ಜನರು ಯಾವಾಗಲೂ ಕೂಡಾ ಐಷಾರಾಮಿ ಪ್ರಯಾಣ ನಡೆಸಲು ಬಯಸುತ್ತಾರೆ. ನಮ್ಮ ಪ್ರವಾಸವು ಉತ್ತಮವಾಗಿರಬೇಕಾದರೆ, ನಾವು ಎಂದಿಗೂ ಕೂಡಾ ಉತ್ತಮ ಹೋಟೆಲ್‌ನಲ್ಲಿ ತಂಗುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಹೆಚ್ಚಿನ ಪ್ರವಾಸಿಗರು ತಾವು ತಂಗುವ ಹೋಟೆಲ್ ಹೇಗಿರುತ್ತದೆ ಎಂದು ನೋಡುತ್ತಾರೆ.
ಐಷಾರಾಮಿ ಪ್ರವಾಸ ವಿಚಾರಕ್ಕೆ ಬಂದಾಗ ಪ್ರವಾಸದ ಅನುಭವವನ್ನು ಇನ್ನಷ್ಟು ಹೆಚ್ಚಿಸಲು ಆಗಾಗ್ಗೆ ದುಬಾರಿ ಅಥವಾ ಶ್ರೀಮಂತ ಹೋಟೆಲ್ ರೂಮ್‌ಗಳನ್ನು ಬುಕ್ ಮಾಡುತ್ತಾರೆ. ಹಣದಿಂದಾಗಿ ನೋವು ಸಂತೋಷವನ್ನು ಖರೀದಿಸಲು ಸಾಧ್ಯವಾಗದಿರಬಹುದು. ಆದರೆ ನಿಮಗೆ ಅತ್ಯಂತ ಶ್ರೀಮಂತ, ವಿಶ್ವದ ಅತೀ ದುಬಾರಿಯಾದ ಹೋಟೆಲ್‌ಗಳ ಬಗ್ಗೆ ತಿಳಿದಿದೆಯೇ?, ಇಲ್ಲಿದೆ ವಿವರ ಮುಂದೆ ಓದಿ...

ಐಷಾರಾಮಿ ಹೋಟೆಲ್ ಬಗ್ಗೆ ತಿಳಿಯಿರಿ
ನೀವು ಐಷಾರಾಮಿಯಾಗಿ ನಿಮ್ಮ ರಜೆಯನ್ನು ಕಳೆಯಲು ಬಯಸಿದರೆ, ನಿಮ್ಮಲ್ಲಿ ಸಾಕಷ್ಟು ಹಣವಿದ್ದರೆ ಅತ್ಯಂತ ದುಬಾರಿ ಹೋಟೆಲ್‌ನಲ್ಲಿ ನೀವು ದಿನವನ್ನು ಕಳೆಯಬಹುದಾಗಿದೆ. ವಿಶ್ವದ ಅತ್ಯಂತ ದುಬಾರಿ ಹೋಟೆಲ್ ಭೂಮಿಯ ಮೇಲೆ ಅಲ್ಲ, ಬದಲಾಗಿ ಲವರ್ಸ್ ಡೀಪ್ ಎಂಬ ಜಲಾಂತರ್ಗಾಮಿ ನೌಕೆಯಲ್ಲಿದೆ. ಅಟ್ಲಾಂಟಿಕ್ ಸಾಗರದ ಗಡಿಯಲ್ಲಿರುವ ವೆಸ್ಟ್ ಇಂಡೀಸ್‌ನ ಪೂರ್ವ ಕೆರಿಬಿಯನ್ ಸಮುದ್ರದಲ್ಲಿರುವ ಸೇಂಟ್ ಲೂಸಿಯಾದಲ್ಲಿದೆ.
ಲವರ್ಸ್ ಡೀಪ್ ಸೇಂಟ್ ಲೂಸಿಯಾ ಜಲಾಂತರ್ಗಾಮಿ ಅಂಡರ್ವಾಟರ್ ಹೋಟೆಲ್ ವಿಶ್ವದ ಅತ್ಯಂತ ದುಬಾರಿ ಹೋಟೆಲ್ ಆಗಿದೆ. ನೀವು ಈ ಹೋಟೆಲ್‌ನಲ್ಲಿ ಒಂದು ರಾತ್ರಿಯ ಬೆಲೆ ಎಷ್ಟು ಅಂತ ತಿಳಿದರೆ ಶಾಕ್ ಆಗುತ್ತೀರಿ. ಸೇಂಟ್ ಲೂಸಿಯಾ ಕರಾವಳಿಯ ಬಂಡೆಯ ಬಳಿ ಅಥವಾ ಕೆಂಪು ಸಮುದ್ರದಲ್ಲಿರುವ ಈ ಯುದ್ಧನೌಕೆಯ ಬಳಿ ಹೋಟೆಲ್ ಇದೆ.
ದಿ ಗಾರ್ಡಿಯನ್ ಲೈಫ್ ಪ್ರಕಾರ, ಪ್ರೇಮಿಗಳು ಸಮುದ್ರದ ಪ್ರಶಾಂತವಾದ ನೋಟದೊಂದಿಗೆ, ತಮ್ಮದೇ ಆದ ಖಾಸಗಿ ಜಲಾಂತರ್ಗಾಮಿಯಲ್ಲಿ ಒಂದು ರಾತ್ರಿಗೆ 292,000 ಡಾಲರ್ ಅಥವಾ 2,43,06,518 ರೂಪಾಯಿ ನೀಡಿ ಐಷಾರಾಮಿ ರಾತ್ರಿಯನ್ನು ಕಳೆಯಬಹುದಾಗಿದೆ.
ಪ್ರತಿ ರಾತ್ರಿಯ ರೂಮ್‌ನ ಬೆಲೆಯು ಅತ್ಯಂತ ದುಬಾರಿಯಾಗಿದೆ. ಹೊಸ ಬಿಎಂಡಬ್ಲ್ಯೂ ಎಕ್ಸ್‌ಎಂ ಎಸ್‌ಯುವಿಗಿಂತ ಈ ಹೋಟೆಲ್ ಬೆಲೆ ಅಧಿಕವಾಗಿದೆ. ಇದರ ಆರಂಭಿಕ ಬೆಲೆಯು 159,995 ಡಾಲರ್ ಆಗಿದೆ. ಈ ಹಡಗಿನ ರೂಮ್‌ನಲ್ಲಿ ಮಿನಿ ಬಾರ್ ಇದೆ. ಶೌಚಾಲಯ, ಡಬಲ್ ಬೆಡ್ ಇದೆ.


Click it and Unblock the Notifications