ಬಿಲಿಯನೇರ್ ಮುಕೇಶ್ ಅಂಬಾನಿ ಅವರು ಭಾರತದಲ್ಲಿ ಅತ್ಯಂತ ದೊಡ್ಡ ನೆಟ್‌ವರ್ಕ್‌ನ ದೈತ್ಯ ಉದ್ಯಮವನ್ನು ನಡೆಸುತ್ತಿದ್ದಾರೆ. ಅಂಬಾನಿ ಅಂದಾಕ್ಷಣ ಕೂಡಲೇ ನೆನಪಿಗೆ ಬರುವುದು ಅವರ ಶ್ರೀಮಂತಿಕೆ. ಅವರು ಏಷ್ಯಾದ ನಂಬರ್ ಒನ್ ಶ್ರೀಮಂತ ಉದ್ಯಮಿ ಮಾತ್ರವಲ್ಲ, ಜತೆಗೆ ಮುಂಬೈನಲ್ಲಿರುವ ಆಂಟಿಲಿಯಾ ಇಡೀ ಜಗತ್ತಿನಲ್ಲಿಯೇ ಅತ್ಯಂತ ದುಬಾರಿಯಾದ ಆಸ್ತಿಗಳಲ್ಲಿ ಒಂದಾಗಿದ್ದು, ಅದರ ಬೆಲೆಯು ಸುಮಾರು 15000 ಕೋಟಿ ರೂಪಾಯಿ ಆಗಿದೆ.
ಆದರೆ, ಮುಕೇಶ್ ಅಂಬಾನಿ ಅವರ ಆಂಟಿಲಿಯಾ ಜಗತ್ತಿನ ಅತಿ ದುಬಾರಿಯ ಆಸ್ತಿಯಲ್ಲ. ಬದಲಿಗೆ ಬ್ರಿಟನ್‌ನಲ್ಲಿರುವ ರಾಜಮನೆತನದ ಬಕ್ಕಿಂಗ್ಯಾಮ್ ಅರಮನೆ ಅತಿ ದುಬಾರಿಯ ಬಂಗಲೆಯಾಗಿದೆ. ಪ್ರಸ್ತುತ ಕಿಂಗ್ ಚಾರ್ಲ್ಸ್-3 ಈ ಅರಮನೆಯಲ್ಲಿ ವಾಸವಾಗಿದ್ದಾರೆ.

ಬಕ್ಕಿಂಗ್ಯಾಮ್ ಅರಮನೆ ಎನ್ನುವ ಹೆಸರು ಬಕ್ಕಿಂಗ್ಯಾಮ್ ಡ್ಯುಕೆಯಿಂದ ಬಂದಿದ್ದು, ಇವರು ಬ್ರಿಟನ್‌ನಲ್ಲಿ 1703ರಲ್ಲಿ ದೊಡ್ಡ ದೊಡ್ಡ ಮನೆಗಳು ಹಾಗೂ ಆಡಳಿತ ಮುಖ್ಯ ಕಚೇರಿಗಳನ್ನು ನಿರ್ಮಿಸಿದ್ದರು. ಅಂದಿನಿಂದ ಆ ಅರಮನೆಯು ಯುಕೆ ರಾಜಮನೆಯನಕ್ಕೆ ಸೇರಿದ್ದು, ಇಡೀ ಪ್ರಪಂಚದಲ್ಲೇ ಅತ್ಯಂತ ಬೆಲೆಬಾಳುವ ಹಾಗೂ ಪ್ರತಿಷ್ಠಿತ ಆಸ್ತಿಯಾಗಿ ಗುರುತಿಸಿಕೊಂಡಿದೆ.
ಈ ಅರಮನೆಯನ್ನು ರಾಣಿ ವಿಕ್ಟೋರಿಯಾ ಅಧಿಕಾರಕ್ಕೆ ಬಂದಾಗ ಅಂದರೆ 19ನೇ ಶತಮಾನದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದು, ಅವರ ಆಳ್ವಿಕೆಯಲ್ಲಿ ಅರಮನೆ ಸ್ವರೂಪಕ್ಕೆ ಸಾಕಷ್ಟು ಮಾರ್ಪಾಡುಗಳನ್ನು ತರಲಾಯಿತು. ಪ್ರಸ್ತುತ ಬಕ್ಕಿಂಗ್ಯಾಮ್ ಅರಮೆನೆಯು 775 ಕೋಣೆಗಳನ್ನು ಹೊಂದಿದ್ದು, ಆ ಪೈಕಿ 19 ಸ್ಟೇಟ್‌ರೂಂಗಳು, 52 ಬೆಡ್‌ರೂಂಗಳು ಅತಿಥಿಗಳಿಗೆ, 188 ಬೆಡ್‌ರೂಂಗಳನ್ನು ಸಿಬ್ಬಂದಿಗೆ, 92 ಕಚೇರಿಗಳು ಹಾಗೂ 78 ಬಾತ್‌ರೂಗಳಾಗಿವೆ.
ಹಲವಾರು ಅಧಿಕೃತ ಮೂಲಗಳ ಲೆಕ್ಕಾಚಾರದ ಪ್ರಕಾರ, ಬಕ್ಕಿಂಗ್‌ಹ್ಯಾಮ್ ಅರಮೆನೆಯು ಮಾರಾಟವಾದರೆ ಅದರ ಮೌಲ್ಯ 4.9 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಂದರೆ 40,789 ಕೋಟಿ ರೂ. ಇದು ಮುಕೇಶ್ ಅಂಬಾನಿ ಅವರ ಐಷಾರಾಮಿ ಬಂಗಲೆ ಆಂಟಿಲಿಯಾದ ಮೌಲ್ಯದ ಮೂರು ಪಟ್ಟು ಜಾಸ್ತಿಯಿದೆ.
ಬಕ್ಕಿಂಗ್ಯಾಮ್ ಅರಮೆನೆಯು ವಿಶ್ವದ ಅತ್ಯಂತ ದುಬಾರಿ ಹಾಗೂ ಅಮೂಲ್ಯ ಆಭರಣ ಹಾಗೂ ಸಂಪತ್ತಿನ ನೆಲೆಬೀಡು ಕೂಡ ಹೌದು. ಬ್ರಿಟಷ್ ಸಾಮ್ರಾಜ್ಯವು ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳನ್ನು ಆಳ್ವಿಕೆ ಮಾಡಿತ್ತು. ಈ ನಡುವೆ, ಮುಕೇಶ್ ಅಂಬಾನಿ ಅವರ ಆಂಟಿಲಿಯಾ ಜಗತ್ತಿನ 2ನೇ ಅತ್ಯಂತ ದುಬಾರಿ ಮನೆಯಾಗಿದ್ದು, ಇದರ ಮೌಲ್ಯ 15000 ಕೋಟಿ ರೂಪಾಯಿ ಈ ಐಷಾರಾಮಿ ಬಂಗಲೆಯಲ್ಲಿ 27 ಮಹಡಿಗಳನ್ನು ಹೊಂದಿದ್ದು, ಮೇಲಿನ ಆರು ಮಹಡಿಗಳನ್ನು ಅಂಬಾನಿ ಕುಟುಂಬದವರಿಗೆ ಮೀಸಲಿಡಲಾಗಿದೆ. ಕುಟುಂಬದ ಪ್ರತಿ ಸದಸ್ಯರಿಗೆ ಒಂದೊಂದು ಮಹಡಿಯನ್ನು ನೀಡಲಾಗಿದೆ.


Click it and Unblock the Notifications