾಬಾದ್‌ನಿಂದ ಅಹಮದಾಬಾದ್‌ ನಡುವಿನ ವಿಮಾನಯಾನದ ಟಿಕೆಟ್ ದರವು ಆರರಿಂದ ಸುಮಾರು ಏಳು ಸಾವಿರದವರೆಗೆ ಇತ್ತು. ಆದರೆ ಈಗ ಕ್ರಿಕೆಟ್ ವಿಶ್ವಕಪ್ ನಡುವೆ ವಿಮಾನ ಟಿಕೆಟ್ ದರವು ಒಂದಲ್ಲ ಎರಡಲ್ಲ ಆರು ಪಟ್ಟು ಅಧಿಕವಾಗಿದೆ. ಶನಿವಾರ ಟಿಕೆಟ್ ದರವು 40 ಸಾವಿರ ರೂಪಾಯಿ ಆಗಿದೆ.

ಇನ್ನು ಹೈದರಾಬಾದ್ ವಿಮಾನಗಳ ದರವೂ ಶುಕ್ರವಾರ 73,000 ರೂಪಾಯಿಗೆ ತಲುಪಿದೆ. ಬೆಂಗಳೂರು, ಚೆನ್ನೈ, ಮುಂಬೈ ಮತ್ತು ದೆಹಲಿಯಂತಹ ಇತರ ನಗರಗಳಿಗೆ ಹೋಲಿಸಿದರೆ ವಿಮಾನ ದರಗಳು ಭಾರೀ ಅಧಿಕವಾಗಿದೆ.

"ವಿಶ್ವಕಪ್ ಫೈನಲ್‌ಗಿಂತ ಮುಂಚಿತವಾಗಿ ವಿಮಾನ ದರಗಳು ಗಣನೀಯವಾಗಿ ಏರಿವೆ. ಫೈನಲ್ ಅನ್ನು ನೋಡಲೆಂದು ಪ್ಲ್ಯಾನ್ ಮಾಡಿಕೊಂಡಿರುವವರು ಪಂದ್ಯದ ಟಿಕೆಟ್‌ಗಿಂತ ಭಾರೀ ದುಬಾರಿ ವಿಮಾನ ಟಿಕೆಟ್ ದರವಾಗಿದೆ. ಇದು ಈಗ ಟಿಕೆಟ್ ಪ್ರಿಯರಿಗೆ ದೊಡ್ಡ ಸವಾಲಾಗಿದೆ. ಈ ನಡುವೆ ವಿಮಾನಯಾನ ಸಂಸ್ಥೆಗಳು ಅಧಿಕ ವಿಮಾನವನ್ನು ನಿರ್ವಹಣೆ ಮಾಡಬೇಕಾಗುತ್ತದೆ," ಎಂದು ಕ್ರಿಕೆಟ್ ಪ್ರಿಯ ಸಿ ಸತ್ಯ ವ್ಯಕ್ತಪಡಿಸಿದರು.

ಹೈದರಾಬಾದ್ ಮತ್ತು ಅಹಮದಾಬಾದ್ ನಡುವೆ, ವಿಮಾನಯಾನ ಸಂಸ್ಥೆಗಳು ಎರಡು ತಡೆರಹಿತ ಮತ್ತು 16 ಸಂಪರ್ಕ ವಿಮಾನಗಳನ್ನು ನಿರ್ವಹಣೆ ಮಾಡುತ್ತಾ ಬಂದಿದೆ. ಈ ದರಗಳು ಒಂದು ಬಾರಿಯ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದೆ. ಈಗ ವಾಪಾಸ್ ಬರುವ ಪ್ರಯಾಣದ ದರವು ಕೂಡಾ ವಿಪರೀತವಾಗಿದೆ.

ನವೆಂಬರ್ 20 ರಂದು (ಸೋಮವಾರ), ಫೈನಲ್ ಪಂದ್ಯದ ನಂತರ, ಟಿಕೆಟ್ ಬೆಲೆ 44,999 ರೂಪಾಯಿ ಆಗಿದೆ. ಆದ್ದರಿಂದ, ಈ ಎರಡು ನಗರಗಳ ನಡುವಿನ ಪ್ರಯಾಣಕ್ಕಾಗಿ ಜನರು ಸುಮಾರು 85,000 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.

ಈ ನಡುವೆ ಕೆಲವು ಕ್ರಿಕೆಟ್ ಅಭಿಮಾನಿಗಳು ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಪಂದ್ಯದ ಟಿಕೆಟ್‌ಗಳ ಬಗ್ಗೆ ವಿವರಿಸಿದ್ದಾರೆ. "ಎಲ್ಲರಿಗೂ ನಮಸ್ಕಾರ, ನನಗೆ ವಿಶ್ವಕಪ್ ಫೈನಲ್‌ಗೆ ತಲಾ 10,000 ರೂಪಾಯಿ ಬಜೆಟ್‌ನಲ್ಲಿ ಮೂರು ಟಿಕೆಟ್‌ಗಳು ಬೇಕು. ಯಾರಾದರೂ ಅವುಗಳನ್ನು ಹೊಂದಿದ್ದರೆ, ದಯವಿಟ್ಟು ತಿಳಿಸಿ," ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ರೈಲ್ವೆಯಿಂದ ವಿಶೇಷ ರೈಲುಗಳು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವಕಪ್ ಫೈನಲ್ ಅನ್ನು ನೋಡಲು ಮುಂಬೈನಿಂದ ಅಹಮದಾಬಾದ್‌ಗೆ ಪ್ರಯಾಣಿಸುವ ಕ್ರಿಕೆಟ್ ಅಭಿಮಾನಿಗಳಿಗೆ ಭಾರತೀಯ ರೈಲ್ವೆ ವಿಶೇಷ ವಿಶ್ವಕಪ್ ರೈಲುಗಳನ್ನು ಓಡಿಸಲಿದೆ.

ವಿಶ್ವಕಪ್ ವಿಶೇಷ ರೈಲುಗಳ ವಿವರಗಳನ್ನು ಒದಗಿಸಿದ ಸೆಂಟ್ರಲ್ ರೈಲ್ವೆಯು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ನಿಂದ ಅಹಮದಾಬಾದ್‌ಗೆ ಮತ್ತು ನಂತರ ಅಹಮದಾಬಾದ್‌ನಿಂದ ಸಿಎಸ್‌ಎಂಟಿಗೆ ಪಂದ್ಯದ ನಂತರ ಒಂದು ಜೋಡಿ ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ಹೇಳಿದೆ.

ರೈಲು ಸೇವಾ ವಿವರ

* ರೈಲು ಸಂಖ್ಯೆ 01153: ಸಿಎಸ್‌ಎಂಟಿ- ಅಹಮದಾಬಾದ್ ವಿಶೇಷ ಎಕ್ಸ್‌ಪ್ರೆಸ್
* ನಿರ್ಗಮನ: ನವೆಂಬರ್ 18 ರಂದು ರಾತ್ರಿ 10.30 ಗಂಟೆಗೆ
* ಆಗಮನ: ನವೆಂಬರ್ 19 ರಂದು ಬೆಳಿಗ್ಗೆ 06.40 ಕ್ಕೆ ಅಹಮದಾಬಾದ್‌ಗೆ ತಲುಪುವುದು.
* ರೈಲು ಸಂಖ್ಯೆ 01154: ಅಹಮದಾಬಾದ್ - ಸಿಎಸ್‌ಎಂಟಿ ಸ್ಪೆಷಲ್ ಎಕ್ಸ್‌ಪ್ರೆಸ್
* ನಿರ್ಗಮನ: ನವೆಂಬರ್ 20 ರಂದು ಬೆಳಿಗ್ಗೆ 01.45 ಕ್ಕೆ ಅಹಮದಾಬಾದ್
* ಆಗಮನ: ನವೆಂಬರ್ 20 ರಂದು ಬೆಳಿಗ್ಗೆ 10.35 ಕ್ಕೆ ಸಿ.ಎಸ್.ಎಂ.ಟಿ
* ಯಾವೆಲ್ಲ ಸ್ಥಳದಲ್ಲಿ ನಿಲ್ಲುತ್ತೆ?: ಸಿಎಸ್‌ಎಂಟಿ, ದಾದರ್, ಥಾಣೆ, ವಸೈ, ಸೂರತ್, ವಡೋದರಾ, ಅಹಮದಾಬಾದ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+