For Quick Alerts
ALLOW NOTIFICATIONS  
For Daily Alerts

ಮಧ್ಯಂತರ ಬಜೆಟ್ 2019: ವಿಶ್ಲೇಷಕರು/ಅರ್ಥಶಾಸ್ತ್ರಜ್ಞರಿಂದ ಟೀಕೆಗೆ ಒಳಪಟ್ಟ 10 ಪ್ರಮುಖ ಯೋಜನೆಗಳು

ವಿದ್ವಾಂಸರು, ಅರ್ಥಶಾಸ್ತ್ರಜ್ಞರು, ವಿಪಕ್ಷಗಳಿಂದ ಟೀಕೆಗೆ ಒಳಪಟ್ಟ ಕೇಂದ್ರದ ಕೆಲ ಯೋಜನೆಗಳ ಸಂಕ್ಷೀಪ್ತ ಚಿತ್ರಣವನ್ನು ಈ ಲೇಖನದಲ್ಲಿ ನೀಡಲಾಗಿದೆ.

|

ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ಅನ್ನು ಫೆ. 1ರಂದು ಮಂಡಿಸಿದ್ದು, ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಅವರು ಪ್ರಸ್ತುತಪಡಿಸಿರುವ ಹಲವು ಪ್ರಮುಖ ಯೋಜನೆಗಳ ನೈಜ ಪ್ರಯೋಜನ, ವೈಫಲ್ಯತೆ ಮತ್ತು ಪರಿಣಾಮಗಳನ್ನು ಹಲವು ವಿದ್ವಾಂಸರು ಹಾಗು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.

ವಿದ್ವಾಂಸರು, ಅರ್ಥಶಾಸ್ತ್ರಜ್ಞರು, ವಿಪಕ್ಷಗಳಿಂದ ಟೀಕೆಗೆ ಒಳಪಟ್ಟ ಕೇಂದ್ರದ ಕೆಲ ಯೋಜನೆಗಳ ಸಂಕ್ಷೀಪ್ತ ಚಿತ್ರಣವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಆದಾಯ ತೆರಿಗೆ ಕೊಡುಗೆಯೇ ಇಲ್ಲ

ಆದಾಯ ತೆರಿಗೆ ಕೊಡುಗೆಯೇ ಇಲ್ಲ

ಮಧ್ಯಮ ವರ್ಗದ ಆದಾಯ ತೆರಿಗೆ ಮಿತಿಯನ್ನು ರೂ. 2,50,000 ದಿಂದ ರೂ. 500,000 ಗಳಿಗೆ ಏರಿಸುವುದರ ಮೂಲಕ ಭಾರವನ್ನು ಕಡಿಮೆ ಮಾಡಿರುವುದಾಗಿ ಬಜೆಟ್ ಪ್ರಸ್ತಾಪಿಸಿದೆ. ಇತರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ರೂ. 40,000 ರಿಂದ 50,000 ರೂ.ಗಳಿಗೆ ಏರಿಕೆಯಾಗಿದೆ. ಆದರೆ ವಿಶ್ಲೇಷಕರು (fine p rint) ಹೇಳುವಂತೆ, ಕಡಿಮೆ ಆದಾಯದ ಪರಿಧಿಯಲ್ಲಿ ಬರುವವರು ಮಾತ್ರ ಇದರ ಲಾಭವಾಗುತ್ತದೆ.
ಆದಾಯ ತೆರಿಗೆ ಕಾಯಿದೆಯ ವಿಭಾಗ 87 ಎ ತಿದ್ದುಪಡಿ ಮಾಡಲು ವೈಯಕ್ತಿಕ ತೆರಿಗೆದಾರರಿಗೆ ಪರಿಹಾರವನ್ನು ಒದಗಿಸಲು ತೆರಿಗೆ ವಿನಾಯಿತಿಯ ಮಿತಿಯನ್ನು ರೂ. 2,500 ರಿಂದ ಗರಿಷ್ಠ ಮೊತ್ತ ರೂ. 12,500 ಗೆ ಹೆಚ್ಚಿಸಲಾಗಿದೆ.
ಮೊದಲು ರೂ. 3,50,000 ಬದಲಿಗೆ ರೂ. 5,00,000 ವರೆಗೆ ಒಟ್ಟು ಆದಾಯ ಹೊಂದಿರುವ ತೆರಿಗೆದಾರರಿಗೆ ರಿಯಾಯಿತಿ ದೊರೆಯುತ್ತಿತ್ತು. ಇದರರ್ಥ, ಎಲ್ಲಾ ಆದಾಯ ಕಡಿತಗಳ ನಂತರ ರೂ. 5 ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವವರಿಗೆ ಮಾತ್ರ ಇದರ ಲಾಭ ದೊರೆಯುತ್ತದೆ. ಆದರೆ ಹೆಚ್ಚಿನ ಆದಾಯದ ಪರಿಧಿಯಲ್ಲಿ ಬರುವವರಿಗೆ ತೆರಿಗೆ ರಚನೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.  ಬಜೆಟ್ 2019: ಮೋದಿ ಸರ್ಕಾರದ ಕೊನೆ ಬಜೆಟ್ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿ..

ತೆರಿಗೆದಾರರಿಗೆ ಇತರ ಪ್ರಯೋಜನಗಳು

ತೆರಿಗೆದಾರರಿಗೆ ಇತರ ಪ್ರಯೋಜನಗಳು

ಅಂಚೆ ಕಚೇರಿ ಮತ್ತು ಬ್ಯಾಂಕುಗಳಲ್ಲಿನ ರೂ. 40,000 ವರೆಗಿನ ಬಡ್ಡಿ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಸೆಕ್ಷನ್ 54ರ ಅಡಿಯಲ್ಲಿ ಬಂಡವಾಳ ಲಾಭ ತೆರಿಗೆ ವಿನಾಯಿತಿಯು ರೂ. 2 ಕೋಟಿವರೆಗೆ ಸಿಗಲಿದೆ. 2 ಮನೆಗಳ ಆಸ್ತಿಯ ಮೇಲೆ ಬಂಡವಾಳದ ವಿನಾಯಿತಿ ಲಭ್ಯವಿದೆ. ಮಾರಾಟವಾಗದ ಮನೆಗಳ ಸಾಮಾನ್ಯ ಬಾಡಿಗೆಗೆ ಆದಾಯ ತೆರಿಗೆ ವಿನಾಯಿತಿ ಅವಧಿಯನ್ನು 1 ವರ್ಷದಿಂದ 2 ವರ್ಷಗಳಿಗೆ ವಿಸ್ತರಿಸಲಾಗಿದೆ. 2030ರ ವೇಳೆಗೆ ಭಾರತ ಹೇಗಿರಬೇಕು? ಮೋದಿ ಸರ್ಕಾರದ ಟಾಪ್ 10 ವಿಷನ್‍ಗಳೇನು ಗೊತ್ತೆ?

ಪಿಂಚಣಿ ಯೋಜನೆ

ಪಿಂಚಣಿ ಯೋಜನೆ

ಕಾರ್ಮಿಕರಿಗೆ ಪಿಂಚಣಿ ಯೋಜನೆಯಡಿ ಅಸಂಘಟಿತ ವಲಯದವರಿಗಾಗಿ ಹೊಸ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್ ಯೋಜನೆ ಪರಿಚಯಿಸಿದ್ದಾರೆ.
ತಿಂಗಳಿಗೆ ರೂ. 15,000 ಆದಾಯ ಹೊಂದಿರುವ ಜನರು ಇದರ ಲಾಭ ಪಡೆಯಲಿದ್ದು,ಫಲಾನುಭವಿಗಳು ನಿವೃತ್ತಿ ನಂತರ ತಿಂಗಳಿಗೆ ರೂ. 3000 ಪಿಂಚಣಿ ಪಡೆಯಲಿದ್ದಾರೆ. ಪ್ರತಿ ತಿಂಗಳು 100 ರೂಪಾಯಿ ಕೊಡುಗೆ ಮೂಲಕ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್ ಯೋಜನೆಗೆ ಅಸಂಘಟಿತ ವಲಯದ ಕಾರ್ಮಿಕರು ನೊಂದಾಯಿಸಿಕೊಳ್ಳಬಹುದು. ಹಣಕಾಸು ಸಚಿವರು ಈ ಯೋಜನೆಯನ್ನು ಜಗತ್ತಿನ ದೊಡ್ಡ ಪಿಂಚಣಿ ಯೋಜನೆ ಎಂದಿದ್ದರು. ಆದರೆ ಅರ್ಥಶಾಸ್ತ್ರಜ್ಞ ಸ್ವಾಮಿನಾಥನ್ ಅಯ್ಯರ್ ಅವರು, ಮೆಗಾ ಪಿಂಚಣಿ ಯೋಜನೆಯನ್ನು ಮಿನಿ ಪಿಂಚಣಿ ಯೋಜನೆ ಎಂದು ವಿಶ್ಲೇಷಿಸಿದ್ದಾರೆ.

ಹಣಕಾಸು ಕೊರತೆ

ಹಣಕಾಸು ಕೊರತೆ

ಬಜೆಟ್ ಹಣಕಾಸು ಕೊರತೆಯನ್ನು ಇಲ್ಲಿ ವಿಶ್ಲೇಷಿಸಲಾಗಿದ್ದು, ಮಾರ್ಚ್ 31, 2019 ರ ಹಣಕಾಸು ವರ್ಷವು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. 3.4 ಕ್ಕೆ ಕೊನೆಗೊಂಡಿದೆ. ಅಂದರೆ ಗುರಿಯಿಟ್ಟ ಶೇ. 3.3 ಕ್ಕಿಂತ ಸ್ವಲ್ಪ ಹೆಚ್ಚಿನದ್ದಾಗಿದೆ. 2019-20 ರ ಕೊರತೆಯ ಗುರಿಯನ್ನು ಹಿಂದಿನ ಶೇ. 3.1 ಗುರಿಯ ಬದಲಿಗೆ ಶೇ. 3.4ಕ್ಕೆ ಹೊಂದಿಸಲಾಗಿದೆ,
ನಿವ್ವಳ ಮತ್ತು ಸಮಗ್ರ ಮಾರುಕಟ್ಟೆಯ ಸಾಲಗಳು ಮಾರುಕಟ್ಟೆಯ ನಿರೀಕ್ಷೆಗಿಂತ ಹೆಚ್ಚಾಗಿದೆ ಎಂದು ಮುಂಬೈನ ಕೊಟಕ್ ಮಹೀಂದ್ರಾ ಬ್ಯಾಂಕಿನ ಹಿರಿಯ ಅರ್ಥಶಾಸ್ತ್ರಜ್ಞ ಉಪಸ್ನಾ ಭಾರದ್ವಾಜ್ ಹೇಳಿದ್ದಾರೆ.

ರೈತರಿಗೆ ಕಡಿಮೆ ಪ್ರಮಾಣದ ವಾರ್ಷಿಕ ನಗದು

ರೈತರಿಗೆ ಕಡಿಮೆ ಪ್ರಮಾಣದ ವಾರ್ಷಿಕ ನಗದು

ಸಣ್ಣ ಹಿಡುವಳಿ ರೈತರಿಗೆ ಪ್ರತಿ ವರ್ಷಕ್ಕೆ ರೂ. 6,000 ನೇರ ನಗದು ಮೊತ್ತ ಘೋಷಿಸಿದೆ. ಅಂದರೆ ತಿಂಗಳಿಗೆ ರೂ. 500 ಆಗುತ್ತದೆ. ಇದು ವಿಪಕ್ಷಗಳ ಹಾಗು ವಿಶ್ಲೇಷಕರಿಂದ ಟೀಕೆಗೆ ಗುರಿಯಾಗಿದೆ. ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತ ವರ್ಗಕ್ಕೆ ಶೇ. 2ರಷ್ಟು ಬಡ್ಡಿ ರಿಯಾಯಿತಿ ಹಾಗು ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ. 3ರಷ್ಟು ಬಡ್ಡಿ ವಿನಾಯಿತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಬಜೆಟ್ ನಲ್ಲಿ ಹೇಳಿದೆ. ಆದರೆ ಈ ಯೋಜನೆ ಭೂರಹಿತ ರೈತರನ್ನು ಹಾಗು ನಗರದ ಬಡವರನ್ನು ಕೈಬಿಟ್ಟಿದೆ.

ರೇಲ್ವೆ ಇಲಾಖೆಗೆ ಎಷ್ಟು?

ರೇಲ್ವೆ ಇಲಾಖೆಗೆ ಎಷ್ಟು?

ಹಣಕಾಸು ಸಚಿವರು 2019-20ರ ಹನಕಾಸು ವರ್ಷಕ್ಕೆ ರೇಲ್ವೆ ಇಲಾಖೆಗೆ ರೂ. 64,587 ಕೋಟಿ ಮೀಸಲಿಟ್ಟಿದ್ದಾರೆ. ಇದು ಕಾರ್ಯನಿರ್ವಹಣಾ ಅನುಪಾತವನ್ನು FY19 ರಲ್ಲಿ ಶೇ. 96.2 ಹಾಗು FY20 ನಲ್ಲಿ ಶೇ. 95 ನಿಗದಿಪಡಿಸಿದೆ.
ಆದರೆ ಬಜೆಟ್ ಪ್ರಕಟಣೆ ನಂತರ ರೈಲ್ವೆ ಷೇರುಗಳು ಮಿಶ್ರ ಫಲಿತಾಂಶಕ್ಕೆ ಒಳಗಾದವು.

ಜಯಂತ್ ಸಿನ್ಹಾ 10 ಅಂಕ

ಜಯಂತ್ ಸಿನ್ಹಾ 10 ಅಂಕ

ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರು, ಆರ್ಥಿಕತೆಯ ಎಲ್ಲಾ ಅಗತ್ಯಗಳನ್ನು ಪೂರೈಸಿರುವುದರಿಂದ ಬಜೆಟ್ ಗೆ 10ಕ್ಕೆ 10 ಅಂಕ ನೀಡಿದ್ದಾರೆ. ನಾವು ಎದುರಿಸುತ್ತಿರುವ ಸವಾಲುಗಳಿಗೆ ನಾವು ಸರಿಯಾಗಿ ಪ್ರತಿಕ್ರಿಯಿಸಿದ್ದು, ಗ್ರಾಮೀಣ ವಲಯ, ಮಧ್ಯಮ ವರ್ಗದ ಮತ್ತು ಸಾಮಾಜಿಕ ಸುರಕ್ಷತೆಯ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಲಾಗಿರುವುದು ಅತ್ಯಂತ ಅವಶ್ಯಕ.

ಕಾಂಗ್ರೆಸ್ ಟೀಕೆ

ಕಾಂಗ್ರೆಸ್ ಟೀಕೆ

ಶಶಿ ತರೂರ್: ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ವಿನಾಯಿತಿ ಮಿತಿ ಮತ್ತು ಸ್ಟಾಂಡರ್ಡ್ ಡಿಕ್ಷನ್ ಹೆಚ್ಚಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ರೈತರು ರೂ. ೫೦೦ ರಲ್ಲಿ ಜೀವನ ನಿರ್ವಹಿಸಲು ಸಾಧ್ಯವೆ ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ: ಮೋದಿಯವರೇ ನಿಮ್ಮ ಐದು ವರ್ಷಗಳ ಅಸಮರ್ಥ ಆಡಳಿತ ರೈತರ ಜೀವನ ಹಾಳು ಮಾಡಿದೆ. ದಿನಕ್ಕೆ ಕೇವಲ ರೂ. ೧೭ ನಿಗದಿಪಡಿಸಿ ರೈತರನ್ನು ಅವಮಾನಿಸಿದ್ದಿರಿ.

English summary

Interim Budget 2019: 10 major plans that have been criticized by experts and economist

the real benefits and impact of the myriad sops and schemes unveiled by interim Finance Minister Piyush Goyal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X