For Quick Alerts
ALLOW NOTIFICATIONS  
For Daily Alerts

ಓಪ್ಟೋ ಸರ್ಕ್ಯೂಟ್ ಇಂಡಿಯಾ ಶೇ 25ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ

|

ಬೆಂಗಳೂರು, ಮಾರ್ಚ್ 12: ವಿಶ್ವದ ಮುಂಚೂಣಿ ವೈದ್ಯಕೀಯ ಸಾಧನಗಳು ಮತ್ತು ತಂತ್ರಜ್ಞಾನ ಸಮೂಹವಾದ ಓಪ್ಟೋ ಸರ್ಕ್ಯೂಟ್ ಇಂಡಿಯಾ, ಪ್ರಸಕ್ತ ವರ್ಷದಲ್ಲಿ ಶೇಕಡಾ 25ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ಕಂಪನಿ ಕಳೆದ ವರ್ಷದ ಗುರಿಯನ್ನು ಮೊದಲ ಮೂರು ತ್ರೈಮಾಸಿಕಗಳಲ್ಲೇ (2018ರ ಏಪ್ರಿಲ್‍ನಿಂದ ಡಿಸೆಂಬರ್) ತಲುಪಿದ್ದು, ನಾಲ್ಕನೇ ತ್ರೈಮಾಸಿಕದಲ್ಲೂ ಉತ್ತಮ ಸಾಧನೆ ತೋರುವ ನಿರೀಕ್ಷೆ ಇದೆ.

ಎಲ್ಲೆಡೆ ಕಂಪನಿಯು ಹಲವು ಮಾರುಕಟ್ಟೆ ಸಂಬಂಧಿ ಸವಾಲುಗಳನ್ನು ಎದುರಿಸಿದ್ದರೂ, ಈ ಪೈಕಿ ಬಹುತೇಕ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ 35 ಕೋಟಿ ರೂಪಾಯಿ ಲಾಭದೊಂದಿಗೆ ಮತ್ತು 225 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಇದರ ಮುಂದುವರಿದ ಭಾಗವಾಗಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಪನಿ ಮುಂದಿನ ವರ್ಷವೂ ಉತ್ತಮ ಸಾಧನೆ ತೋರುವ ವಿಶ್ವಾಸದಲ್ಲಿದೆ. ಕಂಪನಿಯ ಸಹ ಸಂಸ್ಥೆಗಳು ಕೂಡಾ ಉತ್ತಮ ಕಾರ್ಯಾದೇಶವನ್ನು ಪಡೆಯುತ್ತಿವೆ.

ಕಂಪನಿಯ ಅತಿದೊಡ್ಡ ಸ್ಪರ್ಧಾತ್ಮಕ ಲಾಭವೆಂದರೆ, ಕಂಪನಿಯ ತಂಡವೇ ಅಭಿವೃದ್ಧಿಪಡಿಸಿದ ಮಾಲೀಕತ್ವದ ತಂತ್ರಜ್ಞಾನ. ಇದರಿಂದಾಗಿ ಕಂಪನಿಯು ಇವುಗಳ ಗುಣಲಕ್ಷಣಗಳು ಹಾಗೂ ಉತ್ಪನ್ನದ ಬೌದ್ಧಿಕ ಆಸ್ತಿ ವೆಚ್ಚದ ಮೇಲೆ ನಿಯಂತ್ರಣ ಸಾಧಿಸಲು ಅವಕಾಶವಾಗುತ್ತದೆ. ಇದರ ಜತೆಗೆ ಬೇರೆ ಕಂಪನಿಗಳ ತಂತ್ರಜ್ಞಾನವನ್ನು ಅವಲಂಬಿಸುವುದು ತಪ್ಪಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಗಮನ ಹರಿಸಿರುವುದರಿಂದ, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಉತ್ಪನ್ನಗಳಿಗಿಂತ ತಾಂತ್ರಿಕವಾಗಿ ಉತ್ಕೃಷ್ಟ ಉತ್ಪನ್ನಗಳನ್ನು ಈ ಕಂಪನಿ ಉತ್ಪಾದಿಸಲು ಸಾಧ್ಯವಾಗುತ್ತದೆ.

ಓಪ್ಟೋ ಸರ್ಕ್ಯೂಟ್ ಇಂಡಿಯಾ ಶೇ 25ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ

ಪ್ರಸ್ತುತ ಈ ಕಂಪನಿಯು ತನ್ನ ಸಹ ಸಂಸ್ಥೆಗಳ ಜತೆ ಸೇರಿ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ವೈದ್ಯಕೀಯ ಸೇವಾ ಘಟಕಗಳು ಬಳಸುವ ಮತ್ತು ದೇಶಾದ್ಯಂತ ಮಾತ್ರವಲ್ಲದೇ ವಿಶ್ವದ 150 ದೇಶಗಳಲ್ಲಿ ಜನಸಾಮಾನ್ಯರು ಬಳಸುವ ಅಂದರೆ ಶಾಲೆಗಳು, ಅಗ್ನಿಶಾಮಕ ಠಾಣೆಗಳು, ನೀತಿ ಕಚೇರಿಗಳು ಬಳಸುವ ವೈವಿಧ್ಯಮಯ ಶ್ರೇಣಿಯ ವೈದ್ಯಕೀಯ ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ತೊಡಗಿದೆ.

ಈ ಗಣನೀಯ ಪ್ರಗತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಓಪ್ಟೋ ಸರ್ಕ್ಯೂಟ್ ಇಂಡಿಯಾದ ಅಧ್ಯಕ್ಷ ವಿನೋದ್ ರಾಮನಾನಿ, "ಭಾರತದ ಆರ್ಥಿಕ, ಆರೋಗ್ಯಸೇವೆ ಹಾಗೂ ಸಾಮಾಜಿಕ ಪರಿದಿ ರೂಪುಗೊಳ್ಳುತ್ತಿರುವಂತೆಯೇ, ನಮ್ಮಂಥ ವೈದ್ಯಕೀಯ ಸಾಧನಗಳ ತಯಾರಿಕಾ ಸಂಸ್ಥೆಗಳಿಗೆ ಕುಡಾ ಉತ್ತೇಜಕವಾಗುವ ರೀತಿಯಲ್ಲಿ ವೈದ್ಯಕೀಯ ಸಲಕರಣೆಗಳ ಮಾರುಕಟ್ಟೆ ಕೂಡಾ ಬೆಳೆಯುತ್ತಿದೆ. ವೈದ್ಯಕೀಯ ಪ್ರವಾಸೋದ್ಯಮದೊಂದಿಗೆ ಮತ್ತು ಐಷಾರಾಮಿ ಆರೋಗ್ಯಸೇವಾ ಮಾರುಕಟ್ಟೆ ಕೂಡಾ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳ ಸಾಲಿಗೆ ಸೇರಿದೆ. ಇದು ವಿಶೇಷವಾದ, ಹೈಟೆಕ್ ವೈದ್ಯಕೀಯ ಸಾಧನಗಳಿಗೆ ಸಾಕಷ್ಟು ಬೇಡಿಕೆಯನ್ನು ಸೃಷ್ಟಿಸಿದೆ. ನಮ್ಮ ಎಲ್ಲ ವ್ಯವಹಾರಗಳನ್ನು ಮುಖ್ಯವಾಹಿನಿಗೆ ತಂದಿದ್ದು, ಮುಂದಿನ ಎರಡು ಮೂರು ವರ್ಷಗಳಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಸಾಧಿಸುವ ಮಾರ್ಗದಲ್ಲಿ ಮುಂದುವರಿದಿದ್ದೇವೆ" ಎಂದು ಬಣ್ಣಿಸಿದ್ದಾರೆ.

English summary

Opto Circuits expects to grow at 25% during the current year

Opto Circuits India, the leading global medical devices and technology group with a diversified product portfolio, dealing in products like vital signs monitoring, emergency cardiac care, vascular treatments and sensing technologies expects to grow at 25% during the current year.
Story first published: Tuesday, March 12, 2019, 12:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X