ಕರ್ನಾಟಕದಲ್ಲಿ ಸೋಮವಾರ (ನವೆಂಬರ್ 7) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ರಿಬ್ಬಾನ್ ಮೀನು ದೊಡ್ಡ ಗಾತ್ರದ್ದು ಎಂದಾದರೆ ಅದಕ್ಕೆ ಸಣ್ಣ ಗಾತ್ರದ ರಿಬ್ಬಾನ್ ಮೀನಿಗಿಂತ ಕೊಂಚ ಅಧಿಕ ದರವೇ ಇರುತ್ತದೆ. ಬೇಡಿಕೆ ಮೇಲೆಯೂ ದರ ನಿರ್ಧಾರವಾಗುತ್ತದೆ. ಇಂದು (ನವೆಂಬರ್ 7) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದ್ದರೆ, ಇನ್ನು ಕೆಲವು ಮೀನುಗಳ ದರ ಸ್ಥಿರವಾಗಿದೆ. ಹೆಚ್ಚಿನ ಮೀನುಗಳ ದರ ಏರಿಕೆಯಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ.
ಸುಮಾರು ಒಂದು ತಿಂಗಳಿನಿಂದ ಬಂಗುಡೆ ಮೀನು ಮಾತ್ರ ಲಭ್ಯವಾಗುತ್ತಿದೆ. ಬೇರೆ ಯಾವುದೇ ಮೀನುಗಳು ಹೆಚ್ಚಾಗಿ ದೊರೆಯುತ್ತಿಲ್ಲ. ಅದರಿಂದಾಗಿ ಬಂಗುಡೆ ಮೀನು ದರ ಭಾರೀ ಇಳಿಕೆಯಾಗಿದೆ. ಆದರೆ ಇದಕ್ಕೆ ಬೇಡಿಕೆ ಕಡಿಮೆಯಾಗಿದೆ. ಪ್ರಮುಖವಾಗಿ ಸಣ್ಣ ನಂಗ್ ಮೀನು, ಬೊಲೆಂಜಿರ್‌ನಂತಹ ಮೀನುಗಳಿಗೆ ಅಧಿಕ ಬೇಡಿಕೆಯಿದೆ. ಇನ್ನು ಈ ಹಿಂದೆ ಯಾವ ಸೀಸನ್‌ನಲ್ಲಿ ಯಾವ ಮೀನು ಲಭ್ಯವಾಗುತ್ತದೆ ಎಂದು ನಿಖರವಾಗಿ ಮೀನುಗಾರರಿಗೆ ತಿಳಿಯುತ್ತಿತ್ತು. ಆದರೆ ಈಗ ಆಯಾ ಸೀಸನ್‌ಗೆ ಅನುಗುಣವಾಗಿ ಮೀನುಗಳು ಲಭ್ಯವಾಗುತ್ತಿಲ್ಲ. ಪ್ರಸ್ತುತ ಸಣ್ಣ ನಂಗ್ ಮೀನುಗಾರಿಕೆ ನಡೆಸುವ ವೇಳೆ ಲಭ್ಯವಾಗಬೇಕಾಗಿತ್ತು. ಆದರೆ ಹಲವಾರು ಕಾರಣಗಳಿಂದಾಗಿ, ಕಾರ್ಖಾನೆಗಳ ವಿಷ ಅನಿಲದಿಂದಾಗಿ ಮೀನುಗಳ ಲಭ್ಯತೆಯ ಮೇಲೆ ಪ್ರಭಾವ ಉಂಟಾಗಿದೆ. ಸೀಸನ್‌ಗೆ ಅನುಗುಣವಾಗಿ ಮೀನುಗಳು ಲಭ್ಯವಾಗುತ್ತಿಲ್ಲ.
ಇನ್ನು ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿಳಿತ ಕಾಣುತ್ತಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇನ್ನಷ್ಟು ಅಧಿಕವಾಗುವ ನಿರೀಕ್ಷೆಯಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 39-43
ಈರುಳ್ಳಿ ಸಣ್ಣ 430-47
ಟೊಮೆಟೋ 33-37
ಮೆಣಸಿನಕಾಯಿ 39-43
ಬೀಟ್‌ರೂಟ್ 49-55
ಆಲೂಗಡ್ಡೆ 46-51
ಬಾಳೆ ಕಾಯಿ 13-14
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 32-36
ಜೋಳ (baby corn) 86-95
ಬಾಳೆ ಹೂವು 21-23
ದೊಡ್ಡ ಮೆಣಸಿನಕಾಯಿ 51-56
ಹಾಗಲಕಾಯಿ 37-41
ಸೋರೆಕಾಯಿ 26-29
ಅವರೆಕಾಳು 92-102
ಚಪ್ಪರೆಯ ಅವರೆಕಾಳು 40-44
ಎಲೆಕೋಸು 28-30
ಕ್ಯಾರೆಟ್ 72-80
ಹೂಕೋಸು 52-57
ಗೋರಿಕಾಯಿ 90-99
ತೆಂಗಿನ ಕಾಯಿ 37-41
ಕೆಸುವಿನ ಎಲೆ 13-14
ಕೆಸವು 25-28
ಕೊತ್ತಂಬರಿ ಸೊಪ್ಪು13-14
ಜೋಳ 25-28
ಮುಳ್ಳು ಸೌತೆ 26-29
ಕರಿಬೇವು 29-32
ನುಗ್ಗೆ ಕಾಯಿ 115-127
ಬದನೆ 24-27
ಸುವರ್ಣ ಗೆಡ್ಡೆ 33-37
ಬೆಳ್ಳುಳ್ಳಿ 52-57
ಶುಂಠಿ 51-56
ಬಟಾಣಿ 97-107
ತೊಂಡೆಕಾಯಿ 31-34
ನಿಂಬೆ ಹಣ್ಣು 60-66
ಮಾವಿನ ಕಾಯಿ 117-130
ಬೆಂಡೆಕಾಯಿ 24-27
ಕುಂಬಳಕಾಯಿ 29-32
ಮೂಲಂಗಿ 33-37
ಹೀರೆಕಾಯಿ 32-36
ಪಡುವಲಕಾಯಿ 38-42
ಬಸಳೆ 12-13
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 7 (ಕೆಜಿ)
ಮೆಲುಗು ಮೀನು (Butter Fish) 350 ರೂ/ಕೆಜಿ
ಬಂಗುಡೆ (Mackerel) ಮೀನು 70, 60 ರೂ/ಕೆಜಿ
ಬೂತಾಯಿ ( Sardine) ಮೀನು 70 ರೂ/ಕೆಜಿ
ಡಿಸ್ಕೋ ಮೀನು (Disco) 110 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್ ಮೀನು 300 ರೂ/ಕೆಜಿ
ಕಾಂಡಾಯಿ ಮೀನು 150 ರೂ/ಕೆಜಿ
ಮುರು ಮೀನು (Reef cod) 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 70 ರೂ/ಕೆಜಿ
ನಂಗ್ ಮೀನು (Solefish) 200 ರೂ/ಕೆಜಿ
ಏಡಿ (Crab) 300 ರೂ/ಕೆಜಿ
ಸ್ವಾಡಿ ಮೀನು (Ilish) 50 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್ (silverfish) 350 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) 180 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 200 ರೂ/ಕೆಜಿ
ತೊರಕೆ (Stingray) 150 ರೂ/ಕೆಜಿ
ಬಲ್ಚಟ್ ಮೀನು (Flathead) 200 ರೂ/ಕೆಜಿ
ಪೈಯೆ ಮೀನು (Silver Biddy) 200 ರೂ/ಕೆಜಿ
ಏರಿ ಮೀನು (emperor fish) 500, 450 ರೂ/ಕೆಜಿ
ಕೇದರ್ ಮೀನು (Tuna) 80, 70 ರೂ/ಕೆಜಿ
ಸಿಡಿ ಮೀನು (Cod) 20 ರೂ/ಕೆಜಿ
ಕಲ್ಲೂರು ಮೀನು ( Yellow Croaker) 100 ರೂ/ಕೆಜಿ
ಮಡಲ್ ಮೀನು 130 ರೂ/ಕೆಜಿ
ಬ್ಯಾಟ್ ಮೀನು 120 ರೂ/ಕೆಜಿ
ಇತರೆ ಮೀನುಗಳ ದರ
ಅಂಜಲ್ ಮೀನು (Kingfish Or Seerfish) big 600 ರೂ/ಕೆಜಿ
ಅಂಜಲ್ ಮೀನು (Kingfish Or Seerfish) medium 550 ರೂ/ಕೆಜಿ
ಅಂಜಲ್ ಮೀನು (Kingfish Or Seerfish) small 500 ರೂ/ಕೆಜಿ
ಮಾಂಜಿ (black Pomfret) 450, 400 ರೂ/ಕೆಜಿ
ಮಾಂಜಿ (silver Pomfret) large 900 ರೂ/ಕೆಜಿ
ಮಾಂಜಿ (silver Pomfret) big 800 ರೂ/ಕೆಜಿ
ಮಾಂಜಿ (silver Pomfret) medium 700 ರೂ/ಕೆಜಿ
ಮಾಂಜಿ (silver Pomfret) small 600 ರೂ/ಕೆಜಿ
ರಿಬ್ಬಾನ್ ಮೀನು big 110 ರೂ/ಕೆಜಿ
ರಿಬ್ಬಾನ್ ಮೀನು medium 100 ರೂ/ಕೆಜಿ
ರಿಬ್ಬಾನ್ ಮೀನು small 90 ರೂ/ಕೆಜಿ
ಸಿಗಡಿ ಮೀನು (Prawns) mande 400 ರೂ/ಕೆಜಿ
ಸಿಗಡಿ ಮೀನು (Prawns)culture 450 ರೂ/ಕೆಜಿ
ಸಿಗಡಿ ಮೀನು (Prawns) white 650 ರೂ/ಕೆಜಿ
ಕಾನೆ (Ladyfish) big 700 ರೂ/ಕೆಜಿ
ಕಾನೆ (Ladyfish) medium 650 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಬೊಂಡಾಸ್ (Squid) kolu 400, kappe 350 ರೂ/ಕೆಜಿ
ಮೊಡವು culture (Sea bass) 550, 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500, 450 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ
More From GoodReturns

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications