For Quick Alerts
ALLOW NOTIFICATIONS  
For Daily Alerts

ಮಧ್ಯಂತರ ಬಜೆಟ್ 2019: ಮೋದಿ ಸರ್ಕಾರದ ಕೊನೆ ಬಜೆಟ್ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿ..

ಪಿಯೂಷ್ ಗೋಯಲ್ ಅವರು, ಯಾವ ಯಾವ ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದಾರೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡೋಣ ಬನ್ನಿ...

|

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ತನ್ನ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಮಂಡನೆ ಮಾಡುತ್ತಿದೆ. ಲೋಕಸಭಾ ಚುನಾವಣಾ ಪೂರ್ವದ ಈ ಬಜೆಟ್ ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮತದಾರರನ್ನು ಸೆಳೆಯಲು ಯಾವೆಲ್ಲ ಯೋಜನೆಗಳನ್ನು ಘೋಷಿಸಬಹುದು, ಯಾವ ವಲಯಕ್ಕೆ ಹೆಚ್ಚು ಆದ್ಯತೆ ನೀಡಬಹುದು ಎಂಬ ಕೂತುಹಲ ಎಲ್ಲರಲ್ಲೂ ಇದೆ.

 

ಬಜೆಟ್ ಪರಿಣಾಮದಿಂದಾಗಿ 2019ರಲ್ಲಿ ಯಾವ ವಸ್ತುಗಳ ಅಗ್ಗವಾಗಲಿವೆ ಹಾಗು ಯಾವ ವಸ್ತುಗಳು ದುಬಾರಿಯಾಗಲಿವೆ ಎಂಬ ಪ್ರಶ್ನೆ ಮೂಡುವುದು ಸಹಜ. ಅರುಣ್ ಜೇಟ್ಲಿಯವರ ಅನಾರೋಗ್ಯದ ಕಾರಣ ರೇಲ್ವೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರು ಮಧ್ಯಂತರ ಹಣಕಾಸು ಸಚಿವರಾಗಿ ಇಂದು ಕೊನೆಯ ಬಜೆಟ್ ನ್ನು ಮಂಡಿಸಿದ್ದಾರೆ.
ಪಿಯೂಷ್ ಗೋಯಲ್ ಅವರು, ಯಾವ ಯಾವ ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದಾರೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡೋಣ ಬನ್ನಿ...

ನವ ಭಾರತ ನಿರ್ಮಾಣ

ನವ ಭಾರತ ನಿರ್ಮಾಣ

ಕಳೆದ ಐದು ವರ್ಷಗಳಲ್ಲಿ ಜಾಗತಿಕವಾಗಿ ಭಾರತ ಪ್ರಕಾಶಿಸುತ್ತಿದ್ದು, 2020ರ ವೆಳೆಗೆ ನವಭಾರತ ನಿರ್ಮಾಣ ಮಾಡಲಿದ್ದೇವೆ. ದೇಶ ಆರ್ಥಿಕ ವಲಯದಲ್ಲಿ 6ನೇ ಸ್ಥಾನದಲ್ಲಿದ್ದು, ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದ್ದೇವೆ ಎಂದು ತಮ್ಮ ಚೊಚ್ಚಲ ಬಜೆಟ್ ಮಂಡನೆಯಲ್ಲಿ ಪಿಯೂಷ್ ಗೋಯಲ್ ಹೇಳಿದ್ದಾರೆ.

ಹಣದುಬ್ಬರ ದರ ನಿಯಂತ್ರಣ

ಹಣದುಬ್ಬರ ದರ ನಿಯಂತ್ರಣ

ಕೇಂದ್ರ ಸರ್ಕಾರ ಹಣದುಬ್ಬರ ದರ ನಿಯಂತ್ರಣ ಮಾಡಿದ್ದು, ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಹಣದುಬ್ಬರವನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದೇವೆ. ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ ಹರಿವು ಆಗಿದೆ. ಭಯೋತ್ಪಾದನೆ ನಿಯಂತ್ರಣ, ಭ್ರಷ್ಟಮುಕ್ತ ಸರ್ಕಾರ ನೀಡಿದ್ದೇವೆ. 2018ರ ಡಿಸೆಂಬರ್ ನಲ್ಲಿ ಹಣದುಬ್ಬರದ ದರ ಕೇವಲ ಶೇ.2.1ರಷ್ಟಿತ್ತು ಎಂದರು.

ಜಿಎಸ್ಟಿ ಕೊಡುಗೆ
 

ಜಿಎಸ್ಟಿ ಕೊಡುಗೆ

ಸರಕು ಮತ್ತು ಸೇವಾ ತೆರಿಗೆ ಹಾಗು ಇನ್ನಿತರ ತೆರಿಗೆಗಳ ಮುಖಾಂತರ ಆದಾಯ ಹೆಚ್ಚಳವಾಗಿದೆ. ತೆರಿಗೆ ಕಟ್ಟುವವರ ಪ್ರಮಾಣ ಭಾರೀ ಏರಿಕೆ ಕಂಡಿದೆ.

ಬ್ಯಾಂಕಿಂಗ್ ಕ್ಷೇತ್ರದ ಬದಲಾವಣೆ

ಬ್ಯಾಂಕಿಂಗ್ ಕ್ಷೇತ್ರದ ಬದಲಾವಣೆ

ಮೋದಿ ನೇತೃತ್ವದ ಸರ್ಕಾರದಲ್ಲಿ ಹಣದುಬ್ಬರ ದರ ನಿಯಂತ್ರಣ, ಬೆಲೆ ಎರಿಕೆ ನಿಯಂತ್ರಣಕ್ಕೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಲಲಾಗಿದ್ದು, ದೇಶದ ಬ್ಯಾಂಕಿಂಗ್ ವಲಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದಿದ್ದಾರೆ. ಬ್ಯಾಂಕ್ ಗಳು ನೀಡಿರುವ ಸಾಲ ಗುಣಮಟ್ಟ ಮತ್ತು ಸ್ಥಿತಿಗತಿ ಪರಿಶಿಲನೆಗೆ ಆರ್ಬಿಐಗೆ ಸೂಚನೆ ನೀಡಲಾಗಿದೆ.

ಸ್ವಚ್ಛತಾ ಭಾರತ ಅಭಿಯಾನ

ಸ್ವಚ್ಛತಾ ಭಾರತ ಅಭಿಯಾನ

ಬದಲಾವಣೆ ೫.೪೫ ಲಕ್ಷ ಹಳ್ಳಿಗಳು ಬಹಿರ್ದೆಸೆ ಮುಕ್ತವಾಗಿದ್ದು, ಇದಕ್ಕೆ ಸ್ವಚ್ಛತಾ ಭಾರತ ಅಭಿಯಾನದ ಕಾಣಿಕೆ ದೊಡ್ಡದು.

 

ಆರೋಗ್ಯ ವಲಯ

ಆರೋಗ್ಯ ವಲಯ

ಆರೋಗ್ಯ ವಲಯದಲ್ಲಿ ಬಹುದೊಡ್ಡ ಕ್ರಾಂತಿಯಾಗಿದ್ದು, ಆಯುಷ್ಮಾನ್ ಭಾರತ್ ಮೂಲಕ ೫೦ ಕೋಟಿ ಜನರಿಗೆ ಸೌಲಭ್ಯ ಸಿಗಲಿದೆ. ಜನೌಷಧಿ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಜನರಿಗೆ ಔಷಧಿ ಸಿಗಲಿದೆ.

ಗೃಹ ನಿರ್ಮಾಣ

ಗೃಹ ನಿರ್ಮಾಣ

ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಮೋದಿ ಸಕಾ್ರದ ಅವಧಿಯಲ್ಲಿ ಗೃಹ ನಿರ್ಮಾಣ 5 ಪಟ್ಟು ಏರಿಕೆಯಾಗಿದೆ. ಪಿಎಂ ಅವಾಸ ಯೋಜನೆಯಡಿ ಗೃಹ ನಿರ್ಮಾಣ ಕಾರ್ಯ ಹೆಚ್ಚಿನ ಪ್ರಮಾಣದಲ್ಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಗೆ 75 ಸಾವಿರ ಕೋಟಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಗೆ 75 ಸಾವಿರ ಕೋಟಿ

ದೇಶದ ಸಣ್ಣ ಹಿಡುವಳಿದಾರರಿಗೆ ಪ್ರತಿ ವರ್ಷ 6 ಸಾವಿರ ರೂಪಾಯಿ ನೇರ ನಗದು ಮೊತ್ತ ಘೋಷಿಸಿದೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಖಾತೆಗೆ ಮೂರು ಕಂತುಗಳಲ್ಲಿ 2 ಸಾವಿರ ವರ್ಗಾವಣೆ ಮಾಡಲಾಗುವುದು. ರೈತರ ಕನಿಷ್ಟ ಬೆಂಬಲ ಬೆಲೆ ೧.೫ ರಷ್ಟು ಹೆಚ್ಚಳ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ೧೨ ಕೋಟಿ ರೈತರಿಗೆ ಲಾಭ ಸಿಗಲಿದೆ. ಇದಕ್ಕಾಗಿ 75 ಸಾವಿರ ಕೋಟಿ ಮೀಸಲು ಇಡಲಾಗಿದೆ.

ಕಾಮಧೇನು ಆಯೋಗ ರಚನೆ

ಕಾಮಧೇನು ಆಯೋಗ ರಚನೆ

ದೇಶದಲ್ಲಿ ಗೋಸಂರಕ್ಷಣೆಗೆ ಸದಾ ಮುಂದಿರುವ ಬಿಪೆಪಿ ಸರ್ಕಾರ ಕಾನುಧೇನು ಆಯೋಗ ರಚಿಸಲಿದೆ.

ರೈತರಿಗೆ ಶೇ. 2 ಬಡ್ಡಿ ರಿಯಾಯಿತಿ

ರೈತರಿಗೆ ಶೇ. 2 ಬಡ್ಡಿ ರಿಯಾಯಿತಿ

ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತ ವರ್ಗಕ್ಕೆ ಶೇ. 2ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುವುದು. ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ. 3ರಷ್ಟು ಬಡ್ಡಿ ವಿನಾಯಿತಿ ಸೌಲಭ್ಯ ಕಲ್ಪಿಸಲಾಗುವುದು. ಕೇಂದ್ರವು ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆಗೆ ಚಿಂತನೆ ನಡೆಸಿದೆ.

ಉದ್ಯೋಗ ಖಾತರಿಗೆ ಬಲ

ಉದ್ಯೋಗ ಖಾತರಿಗೆ ಬಲ

ಉದ್ಯೋಗ ಖಾತರಿ ಯೋಜನೆಗೆ ರೂ. 60 ಸಾವಿರ ಕೋಟಿ ಮೀಸಲಿಟ್ಟಿದ್ದು, ಈ ಮೂಲಕ ಉದ್ಯೋಗ ಹೆಚ್ಚಳಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಈ ಮೊತ್ತವನ್ನು ಇನ್ನು ಹೆಚ್ಚಿಸಲಾಗುವುದು.

ಇಎಸ್ ಐ ಯೋಜನೆ

ಇಎಸ್ ಐ ಯೋಜನೆ

ಎರಡು ವರ್ಷದಲ್ಲಿ ಸುಮಾರು 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ರೂ. 21 ಸಾವಿರ ಸಂಬಳ ಪಡೆಯುವವರಿಗೆ ಇಎಸ್ ಐ ಯೋಜನೆ ಸಿಗಲಿದೆ. ಇಎಸ್ ಐ ಆದಾಯ ಮಿತಿ ಯನ್ನು 15 ಸಾವಿರದಿಂದ 21ಸಾವಿರಕ್ಕೆ ಏರಿಕೆ ಮಾಡಲಾಗಿದೆ.

ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್ ಯೋಜನೆ

ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್ ಯೋಜನೆ

ಪ್ರತಿ ತಿಂಗಳು ೧೦೦ ರೂಪಾಯಿ ಹೂಡುವ ಮೂಲಕ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್ ಯೋಜನೆಗೆ ಅಸಂಘಟಿತ ವಲಯದ ಕಾರ್ಮಿಕರು ನೊಂದಾಯಿಸಿಕೊಳ್ಲಬಹುದು.

ಪಿಎಂ ಪಿಂಚಣಿ ಯೋಜನೆ

ಪಿಎಂ ಪಿಂಚಣಿ ಯೋಜನೆ

ಬಹುಮುಖ್ಯವಾಗಿ ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ ಜಾರಿ ತರಲಾಗುವುದು. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಸೇರಿದಂತೆ ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು ರು. 3 ಸಾವಿರ ಪಿಂಚಣೆ ಸೌಲಬ್ಯ ಸಿಗಲಿದೆ

ಉಚಿತ ಎಲ್ಪಿಜಿ ಸಂಪರ್ಕ

ಉಚಿತ ಎಲ್ಪಿಜಿ ಸಂಪರ್ಕ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ೮ ಕೋಟಿ ಗ್ರಾಮೀಣ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಈಗಾಗಲೇ ಸುಮಾರು ೬ ಕೋಟಿ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸಲಾಗಿದೆ.

ಅಲೆಮಾರಿ ಸಮುದಾಯ ನಿಗಮ

ಅಲೆಮಾರಿ ಸಮುದಾಯ ನಿಗಮ

ದೇಶದಲ್ಲಿರುವ ಸಾವಿರಾರು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಅಲೆಮಾರಿ ನಿಗಮ ಸ್ಥಾಪನೆ ಮಾಡಲಾಗುವುದು. ಜೊತೆಗೆ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಜಾರಿ ತಂದು ಆ ಮೂಲಕ ಒಂದು ಕೋಟಿ ಯುವಕರಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗುವುದು.

ಮುದ್ರಾ ಯೊಜನೆಯಡಿ ಸಾಲಸೌಲಭ್ಯ

ಮುದ್ರಾ ಯೊಜನೆಯಡಿ ಸಾಲಸೌಲಭ್ಯ

ಮುದ್ರಾ ಯೊಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯ, ಸಣ್ಣ ಉದ್ಯಮಿಗಳಿಗೆ ಬಡ್ಡಿ ವಿನಾಯಿತಿ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಉಡಾನ್ ಯೋಜನೆ

ಉಡಾನ್ ಯೋಜನೆ

ಉಡಾನ್ ಯೋಜನೆ ಮೂಲಕ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯನ್ನು ಐದು ವರ್ಷಗಳಲ್ಲಿ ದುಪ್ಪಟ್ಟು ಮಾಡಲಾಗುವುದು. ಜೊತೆಗೆ ಉಡಾನ್ ಯೋಜನೆ ಮೂಲಕ ಜನಸಾಮಾನ್ಯರವಿಮಾನಯಾನ ಕನಸು ನನಸು ಮಾಡಲಾಗುವುದು. ವಿಮಾನಯಾನ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗವಕಾಶ ನೀಡುವಲ್ಲಿ ಮಹತ್ವದ ಯೋಜನೆ.

ಡಿಜಿಟಲ್ ಕ್ರಾಂತಿ

ಡಿಜಿಟಲ್ ಕ್ರಾಂತಿ

ಸರ್ಕಾರ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಗ್ರಾಮಗಳಲ್ಲಿ ಡಿಜಿಟಲ್ ಕ್ರಾಂತಿ ವಿಶೇಷ ರೂಪುರೇಷೆಗೆ ನಾಂದಿ ಹಾಡಲಿದೆ. ಈಗಾಗಲೇ ಮೊಬೈಲ್ ಡೇಟಾ ಬಳಕೆದಾರರು ಶೇ. 50ರಷ್ಟು ಏರಿಕೆಯಾಗಿದೆ.

ತೆರಿಗೆ ಸಂಗ್ರಹ ದುಪ್ಪಟ್ಟು

ತೆರಿಗೆ ಸಂಗ್ರಹ ದುಪ್ಪಟ್ಟು

ತೆರಿಗೆ ಸಂಗ್ರಹ ದ್ವಿಗುಣವಾಗಿದ್ದು, ಇದು ೧೨ ಲಕ್ಷ ಕೋಟಿ ಮೀರಿದೆ. ೨೦೧೩-೧೪ರಲ್ಲಿ ತೆರಿಗೆ ಸಂಗ್ರಹ ಕೇವಲ ೬.೩೮ ಲಕ್ಷ ಕೋಟಿ ಸಂಗ್ರವಾಗಿತ್ತು.

ಸಾಗರ ಮಾಲಾ ಯೋಜನೆ

ಸಾಗರ ಮಾಲಾ ಯೋಜನೆ

ದೇಶದ ಬಂದರುಗಳ ಅಭಿವೃದ್ಧಿಗಾಗಿ ಸಾಗರ ಮಾಲಾ ಯೋಜನೆಯನ್ನು ಘೋಷಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ಮಾಣಕ್ಕಾಗಿ ತ್ವರಿತಗತಿಯ ಕಾಮಗಾರಿ. ಸಂಚಾರಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಾಗಿ ವಿಶೇಷ ಕ್ರಮ ಕೈಗೊಳ್ಳಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಸುಕ್ತ ಕ್ರಮ ಕೈಗೊಳ್ಳಲಾಗುವುದು.

3 ಲಕ್ಷ ಕೋಟಿ ರಕ್ಷಣಾ ಬಜೆಟ್

3 ಲಕ್ಷ ಕೋಟಿ ರಕ್ಷಣಾ ಬಜೆಟ್

ಬಿಜೆಪಿ ಸರ್ಕಾರ ದೇಶದ ರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದು, ದೇಶದ ಇತಿಹಾಸದಲ್ಲೇ ಪ್ರಥಮ ಬಾರಿ ರೂ. 3 ಲಕ್ಷ ಕೊಟಿಯಷ್ಟು ರಕ್ಷಣಾ ಬಜೆಟ್ ಮೀಸಲಿರಿಸಿದೆ.

SC, ST ಅಭಿವೃದ್ಧಿಗೆ ಬಂಪರ್

SC, ST ಅಭಿವೃದ್ಧಿಗೆ ಬಂಪರ್

ಪರಿಶಿಷ್ಟ ಜಾತಿ (SC) ಅಭಿವೃದ್ಧಿಗೆ ಸಕಾ್ರ ರೂ.76 ಸಾವಿರ ಕೋಟಿ ಹಾಗು ಪರಿಶಿಷ್ಟ ಪಂಗಡದ (ST) ಅಭಿವೃದ್ಧಿಗಾಗಿ ರೂ. 50 ಸಾವಿರ ಕೋಟಿ ಅನುದಾನ ಇರಿಸಿದೆ.

ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ

ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ

ದೇಶದಲ್ಲಿ ಇಂಧನ ಉಳಿತಾಯದ ಸಲುವಾಗಿ ವಿದ್ಯುತ್ ಚಾಲಿತ ವಾಹನ ಬಳಕೆಗಾಗಿ ಹೆಚ್ಚು ಉತ್ತೇಜನಕ್ಕೆ ನೀಡಲಾಗುವುದು. ಆಧುನಿಕ ಕೃಷಿ ತಂತ್ರಜ್ಞಾನವನ್ನು ಅಳವಡಿಡಿಸುವ ಮೂಲಕ ಉತ್ಪಾದನೆ ಹೆಚ್ಚಳ ಕ್ರಮ ಕಯಗೊಳ್ಲಲಾಗುವುದು. ಅಲ್ಲದೇ ಆರೋಗ್ಯ ವಲಯಕ್ಕೆ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲು ಸೂಕ್ತ ಕ್ರಮ.

ಆದಾಯ ತೆರಿಗೆದಾರರಿಗೆ ಬಂಪರ್ ಕೊಡುಗೆ

ಆದಾಯ ತೆರಿಗೆದಾರರಿಗೆ ಬಂಪರ್ ಕೊಡುಗೆ

ಆದಾಯ ತೆರಿಗೆ ಪಾವತಿಸುವವರಿಗೆ ಇದು ನಿಜಕ್ಕೂ ಬಂಪರ್ ಕೊಡುಗೆ ಎನ್ನಬಹುದು. ರೂ. 5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಅಂದರೆ ಆದಾಯ ತೆರಿಗೆ ಮಿತಿಯನ್ನು ರೂ. 2.5 ಲಕ್ಷದಿಂದ ರೂ. 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಇದು ಸುಮಾರು 3 ಕೋಟಿ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ ಒದಗಿಸಲಿದೆ. ರೂ. 6.5 ಲಕ್ಷದವರೆಗೆ ಆದಾಯ ತೆರಿಗೆ ಪಾವತಿಸುವಂತಿಲ್ಲ.

ಸ್ಟ್ಯಾಂಡರ್ಡ್ ಡಿಡಕ್ಷನ್ ಕೊಡುಗೆ

ಸ್ಟ್ಯಾಂಡರ್ಡ್ ಡಿಡಕ್ಷನ್ ಕೊಡುಗೆ

ಸ್ಟ್ಯಾಂಡರ್ಡ್ ಡಿಡಕ್ಷನ್ ರೂ. 40 ಸಾವಿರದಿಂದ ರೂ. 50 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ರೂ. 40 ಸಾವಿರದವರೆಗಿನ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಸಿಗಲಿದೆ. ಜತೆಗೆ ಉಳಿತಾಯ ಯೋಜನೆಗಳ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಹಾಗು ಉಳಿತಾಯ ಯೋಜನೆಗಳ ಮೇಲೆ ರೂ. ೧.೫ ಲಕ್ಷದವರೆಗೆ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಗೃಹ ಸಾಲ ತೆರಿಗೆ ವಿನಾಯಿತಿ

ಗೃಹ ಸಾಲ ತೆರಿಗೆ ವಿನಾಯಿತಿ

ರೂ. 2 ಲಕ್ಷದವರೆಗಿನ ಗೃಹ ಸಾಲ (Home Loans) ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. TDS ಮಿತಿಯಲ್ಲೂ ಏರಿಕೆ ಮಾಡಲಾಗಿದೆ.

ಶಿಕ್ಷಣ, ಹೈನುಗಾರಿಕೆ, ಕೈಗಾರಿಕೆ

ಶಿಕ್ಷಣ, ಹೈನುಗಾರಿಕೆ, ಕೈಗಾರಿಕೆ

- ಸಣ್ಣ ಕೈಗಾರಿಕೆಗಳಿಗೆ ಶೇ. 2 ರಷ್ಟು ಬಡ್ಡಿ ವಿನಾಯಿತಿ
- ಸ್ವದೇಶಿ ವಸ್ತುಗಳ ಹೆಚ್ಚಿನ ಒತ್ತು
- ರಾಷ್ಟ್ರೀಯ ಶಿಕ್ಷಣ ಯೋಜನೆಗೆ ರೂ. 38,572 ಕೋಟಿ ಅನುದಾನ ಮೀಸಲು
- ಹೈನುಗಾರಿಕೆ ಉತ್ತೇಜನಕ್ಕಾಗಿ ಕಾಮಧೇನು ಯೋಜನೆ ಜಾರಿ

English summary

Interim Budget 2019: Complete Details on popular plans of Modi Government

Interim Budget 2019: Complete Details on popular plans of Modi Government.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X