ಐಪಿಎಲ್(IPL) ಚಿಯರ್ ಲೀಡರ್ಸ್ ಸಂಭಾವನೆ ಎಷ್ಟು ಗೊತ್ತೆ?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಚಿಯರ್ ಲೀಡರ್ ಗಳು ಐಪಿಎಲ್ ಭಾಗವಾಗಿ ಮಾರ್ಪಟ್ಟಿದ್ದಾರೆಂದರೆ ಅತಿಶಯೋಕ್ತಿ ಎನಿಸಲಾರದು. ಚಿಯರ್ ಲೀಡರ್ ಗಳಿರದ ಐಪಿಎಲ್ ಪಂದ್ಯಗಳನ್ನು ಊಹಿಸುವುದು ಅಸಾಧ್ಯ ಅನ್ನುವಷ್ಟರ ಮಟ್ಟಿಗೆ ವೀಕ್ಷಕರ ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದಾರೆ ಎನ್ನಬಹುದು.

  ಐಪಿಎಲ್(IPL) ಚಿಯರ್ ಲೀಡರ್ಸ್ ಸಂಭಾವನೆ ಎಷ್ಟು ಗೊತ್ತೆ?

  ಪಂದ್ಯಗಳ ಸಂದರ್ಭದಲ್ಲಿ ಆಟಗಾರರು ಸಿಕ್ಸರ್, ಬೌಂಡರಿ ಹೊಡೆದಾಗ ಇಲ್ಲವೇ ವಿಕೆಟ್ ಕಬಳಿಸಿದಾಗ ಚಿಯರ್ ಗರ್ಲ್ಸ್ ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಪ್ರೇಕ್ಷಕರನ್ನು ಮತ್ತು ಆಟಗಾರರನ್ನು ಹುರಿದುಂಬಿಸುವ ಚಿಯರ್ ಲೀಡರ್ ಎಷ್ಟು ಹಣ ಸಂಪಾದನೆ ಅಥವಾ ಸಂಭಾವನೆ ಪಡೆಯಬಹುದು ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿರಲೂಬಹುದು.

  ಕೇವಲ 15-20 ಸಾವಿರ

  ವರದಿಗಳ ಪ್ರಕಾರ ಚಿಯರ್ ಲೀಡರ್ಸ್ ಒಂದು ಪಂದ್ಯಕ್ಕೆ 15 ರಿಂದ 20 ಸಾವಿರ ಹಣ ಸಂಪಾದನೆ ಮಾಡ್ತಾರೆ. ಇನ್ನೂ ಕೆಲವರಲ್ಲಿ ಚಿಯರ್ ಲೀಡರ್ಸ್ ತುಂಬಾ ಹಣ ಸಂಪಾದನೆ ಮಾಡ್ತಾರೆ ಎಂಬ ಗ್ರಹಿಕೆ, ಊಹೆಗಳು ಇದೆ.

  ಬೋನಸ್ ಕೂಡ ಲಭ್ಯ

  ಒಂದು ವೇಳೆ ಚಿಯರ್ ಲೀಡರ್ಸ್ ಗಳಿರುವ ತಂಡ ಪಂದ್ಯವನ್ನು ಗೆದ್ದುಕೊಂಡರೆ ಬೋನಸ್ ಕೂಡ ಲಭ್ಯವಿರುತ್ತದೆ. ಕೆಲವೊಮ್ಮೆ ಬೋನಸ್ ಸಿಗಬಹುದು ಇಲ್ಲವೆ ಸಿಗದೆ ಇರಬಹುದು. ಅದನ್ನು ಖಚಿತವಾಗಿ ಹೇಳಲಾಗದು.

  ಒಂದು ಸೀಜನ್ ಗಳಿಕೆ ಎಷ್ಟು?

  ಒಂದು ಐಪಿಎಲ್ ಋತುವಿನಲ್ಲಿ(season) ಕಡಿಮೆಯೆಂದರೂ 14 ಪಂದ್ಯಗಳಿರುತ್ತವೆ. ಈ ಎಲ್ಲಾ ಪಂದ್ಯಗಳಲ್ಲಿ ಚಿಯರ್ ಲೀಡರ್ಸ್ ನೃತ್ಯ ಮಾಡಿದರೆ ಹೆಚ್ಚು ಕಡಿಮೆ 4 ಲಕ್ಷ ಹಣ ಸಂಪಾದನೆ ಮಾಡಬಹುದಂತೆ!

  ಇತರೆ ವೆಚ್ಚ

  ಪ್ರಯಾಣ ಮತ್ತು ಹೋಟೆಲ್ ಗಳಲ್ಲಿ ತಂಗಲು ತಗಲುವ ಇತರೆ ಶುಲ್ಕಗಳನ್ನು ಸಹ ಪ್ರಾಂಚೈಸಿಗಳು ಪಾವತಿಸುತ್ತವೆ. ಇದು ಪ್ರಾಂಚೈಸಿಗಳ ಮೇಲೆ ಅವಲಂಬಿತವಾಗಿದ್ದು, ಅವು ಎಷ್ಟು ಬೇಕಾದರೂ ಹಣ ಪಾವತಿಸಬಹುದು. ಇದು ಹೆಚ್ಚಿರಬಹುದು ಇಲ್ಲವೆ ತುಂಬಾ ಕಡಿಮೆ ಇರಬಹುದು.

  ಶೇ. 10ರಷ್ಟು ಸಂಭಾವನೆ ಹೆಚ್ಚಳ

  ವರದಿ ಪ್ರಕಾರ ಐಪಿಎಲ್ 9ನೇ ಆವೃತ್ತಿಯಿಂದ ಚಿಯರ್ ಗರ್ಲ್ಸ್ ಸಂಭಾವನೆಯನ್ನು ಶೇ. 10ರಷ್ಟು ಹೆಚ್ಚಿಸಲಾಗಿದೆ. ಕನಿಷ್ಟ 12,000 ಸಂಭಾವನೆ ಪಡೆಯುತ್ತಾರೆ. ತಂಡ ಗೆದ್ದರೆ ಇದರ ಜತೆ ಬೋನಸ್ ಕೂಡ ಸೇರುತ್ತದೆ.

  KKR ಚಿಯರ್ ಗರ್ಲ್ಸ್ ಗಳಿಕೆ ಎಷ್ಟು?

  ಈಗಿರುವ ಪ್ರಾಂಚೈಸಿಗಳಲ್ಲಿ ಕೆಕೆಆರ್ ತನ್ನ ಚಿಯರ್ ಗರ್ಲ್ಸ್ ಗಳಿಗೆ ಹೆಚ್ಚು ಪರಿಹಾರ/ಸಂಭಾವನೆ ನೀಡುತ್ತಿದೆ.
  ಸಂಭಾವನೆ: Rs. 12,000
  ಬೋನಸ್: 3,000
  ಎಕ್ಸ್ಟ್ರಾ ಅಫಿಯರೆನ್ಸ್: 12,000

  RCB ಚಿಯರ್ ಗರ್ಲ್ಸ್ ಗಳಿಕೆ ಎಷ್ಟು?

  ಕೆಕೆಆರ್ ನಂತರದಲ್ಲಿ ಚಿಯರ್ ಗರ್ಲ್ಸ್ ಗಳಿಗೆ ಹೆಚ್ಚು ಪರಿಹಾರ/ಸಂಭಾವನೆ ನೀಡುತ್ತಿರುವ ತಂಡವೆಂದರೆ ಬೆಂಗಳೂರು ರಾಯಲ್ ಚಾಲೆಂಜರ್ಸ್.
  ಸಂಭಾವನೆ: 10,000
  ಬೋನಸ್: 3,000
  ಎಕ್ಸ್ಟ್ರಾ ಅಫಿಯರೆನ್ಸ್: Rs. 10,000

  ಮುಂಬೈ ಇಂಡಿಯನ್ ಮತ್ತು ಇನ್ನಿತರ ತಂಡಗಳು?

  ಮುಂಬೈ ಇಂಡಿಯನ್ ಸೇರಿದಂತೆ ಇನ್ನಿತರ ತಂಡಗಳು ರೂ. 7-8 ಸಾವಿರ ಪರಿಹಾರ/ಸಂಭಾವನೆ ನೀಡುತ್ತವೆ. ಇದರ ಜತೆಗೆ 3 ಸಾವಿರ ಬೋನಸ್ ಕೂಡ ನೀಡಲಾಗುತ್ತದೆ.
  ಸಂಭಾವನೆ: 7000-8000
  ಬೋನಸ್: 3,000
  ಎಕ್ಸ್ಟ್ರಾ ಅಫಿಯರೆನ್ಸ್: ಪಂದ್ಯಗಳಿಗೆ ಅನುಗುಣವಾಗಿ (as per the match fees)

  ಪ್ರಾಂಚೈಸಿಗಳ ಪಾತ್ರ

  ಚಿಯರ್ ಲೀಡರ್ಸ್ ಬಗ್ಗೆ ಪ್ರಾಂಚೈಸಿಗಳ ಕೈಗೊಳ್ಳುವ ಪಾತ್ರ ಕೂಡ ಅಷ್ಟೇ ಮುಖ್ಯ ಇರುತ್ತದೆ. ಪ್ರತಿ ಪ್ರಾಂಚೈಸಿಗಳು ತಮ್ಮ ತಂಡದ ಚಿಯರ್ ಗರ್ಲ್ಸ್ ಮೇಲೆ ವಿಶೇಷ ಕಾಳಜಿ ವಹಿಸಿ, ಅವರ ಆಗುಹೋಗುಗಳನ್ನು ವಿಚಾರಿಸುತ್ತವೆ.

  Read more about: ipl money salary finance news
  English summary

  how cheerleaders earn money and what is their salary In IPL?

  Cheerleaders have become integral part IPL. For every 4 or every 6 during the match, these cheerleaders are ready to dance and entertain the audience, thus attracting them.
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more