ವೊಡಾಫೋನ್ ತನ್ನ ಪ್ರಿಪೇಡ್ ಗ್ರಾಹಕರಿಗೆ ಹೊಸ ಆಫರ್ ಘೋಷಿಸುವ ಮೂಲಕ ಜಿಯೋಗೆ ತಿರುಗೇಟು ನೀಡಿದೆ.
ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಜಿಯೋದೊಂದಿಗೆ ದರ ಸಮರದ ಹಣಾಹಣಿಯಲ್ಲಿ ತೊಡಗಿದ್ದು, ಒಂದರ ಮೇಲೊಂದು ಕೊಡುಗೆಗಳನ್ನು ಘೋಷಿಸುತ್ತಲೇ ಇವೆ.
ಇದೇ ಸಂದರ್ಭದಲ್ಲಿ ವೊಡಾಫೋನ್ ತನ್ನ ಪ್ರಿಪೇಡ್ ಗ್ರಾಹಕರಿಗೆ ಹೊಸ ಆಫರ್ ಘೋಷಿಸುವ ಮೂಲಕ ಜಿಯೋಗೆ ತಿರುಗೇಟು ನೀಡಿದೆ. ಅದರ ವಿವರ ಇಲ್ಲಿ ನೀಡಲಾಗಿದೆ.. ಜಿಯೋ ಫ್ರೈಮ್ ಸದಸ್ಯರಿಗೆ ಟ್ರಿಪಲ್ ಕ್ಯಾಶ್ ಬ್ಯಾಕ್ ಆಫರ್!
ರೂ. 199 ಪ್ಲಾನ್
ವೋಡಾಫೋನ್ ರೂ. 199 ಯೋಜನೆಯಡಿ ಪ್ರತಿದಿನ 250 ನಿಮಿಷ ಅನಿಯಮಿತ ಕರೆಗಳು ಮತ್ತು ಪ್ರತಿವಾರ 1000 ನಿಮಿಷಗಳ ಜತೆಗೆ 3g/4g ವೇಗದ 1GB ಡೇಟಾ ಆಫರ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಲಿದೆ. ವೋಡಾಫೋನ್ ಅನಿಯಮಿತ ಕರೆ ಮತ್ತು ಆಕರ್ಷಕ ಡೇಟಾ ಆಫರ್
250 ನಿಮಿಷಗಳ ನಂತರ?
ರೂ. 199 ಪ್ಲಾನ್ ಪ್ರಕಾರ ಪ್ರತಿದಿನ 250 ನಿಮಿಷಗಳ ಅನಿಯಮಿತ ಕರೆಗಳು ಮುಗಿದ ನಂತರ ಪ್ರತಿ ನಿಮಿಷಕ್ಕೆ 30 ಪೈಸೆ ದರ ವಿಧಿಸಲಾಗುತ್ತದೆ. ಅಲ್ಲದೆ, ಒಂದು ವಾರದಲ್ಲಿ 300ಕ್ಕಿಂತ ಹೆಚ್ಚು ಅನನ್ಯ(unique)ಸಂಖ್ಯೆಗಳಿಗೆ ಕರೆ ಮಾಡಿದ ನಂತರ ತದನಂತರದ ಕರೆಗಳಿಗೆ ಪ್ರತಿ ನಿಮಿಷಕ್ಕೆ 30 ಪೈಸೆ ವಿಧಿಸಲಾಗುತ್ತದೆ. ಏರ್ಟೆಲ್ ನಿಂದ ಭರ್ಜರಿ ಆಪರ್ ಗಳ ಸುರಿಮಳೆ!!
ಜಿಯೋ VS ವೋಡಾಫೋನ್
ವೊಡಾಫೋನ್ ಘೋಷಿಸಿರುವ ರೂ. 199 ಯೋಜನೆಯನ್ನು ಜಿಯೋ ರೂ. 149 ಯೋಜನೆಗೆ ಹೋಲಿಸಲಾಗಿದೆ. ಜಿಯೋ ತನ್ನ ಪ್ರಿಪೇಡ್ ಗ್ರಾಹಕರಿಗೆ 2ಗಬ ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಜಿಯೋ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು (ಸ್ಥಳೀಯ ಮತ್ತು ಎಸ್ಟಿಡಿ) ಮತ್ತು ಅನಿಯಮಿತ ಎಸ್ಎಂಎಸ್ (ದಿನಕ್ಕೆ 300) ಸೌಲಭ್ಯ ಒಳಗೊಂಡಿದೆ.
ದೆಹಲಿ-ಎನ್ಸಿಆರ್ ಗ್ರಾಹಕರು
ವೊಡಾಫೋನ್ 349 ರೀಚಾರ್ಜ್ VS ಜಿಯೋ 309 ರೀಚಾರ್ಜ್ ಯೋಜನೆ
ವೊಡಾಫೋನ್ ಇತ್ತೀಚೆಗೆ ರೂ. 349 ರೀಚಾರ್ಜ್ ಯೋಜನೆಯನ್ನು ಪ್ರಿಪೇಯ್ಡ್ ಗ್ರಾಹಕರಿಗಾಗಿ ಘೋಷಿಸಿದೆ. ಇದು ಪ್ರತಿ ದಿನಕ್ಕೆ 1.5GB 4G/3G ವೇಗದ ಡಾಟಾವನ್ನು ಒದಗಿಸುತ್ತದೆ. ಜತೆಗೆ ಪ್ರತಿ ದಿನವೂ 250 ನಿಮಿಷಗಳವರೆಗೆ ಅನಿಯಮಿತ ಕರೆಗಳನ್ನು ಅಥವಾ ವಾರಕ್ಕೆ 1000 ನಿಮಿಷಗಳವರೆಗೆ ಕರೆ ಸೌಲಭ್ಯ ಒಳಗೊಂಡಿದೆ. ಈ ಯೋಜನೆ ಜಿಯೋ ರೂ. 309 ರಿಚಾರ್ಜ್ ಯೋಜನೆಗೆ ವಿರುದ್ಧವಾಗಿ ಸ್ಪರ್ಧಿಸುತ್ತದೆ. ಇದು ಪ್ರತಿದಿನ 1GB 4G ಡೇಟಾವನ್ನು 49 ದಿನಗಳ ಅವಧಿವರೆಗೆ ಅನಿಯಮಿತ ಧ್ವನಿ ಕರೆ ಮತ್ತು SMS ಸೌಲಭ್ಯದೊಂದಿಗೆ ಒದಗಿಸುತ್ತದೆ.
ಟೆಲಿಕಾಂ ಪ್ರಮುಖ ಸುದ್ದಿ/ಆಫರ್ ಗಳು
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ದೇಶದ ದೂರಸಂಪರ್ಕ ವಲಯದ ಪ್ರಮುಖ ಸುದ್ದಿ ಹಾಗೂ ಟೆಲಿಕಾಂ ಕಂಪನಿಗಳ ಆಫರ್ ಗಳನ್ನು ಓದಿ.. ಟೆಲಿಕಾಂ ಪ್ರಮುಖ ಸುದ್ದಿ/ಆಫರ್


Click it and Unblock the Notifications