ಬೆಂಗಳೂರು, ಫೆಬ್ರವರಿ 27: ಜಿಎಸ್‍ಟಿ ದರ ಕಡಿತದ ಘೋಷಣೆಯನ್ನು ಜಿಎಸ್‍ಟಿ ಕೌನ್ಸಿಲ್ ಆಫ್ ಇಂಡಿಯಾ ಘೋಷಿಸುತ್ತಿದ್ದಂತೆ ರಿಯಾಲ್ಟಿ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಚ್ಚಿನ ಉತ್ತೇಜನ ಕಂಡು ಬರುತ್ತಿದೆ. ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಮೇಲಿನ ಜಿಎಸ್‍ಟಿ ದರ ಶೇ.12ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಇನ್ನು ಕೈಗೆಟುಕುವ ಮನೆಗಳ ಮೇಲಿನ ಜಿಎಸ್‍ಟಿ ಶೇ.8 ರಿಂದ ಶೇ.1ಕ್ಕೆ ಇಳಿಕೆಯಾಗಿದೆ.
ಇದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಖರೀದಿಯ ಅವಕಾಶವನ್ನು ಹೆಚ್ಚು ಮಾಡಿದೆ. ಮನೆಗಳ ಮೇಲೆ ಹೂಡಿಕೆ ಮಾಡಲು ಉತ್ತಮ ಅವಕಾಶಕ್ಕಾಗಿ ದಶಕಗಳಿಂದ ಕಾಯುತ್ತಿದ್ದವರಿಗೆ ಇದೊಂದು ಉತ್ತಮ ಅವಕಾಶ ಒದಗಿಬಂದಿದೆ. ಸಾಕಷ್ಟು ಸಂಖ್ಯೆಯ ಸಂಭವನೀಯ ಕೊಳ್ಳುಗರು ಡೆವಲಪರ್ ಗಳನ್ನು ಸಂಪರ್ಕಿಸಿದ್ದು ಆದಷ್ಟು ಶೀಘ್ರ ಮನೆ ಕೊಂಡುಕೊಳ್ಳುವ ಸಂಬಂಧ ಮಾತುಕತೆ ನಡೆಸಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಅಪಾರ್ಟ್ಮೆಂಟ್ ಖರೀದಿದಾರರಿಗೆ ಶುಭ ಸುದ್ದಿ
ಜಿಎಸ್‍ಟಿ ದರ ಕಡಿತದ ಪರಿಣಾಮ, ವಸತಿ ಮನೆಗಳ ಮಾರಾಟ ಹಾಗೂ ಹೊಸ ಯೋಜನೆಗಳ ಆರಂಭ ಹೆಚ್ಚಾಗಲಿದೆ, ಕ್ರಡೈ (ದಿ ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಬೆಂಗಳೂರು ವಿಭಾಗವು ತನ್ನ ಮೊದಲನೇ ಆವೃತ್ತಿಯ ವಾರ್ಷಿಕ ರಿಯಲ್ ಎಸ್ಟೇಟ್ ಎಕ್ಸ್ ಪೋ-2019ನ್ನು ಘೋಷಿಸಿದೆ.

ಈ ಎಕ್ ಪೋ ನಿರಂಥರವಾಗಿ ಎರಡು ವಾರಾಂತ್ಯ ನಡೆಯಲಿದೆ. 2019ರ ಮಾ. 2-3 ರಂದು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಅಶೋಕಾ ಹೋಟೆಲ್‍ನಲ್ಲಿ ಹಾಗೂ 2019ರ ಮಾ.9-10ರಂದು ಮಾರತ್‍ಹಳ್ಳಿಯ ರ್ಯಾಡಿಸನ್ ಬ್ಲೂ (ಪಾರ್ಕ್ ಪ್ಲಾಜಾ)ದಲ್ಲಿ ನಡೆಯಲಿದೆ. ಕಳೆದ ಬಜೆಟ್‍ನಲ್ಲಿ ಘೋಷಿಸಲಾದ ಹೊಸ ತೆರಿಗೆ ಅನುಕೂಲಗಳು, ಸ್ಥಿರ ಬೆಲೆಗಳು, ಆಕರ್ಷಕ ತಾಣಗಳು ಕೂಡ ಮನೆ ಕೊಳ್ಳುಗರನ್ನು ಉತ್ಸುಕರಾಗುವಂತೆ ಮಾಡಿದ ಕಾರಣಗಳಾಗಿವೆ. ಅಲ್ಲದೇ ಇವರು ಕ್ರಡೈ ರಿಯಾಲ್ಟಿ ಎಕ್ಸ್‍ಪೋದಲ್ಲಿ ಭಾಗಿಯಾಗುವಂತೆ ಕೂಡ ಇವು ಮಾಡಲಿವೆ ಎಂಬ ನಿರೀಕ್ಷೆ ಹೊಂದಲಾಗಿದೆ.
30 ಮಂದಿ ಡೆವಲಪರ್ ಗಳು ಎಕ್ಸ್ ಪೋನಲ್ಲಿ ಭಾಗವಹಿಸುತ್ತಿದ್ದು, ಲಲಿತ್ ಅಶೋಕ್ ಹೋಟೆಲ್‍ನಲ್ಲಿ ಎಕ್ಸ್ ಪೋ 2019ರ ಮಾ.2ರಂದು ಆರಂಭವಾಗಲಿದೆ. ಹೆಚ್ಚುವರಿಯಾಗಿ 7 ಆರ್ಥಿಕ ಸಂಸ್ಥೆಗಳು ಕೂಡ ಪಾಲ್ಗೊಳ್ಳುತ್ತಿದ್ದು, ಎಕ್ಸ್ ಪೋ ನಡೆಯುವ ಸ್ಥಳದಲ್ಲಿ ನಿರಂತರವಾಗಿ ಉಪಸ್ಥಿತರಿದ್ದು, ಗೃಹ ಕರೀದಿದಾರರಿಗೆ, ಆಸಕ್ತರಿಗೆ ಗೃಹ ಸಾಲದ ಹಾಗೂ ಅದರ ಅನುಕೂಲಗಳ ಕುರಿತು ವಿವರಿಸಲಿದ್ದಾರೆ. ತಮ್ಮ ಸಾಲ ಯೋಜನೆಯನ್ನು ವಿವರಿಸಲಿದ್ದಾರೆ. ಈ ಎಕ್ಸ್‍ಪೋ ಮೂಲಕ ಕ್ರಡೈ ಬೆಂಗಳೂರು ಸಂಸ್ಥೆ ಒಂದು ಸೂರಿನ ಅಡಿ ಎಲ್ಲಾ ವಿಧದ ಗೃಹ ಖರೀದಿಯ ಸವಲತ್ತುಗಳನ್ನು ತರುವ ಯತ್ನ ಮಾಡಿದೆ.
ಬೆಂಗಳೂರಿನಲ್ಲಿ ವಸತಿ ಆಸ್ತಿ ಮಾರಾಟ ಕಳೆದ ಆರು ತಿಂಗಳಲ್ಲಿ ಸಾಕಷ್ಟು ಉತ್ತಮ ಪ್ರಗತಿ ಕಂಡಿರುವುದು ಗಮನಕ್ಕೆ ಬರುತ್ತಿದೆ. ವರದಿಯ ಪ್ರಕಾರ 2017ನೇ ವರ್ಷಕ್ಕೆ ಹೋಲಿಸಿದರೆ 2018ರ ವರ್ಷದ ಎರಡನೇ ಭಾಗದಲ್ಲಿ ನಗರದಲ್ಲಿ ವಸತಿ ಆಸ್ತಿ ಮಾರಾಟ ಪ್ರಕ್ರಿಯೆಯಲ್ಲಿ ಶೇ.35ರಷ್ಟು ಪ್ರಗತಿ ಕಂಡುಬಂದಿದೆ.
ಅಂಚೆ ಮತ್ತು ನೋಂದಣಿ ಇಲಾಖೆ ನೀಡಿರುವ ದಾಖಲೆ ಪ್ರಕಾರ 2018ರ ಕಡೆಯ 7 ತಿಂಗಳಲ್ಲಿ ಆಸ್ತಿ ನೋಂದಣಿ ಮೂಲಕ ಬರುವ ಆದಾಯದಲ್ಲಿ 2017ಕ್ಕೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಳವಾಗಿದ್ದು, ಇದು ರಿಯಲ್ ಎಸ್ಟೇಟ್ ಮಾರುಕಟ್ಟೆ ಪ್ರಗತಿಗೆ ಪೂರಕ ಸೂಚನೆ ನೀಡಿದೆ ಎಂದು ತಿಳಿಸಿದೆ.
ಇದನ್ನು ಗಮನಿಸಿದರೆ ಅರಿವಾಗುವ ವಿಚಾರವೆಂದರೆ ಆಸ್ತಿ ಖರೀದಿದಾರರು ಇನ್ನಷ್ಟು ದಿನ ಕಾಯುವುದಿಲ್ಲ. ಇದರಿಂದ ಇವರಿಗೆ ಅನುಕೂಲ ಒದಗಿಸಲು ಬೆಂಗಳೂರು ನಗರವು ಉತ್ತಮ ವಸತಿ ಆಸ್ತಿಗಳನ್ನು ಉತ್ತಮ ಬೆಲೆಗೆ ನೀಡುತ್ತಿದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Hosur railway line: ಬೈಯಪ್ಪನಹಳ್ಳಿ-ಹೊಸೂರು ಮಾರ್ಗದ ರೈಲು ಆದಷ್ಟು ಬೇಗ ಆರಂಭ-ಯಾವಾಗೆಂದು ತಿಳಿಯಿರಿ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ



Click it and Unblock the Notifications