Subscribe to GoodReturns Kannada
For Quick Alerts
For Daily Alerts
ಇಂದು ಬೆಳಿಗ್ಗೆ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 69.12ಕ್ಕೆ ಕುಸಿದಿದೆ. ಡಾಲರ್ ಗೆ ಇರುವ ಬಲವಾದ ಬೇಡಿಕೆಯಿಂದ ಜಾಗತಿಕ ಕರೆನ್ಸಿಗಳು ಕುಸಿತಕ್ಕೆ ಒಳಗಾಗಿವೆ. ಆದಾಗ್ಯೂ, ಪ್ರಸ್ತುತ ರೂಪಾಯಿ ಮೌಲ್ಯ ಚೇತರಿಸಿಕೊಳ್ಳುತ್ತಿದ್ದು 68.99ರಲ್ಲಿ ವಹಿವಾಟು ಸಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಗುರುವಾರ ಸಾರ್ವಕಾಲಿಕ ಕುಸಿತ ಕಂಡು ರೂ. 69.05ರಲ್ಲಿ ದಿನದ ವಹಿವಾಟು ಅಂತ್ಯ ಕಂಡಿತು.
ಮೇ ೨೯ರ ನಂತರದಲ್ಲಿನ ಗರಿಷ್ಠ ರೂಪಾಯಿ ಮೌಲ್ಯ ಕುಸಿತ ಇದಾಗಿದೆ. ಅಮೆರಿಕ ಆರ್ಥಿಕತೆ ಮೇಲ್ಮುಖವಾಗಿದ್ದು, ಅಮೆರಿಕದ ಫೆಡರಲ್ ಬ್ಯಾಂಕ್ ಹಂತಹಂತವಾಗಿ ಬಡ್ಡಿದರ ಏರಿಕೆ ಮಾಡುವುದಾಗಿ ಹೇಳಿದೆ. ಇದರಿಂದಾಗಿ ಜಾಗತಿಕ ಮಟ್ಟದ ಎಲ್ಲ ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯ ಒಂದು ವರ್ಷದ ಗರಿಷ್ಠ ಮಟ್ಟ ತಲುಪಿದೆ ಎನ್ನಲಾಗಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸುತ್ತಿದ್ದು, ಇದು ವಿದೇಶಿ ಕರೆನ್ಸಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದ್ದು ಆತಂಕಕ್ಕೆ ಕಾರಣವಾಗಿದೆ ಎಂದು ತಜ್ಞರು ಅಬಿಪ್ರಾಯಿಸಿದ್ದಾರೆ.
English summary