
ppf ಬಡ್ಡಿದರವನ್ನು ಶೇ 0.1ರಷ್ಟು ಇಳಿಕೆ ಮಾಡಲಾಗಿದ್ದು ಶೇ 8.7ಕ್ಕೆ ತರಲಾಗಿದೆ. ಇದೇ ರೀತಿ ಐದು ವರ್ಷಗಳ ಕಾಲದ National
Savings Certificate (NSC) ಶೇ 8.6 ರಿಂದ ಶೇ 8.5 ಕ್ಕೆ ಇಳಿಸಲಾಗಿದೆ. 10 ವರ್ಷದ ಎನ್ ಎಸ್ ಸಿ ಬಡ್ಡಿದರ ಶೇ 8.9 ರಿಂದ ಶೇ 8.8 ಕ್ಕೆ ಇಳಿದಿದೆ. ಆದರೆ, ಉಳಿತಾಯ ಖಾತೆ ಹೂಡಿಕೆ ಹಾಗೂ ಒಂದು ವರ್ಷದ ಹೂಡಿಕೆಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಶೇ.0.10ರಷ್ಟು ಕಡಿತಗೊಳಿಸಿವೆ. ಇದರಿಂದಾಗಿ ಲಕ್ಷಾಂತರ ಸಣ್ಣ ಉಳಿತಾಯಗಾರರು ಹಾಗೂ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆದಾರರಿಗೆ ಸ್ವಲ್ಪ ನಷ್ಟವಾಗಲಿದೆ. 2013ರ ಏಪ್ರಿಲ್.1 ರಿಂದ ಅನ್ವಯವಾಗುವಂತೆ ಪಿಪಿಎಫ್‌ನ ಬಡ್ಡಿ ದರವನ್ನು ಶೇ.8.8 ರಿಂದ 8.7 ಕ್ಕೆ ಇಳಿಸಲಾಗುತ್ತದೆ ಎಂದು ಆರ್ಥಿಕ ಸಚಿವಾಲಯ ಹೇಳಿದೆ.
ಸಣ್ಣ ಉಳಿತಾಯಗಳ ಗಳಿಕೆಯನ್ನು ಮಾರುಕಟ್ಟೆ ದರಗಳೊಂದಿಗೆ ಹೊಂದಾಣಿಕೆ ಮಾಡುವ ಸರ್ಕಾರದ ಕಳೆದ ವರ್ಷದ ನಿರ್ಧಾರದ ಪ್ರಕಾರ ಬಡ್ಡಿ ದರಗಳನ್ನು ಮರು ವಿಮರ್ಶಿಸಲಾಗಿದೆ. ಹೊಸ ಬಡ್ಡಿದರಗಳನ್ನು ನೂತನ ಆರ್ಥಿಕ ವರ್ಷಾರಂಭದಲ್ಲಿ ಘೋಷಿಸಬೇಕಾಗಿದೆ.ಶ್ಯಾಮಲಾಲ್ ಗೋಪಿನಾಥ್ ಸಮಿತಿಯ ಶಿಫಾರಸುಗಳನ್ವಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
PPF: ಅಂಚೆ ಕಚೇರಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ), ಐಸಿಐಸಿಐ ಸೇರಿದಂತೆ ಕೆಲವು ಬ್ಯಾಂಕ್ ಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯನ್ನು ತೆರೆಯಬಹುದು.
ಸಂಬಳದಾರರಿಗೆ ಮತ್ತು ಸ್ವಉದ್ಯೋಗಸ್ಥರಿಗೆ ಆದಾಯ ತೆರಿಗೆ ಉಳಿಸಲು ಇದು ಹೇಳಿ ಮಾಡಿಸಿದ ಖಾತೆ. ಆದಾಯ ತೆರಿಗೆ ಕಾಯ್ದೆಯ 80ಸಿ ಸೆಕ್ಷನ್ ಅಡಿ ಈ ಖಾತೆಯಲ್ಲಿ 1 ಲಕ್ಷ ರು.ವರೆಗೆ ಜಮಾ ಮಾಡಿದ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ದೊರೆಯುತ್ತದೆ. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ [ಪಿಪಿಎಫ್ ಖಾತೆ ತೆರೆಯುವುದು ಹೇಗೆ?]
ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF) ಖಾತೆ ವರ್ಗಾಯಿಸುವುದು ಸ್ವಲ್ಪ ಕಿರಿಕಿರಿ ಉಂಟು ಮಾಡುತ್ತದೆ. ದೈನಂದಿನ ಕೆಲಸದ ಒತ್ತಡದಲ್ಲಿ ಬಿಡುವು ಮಾಡಿಕೊಂಡು ಖಾತೆ ವರ್ಗಾಯಿಸುವುದು ಕಷ್ಟವಾಗುತ್ತದೆ. ppf ಖಾತೆಯನ್ನು ಅಂಚೆಕಚೇರಿಯಿಂದ ಬ್ಯಾಂಕ್ ಹಾಗೂ ಬ್ಯಾಂಕಿನಿಂದ ಅಂಚೆಕಚೇರಿಗೆ ವರ್ಗಾಯಿಸುವ ಸುಲಭ ವಿಧಾನ ಇಲ್ಲಿದೆ. [PPF ಖಾತೆ ವರ್ಗಾಯಿಸುವುದು ಹೇಗೆ?]
| ಬಡ್ಡಿದರ ಪರಿಷ್ಕರಣೆ ವಿವರ | |||
| ಯೋಜನೆ | ಬಡ್ಡಿ ದರ w.e.f. 01.04.2012 | ಬಡ್ಡಿ ದರ w.e.f. 01.04.2013 | |
| ಉಳಿತಾಯ ಹೂಡಿಕೆ | 4.0 | 4.0 | |
| 1 ವರ್ಷ ಅವಧಿ ಹೂಡಿಕೆ | 8.2 | 8.2 | |
| 2 ವರ್ಷ ಅವಧಿ ಹೂಡಿಕೆ | 8.3 | 8.2 | |
| 3 ವರ್ಷ ಅವಧಿ ಹೂಡಿಕೆ | 8.4 | 8.3 | |
| 5 ವರ್ಷ ಅವಧಿ ಹೂಡಿಕೆ | 8.5 | 8.4 | |
| 5 ವರ್ಷ ಅವಧಿ Recurring Deposit | 8.4 | 8.3 | |
| 5 ವರ್ಷ ಅವಧಿ SCSS | 9.3 | 9.2 | |
| 5 ವರ್ಷ ಅವಧಿ MIS | 8.5 | 8.4 | |
| 5 ವರ್ಷ NSC | 8.6 | 8.5 | |
| 10 ವರ್ಷ NSC | 8.9 | 8.8 | |
| PPF | 8.8 | 8.7 | |


Click it and Unblock the Notifications