For Quick Alerts
ALLOW NOTIFICATIONS  
For Daily Alerts

2025ರ ವೇಳೆ ತಾಳೆ ಎಣ್ಣೆ ಬಳಕೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿಕೆ!

|

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನಗರದಲ್ಲಿ ಮೂರು ದಿನ ಹಮ್ಮಿಕೊಂಡಿದ್ದ ಆಸಿಯಾನ್ ಬಿಜಿನೆಸ್ ಸಮಿಟ್‍ನಲ್ಲಿ ಭಾಗವಾಗಿದ್ದ ಮಲೇಷಿಯಾದ ಪ್ರಾಥಮಿಕ ಕೈಗಾರಿಗೆ ಉಪಮಂತ್ರಿ ದಾಟೂಕ್ ಸೆರಿ ಶಂಶುಲ್ ಇಸ್ಕಂದರ್ ಬಿನ್ ಮೊಹಮ್ಮದ್ ಅಕಿನ್ ಅವರು ಮಾತನಾಡಿ, ಭಾರತ ಹಾಗೂ ಆಸಿಯಾನ್ ರಾಷ್ಟ್ರಗಳ ವ್ಯಾಪಾರ ಮತ್ತು ವಹಿವಾಟು ಸಂಬಂಧ ದೀರ್ಘವಾಗಿ ಬೇರೂರಿದ್ದು, ರಾಷ್ಟ್ರಗಳ ಸಾಂಸ್ಕೃತಿಕ ಐಕ್ಯತೆಯನ್ನು ಹಂಚಿಕೊಂಡು ವಾಣಿಜ್ಯ ಸಂಬಂಧಗಳಿಗೆ ಭೌಗೋಳಿಕ ರಚನೆ ರೂಪಿಸಲು ನೆರವಾಗಿದೆ.

ಆಸಿಯಾನ್ ಪ್ರದೇಶದಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ವಸ್ತು ಎಂದರೆ ತಾಳೆ ಎಣ್ಣೆಯಾಗಿದ್ದು ಭಾರತವು ಮಲೇಷಿಯಾದ ಅತಿಮುಖ್ಯ ರಫ್ತು ಪ್ರದೇಶಗಳಲ್ಲಿ ಒಂದಾಗಿದೆ. ಭಾರತದ ತೈಲ ಹಾಗು ಕೊಬ್ಬಿನ ಮಾರುಕಟ್ಟೆಯ ತ್ವರಿತವಾಗಿದ್ದು ಜನಸಂಖ್ಯೆ ಬೆಳೆಯುತ್ತಿದ್ದಂತೆ ಮತ್ತು ಆರ್ಥಿಕ ಸ್ಥಿತಿಗತಿ ಹೆಚ್ಚಾಗುತ್ತಿದ್ದಂತೆ ಇದೂ ಕೂಡ ಬೆಳೆಯಲಾರಂಭಿಸಿದೆ. ಭಾರತವು ತನಗೆ ಅಗತ್ಯವಾದ ಎಣ್ಣೆಗಳು ಹಾಗು ಕೊಬ್ಬುಗಳ ಪೈಕಿ 60%ಅನ್ನು ಆಮದು ಮಾಡಿಕೊಳ್ಳುತ್ತಿದ್ದು ದೇಶದ ಬೇಡಿಕೆಯನ್ನು ಪೂರೈಸುವಲ್ಲಿ ಆಸಿಯಾನ್ ರಾಷ್ಟ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ.

2025ರ ವೇಳೆ ತಾಳೆ ಎಣ್ಣೆ ಬಳಕೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿಕೆ!

ಭಾರತದಲ್ಲಿ 2025ರ ವೇಳೆಗೆ ಬಳಕೆಯು 400 ಶೇಕಡ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದ್ದು ಇದು ವಿಶ್ವದಲ್ಲೇ ಐದನೇ ಅತಿದೊಡ್ಡ ಗ್ರಾಹಕ ಮಾರುಕಟ್ಟೆಯಾಗಲಿದೆ ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ : ಜಾರ್ಜ್ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ : ಜಾರ್ಜ್

ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹವಾಮಾನ ಬದಲಾವಣೆ, ಪಾಶ್ಮಿಮಾತ್ಯ, ಹಸಿರು ಮನೆ ಅನಿಲ ಪ್ರವಹನೆ ಪ್ರಮುಖವಾಗಿ ಸವಾಲೊಡ್ಡುತ್ತಿವೆ. ತಾಳೆ ಎಣ್ಣೆ ವ್ಯಾಪಾರಕ್ಕೆ ತಾಳೆ ಎಣ್ಣೆ ವಿರೋಧಿ ಪ್ರಚಾರಾಂದೋಲನ ಹಾಗೂ ಜೈವಿಕ ಇಂಧನ ನಿಷೇಧಿಸಲು ಐರೋಪ್ಯ ಒಕ್ಕೂಟ ಕಾಯಿದೆಯು ತೀವ್ರ ಪ್ರತಿಭಟನೆ ನೀಡುತ್ತಿದೆ.

ಇದಕ್ಕೆ ಐರೋಪ್ಯ ಒಕ್ಕೂಟ- ಆಸಿಯಾನ್ ರಾಷ್ಟ್ರಗಳ ಎಫ್‍ಟಿಎಗೆ ಸಹಿ ಹಾಕುವುದನ್ನು ಹಿಂದೆಗೆದುಕೊಳ್ಳುವ ಮೂಲಕ ಆಸಿಯಾನ್ ಒಂದು ಸಮೂಹವಾಗಿ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಆಸಿಯಾನ್ ವಾಣಿಜ್ಯ ಹಾಗೂ ಉದ್ಯಮ ಮಂಡಳಿಯ ವ್ಯಾಪಾರ ಸಮಾವೇಶವದ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಮಲೇಷಿಯಾದ ಪ್ರಾಥಮಿಕ ಕೈಗಾರಿಕೆಗಳ ಉಪಮಂತ್ರಿಗಳು ಈ ಸವಾಲುಗಳನ್ನು ಎದುರಿಸಲು ಭಾರತವು ಏಶಿಯಾನ್ ರಾಷ್ಟ್ರಗಳಿಗೆ ಬೆಂಬಲ ಸೂಚಿಸಬೇಕೆಂದು ಒತ್ತಾಯಿಸಿದರು.

English summary

Palm Oil: India to make it the fifth largest consumer in 2025

Addressing the opening ceremony of ASEAN Chamber of Commerce & Industry Business Meet 2019 in Bengaluru, Honourable Datuk Seri Shamsul Iskandar bin Mohd. Akin, Deputy Minister of Primary Industries Malaysia, said Indian consumption of Palm Oil is projected to grow 400 percent by 2025 and make it the fifth largest consumer market in the world.
Story first published: Friday, March 1, 2019, 12:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X