ಆರಂಭದಿಂದಲೂ ಅಗರಬತ್ತಿಗಳು ಭಾರತೀಯ ಜೀವನಶೈಲಿಯ ಭಾಗವೇ ಆಗಿವೆ. ಪ್ರಾರ್ಥನೆಯ ಹೊರತಾಗಿಯೂ ಅಗರಬತ್ತಿಯ ಬಳಕೆಯು ಭಾರತದಲ್ಲಿಯಷ್ಟೇ ಅಲ್ಲ, ವಿದೇಶಗಳಲ್ಲೂ ಕೂಡಾ ಮಾರುಕಟ್ಟೆ ವೃದ್ಧಿಸಲು ನೆರವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಅಗರಬತ್ತಿ ಉದ್ಯಮವು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಒಳಗೊಂಡ ದೇಶೀಯ ಮಾರುಕಟ್ಟೆಯಲ್ಲಿ ವಹಿವಾಟು ಶೇ 8 ರಿಂದ 10ರಷ್ಟು ವೃದ್ಧಿಸಲು ನೆರವಾಗಿದೆ.
ಈ ಪ್ರಗತಿ ಕುರಿತು ಮಾತನಾಡಿದ ಎಐಎಎಂಎ ಅಧ್ಯಕ್ಷ ಶರತ್‍ಬಾಬು ಅವರು, ಭಾರತೀಯ ಅಗರಬತ್ತಿ ಉದ್ಯಮವೂ ಕಳೆದ ಒಂದು ವರ್ಷದ ಅವಧಿಯಲ್ಲಿ ನಿರೀಕ್ಷೆ ಮೀರಿ ಪ್ರಗತಿ ಕಾಣುತ್ತಿದೆ. ಕಳೆದ ಬಜೆಟ್‍ನಲ್ಲಿನ ಪ್ರಕಟಣೆ, ತೆರಿಗೆ ರಿಯಾಯಿತಿ ಈ ಉದ್ಯಮಕ್ಕೆ ಅನೇಕ ಹೊಸಬರು ಪ್ರವೇಶಿಸಲು ನೆರವಾಗಿದೆ. ಉತ್ಪಾದನೆ ವಲಯ ಆರಂಭಿಕವಾಗಿ ಕರ್ನಾಟಕ ಮತ್ತು ಗುಜರಾತ್ ಕೇಂದ್ರೀತವಾಗಿದ್ದು, ಈಗ ದೇಶದ ವಿವಿಧೆಡೆ ವ್ಯಾಪಿಸಿದೆ' ಎಂದರು.
ದೇಶದಲ್ಲಿ ಉದ್ಯಮದ ಪ್ರಗತಿಯು ಗ್ರಾಹಕರ ಬೇಡಿಕೆಯನ್ನು ಬಿಂಬಿಸಿದೆ. ಗ್ರಾಹಕರು ಇಂದು ಸುಗಂಧದ್ರವ್ಯದತ್ತ ಹೆಚ್ಚು ಒಲವು ತೋರುತಿದ್ದಾರೆ. ಹೊಸ ಉತ್ಪನ್ನಗಳಾದ ಅಕ್ವಾ, ಲ್ಯಾವೆಂಡರ್, ಔದ್ ಮತ್ತು ಅಗರಬತ್ತಿ ಕೂಡಾ ಇದರಲ್ಲಿ ಸೇರಿದೆ. ಪ್ರೀಮಿಯಂ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಧ್ಯಾತ್ಮ, ಧ್ಯಾನ ಸೇರಿದಂತೆ, ಕೊಠಡಿಯನ್ನು ಸುವಾಸಿತಗೊಳಿಸುವುದು ಸೇರಿ ವಿವಿಧ ಉದ್ದೇಶಗಳಿಗೆ ಅಗರಬತ್ತಿ ಬಳಕೆಯಾಗುತ್ತಿದೆ. ಇದು, ಅಂತರರಾಷ್ಟ್ರೀಯವಾಗಿ ಕಾಣಿಸುತ್ತಿರುವ ಹೊಸ ಬೆಳವಣಿಗೆ ಆಗಿದೆ ಎಂದರು.

ಈ ವರ್ಷದ ಅತಿದೊಡ್ಡ ಆಕರ್ಷಣೆ ಎಂದರೆ ಪ್ರಮುಖ ಹಬ್ಬಗಳನ್ನು ಹೊರತುಪಡಿಸಿ ಕುಂಭಮೇಳ ಆಗಿದ್ದು, ಸುಮಾರು 20 ಕೋಟಿ ಮಂದಿ ಭೇಟಿ ನೀಡಿದ್ದರು. ಇದು, ಉತ್ತರಪ್ರದೇಶದಲ್ಲಿ ಅಗರಬತ್ತಿ ಉದ್ಯಮ ಅಭಿವೃದ್ಧಿಗೆ ನೆರವಾಯಿತು. ಧಾರ್ಮಿಕ ಆಚರಣೆಗಳು ಎಂದಿಗೂ ಉದ್ಯಮಕ್ಕೆ ಉತ್ತೇಜನ ನೀಡುತ್ತಿವೆ. ನಾವು ಉದ್ಯಮವು ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಹೆಚ್ಚಿನ ಗಮನ ಕೊಡುತ್ತಿದ್ದೇವೆ. ನಾವು ಭಾರತೀಯ ಗುಣಮಟ್ಟ ಮಾಪನ ಸಂಸ್ಥೆ ಜೊತೆಗೂ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಅಗರಬತ್ತಿ ಉದ್ಯಮಕ್ಕೆ ಒಂದು ಮಾನದಂಡವನ್ನು ನಿಗದಿಪಡಿಸಲಿದ್ದೇವೆ' ಎಂದು ಶರತ್ ಬಾಬು ಅವರು ಹೇಳಿದರು. ಮುಂದುವರಿದು, ಹೆಚ್ಚುವರಿಯಾಗಿ ಸಣ್ಣ ಪ್ರಮಾಣದ ಉದ್ಯಮಿಗಳು ಅಗರಬತ್ತಿ ಉದ್ಯಮವನ್ನು ಸೇರ್ಪಡೆಗೊಳ್ಳುತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಮುಖ್ಯವಾಗಿ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಉದ್ಯಮದ ವಾತಾವರಣ ಹೆಚ್ಚು ಸೇರ್ಪಡೆಯುಕ್ತ ಆಗುತ್ತಿದ್ದು, ಉದ್ಯಮ ಮಂದಿನ 2-3 ವರ್ಷದ ಅವಧಿಯಲ್ಲಿ ಶೇ 10ರ ದರದಲ್ಲಿ ವೃದ್ಧಿ ಆಗಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ' ಎಂದರು.
ಅಖಿಲಭಾರತ ಅಗರಬತ್ತಿ ಉತ್ಪಾದಕರ ಸಂಘ ಕುರಿತು (ಎಐಎಎಂಎ) : 1949ರಲ್ಲಿ ಮೈಸೂರು ಊದುಬತ್ತಿ ಉತ್ಪಾದಕರ ಸಂಘ ಎಂಬ ಹೆಸರಿನಲ್ಲಿ ಏಳು ಜನರು ಸಂಘವನ್ನು ಸ್ಥಾಪಿಸಿದರು. ಅಂದಿನಿಂದ ಎಐಎಎಂಎ ಅನಿಯಮಿತವಾಗಿ ಅಗರಬತ್ತಿ ಉತ್ಪಾದನೆಗೆ ಪ್ರೋತ್ಸಾಹಿಸಲು ಶ್ರಮಿಸುತ್ತಿದೆ. 80ರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಉತ್ಪಾದಕರು ಉದ್ಯಮದತ್ತ ಆಸಕ್ತಿ ತೋರಿದ್ದು, ಎಂಒಎಂಎ ಅನ್ನು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಎಂದು ಮರುನಾಮಕರಣ ಮಾಡಲಾಯಿತು. ಉದ್ಯಮ ಅನಿಯಮಿತವಾಗಿ ಉದ್ಯಮದ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದೇಶದಾದ್ಯಂತ ಒಟ್ಟು 700 ಜನರು ಅಜೀವ ಸದಸ್ಯರಿದ್ದಾರೆ. ಸಂಸ್ಥೆ ಸಹಯೋಗವು ಕೇವಲ ಉದ್ಯಮವನ್ನು ದೇಶಿಯವಾಗಿ ಅಲ್ಲದೆ, ಅಂತರರಾಷ್ಟ್ರೀಯವಾಗಿಯೂ ಉದ್ಯಮವನ್ನು ಬೆಳೆಸಲು ಕಾರಣವಾಗಲಿದೆ.
More From GoodReturns

Heavy Rain: ರಾಜ್ಯದಲ್ಲಿ ಮುಂದಿನ 4 ದಿನ ಮಳೆಯಬ್ಬರ ಶುರು; ಈ ಭಾಗದಲ್ಲಿ ಹೆಚ್ಚು

Egg Price Karnataka: ಕೋಳಿ ಮೊಟ್ಟೆ ದರ 7 ರಿಂದ 4 ರೂ.ವರೆಗೆ ಇಳಿಕೆ; ಕೋಳಿ ಸಾಕಾಣಿಕಾರರಿಗೆ ಟೆನ್ಶನ್

Ugadi 2026: ಯುಗಾದಿ 2026 ಯಾವಾಗ? ಹಬ್ಬದ ಮಹತ್ವ, ಆಚರಣೆಗಳು ಮತ್ತು ಸಂಪ್ರದಾಯಗಳು

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

100 ಕೋಟಿ ದಾಟಿದ ಮಲೆ ಮಹದೇಶ್ವರ ದೇವಸ್ಥಾನದ ಆದಾಯ...ಕರ್ನಾಟಕದ ಎರಡನೇ ಅತಿ ಹೆಚ್ಚು ಆದಾಯದ ದೇವಾಲಯ

Ugadi Special Buses: ಯುಗಾದಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ನ್ಯೂಸ್…KSRTC 2,000 ಹೆಚ್ಚುವರಿ ಬಸ್ಗಳ ವ್ಯವಸ್ಥೆ

Karnataka 2nd PUC: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಕ್…ಪಾಸಾಗಲು ಕೇವಲ 2 ವರ್ಷ ಮಾತ್ರ ಅವಕಾಶ

Karnataka Ration Card: ಪಡಿತರ ಚೀಟಿ ಪಡೆಯಲು ದೊಡ್ಡ ಬದಲಾವಣೆ.. ಆದಾಯ ಮಿತಿ 3 ಲಕ್ಷಕ್ಕೆ ಹೆಚ್ಚುವ ಸಾಧ್ಯತೆ

Indane cylinder: ಇಂಡೇನ್ ಸಿಲಿಂಡರ್ ಬುಕಿಂಗ್ ಈಗ ಸುಲಭ; ವಾಟ್ಸಾಪ್ ಮೂಲಕ ಬುಕ್ ಮಾಡೋದೇಗೆ ತಿಳಿಯಿರಿ

Eid-ul-Fitr 2026: ಭಾರತದಲ್ಲಿ ರಂಜಾನ್ ಹಬ್ಬ ಯಾವಾಗ? ಇದೇ ದಿನ ಕಾಣಿಸಲಿದೆ ಚಂದ್ರ

LPG-Bengaluru: ಎಲ್ಪಿಜಿ ಕೊರತೆ ಬೆನ್ನಲ್ಲೇ, ಬೆಂಗಳೂರಲ್ಲಿ ಸಿಲಿಂಡರನ್ನೇ ಕಳ್ಳತನ ಮಾಡಿದ ಖದೀಮ! ವಿಡಿಯೋ ವೈರಲ್



Click it and Unblock the Notifications