ನ.22ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

ಕರ್ನಾಟಕದಲ್ಲಿ ಮಂಗಳವಾರ (ನವೆಂಬರ್ 22) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇಂದು (ನವೆಂಬರ್ 22) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಏರಿದರೆ, ಕೆಲವೇ ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದೆ.

ಸಾಮಾನ್ಯವಾಗಿ ಮುಂಜಾನೆ ಮೀನಿನ ದರ ಹೆಚ್ಚಿರುತ್ತದೆ, ಸಂಜೆ ವೇಳೆಗೆ ದರ ಇಳಿಯುತ್ತದೆ. ಪ್ರಸ್ತುತ ಬಂಗುಡೆ, ಬೂತಾಯಿ ಮೀನು ಅಧಿಕವಾಗಿ ಲಭ್ಯವಾಗುತ್ತಿದೆ. ಈ ಹಿಂದೆ ಬಂಗುಡೆ ಮೀನು ಅತ್ಯಧಿಕ ಲಭ್ಯವಾಗುತ್ತಿತ್ತು. ಕೆಲವು ದಿನಗಳ ಹಿಂದೆ ಲಭ್ಯತೆ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಹೆಚ್ಚಾಗಿ ಬಂಗುಡೆ ಮೀನು ಲಭ್ಯವಾಗುತ್ತಿದೆ. ಆದರೂ ಅದೇ ಮೀನುಗಳು ಲಭಿಸುತ್ತಿದೆ. ಸಣ್ಣ ನಂಗ್ (Solefish) ಸ್ವಲ್ಪ ಲಭ್ಯವಾಗಿದೆ. ಕಳೆದ ತಿಂಗಳೇ ಲಭ್ಯವಾಗಬೇಕಿತ್ತು ಎಂದು ಮಂಗಳೂರಿನ ಬಂದರು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಣೆ ಮಾಡುವ ರಾಮ್‌ದಾಸ್ ಅಮೀನ್ ಉಳ್ಳಾಲ ತಿಳಿಸಿದ್ದಾರೆ.

ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿದೆ. ಈರುಳ್ಳಿ, ನುಗ್ಗೆ ಮೊದಲಾದವುಗಳ ಬೆಲೆ ಹೆಚ್ಚಾಗಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇನ್ನಷ್ಟು ಅಧಿಕವಾಗುವ ನಿರೀಕ್ಷೆಯಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)

ಅಕ್ಕಿ Fine 5000-5400
ಮಧ್ಯಮ 4800-5000
ಜೋಳ 2600-3000
ಬೆಲ್ಲದ ಕ್ಯೂಬ್ 4100-4400
ಬೆಲ್ಲದ ಉಂಡೆ 4500-4800
ಕೊತ್ತಂಬರಿ ಬೀಜ 14000-19500
ಮೆಣಸಿನಕಾಯಿ 55000-65000
ಆಲೂಗಡ್ಡೆ ಮಧ್ಯಮ 1800-2200
ಈರುಳ್ಳಿ ದೊಡ್ಡ 1800-2600
ಈರುಳ್ಳಿ ಮಧ್ಯಮ 1000-1800
ಈರುಳ್ಳಿ ಸಣ್ಣ 500-1000
ಹುಣಸೆಹಣ್ಣು 8500-12000
ಬೆಳ್ಳುಳ್ಳಿ 5500-6500
ಹುರಳಿಕಾಯಿ- 7500-8000

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 2800-4300
ಅರಿಶಿನ 9500-13000
ತೊಗರಿಬೇಳೆ: 9500-13000
ಹೆಸರು ಬೇಳೆ: 9000-10000
ಉದ್ದಿನ ಬೇಳೆ: 8800-13000
ಕಡಲೆ ಬೇಳೆ: 6000-6500
ಸಾಸಿವೆ: 6500-8500
ಎಳ್ಳು: 14000-14500
ಸಕ್ಕರೆ: 3700-3800
ಕಡಲೆ ಬೀಜ: 10000-12000
ಕೊಬ್ಬರಿ: 15500-17500
ಕಡಲೆಕಾಯಿ ಎಣ್ಣೆ (10kg): 1560-2000
ತೆಂಗಿನ ಎಣ್ಣೆ (10kg): 1500-2100
ಎಳ್ಳೆಣ್ಣೆ 1900-3600
ತುಪ್ಪ (5kg): 2850-3100

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 46-51
ಈರುಳ್ಳಿ ಸಣ್ಣ 112- 123
ಟೊಮೆಟೋ 22-24
ಮೆಣಸಿನಕಾಯಿ 43-47
ಬೀಟ್‌ರೂಟ್ 41-46
ಆಲೂಗಡ್ಡೆ 38-42
ಬಾಳೆ ಕಾಯಿ 10-11
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 25-28
ಜೋಳ (baby corn) 81-89
ಬಾಳೆ ಹೂವು 21-23
ದೊಡ್ಡ ಮೆಣಸಿನಕಾಯಿ 46-51
ಹಾಗಲಕಾಯಿ 36-39
ಸೋರೆಕಾಯಿ 26-29
ಅವರೆಕಾಳು 90-99
ಚಪ್ಪರೆಯ ಅವರೆಕಾಳು 48-53
ಎಲೆಕೋಸು 26-29
ಕ್ಯಾರೆಟ್ 48-53
ಹೂಕೋಸು 29-32
ಗೋರಿಕಾಯಿ 47-52
ತೆಂಗಿನ ಕಾಯಿ 38-42
ಕೆಸುವಿನ ಎಲೆ 18-20
ಕೆಸವು 26-29
ಕೊತ್ತಂಬರಿ ಸೊಪ್ಪು 9-10
ಜೋಳ 26-29
ಮುಳ್ಳು ಸೌತೆ 23-25
ಕರಿಬೇವು 31-34
ನುಗ್ಗೆ ಕಾಯಿ 81-89
ಬದನೆ 25-28
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 52-57
ಶುಂಠಿ 51-56
ಬಟಾಣಿ 92-102
ತೊಂಡೆಕಾಯಿ 26-29
ನಿಂಬೆ ಹಣ್ಣು 58-64
ಮಾವಿನ ಕಾಯಿ 94-104
ಬೆಂಡೆಕಾಯಿ 31-34
ಕುಂಬಳಕಾಯಿ 32-36
ಮೂಲಂಗಿ 25-28
ಹೀರೆಕಾಯಿ 30-33
ಪಡುವಲಕಾಯಿ 33-37
ಬಸಳೆ 17-19

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 22 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 22 (ಕೆಜಿ)

ಡಿಸ್ಕೋ ಮೀನು (Disco) 70, 60 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಮೆಲುಗು ಮೀನು (Butter Fish) 350 ರೂ/ಕೆಜಿ
ಬೂತಾಯಿ ( Sardine) ಮೀನು 50 ರೂ/ಕೆಜಿ
ಬೊಂಡಾಸ್‌ (Squid) kolu 400, kappe 350 ರೂ/ಕೆಜಿ
ಕಾಂಡಾಯಿ ಮೀನು 130 ರೂ/ಕೆಜಿ
ಮುರು ಮೀನು (Reef cod) 70, 60 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 60 ರೂ/ಕೆಜಿ
ಏಡಿ (Crab) 300 ರೂ/ಕೆಜಿ
ಸಿಗಡಿ ಮೀನು (Prawns) white 550 ರೂ/ಕೆಜಿ
ಸಿಗಡಿ ಮೀನು (Prawns) culture 450 ರೂ/ಕೆಜಿ
ತೇಡೆ ಮೀನು (Catfish) 200 ರೂ/ಕೆಜಿ
ಸ್ವಾಡಿ ಮೀನು (Ilish) 50 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 550 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್‌ (silverfish) 400 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) big 160, small 70 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ಮೊಡವು culture (Sea bass) 550 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500, 450 ರೂ/ಕೆಜಿ
ಬಲ್ಚಟ್ ಮೀನು (Flathead) 200, 250 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 500, 450 ರೂ/ಕೆಜಿ
ಕೇದರ್ ಮೀನು (Tuna) 80, 70 ರೂ/ಕೆಜಿ
ಕಲ್ಲೂರು ಮೀನು ( Yellow Croaker) 100, 90 ರೂ/ಕೆಜಿ
ಮಡಲ್ ಮೀನು 170 ರೂ/ಕೆಜಿ
ಬ್ಯಾಟ್ ಮೀನು 150 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಅಂಜಲ್ ಮೀನು (Kingfish Or Seerfish) big 550 ರೂ/ಕೆಜಿ
ಅಂಜಲ್ ಮೀನು (Kingfish Or Seerfish) medium 500 ರೂ/ಕೆಜಿ
ಅಂಜಲ್ ಮೀನು (Kingfish Or Seerfish) small 450 ರೂ/ಕೆಜಿ
ಬಂಗುಡೆ (Mackerel) big 80 ರೂ/ಕೆಜಿ
ಬಂಗುಡೆ (Mackerel) big 40 ರೂ/ಕೆಜಿ
ಬಂಗುಡೆ (Mackerel) big 30 ರೂ/ಕೆಜಿ
ಮಾಂಜಿ (black Pomfret) big 500 ರೂ/ಕೆಜಿ
ಮಾಂಜಿ (black Pomfret) medium 450 ರೂ/ಕೆಜಿ
ಮಾಂಜಿ (black Pomfret) small 400 ರೂ/ಕೆಜಿ
ಮಾಂಜಿ (silver Pomfret) large 1000 ರೂ/ಕೆಜಿ
ಮಾಂಜಿ (silver Pomfret) big 900 ರೂ/ಕೆಜಿ
ಮಾಂಜಿ (silver Pomfret) medium 800 ರೂ/ಕೆಜಿ
ಮಾಂಜಿ (silver Pomfret) small 700 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) padiyappa 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 70 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 60 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 40 ರೂ/ಕೆಜಿ
ರಿಬ್ಬಾನ್‌ ಮೀನು big 110 ರೂ/ಕೆಜಿ
ರಿಬ್ಬಾನ್‌ ಮೀನು medium 90 ರೂ/ಕೆಜಿ
ರಿಬ್ಬಾನ್‌ ಮೀನು small 80 ರೂ/ಕೆಜಿ
ನಂಗ್‌‌ ಮೀನು (Solefish) big 200 ರೂ/ಕೆಜಿ
ನಂಗ್‌‌ ಮೀನು (Solefish) big 150 ರೂ/ಕೆಜಿ
ನಂಗ್‌‌ ಮೀನು (Solefish) small 150 ರೂ/ಕೆಜಿ
ತೊರಕೆ (Stingray) big 140 ರೂ/ಕೆಜಿ
ತೊರಕೆ (Stingray) medium 80 ರೂ/ಕೆಜಿ
ತೊರಕೆ (Stingray) small 70 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

 ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಸಾಮಾನ್ಯವಾಗಿ ಯಾವ ಮೀನು ಅಧಿಕ ಲಭ್ಯವಾಗುತ್ತದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಿಂದ ಮೀನುಗಾರರ ಬಲೆಗೆ ಅಧಿಕವಾಗಿ ಬಂಗುಡೆ ಮೀನು ಬೀಳುತ್ತಿತ್ತು. ಆದ್ದರಿಂದಾಗಿ ಬಂಗುಡೆ ಮೀನಿನ ದರ ಭಾರೀ ಇಳಿಕೆಯಾಗಿತ್ತು. ಆದರೆ ಬಳಿಕ ಅದುವೇ ಮೀನು ಲಭ್ಯವಾಗುತ್ತಿದ್ದರು ಪ್ರಮಾಣ ಕೊಂಚ ಕಡಿಮೆಯಾಗಿತ್ತು. ಆದರೆ ಪ್ರಸ್ತುತ ಹೆಚ್ಚಾಗಿ ಬಂಗುಡೆ ಮೀನೇ ಲಭ್ಯವಾಗುತ್ತಿದೆ. ಹಾಗಾಗಿ ದರ ಇಳಿದಿದೆ. ಬೊಲೆಂಜಿರ್, ಸಿಗಡಿಯಂತಹ ಮೀನುಗಳಿಗೆ ಅಧಿಕ ಬೇಡಿಕೆಯಿದೆ. ಹೆಚ್ಚಾಗಿ ಮುಂಜಾನೆ ಒಂದು ದರವಿದ್ದರೆ ಸಂಜೆ ಒಂದು ದರ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+