ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ತಮ್ಮ ಹಣಕಾಸು ತನ್ನ ಹೊಸ ನೀತಿಯನ್ನು ಪ್ರಚುರಪಡಿಸಿದೆ. ಹಿಂದಿನ ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ ಎಂದು ತಿಳಿಸಿದೆ.
ರೆಪೋ ದರದಲ್ಲಿ ಬದಲಾವಣೆಯಿಲ್ಲ
ರೆಪೋ ದರದಲ್ಲೂ ಆರ್ ಬಿಐ ಯಾವುದೇ ಬದಲಾವಣೆ ಮಾಡಿಲ್ಲ. ಹಿಂದಿನ ಶೇ. 7.75 ದರವನ್ನೇ ಕಾಯ್ದುಕೊಳ್ಳಲಾಗಿದೆ. ಇದು ಭಾರತದ ಎಲ್ಲ ಬ್ಯಾಂಕ್ ಗಳ ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸಲಿದೆ.[ವಿಲ್ ಮಾಡಿಸಿದರೆ ಸಾಲದು, ನೋಂದಣಿಯೂ ಆಗಿರಬೇಕು]

ಎಸ್ ಎಲ್ ಆರ್ ಕಡಿತ
ಪ್ರಸಕ್ತ ಹಣಕಾಸು ನೀತಿಯಲ್ಲಿ ಬ್ಯಾಂಕ್ ಗಳ ಬಂಡವಾಳ ಸಂಗ್ರಹ ದರವನ್ನು ಕಡಿಮೆ ಮಾಡಿದೆ. ಚಿನ್ನ, ಹಣ ಅಥವಾ ಇನ್ನಿತರ ಆಧಾರಲ್ಲಿ ಬ್ಯಾಂಕ್ ಗಳು ಇಟ್ಟುಕೊಳ್ಳಬೇಕಿದ್ದ ಆಸ್ತಿಯ ಪ್ರಮಾಣ ಇದರಿಂದ ಕಡಿಮೆಯಾಗಲಿದೆ. ಬ್ಯಾಂಕ್ ಗಳಿಗೆ 50 ಮೂಲಾಂಕಗಳ ವಿನಾಯಿತಿ ದೊರೆಯಲಿದೆ. ಫೆಬ್ರವರಿ 7 ರಿಂದ ಬ್ಯಾಂಕ್ ಗಳು ಲಾಭ ಪಡೆದುಕೊಳ್ಳಲಿವೆ.[ಒಂದೇ ದಿನ 380 ಅಂಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್]
ಹಣದುಬ್ಬರ ಮೇಲಿನ ಅಪಾಯಗಳು
ಹಣಕಾಸು ನೀತಿಯಲ್ಲಿ ಆರ್ ಬಿಐ ಹಣದುಬ್ಬರದ ಮೇಲಿನ ಅಪಾಯಗಳನ್ನು ವಿವರಿಸಿದೆ. ಆರ್ಥಿಕ ವ್ಯವಸ್ಥೆಯಲ್ಲಿನ ದಿಢೀರ್ ಬದಲಾವಣೆ, ಮಾನ್ಸೂನ್ ವಿಳಂಬ ಅಥವಾ ಕೈ ಕೊಡುವಿಕೆ, ಅಂತಾರಾಷ್ಟ್ರೀಯ ಸಂಬಂಧಗಳಲ್ಲಿನ ಬದಲಾವಣೆ ಎಲ್ಲವೂ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದ್ದು ಪರಿಹಾರದ ಮಾರ್ಗಗಳನ್ನು ಚಿಂತಿಸಲಾಗಿದೆ ಎಂದು ಹೇಳಿದೆ.
ಪ್ರತಿನಿತ್ಯ ಬದಲಾಗುವ ಬೆಲೆಗಳು
ಪ್ರತಿನಿತ್ಯ ಬದಲಾಗುವ ಮೂಲ ಭೂತ ವಸ್ತುಗಳ ಬೆಲೆ ನಿಯಂತ್ರಣಕ್ಕೂ ರಿಸರ್ವ್ ಬ್ಯಾಂಕ್ ಕ್ರಮ ತೆಗೆದುಕೊಂಡಿದೆ. ರೆಫೋ ದರ ಮತ್ತು ರಿಸರ್ವ್ ರೆಪೋ ದರದ ಪರಿಮಾಣ ಅರಿತು ಹೆಜ್ಜೆ ಇಡಲಾಗುವುದು ಎಂದು ತಿಳಿಸಿದೆ.
ಕುಸಿದ ಬ್ಯಾಂಕಿಂಗ್ ಷೇರುಗಳು
ಆರ್ ಬಿಐ ಹಣಕಾಸು ನೀತಿ ಮಂಡನೆ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಷೇರುಗಳು ಮಾರುಕಟ್ಟೆಯಲ್ಲಿ ಕುಸಿತ ಕಂಡವು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. 3.5 ಕುಸಿತ ಕಂಡಿತು. ಎಚ್ ಡಿಎಫ್ ಸಿ ಮತ್ತು ಕೋಟಕ್ ಬ್ಯಾಂಕ್ ಷೇರುಗಳು ಸಹ ಅಲ್ಪ ಪ್ರಮಾಣದ ಕುಸಿತ ಅನುಭವಿಸಿದವು.(ಗುಡ್ ರಿಟರ್ನ್ಸ್.ಇನ್)
More From GoodReturns

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications