ನೀವು Google Pay ಬಳಕೆದಾರರೇ? ಹಾಗಿದ್ರೆ ನಿಮಗೆ ಗುಡ್‌ನ್ಯೂಸ್ ಇಲ್ಲಿದೆ. ಫಿನ್‌ಟೆಕ್ ಕಂಪನಿ ಸೇತು ಜೊತೆಗೂಡಿ ಗೂಗಲ್ ತನ್ನ ಬಳಕೆದಾರರಿಗೆ ಗೂಗಲ್ ಪೇ ಮೂಲಕ ನಿಶ್ಚಿತ ಠೇವಣಿ (ಎಫ್‌ಡಿ) ತೆರೆಯಲು ಅವಕಾಶ ನೀಡಿದೆ.
ಮಿಂಟ್ ವರದಿಯ ಪ್ರಕಾರ, ಗೂಗಲ್ ಪೇ ತನ್ನ ವೇದಿಕೆಯಲ್ಲಿ ಫಿನ್‌ಟೆಕ್ ಸ್ಟಾರ್ಟ್ಅಪ್ ಸೇತು ಸಹಾಯದಿಂದ ನಿಶ್ಚಿತ ಠೇವಣಿಗಳನ್ನು (ಎಫ್‌ಡಿ) ನೀಡುವ ಕೆಲಸ ಮಾಡುತ್ತಿದೆ.
ಸೇತು ಒಂದು ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಆಗಿದ್ದು, ಮೂಲಸೌಕರ್ಯ ಸ್ಟಾರ್ಟ್ ಅಪ್ ಆಗಿದೆ. ಇದು ಬಿಲ್ ಪಾವತಿಗಳು, ಉಳಿತಾಯ, ಕ್ರೆಡಿಟ್ ಮತ್ತು ಪಾವತಿಗಳಾದ್ಯಂತ API ಗಳನ್ನು ನೀಡುತ್ತದೆ.

ಬಳಕೆದಾರರು ಒಂದು ವೇಳೆ ಬ್ಯಾಂಕಿನಲ್ಲಿ ಖಾತೆ ಹೊಂದಿಲ್ಲದಿದ್ದರೂ Google Pay ಅಥವಾ GPay ಮೂಲಕ FD ಗಳನ್ನು ತೆರೆಯಲು ಸಾಧ್ಯವಾಗುತ್ತದೆ.
ಆರಂಭದಲ್ಲಿ, ಡಿಜಿಟಲ್ ಪಾವತಿ ವೇದಿಕೆ ಗೂಗಲ್ ಪೇ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಂತಹ ಸಣ್ಣ ಹಣಕಾಸು ಬ್ಯಾಂಕುಗಳ ಎಫ್‌ಡಿಗಳನ್ನು ನೀಡುತ್ತದೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ಇದರಲ್ಲಿದೆ.
ಬಳಕೆದಾರರು ಎಫ್‌ಡಿ ತೆರೆಯಲು ಆಧಾರ್ ಆಧಾರಿತ ಕೆವೈಸಿ ಕಡ್ಡಾಯವಾಗಲಿದೆ ಎಂದು ವರದಿ ಹೇಳಿದೆ. ಎಫ್‌ಡಿಗಳನ್ನು ಒಂದು ವರ್ಷದ ಅವಧಿಗೆ ನೀಡಲಾಗುತ್ತದೆ, ಗರಿಷ್ಠ ಬಡ್ಡಿದರ ಶೇಕಡಾ 6.35ರಷ್ಟಿರಲಿದೆ.
ಯಾವೆಲ್ಲಾ ಅವಧಿಯ ಎಫ್‌ಡಿಗಳಿವೆ?
API ಯ ಬೀಟಾ ಆವೃತ್ತಿಯು 7 ರಿಂದ 29 ದಿನಗಳು, 30 ರಿಂದ 45 ದಿನಗಳು, 46 ರಿಂದ 90 ದಿನಗಳು, 91 ರಿಂದ 180 ದಿನಗಳು, 181 ರಿಂದ 364 ದಿನಗಳು ಮತ್ತು 365 ದಿನಗಳು ಸೇರಿದಂತೆ ವಿವಿಧ ಅವಧಿಗಳ FD ಗಳನ್ನು ನೀಡುತ್ತದೆ. ಬಡ್ಡಿದರಗಳು ಕಡಿಮೆ ಎಫ್‌ಡಿಗೆ ಶೇಕಡಾ 3.5ರಿಂದ ಒಂದು ವರ್ಷದ ಎಫ್‌ಡಿಗೆ ಶೇಕಡಾ 6.35 ಪ್ರತಿಶತದವರೆಗೆ ಇರುತ್ತದೆ.


Click it and Unblock the Notifications