For Quick Alerts
ALLOW NOTIFICATIONS  
For Daily Alerts

ಈ ಕಾರ್ಯಗಳನ್ನು ನವೆಂಬರ್ 30 ರೊಳಗೆ ಮುಗಿಸಿ; ಡಿಸೆಂಬರ್ 1 ರಿಂದ ಆಗಲಿದೆ ಬಹುಮುಖ್ಯ ಬದಲಾವಣೆ

ಡಿಸೆಂಬರ್ 1ರಿಂದ ಹಲವಾರು ಪ್ರಮುಖ ಬದಲಾವಣೆಗಳು ಆಗಲಿದ್ದು, ನವೆಂಬರ್ ೩೦ ರ ಒಳಗಾಗಿ ಕೆಲ ಕೆಲಸಗಳನ್ನು ಪೂರೈಸಬೇಕಾಗಿದೆ.

|

ಡಿಸೆಂಬರ್ 1ರಿಂದ ಹಲವಾರು ಪ್ರಮುಖ ಬದಲಾವಣೆಗಳು ಆಗಲಿದ್ದು, ನವೆಂಬರ್ 30 ರ ಒಳಗಾಗಿ ಕೆಲ ಕೆಲಸಗಳನ್ನು ಪೂರೈಸಬೇಕಾಗಿದೆ. ಎಸ್ಬಿಐ ನೆಟ್ ಬ್ಯಾಂಕಿಂಗ್, ಎಲ್ಪಿಜಿ ಕೆವೈಸಿ, ಟೆಲಿಕಾಂ, ಏವಿಯೇಷನ್ ಹೀಗೆ ಅನೇಕ ಕ್ಷೇತ್ರಗಳ ನಿಯಮಗಳಲ್ಲಿ ಬದಲಾವಣೆಯಾಗಲಿದೆ.

 

ಎಲ್ಪಿಜಿ ಕೆವೈಸಿ

ಎಲ್ಪಿಜಿ ಕೆವೈಸಿ

ಡಿಸೆಂಬರ್ 1ರಿಂದ ಸುಮಾರು 1 ಕೋಟಿ ಎಲ್ಪಿಜಿ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ. KYC ಅಪ್ಡೇಟ್ ಮಾಡದ ಗ್ರಾಹಕರ ಎಲ್ಪಿಜಿ ಕನೆಕ್ಷನ್ ಸರ್ಕಾರ ರದ್ದು ಪಡಿಸಲಿದ್ದು, ಎಲ್ಜಿಪಿ ಸೌಲಭ್ಯ ಬಯಸುವವರು ಡಿಸೆಂಬರ್ 1ರ ಒಳಗಾಗಿ ಕೆವೈಸಿ ಅಪ್ಡೇಟ್ ಮಾಡಬೇಕು. ಇಲ್ಲದಿದ್ದರೆ ಗ್ರಾಹಕರಿಗೆ ಗ್ಯಾಸ್ ಸಿಗುವುದಿಲ್ಲ. ಗ್ಯಾಸ್ ಕಂಪನಿಗಳಾದ ಭಾರತ್ ಗ್ಯಾಸ್, ಹೆಚ್ಪಿ ಗ್ಯಾಸ್, ಇಂಡೆನ್ ಗ್ಯಾಸ್ ಗೆ ಎಲ್ಲ ಗ್ರಾಹಕರ KYC ಅಂತಿಮಗೊಳಿಸಲು ನವೆಂಬರ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ತುಂಬಾ ಗ್ರಾಹಕರು KYC ಪೂರ್ಣಗೊಳಿಸಿಲ್ಲದಿರುವುದರಿಂದ ಗ್ರಾಹಕರಿಗೆ ನವೆಂಬರ್ 30ರವರೆಗೆ KYCಗೆ ಅವಕಾಶವಿದೆ. ಎಲ್ಪಿಪಿ ಗ್ಯಾಸ್ ಕನೆಕ್ಷನ್ ರದ್ದಾಗುವ ಮುನ್ನ ಹೀಗೆ ಮಾಡಿ, ನವೆಂಬರ್ 30 ಕೊನೆ ದಿನ

ಎಸ್ಬಿಐ ನೆಟ್ ಬ್ಯಾಂಕಿಂಗ್

ಎಸ್ಬಿಐ ನೆಟ್ ಬ್ಯಾಂಕಿಂಗ್

ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರು ಡಿಸೆಂಬರ್ ೧, ೨೦೧೮ರ ಒಳಗಾಗಿ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ನೋಂದಣಿ ಮಾಡಬೇಕು. ಇಲ್ಲದಿದ್ದರೆ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಬಳಕೆ ಮಾಡಲು ಆಗುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವೆಬ್ಸೈಟ್ https://www.onlinesbi.com/ ನಲ್ಲಿ ಪ್ರಕಟಿಸಿದ್ದು, ಬ್ಯಾಂಕ್ ಖಾತೆದಾರರು ತಮ್ಮ ಮೊಬೈಲ್ ಸಂಖ್ಯೆ ನೋಂದಣಿ ಮಾಡಬೇಕೆಂದು ಸೂಚಿಸಿದೆ. ಗ್ರಾಹಕರು ನವೆಂಬರ್ ಅಂತ್ಯದ ಒಳಗಾಗಿ ಸಮೀಪದ ಬ್ರಾಂಚ್ ಗೆ ತೆರಳಿ ತಮ್ಮ ಮೊಬೈಲ್ ನಂಬರ್ ನೋಂದಣಿ ಮಾಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪಿಂಚಣಿದಾರರಿಗೆ ಪ್ರಕ್ರಿಯೆ ಶುಲ್ಕ
 

ಪಿಂಚಣಿದಾರರಿಗೆ ಪ್ರಕ್ರಿಯೆ ಶುಲ್ಕ

ಎಸ್ಬಿಐ ಪಿಂಚಣಿದಾರರಿಗೆ ಡಿಸೆಂಬರ್ ಒಂದರಿಂದ ಪ್ರಕ್ರಿಯೆ ಶುಲ್ಕ ವಿಧಿಸಲಾಗುವುದು. ನಿವೃತ್ತ ವೇತನದಾರರು ನವೆಂಬರ್ 30 ರೊಳಗೆ ಲೈಫ್ ಸರ್ಟಿಫಿಕೆಟ್ ನೀಡಬೇಕಾಗಿದೆ. ಇಲ್ಲದಿದ್ದರೆ ಪಿಂಚಣಿ ಸಿಗುವುದಿಲ್ಲ. ಎಸ್ಬಿಐ ವಾಲೆಟ್ ಎಸ್ಬಿಐ ಬಡ್ಡಿ ಡಿಸೆಂಬರ್ 1ರಿಂದ ಕೆಲಸ ನಿಲ್ಲಿಸಲಿದೆ. ಇಂಟರರ್ನೆಟ್ ಬ್ಯಾಂಕಿಂಗ್: ನ. 30 ರೊಳಗೆ ಮೊಬೈಲ್ ನೋಂದಣಿ ಮಾಡಬೇಕು

Read more about: net banking banking money lpg sbi
English summary

These big changes from December 1

These big changes from December 1, prepare yourself before November 30.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X