For Quick Alerts
ALLOW NOTIFICATIONS  
For Daily Alerts

'ಯೂಟರ್ನ್' ಹೊಡೆದ ಸೂಚ್ಯಂಕ: ಮಾರುಕಟ್ಟೆ ದಿಢೀರ್ ಕುಸಿತ

|

ನವದೆಹಲಿ, ಜನವರಿ 25: ಶುಕ್ರವಾರ ಬೆಳಿಗ್ಗೆಯಿಂದ ಜಿಗಿತ ಕಂಡು ಗ್ರಾಹಕರ ಮುಖದಲ್ಲಿ ಖುಷಿ ಮೂಡಿಸಿದ್ದ ಮಾರುಕಟ್ಟೆ ಸೂಚ್ಯಂಕ, ಸಂಜೆ ವೇಳೆಗೆ ದಿಢೀರನೆ 'ಯೂ ಟರ್ನ್' ತೆಗೆದುಕೊಂಡಿದೆ. ಇದರಿಂದ ಷೇರುದಾರರ ಮಂದಹಾಸ ಸಂಜೆ ವೇಳೆಗೆ ಕಳೆಗುಂದಿದೆ.

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ ಸಂಜೆ ವೇಳೆಗೆ 170 ಅಂಶಗಳಷ್ಟು ಕುಸಿತ ಕಂಡು 36,026ಕ್ಕೆ ಅಂತ್ಯಗೊಂಡಿದೆ. ಎನ್‌ಎಸ್‌ಇ ನಿಫ್ಟಿಯಲ್ಲಿ ಕೂಡ ಕುಸಿತ ಉಂಟಾಗಿದ್ದು, 69 ಅಂಶಗಳ ಇಳಿಕೆಯೊಂದಿಗೆ 10,781ರಲ್ಲಿ ನಿಂತಿದೆ. ಸೆನ್ಸೆಕ್ಸ್ ಸ್ಟಾಕ್‌ಗಳಲ್ಲಿ 10 ಸ್ಟಾಕ್‌ಗಳು ಚೇತರಿಸಿಕೊಂಡಿದ್ದರೆ, 20 ಹಿನ್ನಡೆ ಅನುಭವಿಸಿವೆ.

ಭಾರತೀಯ ಷೇರುಪೇಟೆ ತಲ್ಲಣ; ಕೊಚ್ಚಿಹೋಯಿತು 2.2 ಲಕ್ಷ ಕೋಟಿ ಸಂಪತ್ತು

ಮಾರುತಿ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೆನ್ಸೆಕ್ಸ್‌ನಲ್ಲಿ ಬಹುದೊಡ್ಡ ಕುಸಿತ ಕಂಡಿವೆ.

'ಯೂಟರ್ನ್' ಹೊಡೆದ ಸೂಚ್ಯಂಕ: ಮಾರುಕಟ್ಟೆ ದಿಢೀರ್ ಕುಸಿತ

ಸೆನ್ಸೆಕ್ಸ್‌ನಲ್ಲಿ ಸುಮಾರು ಅರ್ಧದಷ್ಟು ಅಂಕ ಕುಸಿತಕ್ಕೆ ಮಾರುತಿ ಸುಜುಕಿ ಕಾರಣವಾಗಿದೆ. ಐಸಿಐಸಿಐ ಮಾಜಿ ಸಿಇಒ ಚಂದ್ರ ಕೊಚ್ಚಾರ್ ಅವರ ಮೇಲೆ ಅಪರಾಧ ಸಂಚಿನ ಆರೋಪದಡಿ ಸಿಬಿಐ ಪ್ರಕರಣ ದಾಖಲು ಮಾಡಿದ ಬಳಿಕ ಬ್ಯಾಂಕಿನ ಸೂಚ್ಯಂಕಕ್ಕೆ ಆಘಾತ ಉಂಟಾಗಿದೆ.

English summary

share market nifty sensex points index maruti icici

Sensex and Nifty slipped 170 and 69 points each on Friday evening after the share market took a U turn.
Story first published: Friday, January 25, 2019, 18:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X