ಏರ್ಟೆಲ್ ಜಿಯೋ ಜಿದ್ದಾಜಿದ್ದಿ! ಏರ್ಟೆಲ್ ನಿಂದ ಭರ್ಜರಿ ಆಪರ್ ಗಳ ಸುರಿಮಳೆ!!

ದೇಶದ ಅತಿದೊಡ್ಡ ದೂರಸಂಪರ್ಕ ಸಂಸ್ಥೆ ಏರ್ಟೆಲ್ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳ ಸುರಿಮಳೆಯನ್ನೇ ಸುರಿಯುತ್ತಿದೆ. ಇದು ರೂ. 399, 499, 649, 799 ಮತ್ತು ರೂ. 999ರ ಅನೇಕ ಪ್ಲಾನ್ ಗಳನ್ನು ಪರಿಚಯಿಸಿದೆ.

ಜಿಯೋ ಪ್ರವೇಶಾತಿ ನಂತರ ದೇಶದ ಟೆಲಿಕಾಂ ಕ್ಷೇತ್ರದ ದಿಕ್ಕು ಬದಲಾಗಿ ಬಿಟ್ಟಿದೆ! ನಾ ಮುಂದೆ ತಾ ಮುಂದೆ ಎಂಬಂತೆ, ಪೈಪೋಟಿ ಬಿದ್ದವರಂತೆ ಪ್ರಮುಖ ಟೆಲಿಕಾಂ ಕಂಪನಿಗಳು ಹೊಸ ಹೊಸ ಆಫರ್ ಗಳನ್ನು ಘೋಷಣೆ ಮಾಡುತ್ತಲೇ ಸಾಗಿವೆ.. ಜಿಯೋ ಮಹಿಮೆಯಿಂದ ಗ್ರಾಹಕರು ಮಾತ್ರ ಭರ್ಜರಿ ಕೊಡುಗೆಗಳನ್ನು ಆನಂದಿಸುತ್ತಲೇ ಇದ್ದಾರೆ!

ದೇಶದ ಅತಿದೊಡ್ಡ ದೂರಸಂಪರ್ಕ ಸಂಸ್ಥೆ ಏರ್ಟೆಲ್ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳ ಸುರಿಮಳೆಯನ್ನೇ ಸುರಿಯುತ್ತಿದೆ. ಇದು ರೂ. 399, 499, 649, 799 ಮತ್ತು ರೂ. 999ರ ಅನೇಕ ಪ್ಲಾನ್ ಗಳನ್ನು ಪರಿಚಯಿಸಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.. ಜಿಯೋ ಧೋಕಾ! ಜಿಯೋ ಹೊಸ ರೀಚಾರ್ಜ್ ಪ್ಲಾನ್ ಗಳು ದುಬಾರಿ

ರೂ. 399 ಪ್ಲಾನ್

ರೂ. 399 ಪ್ಲಾನ್

ಏರ್ಟೆಲ್ ರೂ. 399ರ ಯೋಜನೆಯಡಿ 3g/4g ವೇಗದ 10GB ಡೇಟಾ ನೀಡಲಿದ್ದು, ರೋಲ್ಓವರ್ ಸೌಲಭ್ಯ ಅಂದರೆ ಬಳಕೆಯಾಗದ ಡೇಟಾ ಮುಂದಿನ ಬಿಲ್ಲಿಂಗ್ ನಲ್ಲಿ ಸೇರಿಸಲಾಗುತ್ತದೆ. ಹೊರಹೋಗುವ ಕರೆಗಳಿಗೆ ರೋಮಿಂಗ್ ಶುಲ್ಕ ಅನ್ವಯಿಸುತ್ತದೆ.
ಹೊರಹೋಗುವ ಸ್ಥಳೀಯ ರೋಮಿಂಗ್ ಕರೆಗಳಿಗೆ ನಿಮಿಷಕ್ಕೆ 80 ಪೈಸೆ ವಿಧಿಸಲಾಗುತ್ತದೆ. ಎಸ್ಟಿಡಿ ಕರೆಗಳಿಗೆ ಪ್ರತಿ ನಿಮಿಷಕ್ಕೆ ರೂ. 1.15 ಶುಲ್ಕವಿರುತ್ತದೆ. Wynk ಮ್ಯೂಸಿಕ್, ಉಚಿತವಾಗಿ ಸಂಗೀತ ಡೌನ್ಲೋಡ್ ಮಾಡುವ ಆಪ್ ಕೂಡ ಈ ಯೋಜನೆಯಲ್ಲಿ ಸೇರ್ಪಡಿಸಲಾಗಿದೆ. ಈ ಯೋಜನೆಯನ್ನು ಪೋಸ್ಟ್ ಪೇಡ್ ಗ್ರಾಹಕರಿಗಾಗಿ ಪರಿಚಯಿಸಲಾಗಿದೆ. ಜಿಯೋ ಮಹಿಮೆ! ಏರ್ಟೆಲ್ ನಿಂದ ಅನಿಯಮಿತ ಕರೆ, 70GB ಡೇಟಾ ಆಫರ್

ರೂ. 499 ಯೋಜನೆ

ರೂ. 499 ಯೋಜನೆ

ಪೋಸ್ಟ್ಪೇಡ್ ಗ್ರಾಹಕರಿಗಾಗಿ ರೂ. 499 ಯೋಜನೆ ಪರಿಚಯಿಸಲಾಗಿದ್ದು, ರೋಲ್ಓವರ್ ಸೌಲಭ್ಯದೊಂದಿಗೆ 3G/4G ವೇಗದ 20 ಜಿಬಿ ಡೇಟಾ ನೀಡುತ್ತದೆ. ಈ ಯೋಜನೆ ಅನಿಯಮಿತ ಹೊರಹೋಗುವ ರೋಮಿಂಗ್ ಕರೆಗಳನ್ನು ಒಳಗೊಂಡಿದೆ. Wynk ಮ್ಯೂಸಿಕ್, ಲೈವ್ ಟಿವಿ ಮತ್ತು ಹ್ಯಾಂಡ್ಸೆಟ್ ಹಾನಿ ರಕ್ಷಣೆ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿದೆ. ಜಿಯೋ ಧಮಾಕಾ..! ಫ್ರೈಮ್ ಸದಸ್ಯರಿಗೆ ಟ್ರಿಪಲ್ ಕ್ಯಾಶ್ ಬ್ಯಾಕ್ ಆಫರ್!

ರೂ. 649 ಯೋಜನೆ

ರೂ. 649 ಯೋಜನೆ

ಏರ್ಟೆಲ್ ರೂ. 649 ಯೋಜನೆಯಡಿ 3G/4G ವೇಗದ 30 ಜಿಬಿ ಡೇಟಾವನ್ನು ರೋಲ್ಓವರ್ ಸೌಲಭ್ಯದೊಂದಿಗೆ ನೀಡಲಿದೆ. ಈ ಪೋಸ್ಟ್ಪೇಯ್ಡ್ ಯೋಜನೆ ಅನಿಯಮಿತ ರೋಮಿಂಗ್ ಹೊರಹೋಗುವ ಕರೆಗಳು, Wynk ಮ್ಯೂಸಿಕ್, ಮತ್ತು ಹ್ಯಾಂಡ್ಸೆಟ್ ಹಾನಿ ರಕ್ಷಣೆ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿದೆ.

ರೂ. 799 ಯೋಜನೆ

ರೂ. 799 ಯೋಜನೆ

ಈ ಪೋಸ್ಟ್ ಪೇಡ್ ಯೋಜನೆ 3G/4G ವೇಗದ 40GB ಡೇಟಾವನ್ನು ರೋಲ್ಓವರ್ ಸೌಲಭ್ಯದೊಂದಿಗೆ ನೀಡಲಿದೆ. ಈ ಯೋಜನೆ ಕೂಡ Wynk ಮ್ಯೂಸಿಕ್, ಲೈವ್ ಟಿವಿ ಮತ್ತು ಹ್ಯಾಂಡ್ಸೆಟ್ ಹಾನಿ ರಕ್ಷಣೆ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿದೆ.

ರೂ. 999 ಯೋಜನೆ

ರೂ. 999 ಯೋಜನೆ

ಈ ಯೋಜನೆ 3G/4G ವೇಗದ 50GB ಡೇಟಾವನ್ನು ರೋಲ್ಓವರ್ ಸೌಲಭ್ಯದೊಂದಿಗೆ ಒದಗಿಸಲಿದೆ. ಇನ್ನುಳಿದಂತೆ ಈ ಯೋಜನೆ Wynk ಮ್ಯೂಸಿಕ್ ಮತ್ತು ಹ್ಯಾಂಡ್ಸೆಟ್ ಹಾನಿ ರಕ್ಷಣೆ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿದೆ. ಏರ್ಟೆಲ್ ಪ್ರಕಾರ ಅನಿಯಮಿತ ಕರೆಗಳೊಂದಿಗೆ ಉಚಿತ ಆಡ್-ಆನ್ ಸಂಪರ್ಕವು ಈ ಯೋಜನೆಯ ಭಾಗವಾಗಿ ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+