ಪ್ರಪಂಚದಲ್ಲಿ ಉತ್ತಮವಾದ ಆರ್ಥಿಕ ವ್ಯವಸ್ಥೆಯಾಗಿ ಸಾಕಷ್ಟು ಬಂಡವಾಳವನ್ನು ಹೊಂದಿರುವ ಬ್ಯಾಂಕಿಂಗ್ ವಲಯ ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಅವಕಾಶ ಒದಗಿಸುತ್ತ ಬಂದಿದೆ. ನೀವು ಉದ್ಯೋಗ ನಿರೀಕ್ಷೆಯಲ್ಲಿದ್ದರೆ ಇಲ್ಲಿದೆ ಸಿಹಿ ಸುದ್ದಿ.
ಪ್ರಪಂಚದಲ್ಲಿ ಉತ್ತಮವಾದ ಆರ್ಥಿಕ ವ್ಯವಸ್ಥೆಯಾಗಿ ಸಾಕಷ್ಟು ಬಂಡವಾಳವನ್ನು ಹೊಂದಿರುವ ಬ್ಯಾಂಕಿಂಗ್ ವಲಯ ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಅವಕಾಶ ಒದಗಿಸುತ್ತ ಬಂದಿದೆ. ನೀವು ಉದ್ಯೋಗ ನಿರೀಕ್ಷೆಯಲ್ಲಿದ್ದರೆ ಇಲ್ಲಿದೆ ಸಿಹಿ ಸುದ್ದಿ. ಭಾರತದ ಪ್ರಮುಖ ಬ್ಯಾಂಕುಗಳಾದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ), ಐಡಿಬಿಐ, ಸಿಂಡಿಕೇಟ್ ಬ್ಯಾಂಕ್ ಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ದೇಶದಲ್ಲಿ 27 ಸಾರ್ವಜನಿಕ ವಲಯದ ಬ್ಯಾಂಕ್, 21 ಖಾಸಗಿ ವಲಯದ ಬ್ಯಾಂಕ್, 49 ವಿದೇಶಿ ಬ್ಯಾಂಕ್, 56 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, 1562 ನಗರ ಸಹಕಾರಿ ಬ್ಯಾಂಕುಗಳು, 94,384 ಗ್ರಾಮೀಣ ಸಹಕಾರಿ ಬ್ಯಾಂಕುಗಳು ಹಾಗೂ ಸಹಕಾರಿ ಸಾಲದ ಸಂಸ್ಥೆಗಳಿವೆ. ಬ್ಯಾಂಕಿಂಗ್ ಕ್ಷೇತ್ರ ಬೆಳೆದಂತೆ ಮಾನವ ಸಂಪನ್ಮೂಲಕ್ಕೂ ಬೇಡಿಕೆ ಹೆಚ್ಚಾಗುತ್ತಿದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ಗುಡ್ ನ್ಯೂಸ್! ಎಸ್ಬಿಐ, ಐಡಿಬಿಐ, ಸಿಂಡಿಕೇಟ್ ಬ್ಯಾಂಕುಗಳಲ್ಲಿ ಸಾವಿರಾರು ಹುದ್ದೆಗಳಿಗೆ ಅರ್ಜಿ ಅಹ್ವಾನ
ಎಸ್ಬಿಐ ಬ್ಯಾಂಕ್
ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2000 ಪಿಓ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಏಪ್ರಿಲ್ 22 ಕೊನೆಯ ದಿನ.
30 ವರ್ಷ ವಯೋಮಿತಿಯ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳಿಗೆ https://www.sbi.co.in/careers/ ಸಂಪರ್ಕಿಸುವುದು.
ಐ.ಡಿ.ಬಿ.ಐ ಬ್ಯಾಂಕ್
ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (ಐ.ಡಿ.ಬಿ.ಐ.) ನಲ್ಲಿ 500 ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಹಾಗು 300 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನ. ಡಿಗ್ರಿ ಪಡೆದಿರಬೇಕು. ಮಾಹಿತಿಗಾಗಿ https://www.idbi.com/idbi-bank-careers-current-openings.asp ಸಂಪರ್ಕಿಸುವುದು.
ಸಿಂಡಿಕೇಟ್ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್ ನಲ್ಲಿ 129 ವಿಶೇಷ ಅಧಿಕಾರಿಗಳ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ.
ಏಪ್ರಿಲ್ 18 ಅರ್ಜಿ ಸಲ್ಲಿಕೆಗೆ ಕೊನೆಯ ದಿನ.
ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ವೆಬ್ ಸೈಟ್ https://www.syndicatebank.in/english/Career.aspx ವೀಕ್ಷಿಸುವುದು.


Click it and Unblock the Notifications