For Quick Alerts
ALLOW NOTIFICATIONS  
For Daily Alerts

ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ : ಜಾರ್ಜ್

|

ಬೆಂಗಳೂರು, ಫೆಬ್ರುವರಿ 27: ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಜೆ.ಜಾರ್ಜ್ ಅವರು ಇಂದು ಬೆಂಗಳೂರಿನಲ್ಲಿ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಆಯೋಜಿಸಿದ್ದ ಪ್ರತಿಷ್ಠಿತ, "ಭವಿಷ್ಯದ ಸಂಚಾರ ಪ್ರದರ್ಶನ (ಎಫ್‍ಎಂಎಸ್) ಸಮ್ಮೇಳನ-2019ನ್ನು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಾರ್ಜ್ ಅವರು, ಫ್ಯೂಚರ್ ಮೊಬಿಲಿಟಿ ಶೋ (ಭವಿಷ್ಯದ ಸಂಚಾರ ಪ್ರದರ್ಶನ) ಕೇವಲ ಒಂದು ಸಮ್ಮೇಳನವಾಗಿರದೇ, ಸ್ವಚ್ಛ ಹಾಗೂ ಸುಸ್ಥಿರ ಸಂಚಾರ ವ್ಯವಸ್ಥೆಯನ್ನು ಭಾರತದಲ್ಲಿ 2030ರೊಳಗೆ ಪ್ರಚುರಪಡಿಸುವ ಗುರಿಸಾಧನೆ ನಿಟ್ಟಿನಲ್ಲೂ ಮಹತ್ವದ ವಹಿವಾಟು ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಲ್ಲಿ ವಿದ್ಯುತ್ ಚಾಲಿತ ವಾಹನಗಳಿಗಾಗಿ 112 ಚಾರ್ಜಿಂಗ್ ಕೇಂದ್ರ

ಎಫ್‍ಎಂಎಸ್-2019 ಶೂನ್ಯ ಉಗುಳುವಿಕೆ ಗುಣಮಟ್ಟದ ಅತ್ಯಾಧುನಿಕ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಇಡೀ ವಿಶ್ವದಿಂದ ಆಕರ್ಷಿಸಿದೆ. ಭವಿಷ್ಯದಲ್ಲಿ ಶೂನ್ಯ ಹೊಗೆಯುಗುಳುವಿಕೆ ವಾಹನಗಳನ್ನು ಸಂಚಾರಕ್ಕಾಗಿ ಬಳಸುವುದು, ಪರ್ಯಾಯ ವಿದ್ಯುತ್ ಪರಿಹಾರಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳು ಈ ವಿನೂತನ ಕ್ರಮಕ್ಕೆ ಪೂರಕವಾಗಲಿವೆ ಎಂದು ಸಚಿವರು ಹೇಳಿದರು.

"ವಿದ್ಯುತ್ ಚಾಲಿತ ಮತ್ತು ಸುಸ್ಥಿರ ಸಂಚಾರಕ್ಕಾಗಿ ಕರ್ನಾಟಕ ನೀತಿ ಚೌಕಟ್ಟು, ವಿದ್ಯುತ್ ವಾಹನಗಳು, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಬ್ಯಾಟರಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಇತರ ರಾಜ್ಯಗಳಿಗೆ ಮಾದರಿಯಾಗಲಿದೆ ಎಂಬ ಆಶಯವನ್ನು ಜಾರ್ಜ್ ವ್ಯಕ್ತಪಡಿಸಿದರು.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಾರ್ಯತಂತ್ರ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಾರ್ಯತಂತ್ರ

ಕರ್ನಾಟಕ ಹಂತಹಂತವಾಗಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಾರ್ಯತಂತ್ರವನ್ನು ಹಾಕಿಕೊಂಡಿದ್ದು, ಇದು ಸ್ಥಳೀಯ ಉತ್ಪಾಧನೆ ನೆಲೆ ಬಲಗೊಳ್ಳಲು ಮತ್ತು ಇಲೆಕ್ಟ್ರಿಕ್ ವಾಹನಗಳ ಸ್ಥಳೀಯ ಪೂರೈಕೆ ಸರಣಿಯನ್ನು ಬಲಗೊಳಿಸಲು ಪೂರಕವಾಗಿದ್ದು, ಎಲೆಕ್ಟ್ರಿಕ್ ಚಾಲಿತ ತಂತ್ರಜ್ಞಾನಗಳಿಗೆ ಇದು ಒತ್ತು ನೀಡುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸಿದ ಮೊಟ್ಟಮೊದಲ ರಾಜ್ಯ ಕರ್ನಾಟಕವಾಗಿದ್ದು, ಸ್ಕೂಟರ್ ನಿಂದ ಹಿಡಿದು ಬ್ಲೂಮ್‍ವರೆಗೂ ಇದು ಅನ್ವಯಿಸುತ್ತದೆ. ಇದಕ್ಕಾಗಿತೇ ಸಮಗ್ರ ಹಾಗೂ ಸೂಕ್ತ ವಿನ್ಯಾಸದ ಎಲೆಕ್ಟ್ರಿಕ್ ವಾಹನ ಮತ್ತು ವಿದ್ಯುತ್ ದಾಸ್ತಾನು ನೀತಿ-2017ನ್ನು ರೂಪಿಸಲಾಗಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಇ-ಸಂಚಾರಕ್ಕೆ ಚಾಲನೆ

ಕರ್ನಾಟಕದಲ್ಲಿ ಇ-ಸಂಚಾರಕ್ಕೆ ಚಾಲನೆ

ಇದೇ ಸಂದರ್ಭದಲ್ಲಿ ಸಚಿವರು ರಾಜ್ಯದಲ್ಲಿ ಇ-ಸಂಚಾರಕ್ಕೆ ಚಾಲನೆ ನೀಡುವ ಪ್ರಮುಖ ವಿನೂತನ ಕಾರ್ಯತಂತ್ರದ ರೂಪುರೇಷೆಗಳನ್ನು ಈ ಕೆಳಗಿನಂತೆ ನೀಡಿದರು:
* ಭಾರತದ ಮೊಟ್ಟಮೊದಲ ಎಲೆಕ್ಟ್ರಿಕ್ ತಂತ್ರಜ್ಞಾನ ಉತ್ಪಾದನಾ ಹಬ್ ಬೆಂಗಳೂರಿನಲ್ಲಿ ಆರಂಭವಾಗಿದ್ದು ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಇದನ್ನು ಆರಂಭಿಸಿದೆ. ಭಾರತದ ಮೊಟ್ಟಮೊದಲ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಬೆಂಗಳೂರಿನಲ್ಲಿ ಬೆಸ್ಕಾಂ ವತಿಯಿಂದ ಆರಂಭವಾಗಲಿದೆ.
* ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಬೆಂಗಳೂರು ನಗರದಾದ್ಯಂತ 108 ಸ್ಥಳಗಳಲ್ಲಿ (ಸರ್ಕಾರಿ ಜಾಗದಲ್ಲಿ) ಇವಿ ಚಾರ್ಜಿಂಗ್ ಸ್ಟೇಷನ್‍ಗಳನ್ನು ಆರಂಭಿಸುವ ಸಲುವಾಗಿ ಗುರುತಿಸಲಾಗಿದ್ದು, ಬೆಸ್ಕಾಂ ಇದಕ್ಕೆ ಬಿಡ್‍ಗಳನ್ನು ಆಹ್ವಾನಿಸಲಿದೆ.

ವಿದ್ಯುತ್ ಚಾಲಿತ ವಾಹನ ಕ್ಷೇತ್ರಕ್ಕೆ ಭಾರೀ ಬಂಡವಾಳ

ಸಿಬ್ಬಂದಿ ಬಳಸುವ ವಾಹನ ಪರಿಸರ ಸ್ನೇಹಿ

ಸಿಬ್ಬಂದಿ ಬಳಸುವ ವಾಹನ ಪರಿಸರ ಸ್ನೇಹಿ

* ರಾಜ್ಯ ಸರ್ಕಾರದ ಸಿಬ್ಬಂದಿ ಬಳಸುವ ಶೇಕಡ 50ರಷ್ಟು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನಗಳಾಗಿ 2019ರ ಅಂತ್ಯದ ಒಳಗಾಗಿ ಪರಿವರ್ತಿಸಲಾಗುತ್ತಿದೆ.
* ಎಲೆಕ್ಟ್ರಿಕ್ ವಾಹನಗಳ ನೀತಿಯ ಕಾರ್ಯಾಚರಣೆ ಮಾರ್ಗಸೂಚಿಯನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬಿಡುಗಡೆ ಮಾಡಲಾಗಿದೆ.
* ಕರ್ನಾಟಕದ ನಗರಾಭಿವೃದ್ಧಿ ಇಲಾಖೆಯು, ಕಟ್ಟಡ ಬೈಲಾಗಳಿಗೆ ತಿದ್ದುಪಡಿ ತಂದು, ಶೇಕಡ 10-20ರಷ್ಟು ಪಾರ್ಕಿಂಗ್ ಸ್ಥಳವನ್ನು ಇಲೆಕ್ಟ್ರಿಕ್ ವಾಹನಗಳಿಗೆ ಮೀಸಲಿಡುವುದನ್ನು ಕಡ್ಡಾಯಪಡಿಸಲಿದೆ.

ಇಲೆಕ್ಟ್ರಿಕ್ ವಾಹನಗಳ ಮಾಲೀಕರಿಗಾಗಿ ಹೊಸ ಆ್ಯಪ್

ಇಲೆಕ್ಟ್ರಿಕ್ ವಾಹನಗಳ ಮಾಲೀಕರಿಗಾಗಿ ಹೊಸ ಆ್ಯಪ್

* ಇಲೆಕ್ಟ್ರಿಕ್ ವಾಹನಗಳ ಮಾಲೀಕರಿಗಾಗಿ ಹೊಸ ಆ್ಯಪ್ಚ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಲ್ಲಿ ಇಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯದ ಲಭ್ಯತೆಯನ್ನು ಗುರುತಿಸಲು ಮತ್ತು ಸ್ಥಳ ಗುರುತಿಸಲು ನೆರವು ನೀಡಲಾಗುತ್ತದೆ.
* ಇಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸಲು ಮತ್ತು ಇಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಥಳವನ್ನು ವೈವಿಧ್ಯಮಯಗೊಳಿಸಲು ಮತ್ತು ಆಕರ್ಷಕ ಲೋಗೊ ಮೂಲಕ ಅದನ್ನು ಜನಪ್ರಿಯಗಳಿಸಲು ಕ್ರಿಯಾಯೋಜನೆ ಸಿದ್ಧವಾಗುತ್ತಿದೆ. ಇದು ಇಲೆಕ್ಟ್ರಿಕ್ ವಾಹನಗಳಿಗೆ ನಗರದಲ್ಲಿ ಆದ್ಯತೆಯ ಪಾರ್ಕಿಂಗ್ ಸ್ಥಳಾವಕಾಶ ಒದಗಿಸುವ ಮತ್ತು ನಗರಾದ್ಯಂತ ಇದರ ಇರುವಿಕೆಯನ್ನು ಆಕರ್ಷಕವಾಗಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಅಂತಿಮವಾಗಿ, ಕರ್ನಾಟಕ ಸರ್ಕಾರವು, ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಒತ್ತು ನೀಡುವ ಜತೆಗೆ ಹೆಚ್ಚಿನ ಗಮನ ಹರಿಸಲಿದ್ದು, ಇ-ಸಂಚಾರವನ್ನು ಮತ್ತಷ್ಟು ಬೆಂಬಲಿಸುವ ಸಲುವಾಗಿ ನಾವು ಒಂದು ಹೆಜ್ಜೆ ಮುಂದಿರುತ್ತೇವೆ ಎಂದು ವಿವರಿಸಿದರು.

English summary

FMS conference 2019: Karnataka to support e-mobility Minister K J George

Speaking at the Bengaluru the prestigious 'Future Mobility Show (FMS) Conference 2019 inaugural function, Shri George said, he was sure the Future Mobility Show will not only act just as a conference but a business platform for working towards the target of putting up a clean and sustainable mobility for India by the year 2030.
Story first published: Wednesday, February 27, 2019, 12:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X