ಭಾರತವು ಐಷಾರಾಮಿ ವಿವಾಹಗಳಿಗೆ ಹೆಸರುವಾಸಿಯಾಗಿದೆ. ಶ್ರೀಮಂತ ಕುಟುಂಬಗಳು ಸಾಮಾನ್ಯವಾಗಿಯೇ ವಿವಾಹವನ್ನು ಅದ್ದೂರಿಯಾಗಿ ಮಾಡುತ್ತಾರೆ. ಈ ನಡುವೆ ಮಧ್ಯಮ ವರ್ಗದವರು ಸಾಲ ಮಾಡಿಯಾದರೂ ಅದ್ದೂರಿಯಾಗಿ ವಿವಾಹ ಮಾಡಲು ಮುಂದಾಗುತ್ತಾರೆ.
ಭಾರತದಲ್ಲಿ ಶ್ರೀಮಂತ ಮಹಿಳೆ ಎಂದಾಗ ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ, ಪುತ್ರ ಆಕಾಶ್ ಅಂಬಾನಿಯ ವಿವಾಹ ನೆನಪಾಗುತ್ತದೆ. ಆದರೆ ವಿಶ್ವದ ಅತೀ ಶ್ರೀಮಂತ ವಿವಾಹದ ಬಗ್ಗೆ ನಿಮಗೆ ತಿಳಿದಿದೆಯೇ?, ಈ ಶ್ರೀಮಂತ ವಿವಾಹವು ಪ್ಯಾರಿಸ್‌ನಲ್ಲಿ ನಡೆದಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಈ ದುಬಾರಿ ವಿವಾಹದ ವೆಚ್ಚವೆಷ್ಟು?
ಪ್ಯಾರಿಸ್‌ನಲ್ಲಿ ನಡೆದ ಈ ವಿಶ್ವದ ಅತೀ ದುಬಾರಿ ವಿವಾಹವು ಸುಮಾರು 491 ಕೋಟಿ ರೂಪಾಯಿ ವೆಚ್ಚದ್ದಾಗಿದೆ. 26 ವರ್ಷ ವಯಸ್ಸಿನ ಮೆಡೆಲೈನ್ ಬ್ರಾಕ್‌ವೇ ಅವರ ವಿವಾಹವು 'ಶತಮಾನದ ಮದುವೆ' ಎಂಬ ಬಿರುದನ್ನು ಗಳಿಸಿದೆ.
Wedding Season: ಭರ್ಜರಿ ವಿವಾಹ ಸೀಸನ್, 13 ಲಕ್ಷ ಕೋಟಿ ರೂಪಾಯಿ ವ್ಯಾಪಾರ ನಿರೀಕ್ಷೆ!
ಕಾರು ಡೀಲರ್‌ಶಿಪ್ ವ್ಯವಹಾರವನ್ನು ಹೊಂದಿರುವ ಕುಟುಂಬದಿಂದ ಬಂದಿರುವ ಮೆಡೆಲೈನ್ ಬ್ರಾಕ್‌ವೇ ಪ್ಯಾರಿಸ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಜಾಕೋಬ್ ಲಾಗ್ರೋನ್ ಅವರೊಂದಿಗೆ ವಿವಾಹವಾಗಿದ್ದಾರೆ. ಈ ಅದ್ಧೂರಿ ವಿವಾಹದ ಬಗ್ಗೆ ತಿಳಿದಿ ಜನರು ಬೆಗರಾಗಿದ್ದಾರೆ. ಈ ವಿವಾಹದ ಸಮಾರಂಭಗಳು ವಾರವಿಡೀ ನಡೆದಿದೆ.
ಮೆಡೆಲೇನ್ ಮತ್ತು ಜಾಕೋಬ್ ಅತೀ ದುಬಾರಿ ಉಡುಪುಗಳನ್ನು ಧರಿಸಿದ್ದರು. ಈ ವಿಶೇಷ ಮದುವೆಯ ಬಟ್ಟೆಯು ಫ್ಯಾಶನ್ ಅನ್ನು ಕೂಡಾ ಹೊಂದಿದೆ. ಎಲ್ಲಾ ಅತಿಥಿಗಳನ್ನು ಖಾಸಗಿ ಜೆಟ್‌ಗಳಲ್ಲಿ ಸ್ಥಳಾಂತರ ಮಾಡಲಾಗಿದೆ.
ವರ್ಸೈಲ್ಸ್‌ನ ಪ್ರತಿಷ್ಠಿತ ಅರಮನೆಯಲ್ಲಿ ಈ ವಿವಾಹವು ನಡೆದಿದೆ. ಯುಎಸ್ ಬ್ಯಾಂಡ್ ಮರೂನ್ ಈ ಸಮಾರಂಭದಲ್ಲಿ ಐದು ಪ್ರದರ್ಶನವನ್ನು ನೀಡಿದೆ. ಅರಮನೆಯಲ್ಲಿ ಹೂವುಗಳಿಂದ ಅಲಂಕರಿಸಲಾಗಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಲಾಗುತ್ತಿದೆ. ಈ ಅಸಾಧಾರಣ ವಿವಾಹದ ಸುದ್ದಿಯು ಮೊದಲು ಟಿಕ್‌ಟಾಕ್‌ನಲ್ಲಿ ಕಾಣಿಸಿಕೊಂಡಿದೆ. ಅದಾದ ಬಳಿಕ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ ದುಬಾರಿ ವಿವಾಹ
ದೆಹಲಿಯ ಅದ್ದೂರಿ ವಿವಾಹದಲ್ಲಿ ವರನಿಗೆ 33 ಕೋಟಿ ರೂಪಾಯಿಯ ಚಾಪರ್ (ಹೆಲಿಕಾಫ್ಟರ್) ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಅಷ್ಟಕ್ಕೂ ಈ ಅದ್ದೂರಿ ವಿವಾಹ ಉದ್ಯಮಿ ಹಾಗೂ ರಾಜಕಾರಣಿಯಾದ ಕನ್ವರ್ ಸಿಂಗ್ ತನ್ವರ್‌ನ ಪುತ್ರ ಲಲಿತ್ ತನ್ವರ್‌ನದ್ದು. 2011ರಲ್ಲಿ ನಡೆದ ಲಲಿತ್ ತನ್ವರ್ ವಿವಾಹವು ಅತೀ ಅದ್ದೂರಿ ಹಾಗೂ ವಿಜ್ರಂಭನೆಯ ವಿವಾಹವಾಗಿದೆ.
ಆದರೆ ಈವರೆಗೂ ಈ ವಿವಾಹಕ್ಕಾಗಿ ನಿರ್ದಿಷ್ಟವಾಗಿ ಕುಟುಂಬ ಎಷ್ಟು ಖರ್ಚು ಮಾಡಿದೆ ಎಂಬ ಲೆಕ್ಕಾಚಾರವಿಲ್ಲ. ಟೈಮ್ಸ್ ಆಫ್ ಇಂಡಿಯಾ ಈ ವಿವಾಹವು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದಿದೆ ಎಂದು ವರದಿ ಮಾಡಿದರೆ, ಮೇಲ್ ಟುಡೇ ಪ್ರಕಾರ ಇದು 500 ಕೋಟಿ ರೂಪಯಿ ವೆಚ್ಚದ ವಿವಾಹವಾಗಿದೆ!
ನಾವು ಯೋಚನೆ ಮಾಡಲು ಸಾಧ್ಯವಾಗದ್ದಂತಹ ವಿವಾಹ ಇದಾಗಿದ್ದು ವಿವಾಹಕ್ಕೆ ಬಂದವರಿಗೆ ದುಬಾರಿಯಾದ ಉಡುಗೊರೆ, ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇನ್ನು ವರ, ವಧು ಪರಸ್ಪರ ಉಡುಗೊರೆಯನ್ನು ನೀಡಿದ್ದಾರೆ. ವಧುವಿನ ಕುಟುಂಬವು ವರನಿಗೆ ಬೆಲ್ 429 ಹೆಲಿಕಾಫ್ಟರ್ ಅನ್ನು ಗಿಫ್ಟ್ ಆಗಿ ನೀಡಿದೆ. ಈ 5 ಆಸನಗಳನ್ನು ಹೊಂದಿರುವ ಚಾಪರ್‌ನ ಮೌಲ್ಯವು 2011ರಲ್ಲಿ 33 ಕೋಟಿ ರೂಪಾಯಿ ಆಗಿತ್ತು.


Click it and Unblock the Notifications