
ರಕ್ಷಣಾ, ಬಾಹ್ಯಾಕಾಶ ಹಾಗೂ ಅಣುಶಕ್ತಿ ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಪಾಕಿಸ್ತಾನದ ಕಂಪನಿಗಳು ಕೂಡಾ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಬಹುದಾಗಿದೆ. ಇದೇ ರೀತಿ ಪಾಕಿಸ್ತಾನದಲ್ಲಿ ಭಾರತದ ಕಂಪನಿಗಳು ನೇರ ಬಂಡವಾಳ ಹೂಡಿಕೆಗೆ ಅನುಮತಿ ಆಧಾರಿತ ಒಪ್ಪಿಗೆಯನ್ನು ನೀಡಲಾಗಿದೆ ಎಂದು ಆರ್ ಬಿಐ ಪ್ರಕಟಿಸಿದೆ.
ವಿದೇಶಿ ವಿನಿಮಯ ವ್ಯವಸ್ಥೆ (transfer or Issue of Any Foreign Security), Regulations, 2004 )ಯನ್ನು ಈ ಬಗ್ಗೆ ಸೂಕ್ತ ನಿಯಮಾವಳಿಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಆರ್ ಬಿಐ ಪ್ರಕಟಿಸಿದೆ.
ಬ್ಯಾಂಕಿಂಗ್ ನಲ್ಲೂ ಅನುಮತಿ: ಭಾರತ ಮತ್ತು ಪಾಕಿಸ್ತಾನದ ತಲಾ ಎರಡು ಬ್ಯಾಂಕ್ ಗಳು ಪರಸ್ಪರ ವಿನಿಮಯದ ರೀತಿಯಲ್ಲಿ ಎರಡೂ ರಾಷ್ಟ್ರಗಳಲ್ಲಿ ಶಾಖೆಗಳನ್ನು ಆರಂಭಿಸಲು ಅನುಮತಿ ದೊರೆತಿದೆ. ಬ್ಯಾಂಕ್ ಸ್ಥಾಪನೆ ಅನುಮತಿ ದೊರೆತಿದೆ.
ಭಾರತದ ಎರಡು ಬ್ಯಾಂಕ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ ಐ) ಮತ್ತು ಬ್ಯಾಂಕ್ ಆಫ್ ಇಂಡಿಯಾ (ಬಿ ಒ ಐ) ಪಾಕಿಸ್ತಾನದಲ್ಲಿ ಕಾರ್ಯಾಚರಿಸಲು ಪರವಾನಿಗೆ ಪಡೆದಿದೆ. ಇನ್ನೊಂದೆಡೆ ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನ್ ಮತ್ತು ಅಲ್ಲಿನ ಖಾಸಗಿ ಮಾಲಕತ್ವದ ಯುನೈಟೆಡ್ ಬ್ಯಾಂಕ್ ಲಿಮಿಟೆಡ್ ಭಾರತದ ಗಡಿ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆ ಆರಂಭಿಸಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಆರ್ಥಿಕ ವ್ಯವಹಾರ, ಆಮದು ರಫ್ತು ನಿರಂತರವಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.


Click it and Unblock the Notifications