ನವದೆಹಲಿ, ಜನವರಿ 09: ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಶೇಕಡ 100ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ತಿಳಿಸಿದೆ.
ಗುಜರಾತ್, ಮಹಾರಾಷ್ಟ್ರ ಮತ್ತು ದಾದ್ರಾ ಮತ್ತು ನಗರ ಹವೇಲಿಯಾದ್ಯಂತ ಬುಲೆಟ್ ರೈಲು ಯೋಜನೆ ಎಂದು ಜನಪ್ರಿಯವಾಗಿರುವ ಮುಂಬೈ-ಅಹಮದಾಬಾದ್ ರೈಲು ಕಾರಿಡಾರ್‌ಗಾಗಿ 100 ಪ್ರತಿಶತ ಭೂಸ್ವಾಧೀನವನ್ನು ಪೂರ್ಣಗೊಳಿಸಿದೆ ಎಂದು ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಸೋಮವಾರ ಹೇಳಿದೆ.

ಮುಂಬೈ ಮತ್ತು ಅಹಮದಾಬಾದ್ ನಡುವೆ ಹೈಸ್ಪೀಡ್ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್‌ನಲ್ಲಿ ಭೂಸ್ವಾಧೀನದ ಸ್ಥಿತಿಗತಿಯನ್ನು ಹಂಚಿಕೊಂಡಿದ್ದು, ಯೋಜನೆಗೆ ಅಗತ್ಯವಿರುವ ಸಂಪೂರ್ಣ 1389.49 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಎನ್‌ಎಚ್‌ಎಸ್‌ಆರ್‌ಸಿಎಲ್ ತನ್ನ ಪ್ರಕಟಣೆಯಲ್ಲಿ ಯೋಜನೆಯ ಎಲ್ಲಾ ಸಿವಿಲ್ ಗುತ್ತಿಗೆಗಳನ್ನು ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ನೀಡಲಾಗಿದ್ದು, 120.4 ಕಿಮೀ ಗರ್ಡರ್‌ಗಳನ್ನು ಪ್ರಾರಂಭಿಸಲಾಗಿದೆ. 271 ಕಿಮೀ ಪಿಯರ್ ಕಾಸ್ಟಿಂಗ್ ಪೂರ್ಣಗೊಂಡಿದೆ ಎಂದು ತಿಳಿಸಿದೆ.
"ಜಪಾನಿನ ಶಿಂಕನ್‌ಸೆನ್‌ನಲ್ಲಿ ಬಳಸಿದಂತೆ MAHSR ಕಾರಿಡಾರ್ ಟ್ರ್ಯಾಕ್ ಸಿಸ್ಟಮ್‌ಗಾಗಿ ಮೊದಲ ಬಲವರ್ಧಿತ ಕಾಂಕ್ರೀಟ್ (RC) ಟ್ರ್ಯಾಕ್ ಬೆಡ್ ಅನ್ನು ಹಾಕುವುದು ಸೂರತ್ ಮತ್ತು ಆನಂದ್‌ನಲ್ಲಿ ಪ್ರಾರಂಭವಾಗಿದೆ. ಇದನ್ನು ಭಾರತದಲ್ಲಿ ಮೊದಲ ಬಾರಿಗೆ ಜೆ- ಸ್ಲ್ಯಾಬ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಸಿಸ್ಟಮ್ ಅನ್ನು ಬಳಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಗುಜರಾತ್‌ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ 350 ಮೀಟರ್ ಉದ್ದ ಮತ್ತು 12.6 ಮೀಟರ್ ವ್ಯಾಸದ ಮೊದಲ ಪರ್ವತ ಸುರಂಗವನ್ನು ಕೇವಲ 10 ತಿಂಗಳಲ್ಲಿ ಪೂರ್ಣಗೊಳಿಸುವುದರೊಂದಿಗೆ ಮಹತ್ವದ ಮೈಲಿಗಲ್ಲನ್ನು ಸಾಧಿಸಲಾಗಿದೆ. ಮೊದಲ ಉಕ್ಕಿನ ಸೇತುವೆ, 70 ಮೀಟರ್ ವ್ಯಾಪಿಸಿರುವ ಮತ್ತು 673 ಮೆಟ್ರಿಕ್ ಟನ್ ತೂಕವನ್ನು ಸೂರತ್‌ನಲ್ಲಿ ಎನ್‌ಎಚ್ 53 ಗೆ ಅಡ್ಡಲಾಗಿ ನಿರ್ಮಿಸಲಾಗಿದೆ. 28 ರಲ್ಲಿ 16 ಅಂತಹ ಸೇತುವೆಗಳು ತಯಾರಿಕೆಯ ವಿವಿಧ ಹಂತಗಳಲ್ಲಿವೆ ಎಂದು ಅದು ಹೇಳಿದೆ.
MAHSR ಕಾರಿಡಾರ್‌ನಲ್ಲಿ 24 ರಲ್ಲಿ ಆರು ನದಿಗಳ ಮೇಲೆ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ, ಪಾರ್ (ವಲ್ಸಾದ್ ಜಿಲ್ಲೆ), ಪೂರ್ಣ (ನವಸಾರಿ ಜಿಲ್ಲೆ), ಮಿಂಧೋಲಾ (ನವಸಾರಿ ಜಿಲ್ಲೆ), ಅಂಬಿಕಾ (ನವಸಾರಿ ಜಿಲ್ಲೆ), ಔರಂಗ (ವಲ್ಸಾದ್ ಜಿಲ್ಲೆ) ಮತ್ತು ವೆಂಗನಿಯಾ (ನವಸಾರಿ ಜಿಲ್ಲೆ). ನರ್ಮದಾ, ತಪತಿ, ಮಾಹಿ ಮತ್ತು ಸಬರಮತಿ ನದಿಗಳ ಕಾಮಗಾರಿ ನಡೆಯುತ್ತಿದೆ ಎಂದು ಅದು ತಿಳಿಸಿದೆ.
ಕಾರ್ಯಾಚರಣೆಯ ಸಮಯದಲ್ಲಿ ರೈಲು ಮತ್ತು ಸಿವಿಲ್ ರಚನೆಗಳಿಂದ ಉಂಟಾಗುವ ಶಬ್ದವನ್ನು ತಗ್ಗಿಸಲು ವಾಯಡಕ್ಟ್‌ನ ಎರಡೂ ಬದಿಗಳಲ್ಲಿ ಶಬ್ದ ತಡೆಗಳನ್ನು ನಿರ್ಮಿಸಲಾಗುತ್ತಿದೆ. ಮಹಾರಾಷ್ಟ್ರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಶಿಲ್ಪಾಟಾ ನಡುವಿನ 21 ಕಿಮೀ ಉದ್ದದ ಸುರಂಗದ ಭಾಗವಾಗಿರುವ ಭಾರತದ ಮೊದಲ 7 ಕಿಮೀ ಸಾಗರದೊಳಗಿನ ರೈಲು ಸುರಂಗಕ್ಕಾಗಿ ಕೆಲಸ ಪ್ರಾರಂಭವಾಗಿದೆ. ಮುಂಬೈ ಎಚ್‌ಎಸ್‌ಆರ್ ನಿಲ್ದಾಣದ ನಿರ್ಮಾಣಕ್ಕಾಗಿ ಉತ್ಖನನ ಕಾರ್ಯಗಳು ಪ್ರಾರಂಭವಾಗಿದೆ ಎಂದು ಅದು ಹೇಳಿದೆ.
ಗುಜರಾತ್‌ನ ವಾಪಿ, ಬಿಲಿಮೋರಾ, ಸೂರತ್, ಭರೂಚ್, ಆನಂದ್, ವಡೋದರಾ, ಅಹಮದಾಬಾದ್ ಮತ್ತು ಸಬರಮತಿಯಲ್ಲಿನ ಎಚ್‌ಎಸ್‌ಆರ್ ನಿಲ್ದಾಣಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಜಪಾನ್‌ನ ಶಿಂಕನ್‌ಸೆನ್ ತಂತ್ರಜ್ಞಾನವನ್ನು ಬಳಸಿಕೊಂಡು ಹೈ-ಸ್ಪೀಡ್ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಯೋಜನೆಯು ಹೆಚ್ಚಿನ ಆವರ್ತನ ಸಮೂಹ ಸಾರಿಗೆ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ತಿಳಿಸಿದೆ.
ಜಪಾನ್‌ನಿಂದ 88,000 ಕೋಟಿ ರೂಪಾಯಿಗಳ ಮೃದು ಸಾಲದೊಂದಿಗೆ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಈ ಯೋಜನೆಗೆ ಹಣವನ್ನು ನೀಡಿದೆ. 1.10 ಲಕ್ಷ ಕೋಟಿ ವೆಚ್ಚದ ಯೋಜನೆಯು 2022 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ ಭೂಸ್ವಾಧೀನ ಕಾರ್ಯದಲ್ಲಿ ಅಡಚಣೆಗಳನ್ನು ಎದುರಿಸಿತು. 2026 ರ ವೇಳೆಗೆ ದಕ್ಷಿಣ ಗುಜರಾತ್‌ನ ಸೂರತ್ ಮತ್ತು ಬಿಲಿಮೋರಾ ನಡುವೆ ಬುಲೆಟ್ ರೈಲಿನ ಮೊದಲ ಹಂತವನ್ನು ಓಡಿಸಲು ಸರ್ಕಾರ ಗುರಿಯನ್ನು ಹೊಂದಿದೆ.


Click it and Unblock the Notifications