ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಹಾತ್ಮ ಗಾಂಧಿ (ಹೊಸ) ಸರಣಿಯ ಹೊಸ ರೂ. 50 ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿದೆ. ಹಳೆ ನೋಟು ರೂ. 50 ಕರೆನ್ಸಿಯ ನಿರ್ದಿಷ್ಟ ನಿಯತಾಂಕದ ಪ್ರಕಾರ ಇದು ವಿಭಿನ್ನವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಹಾತ್ಮ ಗಾಂಧಿ (ಹೊಸ) ಸರಣಿಯ ಹೊಸ ರೂ. 50 ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿದೆ. ಹಳೆ ನೋಟು ರೂ. 50 ಕರೆನ್ಸಿಯ ನಿರ್ದಿಷ್ಟ ನಿಯತಾಂಕದ ಪ್ರಕಾರ ಇದು ವಿಭಿನ್ನವಾಗಿದೆ. ಹೊಸ ನೋಟಿನ ನೋಟಿನ ಮೇಲೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಇರುತ್ತದೆ. ಮಹಾತ್ಮ ಗಾಂಧಿ (ಹೊಸ) ಸರಣಿಯಲ್ಲಿನ ಬ್ಯಾಂಕ್ ನೋಟುಗಳನ್ನು ರಿಸರ್ವ್ ಬ್ಯಾಂಕ್ ಇಂದು ಬಿಡುಗಡೆ ಮಾಡಲಿದೆ. ಆರ್ಬಿಐ ಹೊರಡಿಸಿದ ರೂ. 50 ಮುಖಬೆಲೆಯ ನೋಟಿನ ಹಿಂದಿನ ಕಾನೂನಾತ್ಮಕ ಟೆಂಡರ್ ಮುಂದುವರೆಯಲಿದೆ.
ಆಗಸ್ಟ್, 2018 ರಲ್ಲಿ ಆರ್ಬಿಐ ಫ್ಲೂರೊಸೆಂಟ್ ನೀಲಿ ಬಣ್ಣದ ರೂ. 50 ನೋಟನ್ನು ಬಿಡುಗಡೆ ಮಾಡಿದೆ. ಹೊಸ ರೂ. 50 ಮುಖಬೆಲೆ ನೋಟಿನ ಪ್ರಮುಖ ಲಕ್ಷಣಗಳು ಹೀಗಿವೆ:
ಹಳೆ ವಿನ್ಯಾಸ ಕರೆನ್ಸಿ ಮುದ್ರಣ ಇಲ್ಲ
ಅಸ್ತಿತ್ವದಲ್ಲಿರುವ ರೂ. 50 ರೂಪಾಯಿ ನೋಟುಗಳು ಲೀಗಲ್ ಟೆಂಡರ್ ಮುಂದುವರೆಯಲಿದೆ. ಆದರೆ ಹಿಂದಿನ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿ ಹೊಂದಿರುವ ಹಾಗು ಹಳೆಯ ವಿನ್ಯಾಸ ಕರೆನ್ಸಿಗಳನ್ನು ಮುದ್ರಿಸುವುದಿಲ್ಲ. ಹೊಸ ನೋಟುಗಳ ವೈಶಿಷ್ಟ್ಯಗಳು ಅಸ್ತಿತ್ವದಲ್ಲಿರುವ ರೂ. 50 ಬ್ಯಾಂಕ್ ನೋಟುಗಳಂತೆಯೇ ಇರಲಿದೆ.
ನೋಟಿನ ಮುಂಬಾಗದ ವಿಶೇಷತೆ
- ದೇವನಾಗರಿಯಲ್ಲಿ ಮುಖಬೆಲೆ ಸಂಖ್ಯೆ 50
- ಮಧ್ಯದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರ
- ಸೂಕ್ಷ್ಮ ಅಕ್ಷರಗಳಲ್ಲಿ 'ಆರ್ಬಿಐ', 'ಭಾರತ್ (ಹಿಂದಿಯಲ್ಲಿ)', 'ಇಂಡಿಯಾ' ಮತ್ತು '50'
- ಗ್ಯಾರಂಟಿ ಷರತ್ತು,
- ಮಹಾತ್ಮ ಗಾಂಧಿ ಭಾವಚಿತ್ರದ ಬಲಕ್ಕೆ ಆರ್ಬಿಐ ಲಾಂಛನ
- ಗವರ್ನರ್ ಅವರ ಸಹಿ
- ಬಲಭಾಗದಲ್ಲಿ ಅಶೋಕ ಪಿಲ್ಲರ್ ಲಾಂಛನ
- ಮಹಾತ್ಮ ಗಾಂಧಿ ಭಾವಚಿತ್ರ ಮತ್ತು ಎಲೆಕ್ಟ್ರಾಟೈಪ್ (50) ವಾಟರ್ ಮಾರ್ಕ್
- ನಂಬರ್ ಪ್ಯಾನೆಲ್ ಹೊಸ ರೂ. 100 ನೋಟು ಬಿಡುಗಡೆ, ಅಸಲಿ-ನಕಲಿ ಕಂಡು ಹಿಡಿಯುವುದು ಹೇಗೆ?
ಹಿಂಬಾಗದ ವಿಶೇಷತೆ
- ಎಡಭಾಗದಲ್ಲಿ ನೋಟು ಮುದ್ರಣ ವರ್ಷ
- ಸ್ವಚ್ ಭಾರತ್ ಲೋಗೊ ಘೋಷಣೆ
- ಭಾಷಾ ಫಲಕ
- ಹಂಪಿಯ ಕಲ್ಲಿನ ರಥ
- ದೇವನಾಗರಿಯಲ್ಲಿ 50 ಸಂಖ್ಯೆ
ನೋಟಿನ ಸುತ್ತಳತೆ 66 ಎಂಎಂ x 135 ಎಂಎಂ ಇರಲಿದೆ.


Click it and Unblock the Notifications