ಕರ್ನಾಟಕದಲ್ಲಿ ಗುರುವಾರ (ಡಿಸೆಂಬರ್ 15) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇಂದು (ಡಿಸೆಂಬರ್ 15) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಏರಿದರೆ, ಕೆಲವೇ ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದೆ.
ಸಾಮಾನ್ಯವಾಗಿ ಮುಂಜಾನೆ ಮೀನಿನ ದರ ಹೆಚ್ಚಿರುತ್ತದೆ, ಸಂಜೆ ವೇಳೆಗೆ ದರ ಇಳಿಯುತ್ತದೆ. ಪ್ರಸ್ತುತ ಡಿಸ್ಕೋ, ಬಂಗುಡೆ, ಬೂತಾಯಿ ಮೀನು ಅಧಿಕವಾಗಿ ಲಭ್ಯವಾಗುತ್ತಿದೆ. ಈ ಹಿಂದೆ ಬಂಗುಡೆ ಮೀನು ಅತ್ಯಧಿಕ ಲಭ್ಯವಾಗುತ್ತಿತ್ತು. ಆದರೆ ಈಗ ಕೊಂಚ ಕಡಿಮೆಯಾಗಿದೆ. ಅದಕ್ಕೂ ಅಧಿಕವಾಗಿ ಡಿಸ್ಕೋ ಮೀನು ಮೀನುಗಾರರ ಬಲೆಗೆ ಬೀಳುತ್ತಿದೆ. ಕೊಡ್ಡಾಯಿ, ಬೊಲೆಂಜಿರ್ ಮೀನುಗಳು ಕೊಂಚ ಕಡಿಮೆ ಲಭ್ಯವಾಗುತ್ತಿದೆ ಎಂದು ಮಂಗಳೂರಿನ ಬಂದರು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಣೆ ಮಾಡುವ ರಾಮ್‌ದಾಸ್ ಅಮೀನ್ ಉಳ್ಳಾಲ ತಿಳಿಸಿದ್ದಾರೆ.
ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿದೆ. ಈರುಳ್ಳಿ, ನುಗ್ಗೆ ಮೊದಲಾದವುಗಳ ಬೆಲೆ ಇಳಿಕೆಯಾಗಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಕೊಂಚ ನಿಯಂತ್ರಣಕ್ಕೆ ಬಂದಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 29-32
ಈರುಳ್ಳಿ ಸಣ್ಣ 90-99
ಟೊಮೆಟೋ 21-23
ಮೆಣಸಿನಕಾಯಿ 40-44
ಬೀಟ್‌ರೂಟ್ 41-46
ಆಲೂಗಡ್ಡೆ 39-43
ಬಾಳೆ ಕಾಯಿ 9-10
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 32-36
ಜೋಳ (baby corn) 86-95
ಬಾಳೆ ಹೂವು 15-17
ದೊಡ್ಡ ಮೆಣಸಿನಕಾಯಿ 45-50
ಹಾಗಲಕಾಯಿ 30-33
ಸೋರೆಕಾಯಿ 28-30
ಅವರೆಕಾಳು 86-95
ಚಪ್ಪರೆಯ ಅವರೆಕಾಳು 46-51
ಎಲೆಕೋಸು 26-29
ಕ್ಯಾರೆಟ್ 48-53
ಹೂಕೋಸು 30-33
ಗೋರಿಕಾಯಿ 46-51
ತೆಂಗಿನ ಕಾಯಿ 32-36
ಕೆಸುವಿನ ಎಲೆ 18-20
ಕೆಸವು 32-36
ಕೊತ್ತಂಬರಿ ಸೊಪ್ಪು 13-14
ಜೋಳ 31-34
ಮುಳ್ಳು ಸೌತೆ 23-25
ಕರಿಬೇವು 32-36
ನುಗ್ಗೆ ಕಾಯಿ 104-114
ಬದನೆ 25-28
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 51-56
ಶುಂಠಿ 46-51
ಬಟಾಣಿ 86-95
ತೊಂಡೆಕಾಯಿ 32-36
ನಿಂಬೆ ಹಣ್ಣು 70-77
ಮಾವಿನ ಕಾಯಿ 115-127
ಬೆಂಡೆಕಾಯಿ 35-38
ಕುಂಬಳಕಾಯಿ 32-36
ಮೂಲಂಗಿ 29-32
ಹೀರೆಕಾಯಿ 32-36
ಪಡುವಲಕಾಯಿ 32-36
ಬಸಳೆ 12-13
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಡಿಸೆಂಬರ್ 15 (ಕೆಜಿ)
ಮೆಲುಗು ಮೀನು (Butter Fish) 300 ರೂ/ಕೆಜಿ
ಬೂತಾಯಿ ( Sardine) ಮೀನು 60 ರೂ/ಕೆಜಿ
ಬೊಂಡಾಸ್ (Squid) kolu 280, kappe 290 ರೂ/ಕೆಜಿ
ಡಿಸ್ಕೋ ಮೀನು (Disco) 90 ರೂ/ಕೆಜಿ
ತಾಟೆ ಮೀನು (Shark) 350 ರೂ/ಕೆಜಿ
ನೆಯ್ ಮೀನು 350 ರೂ/ಕೆಜಿ
ಕಾಂಡಾಯಿ ಮೀನು 250 ರೂ/ಕೆಜಿ
ಮುರು ಮೀನು (Reef cod) 180, 90 ರೂ/ಕೆಜಿ
ಕಡ್ವಾಯಿ ಮೀನು 300 ರೂ/ಕೆಜಿ
ಅರ್ನೆ ಮೀನು (Lizard fish) 70 ರೂ/ಕೆಜಿ
ರಿಬ್ಬಾನ್ ಮೀನು 110 ರೂ/ಕೆಜಿ
ನಂಗ್ ಮೀನು (Solefish) big 250, small 200 ರೂ/ಕೆಜಿ
ಏಡಿ (Crab) big 350, small 150 ರೂ/ಕೆಜಿ
ತೇಡೆ ಮೀನು (Catfish) 150 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕೊಡ್ಡಾಯಿ (Croaker Fish) 350 ರೂ/ಕೆಜಿ
ಬೊಲೆಂಜಿರ್ (silverfish) 450 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) small 250 ರೂ/ಕೆಜಿ
ತೊರಕೆ (Stingray) 150, 100 ರೂ/ಕೆಜಿ
ಮೊಡವು (Sea bass) 550, 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ
ಏರಿ ಮೀನು (emperor fish) 500 ರೂ/ಕೆಜಿ
ಕೇದರ್ ಮೀನು (Tuna) 100 ರೂ/ಕೆಜಿ
ಕಲ್ಲೂರು ಮೀನು ( Yellow Croaker) 120 ರೂ/ಕೆಜಿ
ಮಡಲ್ ಮೀನು 160 ರೂ/ಕೆಜಿ
ಬ್ಯಾಟ್ ಮೀನು 150 ರೂ/ಕೆಜಿ
ಇತರೆ ಮೀನುಗಳ ದರ
ಬಂಗುಡೆ (Mackerel) ಮೀನು big 110 ರೂ/ಕೆಜಿ
ಬಂಗುಡೆ (Mackerel) ಮೀನು medium 100 ರೂ/ಕೆಜಿ
ಬಂಗುಡೆ (Mackerel) ಮೀನು small 90 ರೂ/ಕೆಜಿ
ಬಂಗುಡೆ (Mackerel) ಮೀನು small 60 ರೂ/ಕೆಜಿ
ಮಾಂಜಿ (black Pomfret) big 500 ರೂ/ಕೆಜಿ
ಮಾಂಜಿ (black Pomfret) medium 450 ರೂ/ಕೆಜಿ
ಮಾಂಜಿ (black Pomfret) small 400 ರೂ/ಕೆಜಿ
ಮಾಂಜಿ (silver Pomfret) large 1200 ರೂ/ಕೆಜಿ
ಮಾಂಜಿ (silver Pomfret) big 1100 ರೂ/ಕೆಜಿ
ಮಾಂಜಿ (silver Pomfret) medium 1000 ರೂ/ಕೆಜಿ
ಮಾಂಜಿ (silver Pomfret) small 900 ರೂ/ಕೆಜಿ
ಮಾಂಜಿ (silver Pomfret) small 800 ರೂ/ಕೆಜಿ
ಸಿಗಡಿ ಮೀನು (Prawns) tiger 700 ರೂ/ಕೆಜಿ
ಸಿಗಡಿ ಮೀನು (Prawns) mande 450 ರೂ/ಕೆಜಿ
ಸಿಗಡಿ ಮೀನು (Prawns) thembel 200, 100 ರೂ/ಕೆಜಿ
ಕಾನೆ (Ladyfish) large 900 ರೂ/ಕೆಜಿ
ಕಾನೆ (Ladyfish) big 800 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 650, 600 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 140, 70 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) big 180, small 90 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ
ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ
ಸಾಮಾನ್ಯವಾಗಿ ಯಾವ ಮೀನು ಅಧಿಕ ಲಭ್ಯವಾಗುತ್ತದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಿಂದ ಮೀನುಗಾರರ ಬಲೆಗೆ ಅಧಿಕವಾಗಿ ಬಂಗುಡೆ ಮೀನು ಬೀಳುತ್ತಿತ್ತು. ಆದ್ದರಿಂದಾಗಿ ಬಂಗುಡೆ ಮೀನಿನ ದರ ಭಾರೀ ಇಳಿಕೆಯಾಗಿತ್ತು. ಆದರೆ ಈಗ ಲಭ್ಯತೆ ಕೊಂಚ ಕಡಿಮೆ ಆದ್ದರಿಂದಾಗಿ ದರ ಏರಿಕೆಯಾಗಿದೆ. ಈಗ ಅಧಿಕವಾಗಿ ಡಿಸ್ಕೋ ಮೀನು ಲಭಿಸುತ್ತಿದೆ. ಹಾಗಾಗಿ ಡಿಸ್ಕೋ ಮೀನು ದರ ಇಳಿದಿದೆ. ಕಡಿಮೆಯಾಗಿ ಲಭ್ಯವಾಗುವ ಕೊಡ್ಡಾಯಿ, ಬೊಲೆಂಜಿರ್ ಮೀನುಗಳ ದರ ಏರಿಕೆಯಾಗಿದೆ. ಹೆಚ್ಚಾಗಿ ಮುಂಜಾನೆ ಒಂದು ದರವಿದ್ದರೆ ಸಂಜೆ ಒಂದು ದರ ಇರುತ್ತದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications