ಯುವ ನಿಧಿಗಾಗಿ ನೋಂದಣಿ ಪ್ರಾರಂಭವಾದ ಸುಮಾರು 10 ದಿನಗಳ ನಂತರ, ಯೋಜನೆಗೆ ಇಲ್ಲಿಯವರೆಗೆ ಪದವೀಧರರಿಂದ ಒಟ್ಟು 32,184 ಅರ್ಜಿಗಳನ್ನು ಪಡೆಯಲಾಗಿದೆ. ಆರಂಭದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಇದ್ದರೂ ಕೂಡಾ 24 ಗಂಟೆಗಳಲ್ಲಿ 2000 ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಯುವ ನಿಧಿಯು ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಐದನೇ ಭರವಸೆ ಯೋಜನೆಯಾಗಿದ್ದು, ಇದರ ಅಡಿಯಲ್ಲಿ 2023 ರಲ್ಲಿ ಪದವಿ ಮತ್ತು ಡಿಪ್ಲೋಮಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಅವಧಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಈ ಪಟ್ಟಿಯಲ್ಲಿ ಯಾವ ನಗರ ಟಾಪ್‌ನಲ್ಲಿದೆ?, ನೀವು ಅರ್ಜಿ ಸಲ್ಲಿಸದಿದ್ದರೆ, ಅರ್ಹತೆ ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ...

ಅರ್ಜಿ ಸಲ್ಲಿಸಲು ಅರ್ಹತೆ ಏನು?
* ಅರ್ಜಿದಾರರು ಕರ್ನಾಟಕದ ನಿವಾಸಿಗಳು ಆಗಿರಬೇಕು.
* ಡಿಪ್ಲೋಮಾ ಅಥವಾ ಪದವಿ ಪಡೆದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಕೊಳ್ಳಬೇಕು.
* ಇಂತಹ ಇತರೆ ಯೋಜನೆಗಳ ಪ್ರಯೋಜನ ಪಡೆಯುತ್ತಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಸಲು ಅರ್ಹತೆ ಇರುವವರ ಲೆಕ್ಕಾಚಾರವನ್ನು ನಾವು ಪರಿಶೀಲನೆ ಮಾಡಿದಾಗ ಕೇವಲ ಶೇಕಡ 6 ರಷ್ಟು ಅರ್ಹ ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. 32,000 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಹೆಚ್ಚಾಗಿ ಬೆಳಗಾವಿ ಮತ್ತು ಬೆಂಗಳೂರಿಗರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಎಲ್ಲಿ, ಎಷ್ಟು ಅರ್ಜಿ ಸಲ್ಲಿಕೆ?
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, ಬೆಳಗಾವಿ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಬೆಳಗಾವಿಯಲ್ಲಿ 3,900 ಅರ್ಜಿಗಳು ಸಲ್ಲಿಕೆಯಾಗಿದ್ದು, ಬೆಂಗಳೂರು ನಗರದಲ್ಲಿ 2,853 ಅರ್ಜಿಗಳು ಸಲ್ಲಿಕೆಯಾಗಿವೆ.
ಮೂರನೇ ಅತಿ ಹೆಚ್ಚು ಅರ್ಜಿ ಬಾಗಲಕೋಟೆ (1,943), ನಂತರದ ಸ್ಥಾನದಲ್ಲಿ ವಿಜಯಪುರ (1,741) ಮತ್ತು ರಾಯಚೂರು (1,714) ಆಗಿದೆ. ಅದಾದ ನಂತರ ಸ್ಥಾನದಲ್ಲಿ ಉಡುಪಿ (236), ಕೊಡಗು (120), ಚಾಮರಾಜನಗರ (237), ಮತ್ತು ರಾಮನಗರ (329) ಜಿಲ್ಲೆಗಳು ಸೇರಿದೆ. ನೀವು ಅರ್ಹರಾಗಿದ್ದು, ಅರ್ಜಿ ಸಲ್ಲಿಸದಿದ್ದರೆ ಹೀಗೆ ಅರ್ಜಿ ಸಲ್ಲಿಸಿ.
ಯುವನಿಧಿಗೆ ನೋಂದಣಿ ಹೀಗೆ ಮಾಡಿಕೊಳ್ಳಿ
ಹಂತ 1: ಅಧಿಕೃತ ವೆಬ್‌ಸೈಟ್ ಸೇವಾ ಸಿಂಧು ಪೋರ್ಟಲ್ ಮೂಲಕ ನೀವು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಹಂತ 2: ಹೋಮ್‌ಪೇಜ್‌ನಲ್ಲಿ (https://sevasindhu.karnataka.gov.in/Sevasindhu/English) ವೆಬ್‌ಸೈಟ್ ಕಾಣಿಸಿಕೊಳ್ಳಲಿದೆ.
ಹಂತ 3: ಹೋಮ್‌ಪೇಜ್‌ನಲ್ಲಿ new user register here ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.
ಹಂತ 4: ಸ್ಕ್ರೀನ್‌ನಲ್ಲಿ ಹೊಸ ಪೇಜ್ ಕಾಣಿಸಿಕೊಳ್ಳಲಿದೆ.
ಹಂತ 5: ನೀಡಿದ ಬಾಕ್ಸ್‌ನಲ್ಲಿ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಿ
ಹಂತ 6: ಕ್ಯಾಪ್ಚಾ ಕೋಡ್ ನಮೂದಿಸಿ, next ಮೇಲೆ ಕ್ಲಿಕ್ ಮಾಡಿ
ಹಂತ 7: ಅರ್ಜಿ ಫಾರ್ಮ್ ಜೊತೆ ಹೊಸ ಪೇಜ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದೆ.
ಹಂತ 8: ಹೆಸರು, ವಿಳಾಸ, ವ್ಯಕ್ತಿಯ ವಿವರ ಮೊದಲಾದ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿ.
ಹಂತ 9: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿಕೊಳ್ಳಿ.
ಹಂತ 10: ನೀಡಲಾದ ಮಾಹಿತಿಯನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ.
ಹಂತ 11: ಕೊನೆಯಲ್ಲಿ ರಿಜಿಸ್ಟಾರ್ ಆಯ್ಕೆಯನ್ನು ಕ್ಲಿಕ್ ಮಾಡಿ, ಪೋರ್ಟಲ್‌ನಲ್ಲಿ ಯಶಸ್ವಿಯಾಗಿ ರಿಜಿಸ್ಟಾರ್ ಆಗಲಿದೆ.
ಹಂತ 12: ಈಗ ನೀವು ಸುಲಭವಾಗಿ ಲಾಗಿನ್ ಆಗಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.


Click it and Unblock the Notifications