ಡಿ.10ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?

ಕರ್ನಾಟಕದಲ್ಲಿ ಶನಿವಾರ (ಡಿಸೆಂಬರ್ 10) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇಂದು (ಡಿಸೆಂಬರ್ 10) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಏರಿದರೆ, ಕೆಲವೇ ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದೆ.

ಸಾಮಾನ್ಯವಾಗಿ ಮುಂಜಾನೆ ಮೀನಿನ ದರ ಹೆಚ್ಚಿರುತ್ತದೆ, ಸಂಜೆ ವೇಳೆಗೆ ದರ ಇಳಿಯುತ್ತದೆ. ಪ್ರಸ್ತುತ ಬಂಗುಡೆ, ಬೂತಾಯಿ ಮೀನು ಅಧಿಕವಾಗಿ ಲಭ್ಯವಾಗುತ್ತಿದೆ. ಈ ಹಿಂದೆ ಬಂಗುಡೆ ಮೀನು ಅತ್ಯಧಿಕ ಲಭ್ಯವಾಗುತ್ತಿತ್ತು. ಕೆಲವು ದಿನಗಳ ಹಿಂದೆ ಲಭ್ಯತೆ ಕಡಿಮೆಯಾಗಿತ್ತು. ಆದರೂ ಹೆಚ್ಚಾಗೇ ಬಂಗುಡೆ ಮೀನು ಲಭಿಸುತ್ತಿದೆ. ಅದಕ್ಕೂ ಅಧಿಕವಾಗಿ ಬೂತಾಯಿ ಮೀನು ಮೀನುಗಾರರ ಬಲೆಗೆ ಬೀಳುತ್ತಿದೆ. ಕೊಡ್ಡಾಯಿ, ಬೊಲೆಂಜಿರ್‌ ಮೀನುಗಳು ಕೊಂಚ ಕಡಿಮೆ ಲಭ್ಯವಾಗುತ್ತಿದೆ ಎಂದು ಮಂಗಳೂರಿನ ಬಂದರು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಣೆ ಮಾಡುವ ರಾಮ್‌ದಾಸ್ ಅಮೀನ್ ಉಳ್ಳಾಲ ತಿಳಿಸಿದ್ದಾರೆ.

ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿದೆ. ಈರುಳ್ಳಿ, ನುಗ್ಗೆ ಮೊದಲಾದವುಗಳ ಬೆಲೆ ಇಳಿಕೆಯಾಗಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಕೊಂಚ ನಿಯಂತ್ರಣಕ್ಕೆ ಬಂದಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 32-36
ಈರುಳ್ಳಿ ಸಣ್ಣ 89-98
ಟೊಮೆಟೋ 20-22
ಮೆಣಸಿನಕಾಯಿ 38-42
ಬೀಟ್‌ರೂಟ್ 39-42
ಆಲೂಗಡ್ಡೆ 38-42
ಬಾಳೆ ಕಾಯಿ 10-11
ಹರಿವೆ ಸೊಪ್ಪು 12-13
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 28-30
ಜೋಳ (baby corn) 79-88
ಬಾಳೆ ಹೂವು 21-23
ದೊಡ್ಡ ಮೆಣಸಿನಕಾಯಿ 47-52
ಹಾಗಲಕಾಯಿ 33-37
ಸೋರೆಕಾಯಿ 29-32
ಅವರೆಕಾಳು 89-98
ಚಪ್ಪರೆಯ ಅವರೆಕಾಳು 43-47
ಎಲೆಕೋಸು 35-38
ಕ್ಯಾರೆಟ್ 45-50
ಹೂಕೋಸು 30-33
ಗೋರಿಕಾಯಿ 47-52
ತೆಂಗಿನ ಕಾಯಿ 38-42
ಕೆಸುವಿನ ಎಲೆ 15-17
ಕೆಸವು 25-28
ಕೊತ್ತಂಬರಿ ಸೊಪ್ಪು 14-15
ಜೋಳ 29-32
ಮುಳ್ಳು ಸೌತೆ 25-28
ಕರಿಬೇವು 35-38
ನುಗ್ಗೆ ಕಾಯಿ 69-76
ಬದನೆ 22-24
ಸುವರ್ಣ ಗೆಡ್ಡೆ 33-37
ಬೆಳ್ಳುಳ್ಳಿ 49-55
ಶುಂಠಿ 43-47
ಬಟಾಣಿ 89-98
ತೊಂಡೆಕಾಯಿ 28-30
ನಿಂಬೆ ಹಣ್ಣು 61-67
ಮಾವಿನ ಕಾಯಿ 115-127
ಬೆಂಡೆಕಾಯಿ 31-34
ಕುಂಬಳಕಾಯಿ 35-38
ಮೂಲಂಗಿ 29-32
ಹೀರೆಕಾಯಿ 30-33
ಪಡುವಲಕಾಯಿ 31-34
ಬಸಳೆ 16-18

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಡಿಸೆಂಬರ್ 10 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಡಿಸೆಂಬರ್ 10 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 550, 500 ರೂ/ಕೆಜಿ
ಬೂತಾಯಿ ( Sardine) ಮೀನು 60, 50 ರೂ/ಕೆಜಿ
ಬೊಂಡಾಸ್‌ (Squid) 250 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಕಾಂಡಾಯಿ ಮೀನು 150 ರೂ/ಕೆಜಿ
ಮುರು ಮೀನು (Reef cod) 90 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 60 ರೂ/ಕೆಜಿ
ನಂಗ್‌‌ ಮೀನು (Solefish) big 200, small 160 ರೂ/ಕೆಜಿ
ಏಡಿ (Crab) 330 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕೊಡ್ಡಾಯಿ (Croaker Fish) 350 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಮೊಡವು culture (Sea bass) 550, 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500, 450 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ
ಏರಿ ಮೀನು (emperor fish) 500, 450 ರೂ/ಕೆಜಿ
ಕಲ್ಲೂರು ಮೀನು ( Yellow Croaker) 120, 110 ರೂ/ಕೆಜಿ
ಮಡಲ್ ಮೀನು 160, 150 ರೂ/ಕೆಜಿ
ಬ್ಯಾಟ್ ಮೀನು 150, 140 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಬಂಗುಡೆ (Mackerel) ಮೀನು persian 90 ರೂ/ಕೆಜಿ
ಬಂಗುಡೆ (Mackerel) ಮೀನು persian 70 ರೂ/ಕೆಜಿ
ಬಂಗುಡೆ (Mackerel) ಮೀನು persian 60 ರೂ/ಕೆಜಿ
ಮಾಂಜಿ (black Pomfret) 500, 450 ರೂ/ಕೆಜಿ
ಮಾಂಜಿ (silver Pomfret) big 900 ರೂ/ಕೆಜಿ
ಮಾಂಜಿ (silver Pomfret) medium 800 ರೂ/ಕೆಜಿ
ಮಾಂಜಿ (silver Pomfret) small 700 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) padiyappa 130 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 70 ರೂ/ಕೆಜಿ
ಸಿಗಡಿ ಮೀನು (Prawns) mande 450 ರೂ/ಕೆಜಿ
ಸಿಗಡಿ ಮೀನು (Prawns) culture 450 ರೂ/ಕೆಜಿ
ಸಿಗಡಿ ಮೀನು (Prawns) tiger 700 ರೂ/ಕೆಜಿ
ಸಿಗಡಿ ಮೀನು (Prawns) zibra 500 ರೂ/ಕೆಜಿ
ರಿಬ್ಬಾನ್‌ ಮೀನು big 130 ರೂ/ಕೆಜಿ
ರಿಬ್ಬಾನ್‌ ಮೀನು medium 110 ರೂ/ಕೆಜಿ
ರಿಬ್ಬಾನ್‌ ಮೀನು small 100 ರೂ/ಕೆಜಿ
ಕಾನೆ (Ladyfish) large 700 ರೂ/ಕೆಜಿ
ಕಾನೆ (Ladyfish) big 650 ರೂ/ಕೆಜಿ
ಕಾನೆ (Ladyfish) medium 600 ರೂ/ಕೆಜಿ
ಕಾನೆ (Ladyfish) small 550 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) 160 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) 90 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) 70 ರೂ/ಕೆಜಿ
ತೊರಕೆ (Stingray) big 150 ರೂ/ಕೆಜಿ
ತೊರಕೆ (Stingray) medium 100 ರೂ/ಕೆಜಿ
ತೊರಕೆ (Stingray) small 90 ರೂ/ಕೆಜಿ
ತೊರಕೆ (Stingray) small 80 ರೂ/ಕೆಜಿ
ಕೇದರ್ ಮೀನು (Tuna) big 80 ರೂ/ಕೆಜಿ
ಕೇದರ್ ಮೀನು (Tuna) medium 70 ರೂ/ಕೆಜಿ
ಕೇದರ್ ಮೀನು (Tuna) small 60 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಸಾಮಾನ್ಯವಾಗಿ ಯಾವ ಮೀನು ಅಧಿಕ ಲಭ್ಯವಾಗುತ್ತದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಿಂದ ಮೀನುಗಾರರ ಬಲೆಗೆ ಅಧಿಕವಾಗಿ ಬಂಗುಡೆ ಮೀನು ಬೀಳುತ್ತಿತ್ತು. ಆದ್ದರಿಂದಾಗಿ ಬಂಗುಡೆ ಮೀನಿನ ದರ ಭಾರೀ ಇಳಿಕೆಯಾಗಿತ್ತು. ಆದರೆ ಬಳಿಕ ಅದುವೇ ಮೀನು ಲಭ್ಯವಾಗುತ್ತಿದ್ದರು ಪ್ರಮಾಣ ಕೊಂಚ ಕಡಿಮೆಯಾಗಿತ್ತು. ಆದರೂ ಲಭ್ಯವಾಗುತ್ತಿದೆ. ಈಗ ಅಧಿಕವಾಗಿ ಬೂತಾಯಿ ಮೀನು ಲಭಿಸುತ್ತಿದೆ. ಹಾಗಾಗಿ ಬೂತಾಯಿ ದರ ಇಳಿದಿದೆ. ಕಡಿಮೆಯಾಗಿ ಲಭ್ಯವಾಗುವ ಕೊಡ್ಡಾಯಿ, ಬೊಲೆಂಜಿರ್ ಮೀನುಗಳ ದರ ಏರಿಕೆಯಾಗಿದೆ. ಹೆಚ್ಚಾಗಿ ಮುಂಜಾನೆ ಒಂದು ದರವಿದ್ದರೆ ಸಂಜೆ ಒಂದು ದರ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+