ಡಿ.24ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?

ಕರ್ನಾಟಕದಲ್ಲಿ ಶನಿವಾರ (ಡಿಸೆಂಬರ್ 24) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇಂದು (ಡಿಸೆಂಬರ್ 24) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಏರಿದರೆ, ಕೆಲವೇ ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದೆ.

ಸಾಮಾನ್ಯವಾಗಿ ಮುಂಜಾನೆ ಮೀನಿನ ದರ ಹೆಚ್ಚಿರುತ್ತದೆ, ಸಂಜೆ ವೇಳೆಗೆ ದರ ಇಳಿಯುತ್ತದೆ. ಪ್ರಸ್ತುತ ಡಿಸ್ಕೋ, ಬಂಗುಡೆ, ಬೂತಾಯಿ ಮೀನು ಅಧಿಕವಾಗಿ ಲಭ್ಯವಾಗುತ್ತಿದೆ. ಈ ಹಿಂದೆ ಬಂಗುಡೆ ಮೀನು ಅತ್ಯಧಿಕ ಲಭ್ಯವಾಗುತ್ತಿತ್ತು. ಆದರೆ ಈಗ ಕೊಂಚ ಕಡಿಮೆಯಾಗಿದೆ. ಅದಕ್ಕೂ ಅಧಿಕವಾಗಿ ಡಿಸ್ಕೋ ಮೀನು ಮೀನುಗಾರರ ಬಲೆಗೆ ಬೀಳುತ್ತಿದೆ. ಕೊಡ್ಡಾಯಿ, ಬೊಲೆಂಜಿರ್‌ ಮೀನುಗಳು ಕೊಂಚ ಕಡಿಮೆ ಲಭ್ಯವಾಗುತ್ತಿದೆ ಎಂದು ಮಂಗಳೂರಿನ ಬಂದರು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಣೆ ಮಾಡುವ ರಾಮ್‌ದಾಸ್ ಅಮೀನ್ ಉಳ್ಳಾಲ ತಿಳಿಸಿದ್ದಾರೆ.

ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿದೆ. ಈರುಳ್ಳಿ, ನುಗ್ಗೆ ಮೊದಲಾದವುಗಳ ಬೆಲೆ ಇಳಿಕೆಯಾಗಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಕೊಂಚ ನಿಯಂತ್ರಣಕ್ಕೆ ಬಂದಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 31-34
ಈರುಳ್ಳಿ ಸಣ್ಣ 36-39
ಟೊಮೆಟೋ 21-23
ಮೆಣಸಿನಕಾಯಿ 41-46
ಬೀಟ್‌ರೂಟ್ 39-43
ಆಲೂಗಡ್ಡೆ 38-42
ಬಾಳೆ ಕಾಯಿ 8-9
ಹರಿವೆ ಸೊಪ್ಪು 15-17
ನೆಲ್ಲಿ ಕಾಯಿ 86-95
ಬೂದಿ ಸೋರೆಕಾಯಿ 29-32
ಜೋಳ (baby corn) 71-79
ಬಾಳೆ ಹೂವು 20-22
ದೊಡ್ಡ ಮೆಣಸಿನಕಾಯಿ 56-62
ಹಾಗಲಕಾಯಿ 32-36
ಸೋರೆಕಾಯಿ 30-33
ಅವರೆಕಾಳು 71-79
ಚಪ್ಪರೆಯ ಅವರೆಕಾಳು 37-41
ಎಲೆಕೋಸು 32-36
ಕ್ಯಾರೆಟ್ 43-47
ಹೂಕೋಸು 32-36
ಗೋರಿಕಾಯಿ 52-57
ತೆಂಗಿನ ಕಾಯಿ 38-42
ಕೆಸುವಿನ ಎಲೆ 17-19
ಕೆಸವು 29-32
ಕೊತ್ತಂಬರಿ ಸೊಪ್ಪು 7-8
ಜೋಳ 32-36
ಮುಳ್ಳು ಸೌತೆ 26-29
ಕರಿಬೇವು 31-34
ನುಗ್ಗೆ ಕಾಯಿ 81-89
ಬದನೆ 32-36
ಸುವರ್ಣ ಗೆಡ್ಡೆ 35-38
ಬೆಳ್ಳುಳ್ಳಿ 43-47
ಶುಂಠಿ 43-47
ಬಟಾಣಿ 96-108
ತೊಂಡೆಕಾಯಿ 31-34
ನಿಂಬೆ ಹಣ್ಣು 61-67
ಮಾವಿನ ಕಾಯಿ 92-102
ಬೆಂಡೆಕಾಯಿ 35-38
ಕುಂಬಳಕಾಯಿ 31-34
ಮೂಲಂಗಿ 25-28
ಹೀರೆಕಾಯಿ 33-37
ಪಡುವಲಕಾಯಿ 32-36
ಬಸಳೆ 16-18

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಡಿಸೆಂಬರ್ 24 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಡಿಸೆಂಬರ್ 24 (ಕೆಜಿ)

ಮೆಲುಗು ಮೀನು (Butter Fish) 320 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 500, 400 ರೂ/ಕೆಜಿ
ಬೂತಾಯಿ ( Sardine) ಮೀನು 60 ರೂ/ಕೆಜಿ
ಬೊಂಡಾಸ್‌ (Squid) kolu 280, kappe 300 ರೂ/ಕೆಜಿ
ಡಿಸ್ಕೋ ಮೀನು (Disco) 90 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಕಾಂಡಾಯಿ ಮೀನು 140 ರೂ/ಕೆಜಿ
ಮುರು ಮೀನು (Reef cod) small 80, big 160 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 70 ರೂ/ಕೆಜಿ
ನಂಗ್‌‌ ಮೀನು (Solefish) big 200, small 150-140 ರೂ/ಕೆಜಿ
ಏಡಿ (Crab)small 150 ರೂ/ಕೆಜಿ
ತೇಡೆ ಮೀನು (Catfish) 160 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕೊಡ್ಡಾಯಿ (Croaker Fish) 230 ರೂ/ಕೆಜಿ
ಬೊಲೆಂಜಿರ್‌ (silverfish) 450 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) big 170 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 200, 250 ರೂ/ಕೆಜಿ
ತೊರಕೆ (Stingray) 150 ರೂ/ಕೆಜಿ
ಮೊಡವು (Sea bass) 500, 450 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500, 450 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 500, 450 ರೂ/ಕೆಜಿ
ಕಲ್ಲೂರು ಮೀನು ( Yellow Croaker) 120 ರೂ/ಕೆಜಿ
ಮಡಲ್ ಮೀನು 50 ರೂ/ಕೆಜಿ
ಬ್ಯಾಟ್ ಮೀನು 140 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಬಂಗುಡೆ (Mackerel) ಮೀನು big 60 ರೂ/ಕೆಜಿ
ಬಂಗುಡೆ (Mackerel) ಮೀನು medium 50 ರೂ/ಕೆಜಿ
ಬಂಗುಡೆ (Mackerel) ಮೀನು medium 40 ರೂ/ಕೆಜಿ
ಬಂಗುಡೆ (Mackerel) ಮೀನು small 30 ರೂ/ಕೆಜಿ
ಮಾಂಜಿ (black Pomfret) 500, 450 ರೂ/ಕೆಜಿ
ಮಾಂಜಿ (silver Pomfret) large 1200 ರೂ/ಕೆಜಿ
ಮಾಂಜಿ (silver Pomfret) big 1100 ರೂ/ಕೆಜಿ
ಮಾಂಜಿ (silver Pomfret) medium 1000 ರೂ/ಕೆಜಿ
ಮಾಂಜಿ (silver Pomfret) small 900 ರೂ/ಕೆಜಿ
ಮಾಂಜಿ (silver Pomfret) small 800 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) padiyappa 200 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 100 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 90 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 70 ರೂ/ಕೆಜಿ
ರಿಬ್ಬಾನ್‌ ಮೀನು big 120 ರೂ/ಕೆಜಿ
ರಿಬ್ಬಾನ್‌ ಮೀನು medium 110 ರೂ/ಕೆಜಿ
ರಿಬ್ಬಾನ್‌ ಮೀನು small 100 ರೂ/ಕೆಜಿ
ಸಿಗಡಿ ಮೀನು (Prawns) tiger 700 ರೂ/ಕೆಜಿ
ಸಿಗಡಿ ಮೀನು (Prawns) mande 450 ರೂ/ಕೆಜಿ
ಸಿಗಡಿ ಮೀನು (Prawns) thembel 190 ರೂ/ಕೆಜಿ
ಸಿಗಡಿ ಮೀನು (Prawns) white 550 ರೂ/ಕೆಜಿ
ಕಾನೆ (Ladyfish) big 800 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಕೇದರ್ ಮೀನು (Tuna) 140 ರೂ/ಕೆಜಿ
ಕೇದರ್ ಮೀನು (Tuna) 90 ರೂ/ಕೆಜಿ
ಕೇದರ್ ಮೀನು (Tuna) 60 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

 ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಸಾಮಾನ್ಯವಾಗಿ ಯಾವ ಮೀನು ಅಧಿಕ ಲಭ್ಯವಾಗುತ್ತದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಿಂದ ಮೀನುಗಾರರ ಬಲೆಗೆ ಅಧಿಕವಾಗಿ ಬಂಗುಡೆ ಮೀನು ಬೀಳುತ್ತಿತ್ತು. ಆದ್ದರಿಂದಾಗಿ ಬಂಗುಡೆ ಮೀನಿನ ದರ ಭಾರೀ ಇಳಿಕೆಯಾಗಿತ್ತು. ಆದರೆ ಈಗ ಲಭ್ಯತೆ ಕೊಂಚ ಕಡಿಮೆ ಆದ್ದರಿಂದಾಗಿ ದರ ಏರಿಕೆಯಾಗಿದೆ. ಈಗ ಅಧಿಕವಾಗಿ ಡಿಸ್ಕೋ ಮೀನು ಲಭಿಸುತ್ತಿದೆ. ಹಾಗಾಗಿ ಡಿಸ್ಕೋ ಮೀನು ದರ ಇಳಿದಿದೆ. ಕಡಿಮೆಯಾಗಿ ಲಭ್ಯವಾಗುವ ಕೊಡ್ಡಾಯಿ, ಬೊಲೆಂಜಿರ್ ಮೀನುಗಳ ದರ ಏರಿಕೆಯಾಗಿದೆ. ಹೆಚ್ಚಾಗಿ ಮುಂಜಾನೆ ಒಂದು ದರವಿದ್ದರೆ ಸಂಜೆ ಒಂದು ದರ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+