For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಮಹಿಮೆ! 3 ಲಕ್ಷದವರೆಗೆ ಕಾರುಗಳ ಬೆಲೆ ಇಳಿಕೆ..!!

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(GST) ಜಾರಿಯಾಗಿದ್ದೆ ತಡ ವಾಹನ ತಯಾರಕ ಕಂಪನಿಗಳು ತಮ್ಮ ವಿಭಿನ್ನ ಮಾದರಿಯ ಕಾರುಗಳ ಬೆಲೆಯನ್ನು 3 ಲಕ್ಷಗಳವರೆಗೆ ಇಳಿಸಿವೆ.

By Siddu
|

ವಾಹನ ಪ್ರಿಯರ ಪಾಲಿಗೆ ಇದು ಸಂತಸದ ಸುದ್ದಿ!. ದೀಪಾವಳಿ ಹಬ್ಬದ ಸಂದರ್ಭದಲ್ಲೂ ಕೂಡ ಇಂತಹ ಆಫರ್ ಪಡೆದಿರಲಿಲ್ಲ. ಹಾಗಾಗಿ ದೀಪಾವಳಿಗೆ ಮುನ್ನವೆ ದೀಪಾವಳಿಯ ಸಂಭ್ರಮ..!

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(GST) ಜಾರಿಯಾಗಿದ್ದೆ ತಡ ವಾಹನ ತಯಾರಕ ಕಂಪನಿಗಳು ತಮ್ಮ ವಿಭಿನ್ನ ಮಾದರಿಯ ಕಾರುಗಳ ಬೆಲೆಯನ್ನು ಇಳಿಸಿವೆ. ಈಗಾಗಲೇ ಕೆಲ ಬೈಕ್, ಕಾರು, ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪಾದಕರು ಭಾರೀ ಡಿಸ್ಕೌಂಟ್ ಗಳನ್ನು ಘೋಷಿಸಿದ್ದಾರೆ. (ಜಿಎಸ್ಟಿ ಎಫೆಕ್ಟ್: ಯಾವುದು ದುಬಾರಿ, ಯಾವುದು ಅಗ್ಗ..?)

ಹಲವು ಪ್ರಮುಖ ಕಂಪನಿಗಳು 3 ಲಕ್ಷಗಳವರೆಗೆ ಬೆಲೆಗಳನ್ನು ಕಡಿತಗೊಳಿಸಿದ್ದು, ಯಾವ ಕಂಪನಿಯ ಯಾವ ಕಾರುಗಳ ಮೇಲೆ ಎಷ್ಟು ಡಿಸ್ಕೌಂಟ್ ಇದೆಯೆಂಬುದನ್ನು ನೋಡೋಣ.

ಬೆಲೆ ಇಳಿಕೆಗೆ ಕಾರಣ?

ಬೆಲೆ ಇಳಿಕೆಗೆ ಕಾರಣ?

ಜಿಎಸ್ಟಿ ಅಡಿಯಲ್ಲಿ ಕಾರುಗಳ ಮೇಲೆ ಶೇ. 28ರಷ್ಟು ತೆರಿಗೆ ವಿಧಿಸುವ ಜತೆಗೆ ಆಯಾ ಕಾರುಗಳ ಸಾಮರ್ಥ್ಯಕ್ಕೆ ತಕ್ಕಂತೆ ಶೇ. 1-15ರವರೆಗೆ ಸೆಸ್ ವಿಧಿಸಲಾಗುತ್ತದೆ.
ಜಿಎಸ್ಟಿ ಅಡಿಯಲ್ಲಿ ಸಣ್ಣ ಕಾರುಗಳಿಗೆ ನಿಗದಿ ಮಾಡಲಾಗಿರುವ ಅತ್ಯಧಿಕ ದರ ಶೇ. 28 ಜತೆಗ ಹೆಚ್ಚುವರಿಯಾಗಿ ಶೇ. 1ರಷ್ಟು ಸೆಸ್ ವಿಧಿಸಲಾಗುತ್ತದೆ. ಮದ್ಯಮ ಗಾತ್ರದ ಕಾರುಗಳ ಜಿಎಸ್ಟಿ ದರದೊಂದಿಗೆ ಶೇ. 3ರಷ್ಟು ಹಾಗೂ ಐಷಾರಾಮಿ ಕಾರುಗಳ ಮೇಲೆ ಶೇ. 15ರಷ್ಟು ಸೆಸ್ ವಿಧಿಸಲ್ಪಡುತ್ತದೆ. ಈ ಹಿಂದೆ ಗರಿಷ್ಠ ಶೇ. 48ರಷ್ಟು ತೆರಿಗೆ ವಿಧಿಸಲಾಗುತಿತ್ತು. ಆದರೆ ಈಗ ಜಿಎಸ್ಟಿ ಅಡಿಯಲ್ಲಿ ಗರಿಷ್ಠ ಶೇ. 43 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಮಾರುತಿ ಸುಜುಕಿ

ಮಾರುತಿ ಸುಜುಕಿ

ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ವಿವಿಧ ಮಾದರಿಯ ಕಾರುಗಳ ಮೇಲೆ ಗರಿಷ್ಠ 35 ಸಾವಿರದವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ.
ಆಲ್ಟೋ (Alto) ಬೆಲೆ ಕಡಿತದ ವ್ಯಾಪ್ತಿ: ರೂ. 2,300-5,400
ವಾಗ್ನರ್ (Wagonar): ರೂ. 5,300-8,300
ಸ್ವಿಪ್ಟ್ (Swift): ರೂ. 6,700-10,700
ಡಿಜೈರ್ (Dzire): ರೂ. 8,100-15,100
ಬಲೆನೊ (Baleno): ರೂ. 6,600-10,700
ಈರ್ಟಿಗಾ (Ertiga): ರೂ. 21,800ವರೆಗೆ (ಜಿಎಸ್ಟಿ ಜಾರಿ: 0%, 5%, 12%, 18% ತೆರಿಗೆ ಪಟ್ಟಿಗೆ ಬರುವ ಪದಾರ್ಥಗಳ ವಿವರ)

ಟೋಯೊಟಾ ಮೋಟಾರ್

ಟೋಯೊಟಾ ಮೋಟಾರ್

ಟೋಯೊಟಾ ಕಂಪನಿ ತನ್ನ ವಿಭಿನ್ನ ಮಾಡೆಲ್ ಕಾರುಗಳ ಬೆಲೆಯನ್ನು ರೂ. 10,500 ರಿಂದ 2.17 ಲಕ್ಷದವರೆಗೆ ಗಣನೀಯವಾಗಿ ಇಳಿಸಿದೆ.
ಫಾರ್ಚೂನರ್(Fortuner): ರೂ. 2.17 ಲಕ್ಷದವರೆಗೆ
ಇನ್ನೋವಾ(Innova Crysta): ರೂ. 98,500
ಪ್ಲಾಟಿನಮ್ ಎಟಿಯೋಸ್(Platinum Etios: ರೂ. 24,500
ಎಟಿಯೋಸ್ ಲಿವಾ(Etios Liva): ರೂ. 10,500

ಹೊಂಡಾ ಕಾರ್

ಹೊಂಡಾ ಕಾರ್

ಹೊಂಡಾ ಕಾರ್ ಇಂಡಿಯಾ ಕಂಪನಿ ಇದರ ವಿವಧ ಮಾಡೆಲ್ ಮೇಲೆ ರೂ. 1.31 ಲಕ್ಷದವರೆಗೆ ಬೆಲೆ ಇಳಿಸಿದೆ.
ಸೆಡಾನ್ ಸಿಟಿ (Sedan city): ರೂ. 16,510-28,005
ಎಸ್ಯುವಿ (SUV CR-V): ರೂ. 1.31 ಲಕ್ಷ
ಬ್ರಿಯೋ (Brio): ರೂ. 12,279
ಅಮೇಜ್ (Amaze): ರೂ. 14,825
WR-V: ರೂ. 10,064

ಫೋರ್ಡ್

ಫೋರ್ಡ್

ಫೋರ್ಡ್ ಕಂಪನಿ ಶೇ. 4.5ರಷ್ಟು ಬೆಲೆ ಇಳಿಸಿದ್ದು, ರೂ. 3 ಲಕ್ಷದವರೆಗೆ ಬೆಲೆ ಕಡಿತಗೊಳಿಸಿದೆ.
ಎಸ್ ಯುವಿ( SUV Endeavour): ರೂ. 3 ಲಕ್ಷ(ಮುಂಬೈ)
ಫಿಗೋ(Figo): ರೂ. 2,000 (ದೆಹಲಿ)
SUV Ecosport: ರೂ. 8,000 (ದೆಹಲಿ)
SUV Endeavour: ರೂ. 1.5 ಲಕ್ಷ (ದೆಹಲಿ)

ಬಿಎಂಡಬ್ಲ್ಯೂ

ಬಿಎಂಡಬ್ಲ್ಯೂ

ಜರ್ಮನ್ ಮೂಲದ ಈ ಕಂಪನಿ ಕೂಡ ಬೆಲೆ ಕಡಿತಗೊಳಿಸಿದ್ದು, ಸೆಡಾನ್ 7 ಸರಣಿಯ ಮೇಲೆ ರೂ. 70,000 ದಿಂದ ರೂ. 1.8 ಲಕ್ಷದವರೆಗೆ ಬೆಲೆ ಇಳಿಸಿದೆ.

ಜಾಗ್ವಾರ್ ಲ್ಯಾಂಡ್ ರೋವರ್

ಜಾಗ್ವಾರ್ ಲ್ಯಾಂಡ್ ರೋವರ್

ಟಾಟಾ ಮೋಟಾರ್ ಮಾಲೀಕತ್ವದ ಕಂಪನಿ ತನ್ನ XE, XF, F-PACE, XJ, ಡಿಸ್ಕವರಿ ಸ್ಪೋರ್ಟ್ಸ್, ರೆಂಜ್ ರೋವರ್ ಸ್ಪೋರ್ಟ್ಸ್ ಇತ್ಯಾದಿ ಮಾದರಿಗಳ ಮೇಲೆ ಶೇ. 7ರ ಸರಾಸರಿ ವ್ಯಾಪ್ತಿಯಲ್ಲಿ ಬೆಲೆ ಇಳಿಸಿದೆ.

ಮರ್ಸಿಡೀಸ್ ಬೆಂಜ್

ಮರ್ಸಿಡೀಸ್ ಬೆಂಜ್


ಭಾರತದಲ್ಲಿ ಉತ್ಪಾದಿಸಲ್ಪಡುವ ಮರ್ಸಿಡೀಸ್ ಬೆಂಜ್ ವಾಹಣಗಳ ಬೆಲೆಯನ್ನು ರೂ. 7 ಲಕ್ಷದವರೆಗೆ ಕಡಿತ ಮಾಡಿದೆ. ಈ ಕಂಪನಿ ಭಾರತದಲ್ಲಿ 9 ಮಾಡೆಲ್ ಗಳನ್ನು( CLA sedan, SUVs GLA, GLC, GLE and GLS, luxury sedans C-Class, E- Class, S -Class and Maybach S 500)ಉತ್ಪಾದಿಸುತ್ತದೆ.

ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್

ದ್ವಿಚಕ್ರ ವಾಹನ ತಯಾರಕ ಪ್ರಮುಖ ಟಿವಿಎಸ್ ಮೋಟಾರ್ ಕಂಪನಿ ತನ್ನ ವಿವಿಧ ಮಾಡೆಲ್ ಗಳ ಬೆಲೆಯನ್ನು ರೂ. 4,150 ರವರೆಗೆ ಇಳಿಸಿದೆ. ಜಿಎಸ್ಟಿ ಎಫೆಕ್ಟ್: ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪನ್ನಗಳ ಮೇಲೆ 40% ಡಿಸ್ಕೌಂಟ್!

English summary

GST impact: As vehicle prices fall by up to Rs 3 lakh

Auto companies are adjusting the prices of their products after the government rolled out goods and services tax on 1 July.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X