ನಿಯಂತ್ರಣ ವ್ಯವಸ್ಥೆಯಲ್ಲಿನ ಬದಲಾವಣೆಗಳು, ಕಾರ್ಯಾಚರಣೆಗಳ ಅಸಮರ್ಥತೆಯಿಂದಾಗಿ ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚುತ್ತಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಟಿಎಂಗಳನ್ನು ಮುಚ್ಚುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
2019 ರ ಮಾರ್ಚ್ ವೇಳೇಗೆ ದೇಶದ ಶೇ. 50ರಷ್ಟು ಎಟಿಎಂ ಕೇಂದ್ರಗಳು ಬಂದ್ ಆಗಲಿವೆ ಎಂದು ಎಟಿಎಂ ಉದ್ಯಮ ಒಕ್ಕೂಟ (CATMi) ಹೇಳಿದೆ.
ನಿಯಂತ್ರಣ ವ್ಯವಸ್ಥೆಯಲ್ಲಿನ ಬದಲಾವಣೆಗಳು, ಕಾರ್ಯಾಚರಣೆಗಳ ಅಸಮರ್ಥತೆಯಿಂದಾಗಿ ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚುತ್ತಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಟಿಎಂಗಳನ್ನು ಮುಚ್ಚುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಸಾವಿರಾರು ಜನರು ತಮ್ಮ ಕಳೆದುಕೊಳ್ಳಲಿದ್ದಾರೆ. ಡಿಜಿಟೈಸೇಷನ್ ಪಾಲಿಸಿ ಕೂಡ ಹೊಡೆತ ನೀಡಿದೆ ಎಂದು ಎಟಿಎಂ ಇಂಡಸ್ಟ್ರಿ (ಸಿಎಟಿಎಂಐ) ನಿರ್ದೇಶಕ ವಿ. ಬಾಲಸುಪ್ರಬ್ರಹ್ಮಣ್ಯಂ ಹೇಳಿದ್ದಾರೆ. ಎಲ್ಪಿಪಿ ಗ್ಯಾಸ್ ಕನೆಕ್ಷನ್ ರದ್ದಾಗುವ ಮುನ್ನ ಹೀಗೆ ಮಾಡಿ, ನವೆಂಬರ್ 30 ಕೊನೆ ದಿನ
ಎಷ್ಟು ಎಟಿಎಂಗಳಿವೆ?
ಪ್ರಸ್ತುತ ದೇಶದಲ್ಲಿ ಒಟ್ಟು 2,38,000 ಎಟಿಎಂಗಳಿದ್ದು, ಅವುಗಳಲ್ಲಿ 1,13,000 ಬ್ಯಾಂಕ್ ಸುತ್ತಮುತ್ತಲಿದ್ದರೆ, 1 ಲಕ್ಷ ಎಟಿಎಂಗಳು ಬ್ಯಾಂಕುಗಳಿಂದ ದೂರದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ 15 ಸಾವಿರ ಎಟಿಎಂಗಳು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸೇರಿವೆ. ಇವುಗಳಲ್ಲಿ ಒಟ್ಟು ಶೇ. 50 ರಷ್ಟು ಎಟಿಎಂಗಳು ಮುಚ್ಚಲಿವೆ.
ಎಟಿಎಂ ಮುಚ್ಚಲ್ಪಡುವುದರಿಂದ ಅಗುವ ಪರಿಣಾಮ
ಶೇ. 50 ರಷ್ಟು ಎಟಿಎಂಗಳು ಮುಚ್ಚಲ್ಪಡುವುದರಿಂದ ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಲಕ್ಷಾಂತರ ಫಲಾನುಭವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಎಟಿಎಂಗಳಿಂದ ಸಬ್ಸಿಡಿ ಹಣ ವಿತ್ ಡ್ರಾ ಮಾಡುವುದು ಕಷ್ಟವಾಗಬಹುದು. ಇನ್ನು ನಗರ ಪ್ರದೇಶಗಳಲ್ಲಿ ನೋಟು ನಿಷೇಧದ ವೇಳೆ ಕಂಡುಬಂದ ಸನ್ನಿವೇಶ ಪುನರಾವರ್ತನೆ ಆಗಬಹುದು. ಎಟಿಎಂಗಳ ಮುಂದೆ ಉದ್ದುದ್ದ ಸಾಲುಗಳು ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಫಸಲ್ ಬಿಮಾ ಯೋಜನೆ ಹಗರಣ ನೋಡಿದ್ರೆ ಬೆಚ್ಚಿ ಬೀಳ್ತಿರಾ! ವೈಫಲ್ಯಗಳ ಪಟ್ಟಿ ಇಲ್ಲಿದೆ ನೋಡಿ..
ಎಟಿಎಂ ಮುಚ್ಚಲು ಕಾರಣ
- ಹೊಸ ನೋಟುಗಳಿಗೆ ಅನುಗುಣವಾಗಿ ದೇಶದಲ್ಲಿರುವ ಎಲ್ಲಾ ಎಟಿಎಂಗಳನ್ನು ಅಭಿವೃದ್ಧಿ ಪಡಿಸಲು ಆರ್ಥಿಕ ಹೊರೆ ಆಗಲಿದೆ. ಕೇವಲ ಕ್ಯಾಸೆಟ್ ಸ್ವಾಪ್ ಅಭಿವೃದ್ಧಿಗೆ (ಹೊಸ ನೋಟುಗಳನ್ನು ಇಡಲು ಆಗುವಂತೆ ಟ್ರೇಗಳನ್ನು ಮರು ಹೊಂದಾಣಿಕೆಗೆ) ಒಟ್ಟು ರೂ. 3.5 ಸಾವಿರ ಕೋಟಿ ವೆಚ್ಚ ಆಗುತ್ತದೆ ಎಂದು ವಿ.ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ.
- ಹಣ ಸಾಗಾಣಿಕೆ ವಾಹನ, ಎಟಿಎಂಗಳ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್, ಎಟಿಎಂನ ಕ್ಯಾಸೆಟ್ ಸ್ವಾಪ್ ಅಭಿವೃದ್ಧಿ ಭಾರೀ ವೆಚ್ಚ ಮಾಡಲಾಗುತ್ತಿದೆ.
- ಜಿಪಿಎಸ್, ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಹಾಗು 300 ವಾಹನಗಳ ಖರೀದಿಗೆ ರೂ. 100 ಕೋಟಿ ಖರ್ಚಾಗುತ್ತದೆ. ಎಟಿಎಂಗಳಿಗೆ ಹಣ ತುಂಬುವ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ, ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಚಾಲಕ ಪ್ರಯಾಣಿಸಬೇಕಾಗುತ್ತದೆ.
- ತಂತ್ರಜ್ಞಾನವನ್ನು ವಿಂಡೋಸ್ ಎಕ್ಸ್ ಪಿ ಯಿಂದ ವಿಂಡೋಸ್-10 ಗೆ ಅಭಿವೃದ್ಧಿಪಡಿಸಲು ಹಣ ಖರ್ಚು ಮಾಡಬೇಕಾಗುತ್ತದೆ.
ಕಳಪೆ ಕಾರ್ಯನಿರ್ವಹಣೆ, ಸಮಸ್ಯೆ
ದೇಶದಲ್ಲಿನ ಶೇ. 10ರಷ್ಟು ಎಟಿಎಂಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ದೇಶದ ಜನಸಂಖ್ಯೆ ಪ್ರಕಾರ 1 ಲಕ್ಷ ಎಟಿಎಂಗಳು ನಿರಂತರವಾಗಿ ಕಾರ್ಯನಿರ್ವಹಿಸಿದರೆ ಸಾಕಾಗುತ್ತದೆ. ಶೇ. 80 ರಷ್ಟು ಎಟಿಎಂಗಳು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಗ್ರಾಮೀಣ ಪ್ರದೇಶದಲ್ಲಿನ ಹೆಚ್ಚಿನ ಸಂಖ್ಯೆಯ ಎಟಿಎಂಗಳು ಮುಚ್ಚಲಿದ್ದು, ಫಲಾನುಭವಿಗಳಿಗೆ ಸರ್ಕಾರದ ಸಬ್ಸಿಡಿ ಹಣ ಪಡೆಯುವುದು ಕಷ್ಟವಾಗಲಿದೆ ಎಂದು ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.


Click it and Unblock the Notifications