For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ ದೀಪಾವಳಿ ಕೊಡುಗೆ, ಶಿಕ್ಷಕರ ವೇತನ ಹೆಚ್ಚಳ

ಶಿಕ್ಷಕರಿಗೆ ಸಿಹಿಸುದ್ದಿ ನೀಡಿರುವ ಕೇಂದ್ರ ಸರ್ಕಾರ ದೀಪಾವಳಿಗೆ ಬಂಪರ್ ಕೊಡುಗೆ ಘೋಷಿಸಿದೆ! ಕೇಂದ್ರ ಸಚಿವ ಸಂಪುಟ ಪ್ರಾಧ್ಯಾಪಕರ ವೇತನ ಪರಿಷ್ಕರಣೆಗೆ ಅನುಮೋದನೆ ನೀಡುವ ನೀಡುವ ಮೂಲಕ ದೀಪಾವಳಿಗೆ ಕೊಡುಗೆ ನೀಡಿದೆ.

By Siddu
|

ಶಿಕ್ಷಕರಿಗೆ ಸಿಹಿಸುದ್ದಿ ನೀಡಿರುವ ಕೇಂದ್ರ ಸರ್ಕಾರ ದೀಪಾವಳಿಗೆ ಬಂಪರ್ ಕೊಡುಗೆ ಘೋಷಿಸಿದೆ!
7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸಚಿವ ಸಂಪುಟ ಪ್ರಾಧ್ಯಾಪಕರ ವೇತನ ಪರಿಷ್ಕರಣೆಗೆ ಅನುಮೋದನೆ ನೀಡುವ ನೀಡುವ ಮೂಲಕ ದೀಪಾವಳಿಗೆ ಕೊಡುಗೆ ನೀಡಿದೆ.

ಯಾರ ವೇತನ ಹೆಚ್ಚಾಗಲಿದೆ?

ಯಾರ ವೇತನ ಹೆಚ್ಚಾಗಲಿದೆ?

ಕೇಂದ್ರೀಯ ಮತ್ತು ರಾಜ್ಯಗಳಲ್ಲಿನ ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪ್ರಾಧ್ಯಾಪಕರಿಗೆ ಹೊಸ ವೇತನ ಹೆಚ್ಚಾಗಲಿದೆ.

7.58 ಲಕ್ಷ ಪ್ರಾಧ್ಯಾಪಕರಿಗೆ ಬಂಪರ್

7.58 ಲಕ್ಷ ಪ್ರಾಧ್ಯಾಪಕರಿಗೆ ಬಂಪರ್

ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಅವರಿಗೆ ಸರಿಸಮಾನ ಹುದ್ದೆಯಲ್ಲಿರುವ ಸಿಬ್ಬಂದಿಗಳ ವೇತನವನ್ನು 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಹೆಚ್ಚಿಸಲಾಗಿದೆ. 7ನೇ ವೇತನ ಆಯೋಗದ ಹೊಸ ವೇತನದಿಂದ 7.58 ಲಕ್ಷ ಪ್ರಾಧ್ಯಾಪಕರಿಗೆ ಪ್ರಯೋಜನ ಸಿಗಲಿದೆ. ಹೊಸ ವೇತನ ಜನವರಿ 1, 2016ರಿಂದ ಪೂರ್ವಾನ್ವಯವಾಗುವಂತೆ ಜಾರಿಯಾಗಲಿದೆ.

ಇವರಿಗೆ ಹೊಸ ವೇತನದ ಲಾಭ

ಇವರಿಗೆ ಹೊಸ ವೇತನದ ಲಾಭ

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಅನುದಾನ ಪಡೆಯುವ 106 ವಿಶ್ವವಿದ್ಯಾಲಯಗಳು, ಕಾಲೇಜುಗಳು, ರಾಜ್ಯ ಸರ್ಕಾರಗಳಿಂದ ಅನುದಾನ ಪಡೆಯುವ 329 ವಿಶ್ವವಿದ್ಯಾಲಯಗಳು ಹಾಗೂ 12,912 ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಧ್ಯಾಪಕರು ಹೊಸ ವೇತನ ಪಡೆಯಲಿದ್ದಾರೆ. ಮತ್ತು ಅವರ ಸರಿಸಮಾನ ಹುದ್ದೆಯಲ್ಲಿರುವ ಸಿಬ್ಬಂದಿ ಹೊಸ ವೇತನದ ಲಾಭ ಸಿಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್ ಹೇಳಿದ್ದಾರೆ.

ಹೊಸ ವೇತನದ ಹೆಚ್ಚಳ ಪ್ರಮಾಣ

ಹೊಸ ವೇತನದ ಹೆಚ್ಚಳ ಪ್ರಮಾಣ

ಹೊಸದಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರ ವೇತನ ಪ್ರತಿ ತಿಂಗಳು ರೂ.47ಸಾವಿರದಿಂದ 57ಸಾವಿರಕ್ಕೆ ಹೆಚ್ಚಳವಾಗಲಿದೆ. ಸಹಾಯಕ ಪ್ರಾಧ್ಯಾಪಕರ (ಗ್ರೇಡ್‌-2) ವೇತನ ಪ್ರತಿ ತಿಂಗಳು ರೂ. 56ಸಾವಿರದಿಂದ 68ಸಾವಿರಕ್ಕೆ ಮತ್ತು ಸಹಾಯಕ ಪ್ರಾಧ್ಯಾಪಕ (ಗ್ರೇಡ್‌-3) ವೇತನ ಪ್ರತಿ ತಿಂಗಳು ರೂ. 65ಸಾವಿರದಿಂದ 80ಸಾವಿರಕ್ಕೆ ಹೆಚ್ಚಳವಾಗಲಿದೆ. ಸಹ ಪ್ರಾಧ್ಯಾಪಕರ ವೇತನ ಪ್ರತಿ ತಿಂಗಳು ರೂ. 1.07ಲಕ್ಷದಿಂದ 1.31 ಲಕ್ಷ, ಪ್ರಾಧ್ಯಾಪಕರ ವೇತನ ರೂ. 1.16ರಿಂದ 1.44ಲಕ್ಷಕ್ಕೆ ಹೆಚ್ಚಳ ಆಗಲಿದೆ.

English summary

7th Pay Commission Bonanza For Teachers In UGC Funded Universities/Colleges

The Union Cabinet today cleared revised pay scales for nearly eight lakh teachers and academic staff of higher educational institutions following the implementation of the Seventh Pay Commission.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X