ನರೇಂದ್ರ ಮೋದಿ ವಿದೇಶ ಪ್ರವಾಸ, ಜಾಹೀರಾತಿಗಾಗಿ ಮಾಡಿರುವ ಒಟ್ಟು ಖರ್ಚುವೆಚ್ಚ ಎಷ್ಟು?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ನಾಲ್ಕುವರೆ ವರ್ಷಗಳಲ್ಲಿ ತಮ್ಮ ವಿದೇಶ ಪ್ರವಾಸ ಹಾಗೂ ಸಾಧನೆಯ ಜಾಹೀರಾತಿಗಾಗಿ ರೂ. 7,200 ಕೋಟಿ ಖರ್ಚು ಮಾಡಿದ್ದಾರೆ ಎಂದು ಶುಕ್ರವಾರ ವರದಿಯಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ನಾಲ್ಕುವರೆ ವರ್ಷಗಳಲ್ಲಿ ತಮ್ಮ ವಿದೇಶ ಪ್ರವಾಸ ಹಾಗೂ ಸಾಧನೆಯ ಜಾಹೀರಾತಿಗಾಗಿ ರೂ. 7,200 ಕೋಟಿ ಖರ್ಚು ಮಾಡಿದ್ದಾರೆ ಎಂದು ಶುಕ್ರವಾರ ವರದಿಯಾಗಿದೆ. ಜಾಗತಿಕವಾಗಿ ಭಾರತದ ವರ್ಚಸ್ಸು ಹೆಚ್ಚಿಸುವ ದೃಷ್ಟಿಯಿಂದ ಮೋದಿಯವರು ಹೆಚ್ಚೆಚ್ಚು ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಅವರು 84 ದೇಶಗಳಿಗೆ ಮಾಡಿದ ಪ್ರವಾಸ ಹಾಗು ಜಾಹೀರಾತಿನ ಮೂಲಕ ಒಟ್ಟು ಖರ್ಚಾದ ಮೊತ್ತ ಎಷ್ಟಿರಬಹುದು ನೋಡೋಣ ಬನ್ನಿ..

84 ದೇಶಗಳಿಗೆ ಪ್ರವಾಸ

84 ದೇಶಗಳಿಗೆ ಪ್ರವಾಸ

2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಇದುವರೆಗೆ 84 ವಿದೇಶ ಪ್ರವಾಸ ಮಾಡಿದ್ದಾರೆ. ಅದಕ್ಕಾಗಿ ಹೆಚ್ಚುಕಡಿಮೆ 2000 ಕೋಟಿ ಖರ್ಚು ಮಾಡಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಇಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. 4 ವರ್ಷದಲ್ಲಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದ ಖರ್ಚುವೆಚ್ಚ ಎಷ್ಟು ಗೊತ್ತೆ?

ಏರ್ ಕ್ರಾಫ್ಟ್, ಚಾರ್ಟರ್ಡ್ ಫ್ಲೈಟ್ಸ್ ನಿರ್ವಹಣಾ ವೆಚ್ಚ

ಏರ್ ಕ್ರಾಫ್ಟ್, ಚಾರ್ಟರ್ಡ್ ಫ್ಲೈಟ್ಸ್ ನಿರ್ವಹಣಾ ವೆಚ್ಚ

ಪ್ರತಿ ಪ್ರವಾಸದ ವೆಚ್ಚದ ಜೊತೆಗೆ ಏರ್ ಇಂಡಿಯಾ ಒನ್ ಹಾಗು ಹಾಟ್ಲೈನ್ ನಿರ್ವಹಣೆ ಇದಕ್ಕೆ ಸೇರಿಸಲಾಗಿದೆ.
ಏರ್ ಕ್ರಾಫ್ಟ್ ನಿರ್ವಹಣೆಗಾಗಿ ರೂ. 1583.18 ಕೋಟಿ, ಚಾರ್ಟರ್ಡ್ ಫ್ಲೈಟ್ಸ್‌ಗಳಿಗಾಗಿ ರೂ. 429.28 ಕೋಟಿ, ಸುರಕ್ಷಿತ ಹಾಟ್‌ಲೈನ್ ಸೌಲಭ್ಯಕ್ಕಾಗಿ ರೂ. 9.12 ಕೋಟಿ ರೂ. [2014-2017] ಖರ್ಚು ಮಾಡಲಾಗಿದೆ ಎಂದು ವಿ.ಕೆ.ಸಿಂಗ್ ಅವರು ಸಂಸತ್ತಿನಲ್ಲಿ ಲೆಕ್ಕ ನೀಡಿದ್ದಾರೆ.

ಜಾಹೀರಾತು ವೆಚ್ಚ

ಜಾಹೀರಾತು ವೆಚ್ಚ

ನರೇಂದ್ರ ಮೋದಿಯವರ ಯೋಜನೆಗಳು ಹಾಗೂ ಸಾಧನೆಗಳ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರವು 2014-15ರಿಂದ ಮಾಧ್ಯಮ ಜಾಹೀರಾತಿಗಾಗಿ ರೂ. 5200 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಠೋಡ್ ಹೇಳಿದ್ದಾರೆ. ಮೋದಿ ಸರ್ಕಾರಕ್ಕೆ ನಾಲ್ಕು! ಕಳೆದ 4 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳೇನು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+