For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಘೋಷಿಸಿದೆ ಅನಿಯಮಿತ ಕರೆ ಮತ್ತು 54 GB ಡೇಟಾ ಆಫರ್

ಬಿಎಸ್ಎನ್ಎಲ್ ಪ್ರಿಪೇಡ್ ಗ್ರಾಹಕರು ಈ ಯೋಜನೆಯ ಸೌಲಭ್ಯ ಪಡೆಯಲಿದ್ದು, 54 ದಿನಗಳ ಅವಧಿಯೊಂದಿಗೆ ಪ್ರತಿದಿನ 1 ಜಿಬಿಯಂತೆ ಒಟ್ಟು 54 ಜಿಬಿ ಡೇಟಾ ಸಿಗಲಿದೆ. ಜತೆಗೆ ಪ್ರತಿನಿತ್ಯ 100 ಎಸ್ಎಂಎಸ್ ಉಚಿತವಾಗಿ ಇರಲಿವೆ.

|

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಹೊಸ ಯೋಜನೆಯನ್ನು ಪರಿಚಯಿಸಿದ್ದು, ಜಿಯೋಗೆ ತಿರುಗೇಟು ನೀಡಲು ಮುಂದಾಗಿದೆ. ತನ್ನ ಪ್ರತಿಸ್ಪರ್ಧಿಗಳಾದ ಜಿಯೊ, ಏರ್ಟೆಲ್ ಮತ್ತು ವೊಡಾಫೋನ್ ಪ್ರಾರಂಭಿಸಿದ ಎಲ್ಲಾ ಹೊಸ ಯೋಜನೆಗಳ ನಡುವೆ ಬಿಎಸ್ಎನ್ಎಲ್ ಕೂಡ ಹೊಸ ಯೋಜನೆಯನ್ನು ಘೋಷಿಸಿದೆ.

 

ಇದು ಪ್ರತಿದಿನ 1 ಜಿಬಿ ಡೇಟಾ ಹಾಗು ಅನಿಯಮಿತ ಧ್ವನಿ ಕರೆ ಮಾಡುವಿಕೆ ಪ್ರಯೋಜನಗಳನ್ನು ನೀಡಲಿದೆ. ರೂ. 99 ಮತ್ತು ರೂ. 319 ಅನಿಯಮಿತ ಧ್ವನಿ ಕರೆ ಸೌಲಭ್ಯದ ಯೋಜನೆಗಳನ್ನು ಅನಾವರಣಗೊಳಿಸಿದ ನಂತರ ಇದನ್ನು ಪರಿಚಯಿಸಿದೆ. ಜನ್ ಔಷಧಿ ಮಳಿಗೆ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಿ. ಕೇಂದ್ರದಿಂದ ಸಿಗುವ ಧನಸಹಾಯ-ಸೌಲಭ್ಯಗಳೇನು?

ರೂ. 349 ಯೋಜನೆ

ರೂ. 349 ಯೋಜನೆ

ಬಿಎಸ್ಎನ್ಎಲ್ ಪ್ರಿಪೇಡ್ ಗ್ರಾಹಕರು ಈ ಯೋಜನೆಯ ಸೌಲಭ್ಯ ಪಡೆಯಲಿದ್ದು, 54 ದಿನಗಳ ಅವಧಿಯೊಂದಿಗೆ ಪ್ರತಿದಿನ 1 ಜಿಬಿಯಂತೆ ಒಟ್ಟು 54 ಜಿಬಿ ಡೇಟಾ ಸಿಗಲಿದೆ. ಜತೆಗೆ ಪ್ರತಿನಿತ್ಯ 100 ಎಸ್ಎಂಎಸ್ ಉಚಿತವಾಗಿ ಇರಲಿವೆ. ಜಿಯೋ ಧಮಾಕಾ! 112 GB ಉಚಿತ ಡೇಟಾ ಆಫರ್.. ಪಡೆಯುವುದು ಹೇಗೆ?

ಜಿಯೋ Vs ಬಿಎಸ್ಎನ್ಎಲ್

ಜಿಯೋ Vs ಬಿಎಸ್ಎನ್ಎಲ್

ಬಿಎಸ್ಎನ್ಎಲ್ ಜಿಯೋನೊಂದಿಗೆ ಸ್ಪರ್ಧಿಸಲು ಮುಂದಾಗಿದ್ದು, ಜಿಯೋ ನೀಡುತ್ತಿರುವ ರೂ. 349 ಯೋಜನೆಗೆ ವಿರುದ್ಧವಾಗಿ ಈ ಆಫರ್ ಘೋಷಿಸಿದೆ. ಆದರೆ ಜಿಯೋ ಈ ಯೋಜನೆಯಲ್ಲಿ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಇದು 70 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 1.5 ಜಿಬಿ ಡೇಟಾ ನೀಡುತ್ತಿದೆ. ಅನಿಯಮಿತ ಸ್ಥಳೀಯ ಕರೆ, 100 ಎಸ್ಎಂಎಸ್ ಒಳಗೊಂಡಿವೆ.

ರೂ. 99 ಮತ್ತು 319 ಪ್ಲಾನ್
 

ರೂ. 99 ಮತ್ತು 319 ಪ್ಲಾನ್

ಬಿಎಸ್ಎನ್ಎಲ್ ಈಗಾಗಲೇ ರೂ. 99 ಮತ್ತು 319 ಯೋಜನೆಗಳನ್ನು ಪರಿಚಯಿಸಿದ್ದು, ಅನಿಯಮಿತ ಧ್ವನಿಕರೆ ಹಾಗು ಅನಿಯಮಿತ ರೋಮಿಂಗ್ ಸೌಲಭ್ಯ ನೀಡುತ್ತಿದೆ. ರೂ. 99 ಯೋಜನೆ 26 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, ರೂ. 319 ಯೋಜನೆ 90 ದಿನಗಳ ವ್ಯಾಲಿಡಿಟಿ ಹೊಂದಿದೆ.

English summary

BSNL Rs 349 prepaid plan, offers unlimited calls and 54 GB data

BSNL, has introduced a new prepaid plan to take on Reliance Jio. Priced at Rs 349, the plan comes with a validity of 54 days, and offers unlimited voice calls to its subscribers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X