ಟೆಲಿಕಾಂ ರಂಗದ ದಿಗ್ಗಜ ಸಂಸ್ಥೆ ರಿಲಾಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಖರೀದಿ ಮಾಡುವವರಿಗೆ ಜಿಯೊ ಡಿಜಿಟಲ್ ನ ಪೂರಕ ಸೇವೆಗಳನ್ನು 12 ತಿಂಗಳ ಅವಧಿಗೆ ಘೋಷಿಸಿದೆ. ಈಗಾಗಲೇ ಸೆಪ್ಟಂಬರ್ 5 ರಿಂದ ರಿಲಾಯನ್ಸ್ ಜಿಯೊ ಜಿಯೊ ವೆಲ್ ಕಮ್ ಆಫರ್ ಪ್ರಾರಂಭಿಸಲಾಗಿದೆ. ಅದೇ ರೀತಿ ಏರ್ಟೆಲ್ ಕೂಡ ಜಿಯೊಗೆ ಪ್ರತಿಸ್ಪರ್ಧಿಯಾಗಿ 10GB ಡೇಟಾ ಆಫರ್ ಘೋಷಿಸಿದೆ. ರಿಲಾಯನ್ಸ್ ಜಿಯೊ 4ಜಿ ಫ್ರೀ ವೆಲ್‌ಕಮ್ ಆಫರ್ ಸ್ಟಾರ್ಟ್
12 ತಿಂಗಳು ಸೌಲಭ್ಯ
ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 6s, ಐಫೋನ್ 6s ಪ್ಲಸ್ ಅಥವಾ ಐಫೋನ್ SE ಫೋನ್ ಗಳನ್ನು ರಿಲಾಯನ್ಸ್ ಡಿಜಿಟಲ್ ನಲ್ಲಿ ಖರೀದಿಸಿ AAR & APR ಆಯ್ಕೆ ಮಾಡಿದರೆ 18,000 ಮೌಲ್ಯದ ಜಿಯೊ ಡಿಜಿಟಲ್ ಸೇವೆಗಳನ್ನು 12 ತಿಂಗಳ ಅವಧಿಗೆ ಪಡೆಯಬಹುದಾಗಿದೆ.
ಉಚಿತ ಸೇವೆಗಳೇನು?
ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರಾಷ್ಟ್ರೀಯ ರೋಮಿಂಗ್ ಧ್ವನಿ, ಅನಿಯಮಿತ ಟೆಕ್ಸ್ಟ್,20 4G ಡೇಟಾ ಜಿಬಿ,40 ವೈಫೈ ಡೇಟಾ GB, ಅನಿಯಮಿತ ನೈಟ್ 4G ಡೇಟಾ, ಪ್ರೀಮಿಯಂ Jio ಅಪ್ಲಿಕೇಶನ್ ಗಳ ಅನಿಯಮಿತ ಚಂದಾ ಮಾಡಬಹುದಾಗಿದೆ. ರಿಲಾಯನ್ಸ್ ಜಿಯೊ 4ಜಿ ಮತ್ತು 'ಫ್ರೀ ಹೈಪ್' ಬಗ್ಗೆ ನಿಮಗೆ ಗೊತ್ತಿರದ ಕೆಲ ಅಂಶಗಳು
ಐಫೋನ್ ಗ್ರಾಹಕ ವಿಶೇಷ ಸೇವೆ
ಐಫೋನ್ ಗ್ರಾಹಕರು ಜಿಯೊ ನೆಟ್ವರ್ಕ್ ನಲ್ಲಿ 300 ಗಿಂತಲೂ ಹೆಚ್ಚಿನ ಚಾನೆಲ್ ಗಳನ್ನು ವಿಕ್ಷಿಸಬಹುದಾಗಿದೆ.
ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 6s, ಐಫೋನ್ 6s ಪ್ಲಸ್ ಅಥವಾ ಐಫೋನ್ SE ಫೋನ್ ಗಳನ್ನು ಬಳಸುವ ಕಾರ್ಪೋರೇಟ್ ಗ್ರಾಹಕರಿಗೆ ಜಿಯೊ ವಿಶೇಷ ಟ್ಯಾರಿಪ್ ಪ್ಲಾನ್ ಗಳನ್ನು ಒದಗಿಸಲಿದೆ.
ಏರಟೆಲ್ ಆಫರ್
ರಿಲಾಯನ್ಸ್ ಜಿಯೊ ಗೆ ಪ್ರತಿಸ್ಪರ್ಧಿಯಾಗಿ ಏರ್ಟೆಲ್ ಒಂದು ವರ್ಷದವರೆಗೆ ಪ್ರತಿ ತಿಂಗಳು 10GB 3G/4G ಡೇಟಾವನ್ನು ಪೊಸ್ಟ್ ಪೇಡ್ ಗ್ರಾಹಕರಿಗೆ ಒದಗಿಸುತ್ತಿದೆ. ಜಿಯೊ ಎಫೆಕ್ಟ್: ಏರ್‌ಟೆಲ್ ಅನ್‍ಲಿಮಿಟೆಡ್ 4ಜಿ ಫ್ರೀ ಆಫರ್ ಘೋಷಣೆ
ಅದ್ಬುತ ಡೇಟಾ ಸೇವೆ
2ನೇ ದೊಡ್ಡ ಮಾರುಕಟ್ಟೆ
ಜಗತ್ತಿನ ಎರಡನೇ ಅತಿದೊಡ್ಡ ದೂರವಾಣಿ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಏರ್ಟೆಲ್ ಮತ್ತು ರಿಲಾಯನ್ಸ್ ಕಂಪನಿಗಳು ಗ್ರಾಹಕರನ್ನು ಒಲಿಸಿಕೊಳ್ಳಲು ಭಾರಿ ಪ್ರಮಾಣದ ಆಫರ್ ಗಳನ್ನು ಘೋಷಿಸಿ ತಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications