ಕೇಂದ್ರ ಬಜೆಟ್ ಮಂಡನೆಯ ಪೂರ್ವದಲ್ಲಿ, ಪ್ರತಿ ವರ್ಷ ಕಳೆದ 12 ತಿಂಗಳುಗಳ ದೇಶದ ಆರ್ಥಿಕತೆಗೆ ಸಂಬಂಧಿತ ವಿವರವಾದ ಮಾಹಿತಿ ನೀಡಲು ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತ ಪಡಿಸಲಾಗುತ್ತದೆ.
ಮುಂಬರುವ ಬಜೆಟ್ ಒಂದು 'ಮಧ್ಯಂತರ ಬಜೆಟ್' ಆಗಿದ್ದು, ಅದು ಸಾಮಾನ್ಯ ಕೇಂದ್ರ ಬಜೆಟ್ ಆಗಿರುವುದಿಲ್ಲ. ಚುನಾವಣೆಗಳ ನಂತರ ಅಧಿಕಾರಕ್ಕೆ ಬರುವ ಸರ್ಕಾರಗಳು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಆಯವ್ಯಯವನ್ನು ಮಂಡಿಸಿ ಅದರ ಕಾರ್ಯಸಾಧನೆಗೆ ಮುಂದಾಗುವುದು ಸಾಮಾನ್ಯ. ಒಂದು ಕುಟುಂಬಕ್ಕೆ ಹೇಗೆ ಬಜೆಟ್ ಪ್ಲಾನ್ ಇರುವಂತೆ ಒಂದು ದೇಶಕ್ಕೂ ಕೂಡ ಬಜೆಟ್ ಪ್ಲಾನ್ ಬೇಕಾಗುತ್ತದೆ.
ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಚುನಾವಣೆಯ ನಂತರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಕೇಂದ್ರ ಬಜೆಟ್ ಬಗ್ಗೆ ತಿಳಿಯೋಣ ಬನ್ನಿ..
ಆರ್ಥಿಕ ಸಮೀಕ್ಷೆ 2019
ಕೇಂದ್ರ ಬಜೆಟ್ ಮಂಡನೆಯ ಪೂರ್ವದಲ್ಲಿ, ಪ್ರತಿ ವರ್ಷ ಕಳೆದ 12 ತಿಂಗಳುಗಳ ದೇಶದ ಆರ್ಥಿಕತೆಗೆ ಸಂಬಂಧಿತ ವಿವರವಾದ ಮಾಹಿತಿ ನೀಡಲು ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತ ಪಡಿಸಲಾಗುತ್ತದೆ. ಕೇಂದ್ರ ಬಜೆಟ್ 2018-19 ರ ಮೊದಲು, ಜನವರಿ 29, 2018 ರಂದು ಭಾರತದ ಅಂದಿನ ಪ್ರಮುಖ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣಿಯನ್ ಆರ್ಥಿಕ ಸಮೀಕ್ಷೆ ಪ್ರಸ್ತುತಪಡಿಸಿದ್ದರು.
ಹಿಂದಿನ ವರ್ಷದಲ್ಲಿ ನಡೆಸಿದ ನೀತಿಯ ಕಾರ್ಯಕ್ಷಮತೆ ಮತ್ತು ಆರ್ಥಿಕ ಬೆಳವಣಿಗೆಯ ಸಾಮಾನ್ಯ ದೃಷ್ಟಿಕೋನವು ದೀರ್ಘ ಮತ್ತು ಅಲ್ಪ ಕಾಲಾವಧಿಯ ಬಗ್ಗೆ ಇದು ಮಾಹಿತಿ ಒಳಗೊಂಡಿರುತ್ತದೆ. ಆದರೆ ಈ ವರ್ಷ, ಹಣಕಾಸು ಸಚಿವಾಲಯದ ಹೇಳಿಕೆ ಪ್ರಕಾರ ಆರ್ಥಿಕ ಸಮೀಕ್ಷೆ ಮಂಡಿಸಲಾಗುವುದಿಲ್ಲ. ಕೇಂದ್ರ ಬಜೆಟ್ 2019: ಮೋದಿ ಸರ್ಕಾರ ಬಜೆಟ್‌ನಲ್ಲಿ ಏನೇನೆಲ್ಲ ಘೋಷಿಸಬಹುದು?
ಬಜೆಟ್ ಅಧಿವೇಶನ
ಮಧ್ಯಂತರ ಬಜೆಟ್ 2019 ರ ಅಧಿವೇಶನವು ಜನವರಿ 31 ರಂದು ಆರಂಭವಾಗಿ, ಫೆಬ್ರವರಿ 13 ರವರೆಗೆ ನಡೆಯಯಲಿದೆ. ಫೆಬ್ರವರಿ 1 ರಂದು ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ರೈಲ್ವೆ ಬಜೆಟ್ ಅನ್ನು 2017 ರಿಂದ ರಾಷ್ಟ್ರೀಯ ಬಜೆಟ್ ನೊಂದಿಗೆ ಸಂಯೋಜಿಸಲಾಗಿದೆ.
ಬಜೆಟ್ ಭಾಷಣದ ಅವಧಿ
ಹಣಕಾಸು ಸಚಿವಾಲಯವು ಮಧ್ಯಂತರ ಬಜೆಟ್ ನಲ್ಲಿ ಯಾವುದೇ ಪ್ರಮುಖ ರಚನಾತ್ಮಕ ಬದಲಾವಣೆಯನ್ನು ಪ್ರಕಟಿಸುವುದಿಲ್ಲ. (ಉದಾಹರಣೆಗೆ, ತೆರಿಗೆ ವ್ಯವಸ್ಥೆಯಲ್ಲಿ)
ಹಣಕಾಸು ಮಸೂದೆ ಆಧರಿಸಿ ಭಾಷಣದ ಉದ್ದ ಸುಮಾರು 2 ಗಂಟೆ ಕಾಲ ನಡೆಯುವ ನಿರೀಕ್ಷೆಯಿದೆ. ಆದರೆ ಸಂಸತ್ತಿನಲ್ಲಿ ಉಂಟಾಗುವ ಅಡೆತಡೆ/ಪ್ರತಿಭಟನೆಗಳಿಂದಾಗಿ ಭಾಷಣದ ಅವಧಿ ಹೆಚ್ಚಾಗಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications