ಎಟಿಎಂಗಳಲ್ಲಿ 200 ಹೊಸ ನೋಟು ಪಡೆಯಲು ಇನ್ನೂ 3 ತಿಂಗಳು ಕಾಯಬೇಕು!

Posted By: Siddu
Subscribe to GoodReturns Kannada

ಭಾರತೀಯ ರಿಸರ್ವ್ ಬ್ಯಾಂಕು ಕಳೆದ ವಾರ ಬಿಡುಗಡೆ ಮಾಡಿರುವ ರೂ. 200 ಮುಖಬೆಲೆಯ ಹೊಸ ನೋಟು ಎಟಿಎಂ ಗಳಲ್ಲಿ ಲಭ್ಯವಾಗಲು ಇನ್ನೂ ಮೂರು ತಿಂಗಳು ಕಾಯಬೇಕಾಗುತ್ತದೆ.

ಎಟಿಎಂಗಳಲ್ಲಿ 200 ಹೊಸ ನೋಟು ಪಡೆಯಲು ಇನ್ನೂ 3 ತಿಂಗಳು ಕಾಯಬೇಕು!

ಎಟಿಎಂ ಯಂತ್ರಗಳಲ್ಲಿ ಕೆಲ ತಾಂತ್ರಿಕ ಬದಲಾವಣೆಗಳನ್ನು ಮಾಡಿದ ನಂತರ ಹೊಸ ನೋಟು ಸಿಗಲಿದೆ. ಪ್ರಸ್ತುತ ಆರ್ಬಿಐ ನ ಕೆಲವು ಕಚೇರಿ ಮತ್ತು ಬ್ಯಾಂಕುಗಳಲ್ಲಿ ಮಾತ್ರ ಹೊಸ ನೋಟುಗಳು ಲಭ್ಯವಿವೆ.

ರೂ. 200 ಮುಖಬೆಲೆಯ ಹೊಸ ನೋಟು ಚಲಾವಣೆಗೆ ತರಲು ಎಟಿಎಂ ಯಂತ್ರಗಳ ಒಳವಿನ್ಯಾಸವನ್ನು ಬದಲಿಸಲು ಸಮಯಾವಕಾಶ ಬೇಕಾಗಲಿದೆ ಎಂದು ತಿಳಿದುಬಂದಿದೆ. 200 ಹೊಸ ನೋಟು ಚಲಾವಣೆಗೆ! ನೋಟಿನ ವೈಶಿಷ್ಟ್ಯತೆಗಳೇನು ಇಲ್ಲಿ ನೋಡಿ..

2016ರ ನವೆಂಬರ್ ನಲ್ಲಿ ನೋಟು ರದ್ದುಗೊಳಿಸಿದ ನಂತರ ಹೊಸ ರೂ. 500, 2000 ಮುಖಬೆಲೆಯ ನೋಟುಗಳನ್ನು ಪೂರೈಕೆ ಮಾಡಲು ಎಟಿಎಂ ಯಂತ್ರದ ವಿನ್ಯಾಸಗಳನ್ನು ಬದಲಾಯಿಸಲಾಗಿತ್ತು. ಇದೀಗ ಮತ್ತೊಮ್ಮೆ ರೂ. 200 ಮುಖಬೆಲೆಯ ನೋಟುಗಳ ಚಲಾವಣೆಗಾಗಿ ಎಟಿಎಂ ಯಂತ್ರಗಳ ವಿನ್ಯಾಸ ಬದಲಿಸಬೇಕಾಗಿದೆ.

Read more about: rbi banking money atm finance news taxes
English summary

It may take ATMs three months to dispense Rs 200 notes

The Reserve Bank of India (RBI) launched the Rs 200 note last week and it is now being said that it may take up to three months time for ATMs across the country to start dispensing the new notes.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns