ನ.8ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

ಕರ್ನಾಟಕದಲ್ಲಿ ಮಂಗಳವಾರ (ನವೆಂಬರ್ 8) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇಂದು (ನವೆಂಬರ್ 8) ಬಹುತೇಕ ಮೀನುಗಳ ದರ ಏರಿಕೆಯಾಗಿದೆ. ಕೆಲವೇ ಮೀನುಗಳ ದರ ಇಳಿಕೆಯಾಗಿದ್ದು ಇನ್ನು ಕೆಲವು ಮೀನುಗಳ ದರ ಸ್ಥಿರವಾಗಿದೆ. ಆದರೆ ಹೆಚ್ಚಿನ ಮೀನುಗಳ ದರ ಏರಿಕೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಮೀನಿನ ದರ ಏರಿಕೆಯಾಗುತ್ತಾ ಸಾಗುತ್ತದೆ ಎಂದು ಮಂಗಳೂರಿನ ಬಂದರು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಣೆ ಮಾಡುವ ರಾಮ್‌ದಾಸ್ ಅಮೀನ್ ಉಳ್ಳಾಲ ತಿಳಿಸಿದ್ದಾರೆ.

ಈ ಹಿಂದೆ ಯಾವ ಸೀಸನ್‌ನಲ್ಲಿ ಯಾವ ಮೀನು ಲಭ್ಯವಾಗುತ್ತದೆ ಎಂದು ನಿಖರವಾಗಿ ಮೀನುಗಾರರಿಗೆ ತಿಳಿಯುತ್ತಿತ್ತು. ಆದರೆ ಈಗ ಆಯಾ ಸೀಸನ್‌ಗೆ ಅನುಗುಣವಾಗಿ ಮೀನುಗಳು ಲಭ್ಯವಾಗುತ್ತಿಲ್ಲ. ಪ್ರಸ್ತುತ ಸಣ್ಣ ನಂಗ್ ಮೀನುಗಾರಿಕೆ ನಡೆಸುವ ವೇಳೆ ಲಭ್ಯವಾಗಬೇಕಾಗಿತ್ತು. ಆದರೆ ಹಲವಾರು ಕಾರಣಗಳಿಂದಾಗಿ, ಕಾರ್ಖಾನೆಗಳ ವಿಷ ಅನಿಲದಿಂದಾಗಿ ಮೀನುಗಳ ಲಭ್ಯತೆಯ ಮೇಲೆ ಪ್ರಭಾವ ಉಂಟಾಗಿದೆ. ಸೀಸನ್‌ಗೆ ಅನುಗುಣವಾಗಿ ಮೀನುಗಳು ಲಭ್ಯವಾಗುತ್ತಿಲ್ಲ ಎಂದು ರಾಮ್‌ದಾಸ್ ಅಮೀನ್ ಉಳ್ಳಾಲ ಹೇಳಿದ್ದಾರೆ.

ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿಳಿತ ಕಾಣುತ್ತಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇನ್ನಷ್ಟು ಅಧಿಕವಾಗುವ ನಿರೀಕ್ಷೆಯಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)

ಅಕ್ಕಿ Fine 5000-5400
ಮಧ್ಯಮ 4800-5000
ಜೋಳ 2600-3000
ಬೆಲ್ಲದ ಕ್ಯೂಬ್ 4100-4400
ಬೆಲ್ಲದ ಉಂಡೆ 4500-4800
ಕೊತ್ತಂಬರಿ ಬೀಜ 14000-19500
ಮೆಣಸಿನಕಾಯಿ 55000-65000
ಆಲೂಗಡ್ಡೆ ದೊಡ್ಡದು 2800-3200
ಆಲೂಗಡ್ಡೆ ಮಧ್ಯಮ 2000-2600
ಈರುಳ್ಳಿ ದೊಡ್ಡ 2000-2500
ಈರುಳ್ಳಿ ಮಧ್ಯಮ 1500-2000
ಈರುಳ್ಳಿ ಸಣ್ಣ 500-1000
ಹುಣಸೆಹಣ್ಣು 8500-12000
ಬೆಳ್ಳುಳ್ಳಿ 5000-6000
ಹುರಳಿಕಾಯಿ- 7000-7800

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 2800-4300
ಅರಿಶಿನ 9500-13000
ತೊಗರಿಬೇಳೆ: 10000-12000
ಹೆಸರು ಬೇಳೆ: 9000-9600
ಉದ್ದಿನ ಬೇಳೆ: 9000-13000
ಕಡಲೆ ಬೇಳೆ: 5800-6500
ಸಾಸಿವೆ: 6500-8500
ಎಳ್ಳು: 14000-14500
ಸಕ್ಕರೆ: 3700-3800
ಕಡಲೆ ಬೀಜ: 10000-12500
ಕೊಬ್ಬರಿ: 15500-17500
ಕಡಲೆಕಾಯಿ ಎಣ್ಣೆ (10kg): 1560-2000
ತೆಂಗಿನ ಎಣ್ಣೆ (10kg): 1500-2100
ಎಳ್ಳೆಣ್ಣೆ 1900-3600
ತುಪ್ಪ (5kg): 2850-3100

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 39-43
ಈರುಳ್ಳಿ ಸಣ್ಣ 43-47
ಟೊಮೆಟೋ 33-37
ಮೆಣಸಿನಕಾಯಿ 39-43
ಬೀಟ್‌ರೂಟ್ 49-55
ಆಲೂಗಡ್ಡೆ 46-51
ಬಾಳೆ ಕಾಯಿ 13-14
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 32-36
ಜೋಳ (baby corn) 86-95
ಬಾಳೆ ಹೂವು 21-23
ದೊಡ್ಡ ಮೆಣಸಿನಕಾಯಿ 51-56
ಹಾಗಲಕಾಯಿ 37-41
ಸೋರೆಕಾಯಿ 26-29
ಅವರೆಕಾಳು 92-102
ಚಪ್ಪರೆಯ ಅವರೆಕಾಳು 40-44
ಎಲೆಕೋಸು 28-30
ಕ್ಯಾರೆಟ್ 72-80
ಹೂಕೋಸು 52-57
ಗೋರಿಕಾಯಿ 90-99
ತೆಂಗಿನ ಕಾಯಿ 37-41
ಕೆಸುವಿನ ಎಲೆ 13-14
ಕೆಸವು 25-28
ಕೊತ್ತಂಬರಿ ಸೊಪ್ಪು13-14
ಜೋಳ 25-28
ಮುಳ್ಳು ಸೌತೆ 26-29
ಕರಿಬೇವು 29-32
ನುಗ್ಗೆ ಕಾಯಿ 115-127
ಬದನೆ 24-27
ಸುವರ್ಣ ಗೆಡ್ಡೆ 33-37
ಬೆಳ್ಳುಳ್ಳಿ 52-57
ಶುಂಠಿ 51-56
ಬಟಾಣಿ 97-107
ತೊಂಡೆಕಾಯಿ 31-34
ನಿಂಬೆ ಹಣ್ಣು 60-66
ಮಾವಿನ ಕಾಯಿ 117-130
ಬೆಂಡೆಕಾಯಿ 24-27
ಕುಂಬಳಕಾಯಿ 29-32
ಮೂಲಂಗಿ 33-37
ಹೀರೆಕಾಯಿ 32-36
ಪಡುವಲಕಾಯಿ 38-42
ಬಸಳೆ 12-13

 

 

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್  8 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 8 (ಕೆಜಿ)

ಮೆಲುಗು ಮೀನು (Butter Fish) 380 ರೂ/ಕೆಜಿ
ಬೂತಾಯಿ ( Sardine) ಮೀನು 70 ರೂ/ಕೆಜಿ
ಬೊಂಡಾಸ್‌ (Squid) kolu 400, kappe 350 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಕಾಂಡಾಯಿ ಮೀನು 180 ರೂ/ಕೆಜಿ
ಮುರು ಮೀನು (Reef cod) 80 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 30 ರೂ/ಕೆಜಿ
ನಂಗ್‌‌ ಮೀನು (Solefish) 200 ರೂ/ಕೆಜಿ
ಏಡಿ (Crab) 300 ರೂ/ಕೆಜಿ
ಸ್ವಾಡಿ ಮೀನು (Ilish) 50 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್‌ (silverfish) 350 ರೂ/ಕೆಜಿ
ಕೊಲ್ಲತರು/ಗೋಲಾಯಿ (Anchovies fish) 180 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 250 ರೂ/ಕೆಜಿ
ಮೊಡವು culture (Sea bass) 500, 450 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500, 450 ರೂ/ಕೆಜಿ
ಬಲ್ಚಟ್ ಮೀನು (Flathead) 200 ರೂ/ಕೆಜಿ
ಪೈಯೆ ಮೀನು (Silver Biddy) 250 ರೂ/ಕೆಜಿ
ಏರಿ ಮೀನು (emperor fish) 450, 400 ರೂ/ಕೆಜಿ
ಕೇದರ್ ಮೀನು (Tuna) 100 ರೂ/ಕೆಜಿ
ಕಲ್ಲೂರು ಮೀನು ( Yellow Croaker) 100 ರೂ/ಕೆಜಿ
ಮಡಲ್ ಮೀನು 130 ರೂ/ಕೆಜಿ
ಬ್ಯಾಟ್ ಮೀನು 120 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಅಂಜಲ್ ಮೀನು (Kingfish Or Seerfish) big 600 ರೂ/ಕೆಜಿ
ಅಂಜಲ್ ಮೀನು (Kingfish Or Seerfish) medium 550 ರೂ/ಕೆಜಿ
ಅಂಜಲ್ ಮೀನು (Kingfish Or Seerfish) small 500 ರೂ/ಕೆಜಿ
ಬಂಗುಡೆ (Mackerel) big 70 ರೂ/ಕೆಜಿ
ಬಂಗುಡೆ (Mackerel) medium 60 ರೂ/ಕೆಜಿ
ಬಂಗುಡೆ (Mackerel) small 50 ರೂ/ಕೆಜಿ
ಡಿಸ್ಕೋ ಮೀನು (Disco) big 110 ರೂ/ಕೆಜಿ
ಡಿಸ್ಕೋ ಮೀನು (Disco) medium 100 ರೂ/ಕೆಜಿ
ಡಿಸ್ಕೋ ಮೀನು (Disco) small 90 ರೂ/ಕೆಜಿ
ಮಾಂಜಿ (black Pomfret) 450, 400 ರೂ/ಕೆಜಿ
ಮಾಂಜಿ (silver Pomfret) big 1000 ರೂ/ಕೆಜಿ
ಮಾಂಜಿ (silver Pomfret) medium 900 ರೂ/ಕೆಜಿ
ಮಾಂಜಿ (silver Pomfret) small 800 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) padiyappa 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 70 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 60 ರೂ/ಕೆಜಿ
ರಿಬ್ಬಾನ್‌ ಮೀನು big 110 ರೂ/ಕೆಜಿ
ರಿಬ್ಬಾನ್‌ ಮೀನು medium 100 ರೂ/ಕೆಜಿ
ರಿಬ್ಬಾನ್‌ ಮೀನು small 90 ರೂ/ಕೆಜಿ
ಸಿಗಡಿ ಮೀನು (Prawns) mande 400 ರೂ/ಕೆಜಿ
ಸಿಗಡಿ ಮೀನು (Prawns)culture 450 ರೂ/ಕೆಜಿ
ಸಿಗಡಿ ಮೀನು (Prawns) white 650 ರೂ/ಕೆಜಿ
ಕಾನೆ (Ladyfish) large 750 ರೂ/ಕೆಜಿ
ಕಾನೆ (Ladyfish) big 700 ರೂ/ಕೆಜಿ
ಕಾನೆ (Ladyfish) medium 600 ರೂ/ಕೆಜಿ
ಕಾನೆ (Ladyfish) small 550 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ತೊರಕೆ (Stingray) big 150 ರೂ/ಕೆಜಿ
ತೊರಕೆ (Stingray) medium 140 ರೂ/ಕೆಜಿ
ತೊರಕೆ (Stingray) small 130 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

 

 ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಸಾಮಾನ್ಯವಾಗಿ ಯಾವ ಮೀನು ಅಧಿಕ ಲಭ್ಯವಾಗುತ್ತದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಿಂದ ಮೀನುಗಾರರ ಬಲೆಗೆ ಅಧಿಕವಾಗಿ ಬಂಗುಡೆ ಮೀನು ಬೀಳುತ್ತಿದೆ. ಆದ್ದರಿಂದಾಗಿ ಬಂಗುಡೆ ಮೀನಿನ ದರ ಭಾರೀ ಇಳಿಕೆಯಾಗಿದೆ. ಆದರೆ ಬಂಗುಡೆ ಮೀನಿಗೆ ಬೇಡಿಕೆಯೂ ಕುಗ್ಗಿದೆ. ಬೊಲೆಂಜಿರ್, ಕೊಡ್ಡಾಯಿ, ಸಿಗಡಿಯಂತಹ ಮೀನುಗಳಿಗೆ ಅಧಿಕ ಬೇಡಿಕೆಯಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+