ನ.30ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

ಕರ್ನಾಟಕದಲ್ಲಿ ಬುಧವಾರ (ನವೆಂಬರ್ 30) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇಂದು (ನವೆಂಬರ್ 30) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಏರಿದರೆ, ಕೆಲವೇ ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದೆ.

ಸಾಮಾನ್ಯವಾಗಿ ಮುಂಜಾನೆ ಮೀನಿನ ದರ ಹೆಚ್ಚಿರುತ್ತದೆ, ಸಂಜೆ ವೇಳೆಗೆ ದರ ಇಳಿಯುತ್ತದೆ. ಪ್ರಸ್ತುತ ಬಂಗುಡೆ, ಡಿಸ್ಕೋ, ಬೂತಾಯಿ ಮೀನು ಅಧಿಕವಾಗಿ ಲಭ್ಯವಾಗುತ್ತಿದೆ. ಈ ಹಿಂದೆ ಬಂಗುಡೆ ಮೀನು ಅತ್ಯಧಿಕ ಲಭ್ಯವಾಗುತ್ತಿತ್ತು. ಕೆಲವು ದಿನಗಳ ಹಿಂದೆ ಲಭ್ಯತೆ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಹೆಚ್ಚಾಗಿ ಬಂಗುಡೆ ಮೀನು ಲಭ್ಯವಾಗುತ್ತಿದೆ. ಇನ್ನು ಡಿಸ್ಕೋ ಕೂಡಾ ಅಧಿಕ ಲಭಿಸುತ್ತಿದೆ. ಸಣ್ಣ ನಂಗ್ (Solefish) ಸ್ವಲ್ಪ ಲಭ್ಯವಾಗಿದೆ. ಬೊಂಡಾಸ್ ದರ ಕೊಂಚ ಇಳಿದಿದೆ ಎಂದು ಮಂಗಳೂರಿನ ಬಂದರು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಣೆ ಮಾಡುವ ರಾಮ್‌ದಾಸ್ ಅಮೀನ್ ಉಳ್ಳಾಲ ತಿಳಿಸಿದ್ದಾರೆ.

ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿದೆ. ಈರುಳ್ಳಿ, ನುಗ್ಗೆ ಮೊದಲಾದವುಗಳ ಬೆಲೆ ಇಳಿಕೆಯಾಗಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಕೊಂಚ ನಿಯಂತ್ರಣಕ್ಕೆ ಬಂದಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 29-32
ಈರುಳ್ಳಿ ಸಣ್ಣ 79- 88
ಟೊಮೆಟೋ 21-23
ಮೆಣಸಿನಕಾಯಿ 43-47
ಬೀಟ್‌ರೂಟ್ 41-46
ಆಲೂಗಡ್ಡೆ 36-39
ಬಾಳೆ ಕಾಯಿ 10-11
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 30-33
ಜೋಳ (baby corn) 76-84
ಬಾಳೆ ಹೂವು 18-20
ದೊಡ್ಡ ಮೆಣಸಿನಕಾಯಿ 49-55
ಹಾಗಲಕಾಯಿ 36-39
ಸೋರೆಕಾಯಿ 30-33
ಅವರೆಕಾಳು 84-93
ಚಪ್ಪರೆಯ ಅವರೆಕಾಳು 41-46
ಎಲೆಕೋಸು 31-34
ಕ್ಯಾರೆಟ್ 43-47
ಹೂಕೋಸು 30-33
ಗೋರಿಕಾಯಿ 46-51
ತೆಂಗಿನ ಕಾಯಿ 36-39
ಕೆಸುವಿನ ಎಲೆ 16-18
ಕೆಸವು 29-32
ಕೊತ್ತಂಬರಿ ಸೊಪ್ಪು 12-13
ಜೋಳ 28-30
ಮುಳ್ಳು ಸೌತೆ 28-30
ಕರಿಬೇವು 33-37
ನುಗ್ಗೆ ಕಾಯಿ 69-76
ಬದನೆ 23-25
ಸುವರ್ಣ ಗೆಡ್ಡೆ 30-33
ಬೆಳ್ಳುಳ್ಳಿ 51-56
ಶುಂಠಿ 51-56
ಬಟಾಣಿ 89-98
ತೊಂಡೆಕಾಯಿ 30-33
ನಿಂಬೆ ಹಣ್ಣು 59-65
ಮಾವಿನ ಕಾಯಿ 98-108
ಬೆಂಡೆಕಾಯಿ 35-38
ಕುಂಬಳಕಾಯಿ 35-38
ಮೂಲಂಗಿ 24-27
ಹೀರೆಕಾಯಿ 30-33
ಪಡುವಲಕಾಯಿ 31-34
ಬಸಳೆ 17-19

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 30 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 30 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 600 650 ರೂ/ಕೆಜಿ
ಬೂತಾಯಿ ( Sardine) ಮೀನು 50 ರೂ/ಕೆಜಿ
ಬೊಂಡಾಸ್‌ (Squid) 300 ರೂ/ಕೆಜಿ
ಡಿಸ್ಕೋ ಮೀನು (Disco) 70, 60 ರೂ/ಕೆಜಿ
ತಾಟೆ ಮೀನು (Shark) 300, 350 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಕಾಂಡಾಯಿ ಮೀನು 150 ರೂ/ಕೆಜಿ
ಮುರು ಮೀನು (Reef cod) 100, 90 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 60 ರೂ/ಕೆಜಿ
ನಂಗ್‌‌ ಮೀನು (Solefish) 200, small 140-150 ರೂ/ಕೆಜಿ
ಏಡಿ (Crab) 300 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್‌ (silverfish) 400 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 350ರೂ/ಕೆಜಿ
ತೊರಕೆ (Stingray) 150 ರೂ/ಕೆಜಿ
ಮೊಡವು culture (Sea bass) 550, 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 450, 500 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 450, 500 ರೂ/ಕೆಜಿ
ಕಲ್ಲೂರು ಮೀನು ( Yellow Croaker) 120 ರೂ/ಕೆಜಿ
ಮಡಲ್ ಮೀನು 160 ರೂ/ಕೆಜಿ
ಬ್ಯಾಟ್ ಮೀನು 130 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಬಂಗುಡೆ (Mackerel) big 80 ರೂ/ಕೆಜಿ
ಬಂಗುಡೆ (Mackerel) medium 40 ರೂ/ಕೆಜಿ
ಬಂಗುಡೆ (Mackerel) small 30 ರೂ/ಕೆಜಿ
ಮಾಂಜಿ (black Pomfret) 500, 450 ರೂ/ಕೆಜಿ
ಮಾಂಜಿ (silver Pomfret) large 1000 ರೂ/ಕೆಜಿ
ಮಾಂಜಿ (silver Pomfret) big 900 ರೂ/ಕೆಜಿ
ಮಾಂಜಿ (silver Pomfret) medium 800 ರೂ/ಕೆಜಿ
ಮಾಂಜಿ (silver Pomfret) small 700 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) padiyappa 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 70 ರೂ/ಕೆಜಿ
ರಿಬ್ಬಾನ್‌ ಮೀನು big 110 ರೂ/ಕೆಜಿ
ರಿಬ್ಬಾನ್‌ ಮೀನು medium 90 ರೂ/ಕೆಜಿ
ರಿಬ್ಬಾನ್‌ ಮೀನು small 80 ರೂ/ಕೆಜಿ
ಸಿಗಡಿ ಮೀನು (Prawns) white 600 ರೂ/ಕೆಜಿ
ಸಿಗಡಿ ಮೀನು (Prawns) culture 450 ರೂ/ಕೆಜಿ
ಸಿಗಡಿ ಮೀನು (Prawns) mande 400 ರೂ/ಕೆಜಿ
ಕಾನೆ (Ladyfish) big 700 ರೂ/ಕೆಜಿ
ಕಾನೆ (Ladyfish) medium 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) big 160 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) medium 80 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) small 70 ರೂ/ಕೆಜಿ
ಕೇದರ್ ಮೀನು (Tuna) 90 ರೂ/ಕೆಜಿ
ಕೇದರ್ ಮೀನು (Tuna) 80 ರೂ/ಕೆಜಿ
ಕೇದರ್ ಮೀನು (Tuna) 70 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಸಾಮಾನ್ಯವಾಗಿ ಯಾವ ಮೀನು ಅಧಿಕ ಲಭ್ಯವಾಗುತ್ತದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಿಂದ ಮೀನುಗಾರರ ಬಲೆಗೆ ಅಧಿಕವಾಗಿ ಬಂಗುಡೆ ಮೀನು ಬೀಳುತ್ತಿತ್ತು. ಆದ್ದರಿಂದಾಗಿ ಬಂಗುಡೆ ಮೀನಿನ ದರ ಭಾರೀ ಇಳಿಕೆಯಾಗಿತ್ತು. ಆದರೆ ಬಳಿಕ ಅದುವೇ ಮೀನು ಲಭ್ಯವಾಗುತ್ತಿದ್ದರು ಪ್ರಮಾಣ ಕೊಂಚ ಕಡಿಮೆಯಾಗಿತ್ತು. ಆದರೆ ಪ್ರಸ್ತುತ ಹೆಚ್ಚಾಗಿ ಬಂಗುಡೆ ಮೀನೇ ಲಭ್ಯವಾಗುತ್ತಿದೆ. ಹಾಗಾಗಿ ದರ ಇಳಿದಿದೆ. ಹೆಚ್ಚಾಗಿ ಮುಂಜಾನೆ ಒಂದು ದರವಿದ್ದರೆ ಸಂಜೆ ಒಂದು ದರ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+